Dailyhunt Logo
  • Light mode
    Follow system
    Dark mode
    • Play Story
    • App Story
ನೀಟ್ ಮರುಪರೀಕ್ಷೆ: ಟೆಲಿಗ್ರಾಮ್ ಆಯಪ್ ಮೇಲಿನ ನಿರ್ಬಂಧ ತೆರವು

ನೀಟ್ ಮರುಪರೀಕ್ಷೆ: ಟೆಲಿಗ್ರಾಮ್ ಆಯಪ್ ಮೇಲಿನ ನಿರ್ಬಂಧ ತೆರವು

ವದೆಹಲಿ: ಜೂನ್‌ 21ರಂದು ನಡೆದಿದ್ದ ನೀಟ್‌-ಯುಜಿ ಮರುಪರೀಕ್ಷೆ ಹಿನ್ನೆಲೆಯಲ್ಲಿ ಟೆಲಿಗ್ರಾಮ್ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರವು ತೆರವುಗೊಳಿಸಿದೆ.

ಇದರೊಂದಿಗೆ ಗೂಗಲ್ ಪ್ಲೇ-ಸ್ಟೋರ್‌ನಲ್ಲಿ ಟೆಲಿಗ್ರಾಮ್ ಆಯಪ್ ಅನ್ನು ಪುನಃಸ್ಥಾಪಿಸಲಾಗಿದೆ.

ಅಲ್ಲದೆ ಮಂಗಳವಾರ ಬೆಳಿಗ್ಗೆಯಿಂದ ಬಳಕೆದಾರರಿಗೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿದೆ.

ಮತ್ತೊಂದೆಡೆ ಆಯಪಲ್ ಆಯಪ್‌ಸ್ಟೋರ್‌ನಲ್ಲಿ ಬೆಳಿಗ್ಗೆ 10 ತನಕ ಬಳಕೆದಾರರಿಗೆ ಟೆಲಿಗ್ರಾಮ್ ಲಭ್ಯವಿರಲಿಲ್ಲ. ಇನ್ನು ಕೆಲವು ಬಳಕೆದಾರರು ಟೆಲಿಗ್ರಾಮ್ ಆಯಪ್ ಬಳಕೆಗೆ ಸಿಗುತ್ತಿಲ್ಲ ಎಂದು ದೂರಿದ್ದಾರೆ.

ಈ ಮೊದಲು ಟೆಲಿಗ್ರಾಮ್ ಆಯಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದಿದ್ದ ದೆಹಲಿ ಹೈಕೋರ್ಟ್‌, ಈ ಬಗ್ಗೆ ಟೆಲಿಗ್ರಾಮ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.

ಭಾರತದಲ್ಲಿ ನಿರ್ಬಂಧದ ಹಿಂದೆ ರಿಲಯನ್ಸ್, ವಾಟ್ಸ್‌ಆಯಪ್ ಕೈವಾಡ: ಟೆಲಿಗ್ರಾಮ್ ಆರೋಪNEET-UG re-test: ಜೂನ್ 22ರವರೆಗೆ ಟೆಲಿಗ್ರಾಮ್ ನಿರ್ಬಂಧಿಸಿದ ಕೇಂದ್ರ
Dailyhunt
Disclaimer: This content has not been generated, created or edited by Dailyhunt. Publisher: Prajavani