Dailyhunt Logo
  • Light mode
    Follow system
    Dark mode
    • Play Story
    • App Story
ಪಠಾಣ್, ಅನಿಮಲ್,ಆದಿಪುರುಷ್‌ ದಾಖಲೆ ಮುರಿದ ಟಾಕ್ಸಿಕ್: ಮೊದಲ ದಿನ ಗಳಿಸಿದ್ದೆಷ್ಟು?

ಪಠಾಣ್, ಅನಿಮಲ್,ಆದಿಪುರುಷ್‌ ದಾಖಲೆ ಮುರಿದ ಟಾಕ್ಸಿಕ್: ಮೊದಲ ದಿನ ಗಳಿಸಿದ್ದೆಷ್ಟು?

ರಾಕಿಂಗ್ ಸ್ಟಾರ್ ಯಶ್ ನಟನೆ ಬಹು ನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ನೆನ್ನೆ (ಆಗಸ್ಟ್ 26) ವಿಶ್ವದಾದ್ಯಂತ ಬಿಡುಗಡೆಗೊಂಡಿದೆ. ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ₹140 ಕೋಟಿ ಗಳಿಸಿರುವುದಾಗಿ ವರದಿಯಾಗಿದೆ. ಈ ಮೂಲಕ ಬಾಲಿವುಡ್‌ನ 'ಜವಾನ್', 'ಅನಿಮಲ್', 'ಆದಿಪುರುಷ್‌' ಹಾಗೂ 'ಪಠಾಣ್' ಸಿನಿಮಾಗಳ ದಾಖಲೆಯನ್ನು ಮುರಿದಿದೆ.

ಬಿಡುಗಡೆಗೂ ಮುನ್ನ 'ಟಾಕ್ಸಿಕ್‌' ಭಾರತದಲ್ಲಿ ಮೊದಲ ದಿನ ₹80 ರಿಂದ ₹85 ಕೋಟಿ ಗಳಿಸುವ ನಿರೀಕ್ಷೆಗಳಿದ್ದವು. ಸ್ಯಾಕ್ಟಿಲ್ಕ್ ಪ್ರಕಾರ, 'ಟಾಕ್ಸಿಕ್' ಭಾರತದಲ್ಲಿ ಮೊದಲ ದಿನ ₹101.10 ಕೋಟಿ ಗಳಿಸಿದೆ.

ಟಾಕ್ಸಿಕ್ ಸಿನಿಮಾ: ಥಿಯೆಟರ್‌ಗೆ ಬಂದ ರಾಯ; ಯಶ್ ಅಭಿಮಾನಿಗಳ ಸಂಭ್ರಮ ಮುಗಿಲಿಗೆ

ಅದರಂತೆ, ಹಿಂದಿಯಲ್ಲಿ ₹55 ಕೋಟಿ, ತೆಲುಗಿನಲ್ಲಿ ₹11 ಕೋಟಿ, ಕನ್ನಡದಲ್ಲಿ ₹23.30 ಕೋಟಿ, ಮಲಯಾಳದಲ್ಲಿ ₹1.30 ಕೋಟಿ ಹಾಗೂ ತಮಿಳಿನಲ್ಲಿ ₹5.50 ಕೋಟಿ ಗಳಿಸಿದೆ. 2026ರಲ್ಲಿ ಬಿಡುಗಡೆಯಾಗಿ ಮೊದಲ ದಿನವೇ ಹೆಚ್ಚು ಗಳಿಸಿದ 2ನೇ ಭಾರತೀಯ ಸಿನಿಮಾ ಎಂಬ ದಾಖಲೆಯನ್ನು 'ಟಾಕ್ಸಿಕ್' ಸಿನಿಮಾ ಮಾಡಿದೆ. 'ಧುರಂಧರ್ 2' ಬಿಡುಗಡೆಗೊಂಡ ಮೊದಲ ದಿನ ದೇಶದಾದ್ಯಂತ ₹103 ಕೋಟಿ ಗಳಿಸಿ ಮೊದಲ ಸ್ಥಾನದಲ್ಲಿದೆ.

'ಟಾಕ್ಸಿಕ್‌' ಸಿನಿಮಾ ವಿಮರ್ಶೆ: ಯಶ್‌ ಮಿಂಚು, ಕಥೆಯಲ್ಲಿ ಮಂಕು

ಬಿಡುಗಡೆಗೊಂಡ ಮೊದಲ ದಿನವೇ ವಿಶ್ವದಾದ್ಯಂತ ಹೆಚ್ಚು ಗಳಿಸಿದ 2ನೇ ಕನ್ನಡ ಸಿನಿಮಾ ಎಂಬ ದಾಖಲೆಯನ್ನು 'ಟಾಕ್ಸಿಕ್‌' ಬರೆದಿದೆ. 'ಕೆಜಿಎಫ್‌ 2' ಬಿಡುಗಡೆಗೊಂಡ ಮೊದಲ ದಿನ ಜಾಗತಿಕವಾಗಿ ₹164 ಕೋಟಿ ಗಳಿಸಿತ್ತು.

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್‌' ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದಾರೆ.

ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಬಿಡುಗಡೆಗೊಂಡ ಮೊದಲ ದಿನ ವಿಶ್ವದಾದ್ಯಂತ ₹104 ಕೋಟಿ ಗಳಿಸಿತ್ತು. ಅದರಂತೆ, ರಣಬೀರ್ ಕಪೂರ್ ನಟನೆಯ 'ಅನಿಮಲ್' ₹116 ಕೋಟಿ ಹಾಗೂ ಪ್ರಭಾಸ್ ಅಭಿನಯದ 'ಆದಿಪುರುಷ್‌' ವಿಶ್ವದಾದ್ಯಂತ ₹127 ಗಳಿಸಿತ್ತು. 'ಟಾಕ್ಸಿಕ್' ವಿಶ್ವದಾದ್ಯಂತ ₹140 ಕೋಟಿ ಗಳಿಸುವ ಮೂಲಕ ಈ ಸಿನಿಮಾಗಳ ದಾಖಲೆಯನ್ನು ಮುರಿದಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani