Dailyhunt Logo
  • Light mode
    Follow system
    Dark mode
    • Play Story
    • App Story
ಟ್ರಂಪ್-ಮೆಲೊನಿ ಮುನಿಸು: ಅಮೆರಿಕ-ಇಟಲಿ ನಡುವೆ ರಾಜತಾಂತ್ರಿಕ ಬಿಕ್ಕಟ್ಟು

ಟ್ರಂಪ್-ಮೆಲೊನಿ ಮುನಿಸು: ಅಮೆರಿಕ-ಇಟಲಿ ನಡುವೆ ರಾಜತಾಂತ್ರಿಕ ಬಿಕ್ಕಟ್ಟು

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಟ್ರಂಪ್-ಮೆಲೊನಿ ಮುನಿಸು: ಅಮೆರಿಕ-ಇಟಲಿ ನಡುವೆ ರಾಜತಾಂತ್ರಿಕ ಬಿಕ್ಕಟ್ಟು

ಒಂದು ಸಾಲಿನಲ್ಲಿಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಣ ರಾಜತಾಂತ್ರಿಕ ಸಂಘರ್ಷವು ಉಭಯ ದೇಶಗಳ ಬಾಂಧವ್ಯದಲ್ಲಿ ತೀವ್ರ ಬಿರುಕು ಮೂಡಿಸಿದೆ.

ಪ್ರಮುಖ ಮುಖ್ಯಾಂಶಗಳು• ಇರಾನ್ ಯುದ್ಧದ ವಿಷಯದಲ್ಲಿ ಅಸಹಕಾರಅಮೆರಿಕದ ಮಿಲಿಟರಿ ಕಾರ್ಯಾಚರಣೆಗೆ ಇಟಲಿ ಬೆಂಬಲ ನೀಡಲಿಲ್ಲ ಮತ್ತು ಇಟಲಿಯ ವಾಯುನೆಲೆಗಳನ್ನು ಬಳಸಲು ಮೆಲೋನಿ ಸರ್ಕಾರ ನಿರಾಕರಿಸಿದ್ದು ಟ್ರಂಪ್ ಅವರ ಆಕ್ರೋಶಕ್ಕೆ ಕಾರಣವಾಯಿತು.• ಪೋಪ್ ವಿಷಯದಲ್ಲಿ ಭಿನ್ನಮತಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ದಾಳಿಯನ್ನು ಪೋಪ್ ಖಂಡಿಸಿದ್ದರು. ಈ ವಿಷಯದಲ್ಲಿ ಪೋಪ್ ಅವರನ್ನು ಮೆಲೋನಿ ಬೆಂಬಲಿಸಿದ್ದು, ಟ್ರಂಪ್ ಅವರ ಕಿಡಿಗೇ ಕಾರಣವಾಯಿತು.• ಜಿ-7 ಶೃಂಗಸಭೆಯ ಫೋಟೋ ವಿವಾದಮೆಲೋನಿ ತನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡರು ಎಂದು ಟ್ರಂಪ್ ಹೇಳಿದ್ದರು, ಇದನ್ನು ಮೆಲೋನಿ ತೀವ್ರವಾಗಿ ಖಂಡಿಸಿ ಅದು ಕಟ್ಟು ಕಥೆ ಎಂದು ತಿರುಗೇಟು ನೀಡಿದ್ದರು.• ರಾಜತಾಂತ್ರಿಕ ಮಟ್ಟದ ಬಿಕ್ಕಟ್ಟುಟ್ರಂಪ್ ಹೇಳಿಕೆಗಳಿಂದ ಬೇಸತ್ತ ಇಟಲಿಯ ವಿದೇಶಾಂಗ ಸಚಿವರು ತಮ್ಮ ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಮತ್ತು ಇಟಲಿಯ ಎಲ್ಲಾ ಪಕ್ಷಗಳು ಇದನ್ನು ರಾಷ್ಟ್ರೀಯ ಅಪಮಾನ ಎಂದು ಕರೆದಿವೆ.• ನ್ಯಾಟೋ ಒಕ್ಕೂಟದ ಮೇಲೆ ಪರಿಣಾಮಇಟಲಿಯು ನ್ಯಾಟೋ ಮಿತ್ರರಾಷ್ಟ್ರಗಳಲ್ಲಿ ಪ್ರಮುಖ ನೆಲೆ ಆಗಿದ್ದರೂ, ಉಭಯ ನಾಯಕರ ವೈಮನಸ್ಯದಿಂದಾಗಿ ಭದ್ರತಾ ಸಹಕಾರಕ್ಕೆ ಹಿನ್ನಡೆಯಾಗುವ ಆತಂಕ ಉಂಟಾಗಿದೆ.ಪ್ರಮುಖ ಅಂಕಿಅಂಶಗಳು14ನೇ ಪೋಪ್ ಲಿಯೊಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಗುರುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ವಾಷಿಂಗ್ಟನ್/ರೋಮ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ನಡುವಣ ಮುಸುಕಿನ ಗುದ್ದಾಟದಿಂದಾಗಿ ಉಭಯ ರಾಷ್ಟ್ರಗಳ ನಡುವಣ ರಾಜತಾಂತ್ರಿಕ ಬಾಂಧವ್ಯದಲ್ಲಿ ಬಿರುಕು ಮೂಡಿದೆ.

