ಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ (ಮನ್‌ಮುಲ್) ನಡೆದಿರುವ ಹಾಲಿನಪುಡಿ ಕಲಬೆರಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಜಿಲ್ಲಾ ಬಿಜೆಪಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಹಾಲಿನಪುಡಿ ಕಲಬೆರಕೆ ಪ್ರಕರಣವು ರೈತರು, ಜನರ ನಂಬಿಕೆಗೆ ದ್ರೋಹ ಬಗೆದಂತಾಗಿದೆ.
ಜನರ ನಂಬಿಕೆಗೆ ಧಕ್ಕೆ ಬಂದಿದೆ. ಪೊಲೀಸ್ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಇಂದ್ರೇಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಅ.7ರಂದು ಮನ್‌ಮುಲ್ ಡೇರಿಗೆ ಮುತ್ತಿಗೆ ಹಾಕಲಾಗುವುದು. ಅದಕ್ಕೂ ಸ್ಪಂದಿಸದಿದ್ದರೆ ಅ.10 ಅಥವಾ 11ರಂದು ಮಂಡ್ಯದಿಂದ ಗೆಜ್ಜಲಗೆರೆವರೆಗೆ ಪಾದಯಾತ್ರೆ ನಡೆಸಲಾಗುವುದು. ರಾಜ್ಯ ಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರಕರಣದ ಸಿಬಿಐ ತನಿಖೆ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಮೂಲಕ ಕೇಂದ್ರದ ಸಹಕಾರ ಸಚಿವರೂ ಆದ ಅಮಿತ್ ಶಾ ಅವರಿಗೂ ಪತ್ರ ಬರೆಯಲಾಗುವುದು. ಮನ್‌ಮುಲ್‌ನಲ್ಲಿ ಈ ಹಿಂದೆ ನಡೆದಿರುವ ನೇಮಕಾತಿ, ಮೆಗಾಡೇರಿ ಸ್ಥಾಪನೆ ಮತ್ತು ಹಾಲು-ನೀರು ಹಗರಣದ ಬಗ್ಗೆಯೂ ಸಿಬಿಐ ತನಿಖೆ ನಡೆಯಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಮನ್‌ಮುಲ್ ಆಡಳಿತ ಮಂಡಳಿಯನ್ನು 'ಸೂಪರ್‌ಸೀಡ್' ಮಾಡಿ: ಜೆಡಿಎಸ್ ಆಗ್ರಹಸಿಹಿ ಉತ್ಪನ್ನಗಳಿಗೆ ಬಳಕೆ
ಮನ್‌ಮುಲ್ ನಿರ್ದೇಶಕ ಮತ್ತು ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಮಾತನಾಡಿ, 'ಕಲಬೆರಕೆಯಾಗಿರುವ 57 ಟನ್ ಹಾಗೂ ನಾಪತ್ತೆಯಾಗಿರುವ 55 ಹಾಲಿನಪುಡಿಯ ಮೌಲ್ಯವು ಒಟ್ಟು ₹3 ಕೋಟಿ ಮೌಲ್ಯದ್ದಾಗಿದೆ. ಆದರೆ, ಇದನ್ನು ₹100 ಕೋಟಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸಲಾಗಿದೆ. ಶಾಲಾ ಮಕ್ಕಳಿಗೆ ಪೂರೈಕೆಯಾಗುವ ಕೆನೆಭರಿತ ಹಾಲಿನಪುಡಿ ಕಲಬೆರಕೆಯಾಗಿಲ್ಲ. ಕೆನೆರಹಿತ ಹಾಲಿನಪುಡಿ ಕಲಬೆರಕೆಯಾಗಿದ್ದು, ಇದು ಸಿಹಿ ಉತ್ಪನ್ನಗಳ ತಯಾರಿಕೆಗೆ ಬಳಕೆಯಾಗುತ್ತದೆ. ಇದನ್ನು ಆಡಳಿತ ಮಂಡಳಿಯೇ ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬುದು ನಮ್ಮ ಒತ್ತಾಯವೂ ಆಗಿದೆ' ಎಂದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಜೆ.ಅಶೋಕ್ ಜಯರಾಮ್, ಬಿಜೆಪಿ ಮುಖಂಡರಾದ ಸಿ.ಟಿ.ಮಂಜುನಾಥ್, ಭೀಮೇಶ್, ಪ್ರಸನ್ನಕುಮಾರ್, ಮನು, ಪುಟ್ಟಸ್ವಾಮಿಗೌಡ ಹಾಜರಿದ್ದರು.
ಮಂಡ್ಯ | ಹಾಲಿನಪುಡಿ ಕಲಬೆರಕೆ: ಸಿಬಿಐ ತನಿಖೆಗೆ ದಲಿತ ಸಂಘಟನೆ ಆಗ್ರಹಹಾಲಿನಪುಡಿ ಪ್ರಕರಣದಲ್ಲಿ ಕ್ರಮ ಖಚಿತ: ಮಧು ಬಂಗಾರಪ್ಪ
