Dailyhunt Logo
  • Light mode
    Follow system
    Dark mode
    • Play Story
    • App Story
ನನ್ನ ಸ್ಕ್ರಿಪ್ಟ್‌ಗಳನ್ನು ಕದ್ದು ನೂರಾರು ಕೋಟಿ ಗಳಿಕೆ ಮಾಡಿಕೊಂಡರು: ಆದಿತ್ಯಧರ್

ನನ್ನ ಸ್ಕ್ರಿಪ್ಟ್‌ಗಳನ್ನು ಕದ್ದು ನೂರಾರು ಕೋಟಿ ಗಳಿಕೆ ಮಾಡಿಕೊಂಡರು: ಆದಿತ್ಯಧರ್

'ಚಿತ್ರರಂಗದಲ್ಲಿ ನನ್ನ ಆರಂಭದ ದಿನಗಳು ಸುಲಭವಾಗಿರಲಿಲ್ಲ. ನಾನು ಬರೆದ ಸ್ಕ್ರಿಪ್ಟ್‌ಗಳನ್ನು ಬೇರೆಯವರು ಕದ್ದು ಸಿನಿಮಾ ಮಾಡಿ ₹100 ಕೋಟಿಗೂ ಅಧಿಕ ಗಳಿಕೆ ಮಾಡಿಕೊಂಡಿದ್ದಾರೆ' ಎಂದು 'ಧುರಂಧರ್' ನಿರ್ದೇಶಕ ಆದಿತ್ಯಧರ್ ಹೇಳಿಕೊಂಡಿದ್ದಾರೆ.

ಲವ್ ಮಾಕ್ಟೇಲ್ -3 ವಿವಾದ ಬಗೆಹರಿಸಿದ ಕೆಎಫ್‌ಸಿಸಿ ಅಧ್ಯಕ್ಷೆ ಜಯಮಾಲಾಹೊಸ ಸಿನಿಮಾ ಘೋಷಿಸಿದ ಮಾಜಿ ಬಿಗ್‌ಬಾಸ್ ಸ್ಪರ್ಧಿ, ನಟಿ ಸಂಗೀತಾ ಶೃಂಗೇರಿ

ಧುರಂಧರ್ ಹಾಗೂ ಧುರಂಧರ್-2 ಸಿನಿಮಾಗಳು ಯಶಸ್ಸು ಗಳಿಸುತ್ತಿದ್ದಂತೆ, ಅವರ ಈ ಹಿಂದಿನ ಸಂದರ್ಶನವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

'ನನ್ನ ಆರಂಭದ ಸಿನಿಮಾ ಜರ್ನಿಯಲ್ಲಿ ಸಾಲು ಸಾಲು ಮೋಸ ಅನುಭವಿಸಿದ್ದೇನೆ. ಚಿತ್ರರಂಗದಲ್ಲಿ ಯಾರನ್ನು ನಂಬಬೇಕು ಎಂಬುವುದೇ ದೊಡ್ಡ ಸವಾಲಾಗಿತ್ತು' ಎಂದಿದ್ದಾರೆ.

'ನಾನು ಬರೆದ ಸ್ಕ್ರಿಪ್ಟ್‌ಗಳನ್ನು ಕದ್ದು, ಬೇರೆಯವರು ಅದರಿಂದಲೇ ನೂರಾರು ಕೋಟಿ ಗಳಿಸಿದ್ದಾರೆ. ಆದರೆ, ಆ ಯಶಸ್ಸಿನ ಹಿಂದೆ ಇದ್ದ ನನ್ನ ಶ್ರಮಕ್ಕೆ ಕಿಂಚಿತ್ತೂ ಮನ್ನಣೆ ಸಿಗಲಿಲ್ಲ. ಚಿತ್ರರಂಗದಲ್ಲಿ ಒಬ್ಬ ನಿರ್ದೇಶಕನಾಗಿ ಗುರುತಿಸಿಕೊಳ್ಳಲು 10 ರಿಂದ 12 ವರ್ಷಗಳ ಕಾಲ ನಿರಂತರ ಶ್ರಮವಹಿಸಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

'ಉರಿ ದಿ ಸರ್ಜಿಕಲ್ ಸ್ಟ್ರೈಕ್', 'ಧುರಂಧರ್' ಹಾಗೂ 'ಧುರಂಧರ್: ದಿ ರಿವೆಂಜ್' ಚಿತ್ರವನ್ನು ನಿರ್ದೇಶಿಸಿ ಖ್ಯಾತಿ ಗಳಿಸಿದ್ದಾರೆ.

'ಧುರಂಧರ್2' ಚಿತ್ರವು ₹1000ಕೋಟಿಗೂ ಅಧಿಕ ಗಳಿಕೆ ಕಂಡು, ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani