Dailyhunt
'ಟಾಕ್ಸಿಕ್‌' ಬಿಡುಗಡೆಯಾಗಬೇಕಿದ್ದ ದಿನವೇ ರಾಮ್‌ ಚರಣ್ ನಟನೆಯ 'ಪೆದ್ದಿ' ತೆರೆಗೆ

'ಟಾಕ್ಸಿಕ್‌' ಬಿಡುಗಡೆಯಾಗಬೇಕಿದ್ದ ದಿನವೇ ರಾಮ್‌ ಚರಣ್ ನಟನೆಯ 'ಪೆದ್ದಿ' ತೆರೆಗೆ

ವದೆಹಲಿ: ಸಿನಿಪ್ರಿಯರು ಜೂನ್‌ 4ರಂದು ಯಶ್‌ ನಟನೆಯ ಟಾಕ್ಸಿಕ್‌ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಪಶ್ಚಿಮ ಏಷ್ಯಾ ಸಂಘರ್ಷದ ಕಾರಣದಿಂದ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿದೆ. ಆದರೆ ಅಂದೇ ರಾಮ್‌ ಚರಣ್ ಮತ್ತು ಜಾಹ್ನವಿ ಕಪೂರ್ ನಟನೆಯ 'ಪೆದ್ದಿ' ಸಿನಿಮಾ ತೆರೆಕಾಣುತ್ತಿದೆ.

ಜಾಹ್ನವಿ ತೆಲುಗಿನಲ್ಲಿ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಇದಕ್ಕೂ ಮೊದಲು 'ದೇವರಾ'ದಲ್ಲಿ ನಟಿಸಿದ್ದರು.

ಯಶ್ ಅಭಿಮಾನಿಗಳಿಗೆ ನಿರಾಸೆ: ಜೂನ್ 4ಕ್ಕೂ ಬಿಡುಗಡೆಯಾಗುತ್ತಿಲ್ಲ 'ಟಾಕ್ಸಿಕ್''ಟಾಕ್ಸಿಕ್' ಸಿನಿಮಾದ ಮೊದಲ ