Dailyhunt Logo
  • Light mode
    Follow system
    Dark mode
    • Play Story
    • App Story
ಸಿಜೆಪಿ ಪ್ರತಿಭಟನೆ | ದೆಹಲಿ ಮೆಟ್ರೊ ನಿಲ್ದಾಣಗಳು ಬಂದ್: ಸುಪ್ರೀಂ ಕೋರ್ಟ್ ಕಳವಳ

ಸಿಜೆಪಿ ಪ್ರತಿಭಟನೆ | ದೆಹಲಿ ಮೆಟ್ರೊ ನಿಲ್ದಾಣಗಳು ಬಂದ್: ಸುಪ್ರೀಂ ಕೋರ್ಟ್ ಕಳವಳ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಅ.10 ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಾಗೂ ಇತರೆ ಸಂಘಟನೆಗಳು ಕರೆಕೊಟ್ಟಿರುವ ಪ್ರತಿಭಟನೆ ನಿಯಂತ್ರಣಕ್ಕೆ ದೆಹಲಿಯ 57 ಮೆಟ್ರೊ ನಿಲ್ದಾಣಗಳನ್ನು ಮುಚ್ಚಲು ಮುಂದಾಗಿರುವುದಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

ಸಿಜೆಪಿ ಪ್ರತಿಭಟನೆ: ದೆಹಲಿಗೆ ಬರುವ ರೈಲುಗಳು ರದ್ದು, ಮೆಟ್ರೊ ನಿಲ್ದಾಣ ಬಂದ್

ಸೇವೆಗಳನ್ನು ನಿಲ್ಲಿಸುವುದು, ಸೇವೆಗಳನ್ನು ಪಡೆಯುವ ನಾಗರಿಕರ ಹಕ್ಕಿಗೆ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದೆ.

ದೆಹಲಿಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿ. ಮೋಹನ ಅವರಿದ್ದ ಪೀಠ ವಿಚಾರಣೆ ನಡೆಸಿತು.

ನಾಳೆಯ ಸಿಜೆಪಿ ಧರಣಿಗೆ ದೆಹಲಿ ಪೊಲೀಸರ ತಡೆ: ಜಂತರ್ ಮಂತರ್‌ನಲ್ಲಿ ನಿಷೇಧಾಜ್ಞೆ

'ಎಲ್ಲ ರೈಲುಗಳನ್ನೂ ರದ್ದುಗೊಳಿಸಲಾಗಿದೆ. ಮೆಟ್ರೊ ನಿಲ್ದಾಣಗಳನ್ನು ಮುಚ್ಚಲಾಗಿದೆ. ಎಲ್ಲಿಗೂ ತೆರಳಲು ಸಾಧ್ಯವಿಲ್ಲ. ಹೋಟೆಲ್‌ಗಳು ಜನರಿಗೆ ಪ್ರವೇಶ ನೀಡುತ್ತಿಲ್ಲ. ನಿಜಾಮುದ್ದೀನ್‌ ಬಂದ್‌ ಆಗಿದೆ. ಜನರು ಹೊರಗೆ ಬರುವಂತಿಲ್ಲ ಎಂದು ನಿವಾಸಿಗಳ ಕಲ್ಯಾಣ ಸಂಘಗಳಿಗೆ ಸೂಚಿಸಲಾಗುತ್ತಿದೆ. ದೇಶದಲ್ಲಿ ಏನಾಗುತ್ತಿದೆ? ಇದು ಶಾಂತಿಯುತ ಪ್ರತಿಭಟನೆ. ಇದು ನಮ್ಮ ದೇಶ. ಹೀಗಾಗಲು ಹೇಗೆ ಸಾಧ್ಯ?' ಎಂದು ಸಂಸದ ಎಂ.ಎ. ಬೇಬಿ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ನ್ಯಾಯಪೀಠದ ಮುಂದೆ ಅರುಹಿದರು.

ವಕೀಲ ಪ್ರಶಾಂತ್ ಭೂಷಣ್ ಕೂಡ ಇಡೀ ದೆಹಲಿಯನ್ನೇ ಬಂದ್ ಮಾಡಲಾಗಿದೆ ಎಂದು ಹೇಳಿದರು. ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು 57 ಮೆಟ್ರೊ ನಿಲ್ದಾಣಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದರು.

(ಬಾರ್ ಆಯಂಡ್ ಬೆಂಚ್ ಹಾಗೂ ಲೈವ್ ಲಾ ವರದಿಗಳಿಂದ)

ನಾಳೆ ಸಿಜೆಪಿ ಪ್ರತಿಭಟನೆ: ಭದ್ರತೆಗೆ 20 ಸಾವಿರ ಸಿಬ್ಬಂದಿ
Dailyhunt
Disclaimer: This content has not been generated, created or edited by Dailyhunt. Publisher: Prajavani