ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಮೇಲೆ ವೀಕ್ಷಕರಲ್ಲಿ ಕೂತುಹಲ ಹೆಚ್ಚಾಗಿದೆ. ಈ ಚಿತ್ರದ ನಟ-ನಟಿಯರ ಪಟ್ಟಿ ಪ್ರಕಟವಾದಾಗಿನಿಂದಲೂ ಭಾರಿ ಸದ್ದು ಮಾಡುತ್ತಿದೆ.
ಭಾರತೀಯ ಚಿತ್ರರಂಗದ ಪ್ರಮುಖ ನಟ-ನಟಿಯರು ಈ ಮಹಾಕಾವ್ಯದಲ್ಲಿ ಒಂದಾಗುತ್ತಿದ್ದು, 'ರಾಮಾಯಣ' ಬೆಳ್ಳಿತೆರೆಯ ಮೇಲೆ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.
ಈ ಸಿನಿಮಾದಲ್ಲಿ ಯಾರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ವಿವರ ಇಲ್ಲಿದೆ.
'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆ ಮುಂದೂಡಿಕೆ: ನಿರ್ಮಾಪಕ ನಮಿತ್ ಹೇಳಿದ್ದಿಷ್ಟುದೀಪಾವಳಿಗೆ 'ರಾಮಾಯಣ'; ಶ್ರೀರಾಮನ ಕಥೆ ವಿಶ್ವ ವೇದಿಕೆಗೆ: ಯಶ್
ಶ್ರೀರಾಮನಾಗಿ ರಣಬೀರ್ ಕಪೂರ್

ಸೀತಾ ದೇವಿಯಾಗಿ ಸಾಯಿ ಪಲ್ಲವಿ

ರಾವಣನಾಗಿ ಯಶ್

ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್

ಲಕ್ಷ್ಮಣನಾಗಿ ರವಿ ದುಬೆ

ಕೈಕೇಯಿಯಾಗಿ ಲಾರಾ ದತ್ತಾ

ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್

ಮಂಡೋದರಿಯಾಗಿ ಕಾಜಲ್ ಅಗರವಾಲ್

ದಶರಥ ಮಹಾರಾಜನಾಗಿ ಅರುಣ್ ಗೋವಿಲ್

ಕೌಸಲ್ಯ ಪಾತ್ರದಲ್ಲಿ ಇಂದಿರಾ ಕೃಷ್ಣನ್

ಮಂಥರೆಯಾಗಿ ಶೀಬಾ ಚಡ್ಡಾ

ವಿಭೀಷಣ ಪಾತ್ರದಲ್ಲಿ ವಿವೇಕ್ ಒಬೆರಾಯ್

