Dailyhunt Logo
  • Light mode
    Follow system
    Dark mode
    • Play Story
    • App Story
ಟಾಕ್ಸಿಕ್ ಸಿನಿಮಾ: ಥಿಯೆಟರ್‌ಗೆ ಬಂದ ರಾಯ; ಯಶ್ ಅಭಿಮಾನಿಗಳ ಸಂಭ್ರಮ ಮುಗಿಲಿಗೆ

ಟಾಕ್ಸಿಕ್ ಸಿನಿಮಾ: ಥಿಯೆಟರ್‌ಗೆ ಬಂದ ರಾಯ; ಯಶ್ ಅಭಿಮಾನಿಗಳ ಸಂಭ್ರಮ ಮುಗಿಲಿಗೆ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌ ಅಪ್ಸ್‌' ಸಿನಿಮಾ ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ರಾಯ ಹಾಗೂ ಟಿಕೆಟ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಯಶ್‌, ರಾಜ್ಯದಲ್ಲಿ 400ಕ್ಕೂ ಅಧಿಕ ಥಿಯೆಟರ್‌ಗಳಲ್ಲಿ ವೀಕ್ಷಕರ ಎದುರು ಬಂದಿದ್ದಾರೆ.

'ಲೇಡಿ ಸೂಪರ್‌ಸ್ಟಾರ್‌' ನಯನತಾರಾ, ಬಹುಭಾಷಾ ನಟಿಯರಾದ ಕಿಯಾರಾ ಅಡ್ವಾನಿ, ರುಕ್ಮಿಣಿ ವಸಂತ್‌, ಹುಮಾ ಖುರೇಷಿ, ತಾರಾ ಸುತಾರಿಯಾ ಸಾಥ್‌ ನೀಡಿದ್ದಾರೆ.

ಟಾಕ್ಸಿಕ್ ಸಿನಿಮಾ ಹೃದಯದಿಂದ ಕಟ್ಟಿದ ಜಗತ್ತು: ಬಿಡುಗಡೆಗೂ ಮುನ್ನ ಯಶ್ ಸಂದೇಶಟಾಕ್ಸಿಕ್ ತೆಲುಗು ಕ್ರೇಜ್: ಬುಕ್ ಮೈ ಶೋನಲ್ಲಿ ರಾಕಿಂಗ್ ಸ್ಟಾರ್ ಯಶ್ ಹೊಸ ದಾಖಲೆ

ಗೀತು ಮೋಹನ್‌ ದಾಸ್‌ ಅವರ ನಿರ್ದೇಶನದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ತಯರಾಗಿರುವ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಜಮಾಯಿಸಿದ್ದಾರೆ.

ಯಶ್‌ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಚಿತ್ರಮಂದಿರಗಳ ಬಳಿ ವಿವಿಧ ಕಲಾ ತಂಡಗಳ ಮೂಲಕ ಸಿನಿಮಾಗೆ ಅದ್ದೂರಿ ಸ್ವಾಗತ ಕೋರಿರುವ ಅವರು, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಹಲವೆಡೆ ಬೆಳಿಗ್ಗೆ 6ಕ್ಕೆ ಮೊದಲ ಪ್ರದರ್ಶನ ಆರಂಭಗೊಂಡಿದೆ.

'ಟಾಕ್ಸಿಕ್' ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ನಟ ಯಶ್ ಭೇಟಿ'ಟಾಕ್ಸಿಕ್' ಟೈಟಲ್ ಬಳಸಿ ಡ್ರಗ್ಸ್ ವ್ಯಸನದ ಜಾಗೃತಿ ಮೂಡಿಸಿದ ಒಡಿಶಾ ಪೊಲೀಸರು
Dailyhunt
Disclaimer: This content has not been generated, created or edited by Dailyhunt. Publisher: Prajavani