Dailyhunt Logo
  • Light mode
    Follow system
    Dark mode
    • Play Story
    • App Story
ಪ್ರಕೃತಿ ಮಡಿಲು: ಗಂಭೀರಮಟ್ಟ ಮೀರುತ್ತಿದೆ ನದಿ ಮಾಲಿನ್ಯ!

ಪ್ರಕೃತಿ ಮಡಿಲು: ಗಂಭೀರಮಟ್ಟ ಮೀರುತ್ತಿದೆ ನದಿ ಮಾಲಿನ್ಯ!

ಗಂಗೆಯಲ್ಲಿ ಮುಳುಗೇಳಿದರೆ ಪಾಪ ನಾಶ ಎಂಬ ಮಾತಿದೆ. ಅದನ್ನು ಹಲವರೂ ನಂಬುತ್ತಾರೆ. ಆದರೆ, ರಾಜ್ಯದ ಗಂಗೆಯಲ್ಲಿ ಹರಿಯುವ ಅಂದರೆ, ನದಿಗಳಲ್ಲಿ ನೀರಿನಲ್ಲಿ ಮುಳುಗಿಬಂದರೆ ಯಾವ ಸೋಂಕು ಅಂಟಿಕೊಳ್ಳುತ್ತದೇ ಎಂಬ ಆತಂಕ ಇತ್ತೀಚಿನ ವರ್ಷಗಳಲ್ಲಿ ಸೃಷ್ಟಿಯಾಗಿದೆ. ಏಕೆಂದರೆ, ರಾಜ್ಯದ ನದಿಗಳ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಮಾಲಿನ್ಯದ ಮಟ್ಟವನ್ನು ತಗ್ಗಿಸುವ ಕೆಲಸಗಳಾಗುತ್ತಿವೆ ಎಂಬ ಮಾತಿದ್ದರೂ, ಹತ್ತು ವರ್ಷಗಳಿಂದ ನದಿಗಳ ನೀರಿನ ಗುಣಮಟ್ಟ ಸುಧಾರಿಸಿಲ್ಲ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಪ್ರಕೃತಿ ಮಡಿಲು: ಗಂಭೀರಮಟ್ಟ ಮೀರುತ್ತಿದೆ ನದಿ ಮಾಲಿನ್ಯ

ಒಂದು ಸಾಲಿನಲ್ಲಿಕರ್ನಾಟಕದ ನದಿಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯವು ರಾಜ್ಯದ ಜಲಸಂಪನ್ಮೂಲಗಳ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ತುರ್ತು ಸಂರಕ್ಷಣಾ ಕ್ರಮಗಳ ಅಗತ್ಯವನ್ನು ಒತ್ತಿಹೇಳುತ್ತದೆ.

ಪ್ರಮುಖ ಪ್ರಶ್ನೋತ್ತರ


ಕರ್ನಾಟಕದ ನದಿಗಳ ನೀರಿನ ಗುಣಮಟ್ಟ ಹೇಗಿದೆ?

ರಾಜ್ಯದ ನದಿಗಳ ನೀರಿನ ಗುಣಮಟ್ಟವನ್ನು ಐದು ವರ್ಗಗಳಾಗಿ ವಿಂಗಡಿಸಲಾಗಿದ್ದು, ಕರಾವಳಿ ನದಿಗಳು ಉತ್ತಮ ಸ್ಥಿತಿಯಲ್ಲಿದ್ದರೆ, ಬೆಂಗಳೂರು ಸುತ್ತಮುತ್ತಲಿನ ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳು ತೀವ್ರ ಮಾಲಿನ್ಯಕ್ಕೆ ಒಳಗಾಗಿವೆ.


ನದಿಗಳ ಮಾಲಿನ್ಯಕ್ಕೆ ಪ್ರಮುಖ ಕಾರಣಗಳೇನು?

ನಗರಗಳ ಸಂಸ್ಕರಿಸದ ತ್ಯಾಜ್ಯ ನೀರು ನೇರವಾಗಿ ನದಿಗೆ ಸೇರುವುದು, ಕೈಗಾರಿಕಾ ತ್ಯಾಜ್ಯ, ಕೃಷಿ ರಾಸಾಯನಿಕಗಳ ಬಳಕೆ ಹಾಗೂ ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆಯಾಗುವುದು ನದಿ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ.


