ಪುಣೆ: ಮಹಾರಾಷ್ಟ್ರದ ಲೋಹಾಗಢದ ಕೋಟೆಯಲ್ಲಿ ನಡೆದ 26 ವರ್ಷದ ಉದ್ಯಮಿ ಕೇತನ್ ಅಗರ್‌ವಾಲ್ ನಿಗೂಢ ಕೊಲೆ ಪ್ರಕರಣದ ತನಿಖೆಯನ್ನು ಲೋನಾವಾಲಾ ಗ್ರಾಮಾಂತರ ಪೊಲೀಸರು ತೀವ್ರಗೊಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಚೇತನ್ ಚೌಧರಿಗೆ ಸೇರಿದ ದ್ವಿಚಕ್ರ ವಾಹನವನ್ನು ಪೊಲೀಸರು ಭಾನುವಾರ ಜಪ್ತಿ ಮಾಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಘಟನೆ ನಡೆದ ದಿನ ಪುಣೆಯಿಂದ ಲೋಹಾಗಢ ಕೋಟೆಗೆ ಪ್ರಯಾಣಿಸಲು ಆರೋಪಿ ಚೇತನ್ ಈ ವಾಹನವನ್ನು ಬಳಸಿದ್ದ ಎನ್ನಲಾಗಿದೆ. ಬೈಕ್ ಜೊತೆಗೆ ಆತ ಧರಿಸಿದ್ದ ಹೂಡಿ (ಜಾಕೆಟ್) ಮತ್ತು ಹೆಡ್‌ಫೋನ್‌ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಎಲ್ಲಾ ವಸ್ತುಗಳನ್ನು ಈಗಾಗಲೇ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದೆ.
ಪಾಕ್ ಸೇನಾ ಪಡೆ ಮೇಲೆ ಬಾಂಬ್ ದಾಳಿ: ನಾಲ್ವರು ಯೋಧರು ಸೇರಿ 11 ಸಾವುಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್: ಹರ್ಮನ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಪ್ರಮುಖ ಆರೋಪಿ ಸಿಯಾ ಗೋಯಲ್ ಪೋಷಕರಾದ ಪ್ರವೀಣ್ ಗೋಯಲ್ ಮತ್ತು ಪೂಜಾ ಗೋಯಲ್ ಅವರನ್ನು ಭಾನುವಾರ ಲೋನಾವಾಲಾ ಪೊಲೀಸ್ ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದ್ದಾರೆ.
ಕಳೆದ ಜೂನ್ 18ರಂದು ಕೇತನ್ ಅಗರ್ವಾಲ್ ಲೋಹಾಗಢ ಕೋಟೆಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು. ಆರಂಭದಲ್ಲಿ ಇದು ಅಪಘಾತ ಎನ್ನಲಾಗಿತ್ತಾದರೂ, ತನಿಖೆಯ ವೇಳೆ ಇದು ಕೊಲೆ ಎಂಬುದು ಬಲವಾಗಿತ್ತು.
ಮೃತ ಕೇತನ್ ಅಗರ್ವಾಲ್ ಹಾಗೂ ಆರೋಪಿ ಸಿಯಾ ಗೋಯಲ್ ನಡುವೆ ನಿಶ್ಚಿತಾರ್ಥವಾಗಿತ್ತು. ಆದರೆ, ಸಿಯಾಗೆ ಸದ್ಯಕ್ಕೆ ಮದುವೆಯಾಗಲು ಇಷ್ಟವಿರಲಿಲ್ಲ. ಕುಟುಂಬದವರ ತೀವ್ರ ಒತ್ತಡಕ್ಕೆ ಮಣಿದು ಆಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ.
ಕೆಂಪೇಗೌಡ ಜಯಂತಿ: 13 ಲಕ್ಷ ಸಸಿ ನೆಟ್ಟು ಗಿನ್ನಿಸ್ ದಾಖಲೆ ಬರೆದ ಬಿಡಿಎಕದನ ವಿರಾಮ ಉಲ್ಲಂಘನೆ: ಇರಾನ್ ಸೇನಾ ನೆಲೆಗಳ ಮೇಲೆ US ದಾಳಿ, ಟ್ರಂಪ್ ಎಚ್ಚರಿಕೆಇದೇ ಕಾರಣಕ್ಕಾಗಿ ಸಿಯಾ ಗೋಯಲ್ ಮತ್ತು ಆಕೆಯ ಸ್ನೇಹಿತ ಚೇತನ್ ಚೌಧರಿ ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಇಬ್ಬರನ್ನೂ ಜೂನ್ 23 ರಂದು ಬಂಧಿಸಲಾಗಿದೆ. ಸದ್ಯ ಇಬ್ಬರೂ ಜೂನ್ 29 ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇತನ್ ಅವರ ತಂದೆ ಪುಣೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.
ಮುಖ್ಯಮಂತ್ರಿಗಳ ಆದೇಶದ ಬೆನ್ನಲ್ಲೇ, ಪ್ರಕರಣದ ಶೀಘ್ರ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರವು 'ಫಾಸ್ಟ್ ಟ್ರ್ಯಾಕ್' ನ್ಯಾಯಾಲಯ ಸ್ಥಾಪನೆಗೆ ಅನುಮೋದನೆ ನೀಡಿದೆ.

