Dailyhunt Logo
  • Light mode
    Follow system
    Dark mode
    • Play Story
    • App Story
ರೆಸಿಪಿ | ಕೃಷ್ಣನಿಗೆ ಪ್ರಿಯವಾದ ಮಖನ್ ಮಿಶ್ರಿ ಸಿಹಿಯನ್ನು‌ ತಯಾರಿಸುವ ವಿಧಾನ

ರೆಸಿಪಿ | ಕೃಷ್ಣನಿಗೆ ಪ್ರಿಯವಾದ ಮಖನ್ ಮಿಶ್ರಿ ಸಿಹಿಯನ್ನು‌ ತಯಾರಿಸುವ ವಿಧಾನ

ಕೃಷ್ಣ ಜನ್ಮಾಷ್ಟಮಿ ಎಂದರೆ ನೆನಪಾಗುವುದೇ ಬಾಲಕೃಷ್ಣನ ಬೆಣ್ಣೆಯ ಕಳ್ಳತನ. ನಂದಗೋಕುಲದ ಕೃಷ್ಣನಿಗೆ ಬಲು ಪ್ರಿಯವಾದ ನೈವೇದ್ಯ ಎಂದರೆ ಬಿಳಿ ಬೆಣ್ಣೆ ಹಾಗೂ ಕಲ್ಲು ಸಕ್ಕರೆಯಿಂದ ತಯಾರಿಸುವ ಮಖನ್ ಮಿಶ್ರಿ. ಇದನ್ನು ಭಕ್ತರು ಕೃಷ್ಣನಿಗೆ ನೈವೇದ್ಯ ರೂಪದಲ್ಲಿ ಅರ್ಪಿಸುತ್ತಾರೆ.

ಸರಳವಾಗಿ ಮಖನ್ ಮಿಶ್ರಿ ತಯಾರಿಸುವ ವಿಧಾನ ಇಲ್ಲಿದೆ.

ರೆಸಿಪಿ: 5 ನಿಮಿಷದಲ್ಲೇ ತಯಾರಿಸಿ ನಾಲಿಗೆಗೆ ರುಚಿ ಕೊಡುವ ಬೆಳ್ಳುಳ್ಳಿ ಖಾರದ ಅನ್ನರೆಸಿಪಿ: ಕೇವಲ ಹತ್ತೇ ನಿಮಿಷಗಳಲ್ಲಿ ತಯಾರಿಸಿ ಪಾಲಕ್ ಸೊಪ್ಪಿನ ಎಗ್ ಬುರ್ಜಿ

ಬೇಕಾಗುವ ಸಾಮಗ್ರಿಗಳು..

ತಾಜಾ ಬೆಣ್ಣೆ: 1 ಕಪ್

ಕಲ್ಲು ಸಕ್ಕರೆ: ಅರ್ಧ ಕಪ್

ಐಸ್ ತುಂಡು: 10

ಅಲಂಕಾರಕ್ಕಾಗಿ ತುಳಸಿ ದಳಗಳು: 4-5

ಕುಂಕುಮ ಕೇಸರಿ: ಚಿಟಿಕೆ

ಬಿಸಿ ಹಾಲು: 1 ಚಮಚ

ಮಾಡುವ ವಿಧಾನ..

ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ. ಅದಕ್ಕೆ ಐಸ್ ತುಂಡುಗಳನ್ನು ಸೇರಿಸಿ. ಕೈಯಿಂದ ಅಥವಾ ಚಮಚದ ಸಹಾಯದಿಂದ ನಿರಂತರವಾಗಿ ತಿರುಗಿಸಿ. ತಣ್ಣನೆಯ ಐಸ್‌ನಿಂದಾಗಿ ತುಪ್ಪವು ನೊರೆಯಾಗಿ ಬಳಿ ಬಣ್ಣಕ್ಕೆ ತಿರುಗಿ ಮೃದುವಾದ ಬೆಣ್ಣೆಯಂತೆ ಗಟ್ಟಿಯಾಗುತ್ತದೆ. ಬಳಿಕ ಕರಗಿದ ಐಸ್ ನೀರನ್ನು ಪಾತ್ರೆಯಿಂದ ಹೊರಗೆ ಹಾಕಿ. ಈಗ ತಯಾರಾದ ತಾಜಾ ಬೆಣ್ಣೆಯ ಮೇಲೆ ಕಲ್ಲು ಸಕ್ಕರೆ, ಕೇಸರಿ ಎಳೆಗಳು, ಅಲಂಕಾರಕ್ಕಾಗಿ ತುಳಸಿ ದಳಗಳನ್ನು ಇಡಿ. ಈಗ ಕೃಷ್ಣನಿಗೆ ಅರ್ಪಿಸಲು ಮಖನ್ ಮಿಶ್ರಿ ಪ್ರಸಾದ ಸಿದ್ಧ.

Dailyhunt
Disclaimer: This content has not been generated, created or edited by Dailyhunt. Publisher: Prajavani