ಸೈದ್ಧಾಂತಿಕವಾಗಿ ಟ್ರಂಪ್ ಹಾಗೂ ಮೆಲೊನಿ ಬಲಪಂಥೀಯ ಹಾಗೂ ರಾಷ್ಟ್ರೀಯತಾವಾದಿ ನಾಯಕರಾಗಿದ್ದರೂ ಇತ್ತೀಚಿನ ಭೌಗೋಳಿಕ ರಾಜಕೀಯ ವಿದ್ಯಮಾನಗಳು ಅಮೆರಿಕ ಹಾಗೂ ಇಟಲಿ ನಡುವಣ ಸಂಬಂಧ ಹಳಸುವಂತೆ ಮಾಡಿದೆ.

ಇಬ್ಬರು ನಾಯಕರ ನಡುವಣ ವೈಮನಸ್ಸು ಮತ್ತು ರಾಜತಾಂತ್ರಿಕ ಸಂಬಂಧಕ್ಕೆ ಪೆಟ್ಟು ನೀಡಿದ್ದಷ್ಟೇ ಅಲ್ಲ, ಇರಾನ್ ವಿರುದ್ಧದ ಯುದ್ಧ ಮತ್ತು ನ್ಯಾಟೊ ಬಣದೊಂದಿಗಿನ ಟ್ರಂಪ್ ಮುನಿಸಿನೊಂದಿಗೂ ತಳಕು ಹಾಕಿಕೊಳ್ಳಲಾಗುತ್ತಿದೆ.

ಇರಾನ್ ಅಣ್ವಸ್ತ್ರ ಬೆದರಿಕೆ ಎದುರಿಸಲು ಕೈಜೋಡಿಸದ ಮೆಲೊನಿ ವಿರುದ್ಧ ಟ್ರಂಪ್ ಕಿಡಿನನ್ನ ಜನಪ್ರಿಯತೆ ಬಗ್ಗೆ ನಿಮಗೆ ಚಿಂತೆ ಬೇಡ: ಟ್ರಂಪ್‌ಗೆ ಮೆಲೊನಿ ತಿರುಗೇಟು

ಇರಾನ್ ಯುದ್ಧದ ವಿಷಯದಲ್ಲಿ ಅಸಹಕಾರ:

