ಪಾಲಕ್ ಸೊಪ್ಪಿನ ಎಗ್ ಬುರ್ಜಿಯು ಒಂದು ಆರೋಗ್ಯಕರ ಮತ್ತು ರುಚಿಕರವಾದ ತಿಂಡಿಯಾಗಿದೆ. ಇದನ್ನು ಕೇವಲ 10 ನಿಮಿಷಗಳಲ್ಲಿ ಸುಲಭವಾಗಿ ಮಾಡಬಹುದು.
ರೆಸಿಪಿ | ಓಣಂ ಹಬ್ಬಕ್ಕೆ ತಯಾರಿಸಿ ಕೇರಳಂ ವಿಶೇಷ ಖಾದ್ಯಗಳುರೆಸಿಪಿ | ಉತ್ತರ ಕರ್ನಾಟಕ ವಿಶೇಷ, ಪೌಷ್ಟಿಕಯುಕ್ತ ಗುಗ್ಗರಿ ಮಾಡುವ ಸರಳ ವಿಧಾನಬೇಕಾಗುವ ಸಾಮಗ್ರಿಗಳು
ಮೊಟ್ಟೆ
ಪಾಲಕ್ ಸೊಪ್ಪು
ಹಸಿ ಮೆಣಸಿನಕಾಯಿ
ಈರುಳ್ಳಿ
ಕರಿಬೇವು
ಬೆಳ್ಳುಳ್ಳಿ
ಅರಿಸಿನ
ಉಪ್ಪು
ಖಾರದ ಪುಡಿ
ಮಾಡುವ ವಿಧಾನ
ಮೊದಲು ಕತ್ತರಿಸಿದ ಒಂದು ಬೌಲ್ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಈರುಳ್ಳಿ, ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಕೊಳ್ಳಿ. ಬಳಿಕ ಪಾತ್ರೆಯಲ್ಲಿ ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಬೆಳ್ಳುಳ್ಳಿ, ಕರಿಬೇವು ಹಾಕಿ. ಆಮೇಲೆ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ. ಇದಾದ ನಂತರ ಅರಿಸಿನ, ಉಪ್ಪು, ಖಾರದ ಪುಡಿ ಹಾಕಿ ಚೆನ್ನಾಗಿ ಬಾಡಿಸಿ. ನಂತರ ಅದಕ್ಕೆ ಮೊಟ್ಟೆಗಳನ್ನು ಒಡೆದು ಹಾಕಿ 2 ನಿಮಿಷ ಬುರ್ಜಿ ಹದಕ್ಕೆ ಬರುವವರೆಗೆ ಹುರಿಯಿರಿ. ಬಳಿಕ ಕತ್ತರಿಸಿ ಇಟ್ಟುಕೊಂಡ ಪಾಲಕ್ ಸೊಪ್ಪನ್ನು ಅದಕ್ಕೆ ಹಾಕಿ, ಹಸಿ ವಾಸನೆ ಹೊಗುವವರೆಗೂ ಸಣ್ಣ ಉರಿಯಲ್ಲಿ ಚಮಚದ ಸಹಾಯದಿಂದ ಕೈಯಾಡಿಸುತ್ತಾ ಇರಿ. ಕೊನೆಯಲ್ಲಿ ಗರಂ ಮಸಲಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಉರಿ ಆರಿಸಿ. ಈಗ ಚಪಾತಿ, ರೊಟ್ಟಿ ಹಾಗೂ ಅನ್ನದ ಜೊತೆಗೆ ಸವಿಯಲು ಪಾಲಕ್ ಸೊಪ್ಪಿನ ಎಗ್ ಬುರ್ಜಿ ಸಿದ್ಧ.

