ಈ ಬಾರಿಯ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 14ರಂದುಆಚರಿಸಲಾಗುತ್ತಿದೆ. ಗಣೇಶ ಚತುರ್ಥಿಯ ಪವಿತ್ರ ದಿನದಂದು ವಿಘ್ನನಿವಾರಕನಿಗೆ ನೈವೇದ್ಯ ಅರ್ಪಿಸಲು ಮನೆಯಲ್ಲೇ ಮೃದುವಾದ ಹಾಗೂ ಸ್ವಾದಿಷ್ಟವಾದ ಮೋದಕ ತಯಾರಿಸಿ.
ರೆಸಿಪಿ | ಕೃಷ್ಣನಿಗೆ ಪ್ರಿಯವಾದ ಮಖನ್ ಮಿಶ್ರಿ ಸಿಹಿಯನ್ನು ತಯಾರಿಸುವ ವಿಧಾನರೆಸಿಪಿ: 5 ನಿಮಿಷದಲ್ಲೇ ತಯಾರಿಸಿ ನಾಲಿಗೆಗೆ ರುಚಿ ಕೊಡುವ ಬೆಳ್ಳುಳ್ಳಿ ಖಾರದ ಅನ್ನಬೇಕಾಗಿರುವ ಸಾಮಗ್ರಿಗಳು:
ಗಸಗಸೆ: 1 ಚಮಚ
ಬಿಳಿ ಎಳ್ಳು: 1 ಚಮಚ
ಹಸಿ ತೆಂಗಿನಕಾಯಿ: 1 ಕಪ್
ತುಪ್ಪ: 1 ಚಮಚ
ಬೆಲ್ಲ: ಅರ್ಧ ಕಪ್
ಒಣ ಹಣ್ಣುಗಳು: ಅಗತ್ಯಕ್ಕೆ ತಕ್ಕಷ್ಟು
ಏಲಕ್ಕಿ ಪುಡಿ: ಅರ್ಧ ಚಮಚ
ಅಕ್ಕಿ ಹಿಟ್ಟು: 1 ಕಪ್
ಉಪ್ಪು: ಬೇಕಾದಷ್ಟು
ಮಾಡುವ ವಿಧಾನ:
ಹೂರಣ ಸಿದ್ಧಪಡಿಸಿಕೊಳ್ಳಿ: ಒಂದು ಪಾತ್ರೆಗೆ ಗಸಗಸೆ, ಎಳ್ಳು ಹಾಕಿ ಹುರಿದುಕೊಳ್ಳಿ. ನಂತರ ತುರಿದ ಹಸಿ ತೆಂಗಿನಕಾಯಿ ಹಾಗೂ ಬೆಲ್ಲ ಮತ್ತು ತುಪ್ಪ ಹಾಕಿ. ಬೆಲ್ಲ ಕರಗುವವರೆಗೆ ಸಣ್ಣ ಉರಿಯಲ್ಲಿ ಕಲಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಹಾಗೂ ಒಣ ಹಣ್ಣುಗಳನ್ನು ಸೇರಿಸಿ ತಣ್ಣಗಾಗಲು ಬಿಡಿ.
ಅಕ್ಕಿ ಹಿಟ್ಟಿನ ಹದ:
ಮತ್ತೊಂದು ಪಾತ್ರೆಯಲ್ಲಿ 2 ಕಪ್ ನೀರು, ಚಿಟಿಕೆ ಉಪ್ಪು ಹಾಗೂ ಅಕ್ಕಿ ಹಿಟ್ಟು ಹಾಕಿ ಕುದಿಯಲು ಬಿಡಿ. ನೀರು ಕುದಿ ಬಂದಾಗ ಮತ್ತೆ ಅಕ್ಕಿ ಹಿಟ್ಟನ್ನು ಸೇರಿಸಿ ಗಂಟಿಲ್ಲದಂತೆ ಕಲಸಿ, ಮುಚ್ಚಳ ಮುಚ್ಚಿ 2-3 ನಿಮಿಷ ಆವಿಯಲ್ಲಿ ಬೇಯಿಸಿ. ಬಿಸಿಯಿರುವಾಗಲೇ ಅಕ್ಕಿ ಹಿಟ್ಟಿಗೆ ಸ್ವಲ್ಪ ನೀರು ಹಾಕಿ ಮೃದುವಾಗಿ ನಾದಿಕೊಳ್ಳಿ. ನಂತರ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ಮೋದಕದ ಮೋಲ್ಡ್‌ನ (ಮೋದಕ ಮಾಡುವ ಅಚ್ಚು) ಮಧ್ಯದಲ್ಲಿ ಸಿದ್ಧಪಡಿಸಿದ ಹೂರಣವಿಟ್ಟು ಸಂಪೂರ್ಣವಾಗಿ ಮುಚ್ಚಿ.
ನಂತರ ನಿಧಾನವಾಗಿ ಮೋಲ್ಡ್‌ನಿಂದ ಹೊರ ತೆಗೆದು ಇಡೀ ಮೋದಕವನ್ನು ಇಡ್ಲಿ ಪಾತ್ರೆಯಲ್ಲಿ ಬಾಳೆ ಎಲೆಯ ಮೇಲಿಟ್ಟು 10-12 ನಿಮಿಷ ಆವಿಯಲ್ಲಿ ಬೇಯಿಸಿ. ಬಳಿಕ ಮೋದಕದ ಮೇಲ್ಭಾಗದಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ವಿಘ್ನನಿವಾರಕ ಗಣೇಶನಿಗೆ ನೈವೇದ್ಯ ಅರ್ಪಿಸಿ.