ಅಮೆರಿಕವು ಇರಾನ್ ವಿರುದ್ಧ ನಡೆಸಿದ ಮಿಲಿಟರಿ ಕಾರ್ಯಾಚರಣೆಗೆ ಇಟಲಿ ಬೆಂಬಲ ನೀಡಿರಲಿಲ್ಲ. ಅದಲ್ಲದೆ ಅಮೆರಿಕದ ಯುದ್ಧವಿಮಾನಗಳು ಇಟಲಿಯ ವಾಯುನೆಲೆಗಳನ್ನು ಬಳಕೆ ಮಾಡುವುದಕ್ಕೆ ಮೆಲೊನಿ ನೇತೃತೃದ ಇಟಲಿ ಸರ್ಕಾರ ಅನುಮತಿ ನಿರಾಕರಿಸಿತ್ತು. ಇದು ಟ್ರಂಪ್ ಅವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪೋಪ್ ಖಂಡನೆ:

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಯನ್ನು ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಗುರು 14ನೇ ಪೋಪ್ ಲಿಯೊ ಅವರು ಖಂಡಿಸಿದ್ದರು. ಇದರ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪೋಪ್ ಪರವಾಗಿ ನಿಂತಿದ್ದ ಮೆಲೊನಿ, ಟ್ರಂಪ್ ಹೇಳಿಕೆಯನ್ನು ಖಂಡಿಸಿದ್ದರು.

ಜಿ-7 ಶೃಂಗಸಭೆಯಲ್ಲಿ ಫೋಟೊ ವಿವಾದ:

ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ ಜಿ-7 ಶೃಂಗಸಭೆಯ ನಂತರ ಟ್ರಂಪ್ ಮಾಧ್ಯಮವೊಂದರಲ್ಲಿ 'ಮೆಲೊನಿ ನನ್ನ ಜೊತೆ ಫೋಟೊ ತೆಗೆದುಕೊಳ್ಳಲು ಪದೇ ಪದೇ ಬೇಡಿಕೊಂಡಿದ್ದರು' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಮೆಲೊನಿ 'ನಾನಾಗಲಿ ಇಟಲಿಯಾಗಲಿ ಯಾರ ಬಳಿ ಬೇಡುವುದಿಲ್ಲ. ಟ್ರಂಪ್ ಸುಳ್ಳು ಕಥೆ ಕಟ್ಟುತ್ತಿದ್ದಾರೆ' ಎಂದು ತಿರುಗೇಟು ನೀಡಿದ್ದರು.

ಬಹುಶಃ ಅಮೆರಿಕವನ್ನು ಕಡೆಗಣಿಸಿದ್ದಕ್ಕಾಗಿ ಇಟಲಿಯಲ್ಲಿ ಮೆಲೊನಿ ಜನಪ್ರಿಯತೆ ಕುಸಿದಿದೆ. ಈ ಸಂದರ್ಭದಲ್ಲಿ ಇಟಲಿಯ ವಿದೇಶಾಂಗ ನೀತಿಯನ್ನು ಟ್ರಂಪ್ ಟೀಕಿಸಿದ್ದರು. 'ಆದರೆ ನನ್ನ ಜನಪ್ರಿಯತೆ ಬಗ್ಗೆ ನಿಮಗೆ ಚಿಂತೆ ಬೇಡ. ನೀವು ನಿಮ್ಮ ವಿಷಯಗಳ ಬಗ್ಗೆ ಗಮನ ಹರಿಸಿ' ಎಂದು ಮೆಲೊನಿ ಹೇಳಿದ್ದರು.

ಅಮೆರಿಕ-ಇಟಲಿ ರಾಜತಾಂತ್ರಿಕ ಬಾಂಧವ್ಯದಲ್ಲಿ ಬಿರುಕು:

ಟ್ರಂಪ್ ಹಾಗೂ ಮೆಲೊನಿ ನಡುವಣ ವೈಯಕ್ತಿಕ ಜಗಳ ಅಮೆರಿಕ ಹಾಗೂ ಇಟಲಿ ನಡುವೆ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ.

