Dailyhunt Logo
  • Light mode
    Follow system
    Dark mode
    • Play Story
    • App Story
'ಕುಂಕುಮ ಭಾಗ್ಯ' ಖ್ಯಾತಿಯ 22 ವರ್ಷದ ನಟಿ ಸಂಚಿತಾ ಉಗಾಲೆ ಆತ್ಮಹತ್ಯೆ!

'ಕುಂಕುಮ ಭಾಗ್ಯ' ಖ್ಯಾತಿಯ 22 ವರ್ಷದ ನಟಿ ಸಂಚಿತಾ ಉಗಾಲೆ ಆತ್ಮಹತ್ಯೆ!

ಮುಂಬೈ: ಹಿಂದಿಯ 'ಕುಂಕುಮ ಭಾಗ್ಯ' ಮತ್ತು 'ವಾಗ್ಲೆ ಕಿ ದುನಿಯಾ' ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದ ಯುವ ನಟಿ ಸಂಚಿತಾ ಉಗಾಲೆ (22) ಅವರು ಭಾನುವಾರ (ಜೂನ್ 14) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಘಟನೆ ಅವರ ಅಭಿಮಾನಿಗಳು ಹಾಗೂ ಇಡೀ ಕಿರುತೆರೆಗೆ ತೀವ್ರ ಆಘಾತವನ್ನುಂಟು ಮಾಡಿದೆ.

ಬ್ರಿಟನ್‌ನಲ್ಲೂ ರಾಮ ಮಂದಿರ ವಿವಾದ: 40 ವರ್ಷ ಹಳೆಯ ದೇವಾಲಯದ ಭವಿಷ್ಯ ಅತಂತ್ರJioHotstarನಲ್ಲಿ ಬಿಡುಗಡೆಯಾಗಲಿದೆ ವಿಕ್ರಾಂತ್ ಮ್ಯಾಸ್ಸೆ ನಟನೆಯ ವೆಬ್ ಸರಣಿ

ಘಟನೆಯ ವಿವರ

ಪೊಲೀಸರ ಪ್ರಕಾರ, ಮುಂಬೈನ ನಲಸೋಪಾರ ಈಸ್ಟ್‌ನ ಆಚೋಲೆ ಗ್ರಾಮದಲ್ಲಿರುವ ಸಾಯಿ ಸಂತೋಷಿ ಬಿಲ್ಡಿಂಗ್‌ನ ನಿವಾಸದಲ್ಲಿ ಈ ಘಟನೆ ಸಂಭವಿಸಿದೆ.

ಆಚೋಲೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ವಿನೋದ್ ಬಾಗ್ ಮಾತನಾಡಿ, ಭಾನುವಾರ ಸಂಜೆ 7 ರಿಂದ 7:30 ರ ನಡುವೆ ಸಂಚಿತಾ ಅವರು ತಮ್ಮ ಮಲಗುವ ಕೋಣೆಯನ್ನು ಒಳಗಿನಿಂದ ಲಾಕ್ ಮಾಡಿಕೊಂಡಿದ್ದರು. ನಂತರ ಸೀರೆಯಿಂದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕೂಡಲೇ ಕುಟುಂಬ ಸದಸ್ಯರು ಮತ್ತು ಸ್ಥಳೀಯ ನಿವಾಸಿಗಳು ಅವರನ್ನು ವಸಾಯಿ-ವಿರಾರ್ ಮುನ್ಸಿಪಲ್ ಆಸ್ಪತ್ರೆಗೆ ಕರೆದೊಯ್ದರಾದರೂ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

25 ವರ್ಷ ಪೂರೈಸಿದ ಲಗಾನ್: ಮೊದಲು ಕಥೆ ತಿರಸ್ಕರಿಸಿದ್ದ ಅಮೀರ್ ಖಾನ್! ಏಕೆ ಗೊತ್ತಾ?ತಮಿಳುನಾಡು CM ವಿಜಯ್-ಸಂಗೀತಾ ವಿಚ್ಛೇದನ ಅರ್ಜಿ ವಿಚಾರಣೆ ಆ. 7ಕ್ಕೆ ಮುಂದೂಡಿಕೆ

ಪ್ರಕರಣ ದಾಖಲು, ತನಿಖೆ ಮುಂದುವರಿಕೆ

ಸಂಚಿತಾ ಅವರ ತಂದೆ ಮಚ್ಛಿಂದ್ರ ಉಗಾಲೆ ನೀಡಿದ ದೂರಿನ ಆಧಾರದ ಮೇಲೆ, ಆಚೋಲೆ ಪೊಲೀಸರು ಜೂನ್ 15ರಂದು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

ಕುಂಕುಮ ಭಾಗ್ಯ ಧಾರಾವಾಹಿಯಲ್ಲಿ 'ದಿಯಾ ಟಂಡನ್' ಪಾತ್ರದ ಮೂಲಕ ಅವರು ಪ್ರೇಕ್ಷಕರ ಮನ ಗೆದ್ದಿದ್ದರು. ವಾಗ್ಲೆ ಕಿ ದುನಿಯಾ ಧಾರಾವಾಹಿಯಲ್ಲಿ 'ರುಚಿತಾ ಜೇಟ್ಲಿ' ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. 'ದಿಲ್‌ವಾಲಿ ದುಲ್ಹಾ ಲೇ ಜಾಯೇಗಿ'ದಲ್ಲಿ ಸೊರಾಬ್ ಬೇಡಿ ಎದುರು 'ಸುಕೂನ್' ಎಂಬ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

ವಿಕ್ಕಿ ಕೌಶಲ್ ನಟನೆಯ ಚಾವಾ ಸಿನಿಮಾದಲ್ಲಿ 'ತಾರಾ ರಾಣಿ'ಯ ಬಾಲ್ಯದ ಪಾತ್ರವನ್ನು ನಿರ್ವಹಿಸಿದ್ದರು. ಮನೋಜ್ ಬಾಜಪೇಯಿ ಪ್ರಮುಖ ಪಾತ್ರದಲ್ಲಿದ್ದ ಸೈಲೆನ್ಸ್ 2 ಚಿತ್ರದಲ್ಲೂ ಅವರು ನಟಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani