ಕೊಚ್ಚಿ: ನೇಪಾಳದ ಭೀಕರ ಪ್ರವಾಹದಿಂದ ಪಾರಾದ ಕೇರಳದ 31 ಜನರ ತಂಡವು ಭಾನುವಾರ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದೆ.
ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರವಾಸಿಗರನ್ನು ಅವರ ಕುಟುಂಬಸ್ಥರು ಕಣ್ಣೀರಿನೊಂದಿಗೆ ಆಲಂಗಿಸಿದರು.
ಕಠ್ಮಂಡುವಿನಿಂದ ಪೋಖರಾಗೆ ಪ್ರಯಾಣಿಸುತ್ತಿದ್ದ ಈ ತಂಡದಲ್ಲಿ ಮಹಿಳೆಯರು, ಹಿರಿಯರು ಮತ್ತು ಪುಟ್ಟ ಮಕ್ಕಳಿದ್ದರು.
ಮಾರ್ಗಮಧ್ಯೆ ಮಹಿಳೆಯರ ಕೋರಿಕೆಯಂತೆ ಬುದ್ಧ ಮಂದಿರದಲ್ಲಿ ಕಳೆದ ಕೇವಲ 20 ನಿಮಿಷಗಳ ವಿಳಂಬವೇ ಇಡೀ ತಂಡಕ್ಕೆ ಮರುಜೀವ ನೀಡಿದೆ.
ಸಿನಿ ಸಿಪ್: ತೆರೆಯ ತುಂಬೆಲ್ಲ ಧೂಮಲೀಲೆ'ಟಾಕ್ಸಿಕ್' ಕಥೆ ಇಲ್ಲದ ಸಿನಿಮಾ ಎಂದವರಿಗೆ ಮಾಸ್ಟರ್ ಆನಂದ್ ಹೇಳಿದ್ದಿಷ್ಟು'ನಾವು ಬುದ್ಧ ಮಂದಿರದಲ್ಲಿ ನಿಲ್ಲದೇ ಹೋಗಿದ್ದರೆ, ಪ್ರವಾಹಕ್ಕೆ ಕೊಚ್ಚಿಹೋದ ಸೇತುವೆ ಮೇಲೆ ಇರುತ್ತಿದ್ದೆವು' ಎಂದು ಪ್ರವಾಸಿಗರು ಭಾವುಕರಾದರು.
ಪ್ರಯಾಣದ ವೇಳೆ ಸುಮಾರು 600 ಅಡಿ ಕೆಳಗೆ ಕ್ಷಣಾರ್ಧದಲ್ಲಿ ದೊಡ್ಡ ನೀರಿನ ಅಲೆ ಬಂದು ಕಟ್ಟಡಗಳನ್ನು ಕೊಚ್ಚಿಕೊಂಡು ಹೋಗಿದ್ದನ್ನು ಪ್ರತ್ಯಕ್ಷವಾಗಿ ಕಂಡಿದ್ದೇವೆ. ಆಹಾರ ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ರಾತ್ರಿಯಿಡೀ ಕಾಲ್ನಡಿಗೆಯಲ್ಲೇ ಸುರಕ್ಷಿತ ಸ್ಥಳ ತಲುಪಲು ಪಟ್ಟ ಶ್ರಮವನ್ನು ಪ್ರವಾಸಿಗರು ವಿವರಿಸಿದ್ದಾರೆ.
ನೋರ್ಕಾ ರೂಟ್ಸ್ ( ಅನಿವಾಸಿ ಕೇರಳೀಯರ ಕಲ್ಯಾಣ ಸಂಸ್ಥೆ) ನೇಪಾಳದಲ್ಲಿದ್ದ ಪ್ರಯಾಣಿಕರ ಸುರಕ್ಷತೆಯನ್ನು ದೃಢಪಡಿಸಿ, ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಿತ್ತು. ಪ್ರವಾಹದಲ್ಲಿ ಅನೇಕರು ಪ್ರಾಣ ಕಳೆದುಕೊಂಡ ಸುದ್ದಿ ತಿಳಿದ ಮೇಲೆ, ಇತರರು ಅನುಭವಿಸಿದ ದುರಂತಕ್ಕೆ ಹೋಲಿಸಿದರೆ ನಮ್ಮ ಕಷ್ಟಗಳು ಏನೂ ಅಲ್ಲ ಎನಿಸಿತು ಎಂದು ತಾಯ್ನಾಡಿಗೆ ವಾಪಸ್ ಆದ ಪ್ರವಾಸಿಗರು ತಿಳಿಸಿದ್ದಾರೆ.
ನೇಪಾಳದಲ್ಲಿ ಭೀಕರ ಪ್ರವಾಹ: ಮೃತರ ಸಂಖ್ಯೆ 750ಕ್ಕೆ ಏರಿಕೆ, 3,000 ಜನ ನಾಪತ್ತೆನೇಪಾಳ ಪ್ರವಾಹ: 1,643 ಮಕ್ಕಳ ಜೀವ ಉಳಿಸಿದ ಮುಖ್ಯ ಶಿಕ್ಷಕನ ಸಮಯಪ್ರಜ್ಞೆ