ಯಾವ ನದಿಗಳು ಸುರಕ್ಷಿತವಾಗಿವೆ ಮತ್ತು ಯಾವುವು ಅಪಾಯದಲ್ಲಿವೆ?

ನೇತ್ರಾವತಿ, ಕುಮಾರಧಾರಾ, ಅಘನಾಶಿನಿ ಮತ್ತು ಶರಾವತಿ ನದಿಗಳು ಉತ್ತಮ ಗುಣಮಟ್ಟ ಹೊಂದಿವೆ (ಬಿ ವರ್ಗ). ಆದರೆ, ಭೀಮಾ, ಶಿಂಶಾ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳು ಗಂಭೀರ ಮಾಲಿನ್ಯವನ್ನು ಎದುರಿಸುತ್ತಿವೆ.


ಮಾಲಿನ್ಯ ತಡೆಯಲು ಯಾವ ಕ್ರಮಗಳು ಅಗತ್ಯವಾಗಿವೆ?

ನಗರ ತ್ಯಾಜ್ಯ ಸಂಸ್ಕರಣಾ ಘಟಕಗಳ ಸಾಮರ್ಥ್ಯ ವೃದ್ಧಿ ಮಾಡುವುದು, ಕೈಗಾರಿಕಾ ತ್ಯಾಜ್ಯದ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವುದು ಮತ್ತು ನದಿಪಾತ್ರಗಳ ಸಂರಕ್ಷಣೆಗೆ ಆದ್ಯತೆ ನೀಡುವ ಅವಶ್ಯಕತೆಯಿದೆ.


ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಏನು ಹೇಳುತ್ತದೆ?

ಮಂಡಳಿಯು ರಾಷ್ಟ್ರೀಯ ಜಲ ಗುಣಮಟ್ಟ ಮೇಲ್ವಿಚಾರಣಾ ಕಾರ್ಯಕ್ರಮದಡಿ ನಿಯಮಿತವಾಗಿ ಪರೀಕ್ಷೆ ನಡೆಸುತ್ತಿದ್ದು, ಹತ್ತು ವರ್ಷಗಳಿಂದ ನದಿಗಳ ನೀರಿನ ಗುಣಮಟ್ಟದಲ್ಲಿ ಸಕಾರಾತ್ಮಕ ಸುಧಾರಣೆಯಾಗಿಲ್ಲ ಎಂದು ವರದಿ ಮಾಡಿದೆ.

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಜೀವನದಿ ಕಾವೇರಿ ತನ್ನ ಜನ್ಮ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಬಹುತೇಕ ಮಾಲಿನ್ಯರಹಿತವಾಗಿದ್ದರೂ, ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ. ನೇತ್ರಾವತಿ ಮತ್ತು ಕುಮಾರಧಾರಾ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಆದರೆ, ಈ ಎರಡು ನದಿಗಳು ವರ್ಷದ ಎಲ್ಲ ಸಮಯದಲ್ಲೂ 'ಬಿ' ವರ್ಗದ ಗುಣಮಟ್ಟದ ನೀರನ್ನೇ ಹರಿಸುತ್ತವೆ ಎಂಬುದಷ್ಟೇ ಸಮಾಧಾನ. ಕೃಷ್ಣ, ತುಂಗಭದ್ರಾ ನದಿಗಳ ನೀರು ಸಾಕಷ್ಟು ಪ್ರಮಾಣದಲ್ಲಿ ಮಾಲಿನ್ಯದೊಂದಿಗೇ ಹರಿಯುತ್ತಿವೆ.

ಪ್ರಕೃತಿ ಮಡಿಲು: ಹವಾಮಾನ ಬದಲಾವಣೆಗೆ ಕಟ್ಟಡವೂ ಕಾರಣಪ್ರಕೃತಿ ಮಡಿಲು: ಶ್ರೀಗಂಧ ಪಸರಿಸಲು 'ಪವರ್‌' ಬೇಕೇಬೇಕು...!

