ಮುಂಬೈ: ಮಹಾರಾಷ್ಟ್ರದ ಸರ್ಕಾರಿ ಮತ್ತು ಅನುದಾನಿತ ಆಶ್ರಮ ಶಾಲೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 584 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಅಂದರೆ 730 ದಿನಗಳಲ್ಲಿ ದಿನಕ್ಕೆ ಸುಮಾರು ಸರಾಸರಿ 0.8 ವಿದ್ಯಾರ್ಥಿಗಳ ಸಾವು ಸಂಭವಿಸಿದೆ.
ಹಾವು ಕಡಿತ, ಕುಡಗೋಲು ಕಣರೋಗ, ಗಂಭೀರ ಕಾಯಿಲೆಗಳು, ಅಪಘಾತ ಮತ್ತು ಆತ್ಮಹತ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ 500 ಸರ್ಕಾರಿ ಮತ್ತು 513 ಅನುದಾನಿತ ಆಶ್ರಮ ಶಾಲೆಗಳಿವೆ. 2024-25ರಲ್ಲಿ ಸರ್ಕಾರಿ ಆಶ್ರಮ ಶಾಲೆಗಳಲ್ಲಿ 170, 2025-26ರಲ್ಲಿ 214 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಈ ಪೈಕಿ 36 ಸಾವುಗಳು ಶಾಲಾ ಆವರಣದಲ್ಲಿ ಹಾಗೂ 348 ಸಾವುಗಳು ವಿದ್ಯಾರ್ಥಿಗಳ ಮನೆಗಳಲ್ಲಿ ಸಂಭವಿಸಿವೆ.
ಅನುದಾನಿತ ಆಶ್ರಮ ಶಾಲೆಗಳಲ್ಲಿ 2024-25ರಲ್ಲಿ 81, 2025-26ರಲ್ಲಿ 119 ಸಾವುಗಳು ವರದಿಯಾಗಿವೆ. ಈ ಪೈಕಿ 30 ಸಾವುಗಳು ಶಾಲಾ ಆವರಣದಲ್ಲಿ ಹಾಗೂ 170 ಸಾವುಗಳು ಮನೆಗಳಲ್ಲಿ ಸಂಭವಿಸಿವೆ.
ಜೈ ಮಹಾರಾಷ್ಟ್ರ ಎಂದ ಮಾಜಿ ಶಾಸಕ ದಿಗಂಬರ ಪಾಟೀಲರಿಂದ ಕನ್ನಡ ಅವಮಾನಗಡ್ಚಿರೋಲಿ ಹಾವು ಕಡಿತ ಪ್ರಕರಣ
ಗಡ್ಚಿರೋಲಿಯ ಜಪ್ತಲೈ ಗ್ರಾಮದ ಅನುದಾನಿತ ಬುಡಕಟ್ಟು ಆಶ್ರಮ ಶಾಲೆಯ ಹಾಸ್ಟೆಲ್‌ನಲ್ಲಿ ಆಗಸ್ಟ್ 9ರಂದು ರಾತ್ರಿ ಹಾವು ಕಡಿತದಿಂದ ಮೂರು ಬುಡಕಟ್ಟು ಬಾಲಕಿಯರು ಮೃತಪಟ್ಟಿದ್ದರು. ಇನ್ನು ಮೂವರು ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸಿಗೆಗಳ ಕೊರತೆಯಿಂದ ನೆಲದ ಮೇಲೆಯೇ ಮಲಗಬೇಕಾಗಿತ್ತು ಎಂದು ವರದಿಯಾಗಿದೆ. ಒಂದೇ ಕೊಠಡಿಯಲ್ಲಿ 79 ಬಾಲಕಿಯರನ್ನು ಇರಿಸಲಾಗಿತ್ತು ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತಿಳಿಸಿದೆ.
ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಆ ಆಶ್ರಮ ಶಾಲೆಯ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸುವಂತೆ ಆದೇಶಿಸಿದ್ದರು. ರಾಜ್ಯದ ಎಲ್ಲ ಆಶ್ರಮ ಶಾಲೆಗಳ ಸುರಕ್ಷತಾ ವ್ಯವಸ್ಥೆಯ ಸಮಗ್ರ ಪರಿಶೀಲನೆಗೂ ಸರ್ಕಾರ ಕ್ರಮ ಕೈಗೊಂಡಿದೆ.
ಈ ಘಟನೆಗೆ ಆಡಳಿತಾತ್ಮಕ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರವೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಹಾರಾಷ್ಟ್ರ | 4 ಅಂತಸ್ತಿನ ಕಟ್ಟಡ ಕುಸಿತ: 8 ಮಂದಿ ಸಾವು, ಹಲವರು ಸಿಲುಕಿರುವ ಶಂಕೆವರದಿ ಕೇಳಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ಮೂವರು ವಿದ್ಯಾರ್ಥಿನಿಯರ ಸಾವಿನ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ. ಎರಡು ವಾರಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದ್ದು, ಗಾಯಗೊಂಡಿರುವ ಇತರ ಮೂವರು ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿಯ ಬಗ್ಗೆಯೂ ಮಾಹಿತಿ ನೀಡುವಂತೆ ಕೇಳಿದೆ.
ಆಶ್ರಮ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆಯಿರುವುದು ಗಂಭೀರ ಮಾನವ ಹಕ್ಕು ಉಲ್ಲಂಘನೆಯ ವಿಷಯ ಎಂದು ಅದು ಹೇಳಿದೆ.
ದೇಶದ ಖಾಸಗಿ ಈಕ್ವಿಟಿ, ವೆಂಚರ್ ಕ್ಯಾಪಿಟಲ್ ಆಕರ್ಷಣೆ; ಕರ್ನಾಟಕ,ಮಹಾರಾಷ್ಟ್ರ ಮುಂದು
