Dailyhunt Logo
  • Light mode
    Follow system
    Dark mode
    • Play Story
    • App Story
ಮಾತುಕತೆಗೆ ನಾವು  ಸಿದ್ಧವಿದ್ದರೂ, ಇರಾನ್ ತಯಾರಿಲ್ಲ: ಅಮೆರಿಕ ಅಧ್ಯಕ್ಷ ಟ್ರಂಪ್

ಮಾತುಕತೆಗೆ ನಾವು ಸಿದ್ಧವಿದ್ದರೂ, ಇರಾನ್ ತಯಾರಿಲ್ಲ: ಅಮೆರಿಕ ಅಧ್ಯಕ್ಷ ಟ್ರಂಪ್

ವಾಷಿಂಗ್ಟನ್: ಮಾತುಕತೆಗೆ ನಾವು ಸಿದ್ಧವಿದ್ದರೂ, ಇರಾನ್ ತಯಾರಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷ ಮೂರನೇ ವಾರಕ್ಕೆ ಕಾಲಿಟ್ಟಿದೆ.

ಹೊರ್ಮುಜ್ ಜಲಸಂಧಿಗೆ ಯುದ್ಧನೌಕೆಗಳನ್ನು ರವಾನಿಸಲು ಟ್ರಂಪ್ ಕರೆ

'ಹೌದು ನಾವು ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ' ಎಂದು ಅವರು ಏರ್‌ಫೋರ್ಸ್ ಒನ್ ವಿಮಾನದಲ್ಲಿ ಪತ್ರಕರ್ತರೊಂದಿಗೆ ಹೇಳಿದ್ದಾರೆ.

ಪಶ್ಚಿಮ ಏಷ್ಯಾದಾದ್ಯಂತ ಹಬ್ಬಿದ ಯುದ್ಧ ನಿಲ್ಲಿಸಲು ಹಾಗೂ ಜಾಗತಿಕ ಮಾರುಕಟ್ಟೆ ತಲ್ಲಣಗಳ ನಿಯಂತ್ರಣಕ್ಕೆ ರಾಜತಾಂತ್ರಿಕ ಮಾತುಕತೆ ಪ್ರಗತಿಯಲ್ಲಿದೆಯೇ ಎನ್ನುವ ಪ್ರಶ್ನೆಗೆ, ಅವರು ಉತ್ತರಿಸಲಿಲ್ಲ. ಯಾವ ತೆರನಾದ ಮಾತುಕತೆ ನಡೆಯುತ್ತಿದೆ ಎ‌ನ್ನುವುದನ್ನೂ ಬಹಿರಂಗಪಡಿಸಿಲ್ಲ.

'ಅವರು ತಯಾರಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ, ಆದರೆ ಅವರು ತೀರಾ ಹತ್ತಿರದಲ್ಲಿದ್ದಾರೆ' ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕದೊಂದಿಗೆ ಯಾವುದೇ ಮಾತುಕತೆ ಇಲ್ಲ ಎಂದು ಈ ಹಿಂದೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಈ ಹಿಂದೆ ಹೇಳಿದ್ದರು.

ಇರಾನ್‌ನ ಖರ್ಗ್‌ ದ್ವೀಪದ ಮೇಲೆ ಭಾರಿ ಬಾಂಬ್ ದಾಳಿ ನಡೆಸಿದ್ದೇವೆ ಎಂದ ಟ್ರಂಪ್
Dailyhunt
Disclaimer: This content has not been generated, created or edited by Dailyhunt. Publisher: Prajavani