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹತ್ತಾರು ವರ್ಷಗಳಿಂದ ರಾಜ್ಯ ನದಿ ಹಾಗೂ ಕೆರೆಗಳ ನೀರಿನ ಗುಣಮಟ್ಟವನ್ನು ಪ್ರತಿ ತಿಂಗಳೂ ಪರೀಕ್ಷೆ ಮಾಡಿ, ವರ್ಷಾನುವರ್ಷ ವರದಿ ಪ್ರಕಟಿಸುತ್ತದೆ. ಇಂತಹ ಒಂದು ವರದಿ ಇತ್ತೀಚೆಗೆ ಪ್ರಕಟವಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ರಾಷ್ಟ್ರೀಯ ಜಲ ಗುಣಮಟ್ಟ ಮೇಲ್ವಿಚಾರಣಾ ಕಾರ್ಯಕ್ರಮ (NWMP), MINARS ಮತ್ತು GEMS ಯೋಜನೆಗಳ ಅಡಿಯಲ್ಲಿ ಏಪ್ರಿಲ್ 2025ರಿಂದ ಮಾರ್ಚ್ 2026ರವರೆಗೆ ರಾಜ್ಯದ ಪ್ರಮುಖ ನದಿಗಳ ನೀರಿನ ಗುಣಮಟ್ಟವನ್ನು ನಿರಂತರವಾಗಿ ಪರಿಶೀಲಿಸಿದೆ. ಈ ವರದಿಯ ಪ್ರಕಾರ, ನದಿಗಳು ಹರಿಯುವ ಹಲವು ಭಾಗಗಳ ಮಾಲಿನ್ಯ ಗಂಭೀರ ಮಟ್ಟದಲ್ಲಿದೆ.

ವರದಿಯಲ್ಲಿ ನೀರಿನ ಗುಣಮಟ್ಟ ವರದಿಯಲ್ಲಿ ನೀರಿನ ಗುಣಮಟ್ಟವನ್ನು ಐದು ವರ್ಗಗಳಾಗಿ ವಿಂಗಡಿಸಲಾಗಿದೆ.

  • ಎ- ವರ್ಗ: ಸಾಮಾನ್ಯ ಶುದ್ಧೀಕರಣವಿಲ್ಲದೆ ಸೋಂಕು ನಿವಾರಣೆ ಬಳಿಕ ಕುಡಿಯಲು ಯೋಗ್ಯ.

  • ಬಿ-ವರ್ಗ: ಸ್ನಾನ ಹಾಗೂ ಮನರಂಜನಾ ಚಟುವಟಿಕೆಗಳಿಗೆ ಯೋಗ್ಯ.

  • ಸಿ-ವರ್ಗ: ಶುದ್ಧೀಕರಣ ಮತ್ತು ಸೋಂಕು ನಿವಾರಣೆ ಬಳಿಕ ಕುಡಿಯಲು ಯೋಗ್ಯ

  • ಡಿ- ವರ್ಗ: ಮೀನುಗಾರಿಕೆ ಮತ್ತು ಜಲಜೀವಿಗಳ ಸಂರಕ್ಷಣೆಗೆ ಯೋಗ್ಯ

  • ಇ-ವರ್ಗ: ನೀರಾವರಿ, ಕೈಗಾರಿಕಾ ಶೀತಲೀಕರಣ ಮತ್ತು ನಿಯಂತ್ರಿತ ತ್ಯಾಜ್ಯ ವಿಸರ್ಜನೆಗೆ ಮಾತ್ರ ಯೋಗ್ಯ

ಪ್ರಕೃತಿ ಮಡಿಲು: ಕೆರೆಗಳ ಅಂಗಳದಲ್ಲಿ 'ಹಸಿರು ಸುರಂಗ'ಕಾವೇರಿ ನೀರು ಹರಿಸಲು ಒ‍ಪ್ಪದ ರಾಜ್ಯ: 40 ಟಿಎಂಸಿ ಅಡಿ ನೀರಿಗೆ ತಮಿಳುನಾಡು ಪಟ್ಟು

