Dailyhunt Logo
  • Light mode
    Follow system
    Dark mode
    • Play Story
    • App Story
ಲವ್ ಮಾಕ್ಟೇಲ್ -3 ವಿವಾದ ಬಗೆಹರಿಸಿದ ಕೆಎಫ್‌ಸಿಸಿ ಅಧ್ಯಕ್ಷೆ ಜಯಮಾಲಾ

ಲವ್ ಮಾಕ್ಟೇಲ್ -3 ವಿವಾದ ಬಗೆಹರಿಸಿದ ಕೆಎಫ್‌ಸಿಸಿ ಅಧ್ಯಕ್ಷೆ ಜಯಮಾಲಾ

ಡಾರ್ಲಿಂಗ್ ಕೃಷ್ಣ ಅವರು ನಿರ್ದೇಶಿಸಿ, ನಟಿಸಿರುವ 'ಲವ್ ಮಾಕ್ಟೇಲ್ -3 ಕದ್ಧ ಚಿತ್ರಕಥೆ' ಎಂದು ನಿರ್ದೇಶಕ ರಾಘವೇಂದ್ರ ಎಂ. ನಾಯ್ಕ್ ಅವರು ಆರೋಪ ಮಾಡಿದ್ದರು. ಇದೀಗ, ಡಾ. ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ಈ ವಿವಾದ ಇತ್ಯಾರ್ಥವಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್‌ಸಿಸಿ) ಮಾಹಿತಿ ಹಂಚಿಕೊಂಡಿದೆ.

ಬಿಡುಗಡೆಯಾದ ಒಂದೇ ವಾರದಲ್ಲಿ ಭರ್ಜರಿ ಗಳಿಕೆ ಕಂಡ 'ಧುರಂಧರ್2'ರಾಮ್ ಚರಣ್ ಹುಟ್ಟುಹಬ್ಬ: ಶಿವಣ್ಣನ ಧ್ವನಿಯಲ್ಲಿ ಮೂಡಿದ 'ಪೆದ್ದಿ' ಚಿತ್ರದ ಝಲಕ್

ವಿವಾದ ಏನು..?
ಮಾರ್ಚ್ 19ರಂದು 'ಲವ್ ಮಾಕ್ಟೇಲ್ 3' ಚಿತ್ರ ಬಿಡುಗಡೆಯಾದ ಬೆನ್ನಲೇ ಈ ಚಿತ್ರ ದ್ವಿತೀಯಾರ್ಧದಲ್ಲಿ ನಾವು ಹೇಳಿದ ಕಥಾಹಂದರ ಹೊಂದಿದೆ. 'ಯಾವ ಬರಹಗಾರನಿಗೂ ಈ ರೀತಿ ಅನ್ಯಾಯವಾಗಬಾರದು' ಎಂದು ಬರಹಗಾರ, ನಿರ್ದೇಶಕ ರಾಘವೇಂದ್ರ ಎಂ. ನಾಯ್ಕ್‌ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ಆದಾದ ಬಳಿಕ, ಈ ವಿಚಾರ ಕುರಿತು ಮಿಲನಾ-ಡಾರ್ಲಿಂಗ್ ಕೃಷ್ಣ, ನಿರ್ಮಾಪಕ ಗುರು ದೇಶಪಾಂಡೆ ಹಾಗೂ ನಿರ್ದೇಶಕ ರಾಘವೇಂದ್ರ ಎಂ. ನಾಯ್ಕ್‌ ಪ್ರತ್ಯೇಕವಾಗಿ ಸುದ್ದಿಗೋಷ್ಠಿಯಲ್ಲಿ ಆರೋಪ-ಪ್ರತ್ಯಾರೋಪ ಮಾಡಿ, ಕೆಎಫ್‌ಸಿಸಿಗೆ ದೂರು ನೀಡಿದ್ದರು.

ಮಂಡಳಿ ಅಧ್ಯಕ್ಷೆ ನಟಿ ಜಯಮಾಲಾ ಅವರು ಮಿಲನಾ-ಡಾರ್ಲಿಂಗ್ ಕೃಷ್ಣ ಹಾಗೂ ನಿರ್ಮಾಪಕ ಗುರು ದೇಶಪಾಂಡೆ, ನಿರ್ದೇಶಕ ರಾಘವೇಂದ್ರ ಎಂ. ನಾಯ್ಕ್‌ ಅವರನ್ನು ಕೆಎಫ್‌ಸಿಸಿಗೆ ಕರೆಸಿ, 'ಎರಡೂ ಕಥೆಗಳು ಬೇರೆ ಬೇರೆ' ಎಂದು ಸಭೆಯಲ್ಲಿ ತೀರ್ಮಾನಿಸಿ, ಈ ವಿವಾದವನ್ನು ಇತ್ಯರ್ಥ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani