Dailyhunt Logo
  • Light mode
    Follow system
    Dark mode
    • Play Story
    • App Story
ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿ ನ್ಯಾಯಾಲಯಕ್ಕೆ ಸಿಜೆಪಿ ಅರ್ಜಿ

ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿ ನ್ಯಾಯಾಲಯಕ್ಕೆ ಸಿಜೆಪಿ ಅರ್ಜಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದನ್ನು ತಡೆಯಲಾಗಿದೆ, ಅಕ್ರಮವಾಗಿ ಗೃಹಬಂಧನದಲ್ಲಿಡಲಾಗಿದೆ ಎಂದು ಆರೋಪಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಕಾನೂನು ವ್ಯವಹಾರಗಳ ಮುಖ್ಯಸ್ಥೆ ರತ್ನಾ ಸಿಂಗ್ ಅವರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಶನಿವಾರ (ಅಕ್ಟೋಬರ್ 10) ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಈ ಬಗ್ಗೆ 'ಲೈವ್ ಲಾ' ವರದಿ ಮಾಡಿದೆ.

ಸಿಜೆಪಿ ಪ್ರತಿಭಟನೆ: ಮಮತಾ, ಸಿಪಿಎಂ ನಾಯಕರು, ಕೇಜ್ರಿವಾಲ್ ಸೇರಿ ಹಲವರು ವಶಕ್ಕೆ

ಸಾಕೇತ್ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಭಿನವ್ ಪಾಂಡೆ ಅವರ ಮುಂದೆ ಅರ್ಜಿ ಸಲ್ಲಿಸಿದ್ದಾರೆ.

ಇಬ್ಬರು ವಕೀಲ ಸಹೋದ್ಯೋಗಿಗಳೊಂದಿಗೆ ವಕೀಲರ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸುಪ್ರೀಂ ಕೋರ್ಟ್‌ನತ್ತ ತೆರಳುತ್ತಿದ್ದಾಗ, ಮನೆಯ ಸಮೀಪದಿಂದ ಮುಂದೆ ಹೋಗಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಸಿಜೆಪಿ ಹೋರಾಟ: ಪ್ರತಿಭಟನಾಕಾರರ ವಶಕ್ಕೆ ಪಡೆಯಲು 20 ಕಡೆ ಕೇಂದ್ರ ತೆರೆದ ಪೊಲೀಸ್

ಎರಡು ಕಾರುಗಳು ತಮ್ಮ ವಾಹನದ ದಾರಿಗೆ ಅಡ್ಡಲಾಗಿ ನಿಂತಿದ್ದವು ಮತ್ತು ಪೊಲೀಸರು ಕಾರಿನ ಬಾಗಿಲುಗಳ ಹೊರಗೆ ನಿಂತಿದ್ದರು ಎಂದು ಅವರು ಆರೋಪಿಸಿದ್ದಾರೆ. ಈ ಘಟನೆಯ ವಿಡಿಯೊವನ್ನು ನ್ಯಾಯಾಲಯ ಪರಿಶೀಲಿಸಬಹುದು ಎಂದೂ ಸಿಂಗ್ ತಿಳಿಸಿದ್ದಾರೆ.

ತಮ್ಮನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು, ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ ತಮ್ಮ ಜೀವ ಮತ್ತು ಸ್ವಾತಂತ್ರ್ಯಕ್ಕೆ ಅಪಾಯ ಎದುರಾಗಿದೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ಅಜಿಂಕ್ಯ ಶಿಂದೆ ಹೆಗಲಿಗೆ ಜಂತರ್ ಮಂತರ್ ಪ್ರತಿಭಟನೆಯ ನೇತೃತ್ವ: ದೀಪ್ಕೆ ಘೋಷಣೆ
Dailyhunt
Disclaimer: This content has not been generated, created or edited by Dailyhunt. Publisher: Prajavani