ರಾಜ್ಯದಲ್ಲಿ ಹರಿಯುವ ನದಿಗಳ ನೀರನ್ನು ಏಪ್ರಿಲ್‌ 2025ರಿಂದ ಮಾರ್ಚ್‌ 2026ರವರೆಗೆ ಒಟ್ಟು 123 ಸ್ಥಳಗಳಲ್ಲಿ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿ ವರದಿ ಪ್ರಕಟಿಸಲಾಗಿದೆ. ಇದರಲ್ಲಿ, ಬಹುತೇಕ ನದಿಗಳ ನೀರು ಸಿ ಮತ್ತು ಡಿ ವರ್ಗದಲ್ಲಿರುವುದು ಕಂಡುಬಂದಿದೆ. ಉತ್ತಮ ಗುಣಮಟ್ಟದ ನೀರು ಹೊಂದಿರುವ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷಪೂತ್ರಿ ಹ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ವರ್ಷಪೂರ್ತಿ ಬಿ ವರ್ಗದಲ್ಲಿದ್ದು ಅತ್ಯುತ್ತಮ ಗುಣಮಟ್ಟವನ್ನು ಕಾಪಾಡಿಕೊಂಡಿವೆ.

ಕಾಳಿ ನದಿ: ದಾಂಡೇಲಿಯ ಮೇಲ್ಭಾಗ ಮತ್ತು ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಪ್ರದೇಶದ ಕಾಳಿ ನದಿಯ ನೀರು ನಿರಂತರವಾಗಿ ಬಿ ವರ್ಗದಲ್ಲಿದೆ.

ಅಘನಾಶಿನಿ, ಗಂಗಾವಳಿ ಮತ್ತು ಶರಾವತಿ: ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ, ಗಂಗಾವಳಿ ಮತ್ತು ಶರಾವತಿ ನದಿಗಳು ವರ್ಷಪೂರ್ತಿ ಬಿ ವರ್ಗವನ್ನು ಉಳಿಸಿಕೊಂಡಿವೆ.

ಕಾವೇರಿ ಮೇಲ್ದಂಡೆ: ಕುಶಾಲನಗರ, ಭಾಗಮಂಡಲ ಹಾಗೂ ಕೊಡಗು ಭಾಗಗಳಲ್ಲಿ ಕಾವೇರಿ ನದಿಯ ನೀರು ಬಿ ವರ್ಗದಲ್ಲಿದ್ದು ಉತ್ತಮ ಸ್ಥಿತಿಯಲ್ಲಿದೆ.

ಕಾವೇರಿ ನದಿ: ಬಲಮುರಿ, ಸತ್ಯಗಾಲ, ಶ್ರೀರಂಗಪಟ್ಟಣ, ಮಂಡ್ಯ ಮತ್ತು ಕೆಆರ್‌ಎಸ್ ಪ್ರದೇಶಗಳಲ್ಲಿ ಕಾವೇರಿ ಮುಖ್ಯವಾಗಿ ಸಿ ವರ್ಗದಲ್ಲಿದೆ. ಅಂದರೆ ಶುದ್ಧೀಕರಣದ ನಂತರ ಕುಡಿಯಲು ಯೋಗ್ಯವಾಗಿದೆ.

ತುಂಗಭದ್ರಾ: ರಾಯಚೂರು, ದಾವಣಗೆರೆ, ಶಿವಮೊಗ್ಗ ಪ್ರದೇಶಗಳಲ್ಲಿ ತುಂಗಭದ್ರಾ ನದಿ ಹೆಚ್ಚಾಗಿ ಸಿ ವರ್ಗದಲ್ಲಿದೆ. ಕೆಲವು ಸ್ಥಳಗಳಲ್ಲಿ ಬಿ ವರ್ಗದ ಮಟ್ಟವೂ ಕಂಡುಬರುತ್ತದೆ.

ಕೃಷ್ಣಾ ನದಿ: ಟಿಂಟಿಣಿ ಸೇತುವೆ, ದೇವಸಾಗರ ಹಾಗೂ ಆಲಮಟ್ಟಿ ಅಣೆಕಟ್ಟಿನ ಕೆಳಭಾಗಗಳಲ್ಲಿ ಕೃಷ್ಣಾ ನದಿಯ ನೀರು ಮುಖ್ಯವಾಗಿ ಸಿ ವರ್ಗದಲ್ಲಿದೆ.