ಟ್ರಂಪ್ ಅವರ ಹೇಳಿಕೆಯಿಂದ ಬೇಸತ್ತ ಇಟಲಿಯ ವಿದೇಶಾಂಗ ಸಚಿವರು ತಮ್ಮ ನಿಗದಿತ ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇಟಲಿಯ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಟ್ರಂಪ್ ಹೇಳಿಕೆಯು ಇಡೀ ಇಟಲಿ ದೇಶಕ್ಕೆ ಮಾಡಿದ ಅಪಮಾನ ಎಂದು ಖಂಡಿಸುತ್ತಿರುವುದರಿಂದ ರಾಜತಾಂತ್ರಿಕ ವಲಯದಲ್ಲಿ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.

ನ್ಯಾಟೊ ಮಿತ್ರರಾಷ್ಟ್ರಗಳಲ್ಲಿ ಬಿರುಕು:

ಯುರೋಪಿನಲ್ಲಿ ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳಲ್ಲಿ ಇಟಲಿ ಕೂಡ ಒಂದು. ಆದರೆ ಇಟಲಿ ತನಗೆ ಸಹಕರಿಸುತ್ತಿಲ್ಲ ಎಂದು ಟ್ರಂಪ್ ಬಹಿರಂಗವಾಗಿ ದೂರಿದ್ದಾರೆ. ಇದರಿಂದಾಗಿ ನ್ಯಾಟೊ ಮಿತ್ರರಾಷ್ಟ್ರಗಳಲ್ಲಿ ಭದ್ರತಾ ಸಹಕಾರ ಮತ್ತು ಪ್ರಮುಖ ನಿರ್ಣಯಗಳಿಗೆ ಹಿನ್ನಡೆಯಾಗುವ ಭೀತಿ ಕಾಡುತ್ತಿದೆ.

ಯುರೋಪ್ ಮತ್ತು ಅಮೆರಿಕದ ನಡುವೆ ಅಂತರ:

ಮೆಲೊನಿ ಅವರು ಐರೋಪ್ಯ ಒಕ್ಕೂಟ (ಇಯು) ಮತ್ತು ಅಮೆರಿಕದ ನಡುವೆ ಒಂದು ಸೇತುವೆಯಾಗಿ ಕೆಲಸ ಮಾಡಲು ಬಯಸಿದ್ದರು. ಆದರೆ ಈಗ ಮೂಡಿರುವ ಬಿರುಕಿನಿಂದಾಗಿ, ಇಟಲಿ ಮಾತ್ರವಲ್ಲದೆ ಇಡೀ ಯುರೋಪ್ ಖಂಡದಲ್ಲಿ ಅಮೆರಿಕದ ಬಗೆಗಿನ ವಿಶ್ವಾಸಾರ್ಹತೆ ಕಡಿಮೆಯಾಗುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ಟ್ರಂಪ್ ಹಾಗೂ ಮೆಲೊನಿ ನಡುವಣ ಭಿನ್ನಾಭಿಪ್ರಾಯಗಳು ಅಮೆರಿಕ-ಇಟಲಿ ನಡುವಿನ ಸಾಂಪ್ರದಾಯಿಕ ಸ್ನೇಹ ಬಾಂಧವ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

'ಫೋಟೊಗಾಗಿ ಬೇಡಿಕೊಂಡಿದ್ದರು' ಎಂದ ಟ್ರಂಪ್‌ಗೆ ಮೆಲೊನಿ ತೀಕ್ಷ್ಣ ಪ್ರತಿಕ್ರಿಯೆಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಮೋದಿ-ಮೆಲೊನಿ 'ಮೆಲೋಡಿ': ಮೀಮ್ಸ್ ನೋಡಿ..
Dailyhunt
Disclaimer: This content has not been generated, created or edited by Dailyhunt. Publisher: Prajavani