ಛತ್ರಪತಿ ಸಾಂಭಾಜಿನಗರ: ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಅಜ್ಜಿ (ತಂದೆಯ ತಾಯಿ) ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 85 ವರ್ಷದ ಅವರು ಅಸೌಖ್ಯದಿಂದ ಬಳಲುತ್ತಿದ್ದರು.
ಸಾವಿತ್ರಿಬಾಯಿ ಶಂಕರ್‌ರಾವ್ ದೀಪ್ಕೆಯವರು ಸಾಂತುಕ್ ಪಿಂಪ್ರಿ ಗ್ರಾಮದಲ್ಲಿ ಬೆಳಿಗ್ಗೆ 11.30ಕ್ಕೆ ಕೊನೆಯುಸಿರೆಳೆದರು. ಕಳೆದೊಂದು ತಿಂಗಳಿನಿಂದ ಅವರು ಕಾಯಿಲೆಯಿಂದ ಬಳಲುತ್ತಿದ್ದರು. ಹಿಂಗೋಲಿಯಲ್ಲಿ ಆಸ್ಪತ್ರೆಗೂ ದಾಖಲಾಗಿದ್ದರು.
ಅವರ ಅಂತಿಮ ವಿಧಿವಿಧಾನಗಳನ್ನು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
'ಅಭಿಜಿತ್ ದೀಪ್ಕೆಯನ್ನು ದೆಹಲಿಯಲ್ಲಿ ವಶಕ್ಕೆ ಪಡೆದಿರುವುದರಿಂದ ಅವರನ್ನು ಸಂಪರ್ಕಿಸಲಾಗುತ್ತಿಲ್ಲ. ಅವರ ಪೋಷಕರನ್ನು ಸಂಪರ್ಕಿಸಿದ್ದು, ಅವರು ಸಾಂತುಕ್ ಪಿಂಪ್ರಿಗೆ ಬರುತ್ತಿದ್ದಾರೆ' ಎಂದು ದೀಪ್ಕೆಯವರ ಸೋದರ ಸಂಬಂಧಿಯೊಬ್ಬರು ಹೇಳಿದ್ದಾರೆ.
ಮೋದಿ, ಶಾ ದೇಶದ ಜನರ ವಿರುದ್ಧ ಯುದ್ಧ ಸಾರಲು ಬಯಸುತ್ತಿದ್ದಾರೆ: ಅಭಿಜಿತ್ ದೀಪ್ಕೆಆಗಸ್ಟ್ 15ರಂದು ಸಿಜೆಪಿ 'ಸ್ಕೂಲ್ ಠೀಕ್ ಕರ್‌ದೊ' ಅಭಿಯಾನ ಆರಂಭಿಸಿದಾಗ ಹಾಗೂ ಮತ್ತೊಮ್ಮೆ ಅಜ್ಜಿಯನ್ನು ಭೇಟಿಯಾಗಿದ್ದರು. ಕಳೆದ 20-25 ದಿನಗಳಿಂದ ಅಜ್ಜಿಯನ್ನು ಭೇಟಿಯಾಗಲು ಅವರಿಗೆ ಸಾಧ್ಯವಾಗಿರಲಿಲ್ಲ' ಎಂದು ಮೂಲಗಳು ಹೇಳಿವೆ.
ಶನಿವಾರ ಬೆಳಿಗ್ಗೆ ಮುಂಬೈನಿಂದ ದೆಹಲಿಗೆ ತೆರಳಿದ್ದ ಸಿಜೆಪಿಯ ದೀಪ್ಕೆ, ಸೌರಬ್ ದಾಸ್ ಹಾಗೂ ಅಶುತೋಷ್ ರಾಂಕಾ ಅವರನ್ನು ವಿಮಾನದೊಳಗೆ ವಶಕ್ಕೆ ಪಡೆಯಲಾಗಿದೆ.
ಚುನಾವಣಾ ಆಯೋಗದ ವಿರುದ್ಧ ಹೋರಾಟ: ಸಿಜೆಪಿಯ ದೀಪ್ಕೆ, ದಾಸ್, ರಾಂಕಾ ಪೊಲೀಸರ ವಶಕ್ಕೆ