ಮಾಲಿನ್ಯ ಹೆಚ್ಚಿರುವ ಪ್ರದೇಶಗಳು

ಭೀಮಾ ನದಿ: ಘಾಣಗಾಪುರ ಗ್ರಾಮದ ಕೆಳಭಾಗದ ರಸ್ತೆ ಸೇತುವೆ ಬಳಿ ಭೀಮಾ ನದಿ ವರ್ಷಪೂರ್ತಿ ಡಿ ವರ್ಗದಲ್ಲಿದೆ. ಫಿರೋಜಾಬಾದ್ ಪ್ರದೇಶದಲ್ಲಿಯೂ ಕೆಲವು ತಿಂಗಳುಗಳಲ್ಲಿ ಡಿ ವರ್ಗ ದಾಖಲಾಗಿದೆ. ಇದು ಗೃಹ ಮತ್ತು ನಗರ ತ್ಯಾಜ್ಯ ನೀರಿನ ಪ್ರಭಾವದಿಂದಾಗಿರುವುದಾಗಿ ವರದಿಯಾಗಿದೆ.

ಶಿಂಶಾ ನದಿ: ತುಮಕೂರಿನ ಯಡಿಯೂರು ಪ್ರದೇಶದಲ್ಲಿ ಶಿಂಶಾ ನದಿ ಸಂಪೂರ್ಣ ವರ್ಷ ಡಿ ವರ್ಗದಲ್ಲಿದೆ. ಹಳಗೂರು ಮತ್ತು ಮದ್ದೂರು ಭಾಗಗಳಲ್ಲಿ ಕೆಲವೊಮ್ಮೆ ಸಿ ಹಾಗೂ ಡಿ ವರ್ಗಗಳ ನಡುವೆ ಬದಲಾವಣೆ ಕಂಡುಬರುತ್ತದೆ.

ಅರ್ಕಾವತಿ ನದಿ: ಕನಕಪುರ ಕೆಳಭಾಗ ಮತ್ತು ಅಕ್ರಾವತಿ ಪ್ರದೇಶಗಳಲ್ಲಿ ಅರ್ಕಾವತಿ ನದಿ ಡಿ ಮತ್ತು ಇ ವರ್ಗಗಳ ನಡುವೆ ದಾಖಲಾಗಿದ್ದು, ಗಂಭೀರ ಮಾಲಿನ್ಯಕ್ಕೆ ಒಳಗಾಗಿದೆ.

ದಕ್ಷಿಣ ಪಿನಾಕಿನಿ: ಮುಗಲೂರು ಸೇತುವೆ ಸಮೀಪದ ದಕ್ಷಿಣ ಪಿನಾಕಿನಿ ನದಿ ಸಂಪೂರ್ಣ ವರ್ಷ ಇ ವರ್ಗದಲ್ಲಿದೆ. ಇದು ಕುಡಿಯಲು ಅಥವಾ ಜಲಜೀವಿಗಳ ಸಂರಕ್ಷಣೆಗೆ ಯೋಗ್ಯವಲ್ಲ. ನೀರಾವರಿ ಅಥವಾ ಕೈಗಾರಿಕಾ ಬಳಕೆಗೆ ಮಾತ್ರ ಬಳಸಬಹುದಾದ ಸ್ಥಿತಿ ಇದೆ.

ಕಾವೇರಿ-ಸಂಗಮ ಪ್ರದೇಶ: ರಾಮನಗರ ಜಿಲ್ಲೆಯ ಸಂಗಮದ ಬಳಿ ಕಾವೇರಿ ನದಿಯ ಗುಣಮಟ್ಟ ವರ್ಷಪೂರ್ತಿ ಡಿ ವರ್ಗದಲ್ಲಿದೆ. ಇದು ಬೆಂಗಳೂರು ನಗರ ಪ್ರದೇಶದಿಂದ ಹರಿಯುವ ಮಲಿನಜಲದ ಪರಿಣಾಮವನ್ನು ಸೂಚಿಸುತ್ತದೆ.

ಕರಾವಳಿ ಜಿಲ್ಲೆಗಳಲ್ಲಿ ಹರಿಯುವ ನೇತ್ರಾವತಿ, ಕುಮಾರಧಾರಾ, ಅಘನಾಶಿನಿ, ಶರಾವತಿ, ಗಂಗಾವಳಿ... ಈ ನದಿಗಳು ಉತ್ತಮ ಗುಣಮಟ್ಟವನ್ನು ಹೊಂದಿವೆ. ಅರಣ್ಯ ಪ್ರದೇಶಗಳು ಮತ್ತು ಕಡಿಮೆ ಕೈಗಾರಿಕೀಕರಣ ಇದಕ್ಕೆ ಕಾರಣವಾಗಿದೆ.

ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಕಾವೇರಿ, ಕಬಿನಿ, ಲಕ್ಷ್ಮಣತೀರ್ಥ, ಹೇಮಾವತಿ ನದಿಗಳು ಹೆಚ್ಚಾಗಿ ಸಿ ಮತ್ತು ಬಿ ವರ್ಗದಲ್ಲಿದ್ದು ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿವೆ.

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳಲ್ಲಿ ಕೆಲವು ಸ್ಥಳಗಳಲ್ಲಿ ಡಿ ವರ್ಗದ ಮಟ್ಟ ಕಂಡುಬರುತ್ತಿದ್ದು ನಗರ ತ್ಯಾಜ್ಯ ಮತ್ತು ಕೈಗಾರಿಕಾ ಪ್ರಭಾವ ಗೋಚರಿಸುತ್ತದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಅರ್ಕಾವತಿ ಹಾಗೂ ದಕ್ಷಿಣ ಪಿನಾಕಿನಿ ನದಿಗಳು ಅತ್ಯಂತ ಮಾಲಿನ್ಯಗೊಂಡಿವೆ. ಬೆಂಗಳೂರು ನಗರದಿಂದ ಹರಿಯುವ ಸಂಸ್ಕರಿಸದ ಕೊಳಚೆ ನೀರು ಪ್ರಮುಖ ಕಾರಣವಾಗಿದೆ.

ಪ್ರಮುಖ ಸವಾಲುಗಳು

ನಗರ ಮಲಿನಜಲದ ನೇರ ಹರಿವು, ಕೈಗಾರಿಕಾ ತ್ಯಾಜ್ಯದ ಪರಿಣಾಮ, ಕೃಷಿ ರಾಸಾಯನಿಕಗಳ ಹರಿವು, ಬೇಸಿಗೆ ಅವಧಿಯಲ್ಲಿ ನೀರಿನ ಹರಿವು ಕಡಿಮೆಯಾಗುವುದು,
ಅಕ್ರಮ ಮರಳು ಗಣಿಗಾರಿಕೆ ಮತ್ತು ನದಿಪಾತ್ರದ ಹಾನಿ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 2025-26ರ ವರದಿಯು ಕರ್ನಾಟಕದ ನದಿಗಳಲ್ಲಿ ಎರಡು ವಿಭಿನ್ನ ಚಿತ್ರಣಗಳನ್ನು ತೆರದಿಟ್ಟಿದೆ. ಕರಾವಳಿ ಮತ್ತು ಪಶ್ಚಿಮಘಟ್ಟ ಪ್ರದೇಶಗಳ ನದಿಗಳು ಉತ್ತಮ ಸ್ಥಿತಿಯಲ್ಲಿದ್ದರೆ, ಬೆಂಗಳೂರು ಮಹಾನಗರ ಪ್ರದೇಶ ಹಾಗೂ ಕೆಲವು ಉತ್ತರ ಕರ್ನಾಟಕ ಭಾಗಗಳ ನದಿಗಳು ತೀವ್ರ ಮಾಲಿನ್ಯಕ್ಕೆ ಒಳಗಾಗಿವೆ. ಕಾವೇರಿ, ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಸಾಮಾನ್ಯವಾಗಿ ಶುದ್ಧೀಕರಣದ ನಂತರ ಕುಡಿಯಲು ಯೋಗ್ಯವಾಗಿದ್ದರೂ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಪರಿಸ್ಥಿತಿ ಆತಂಕಕಾರಿ ಮಟ್ಟದಲ್ಲಿದೆ. ರಾಜ್ಯದ ನದಿಗಳ ಸಂರಕ್ಷಣೆಗಾಗಿ ನಗರ ತ್ಯಾಜ್ಯ ಶುದ್ಧೀಕರಣ ಘಟಕಗಳ ಸಾಮರ್ಥ್ಯ ವೃದ್ಧಿ, ಕೈಗಾರಿಕಾ ತ್ಯಾಜ್ಯದ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ನದಿಪಾತ್ರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani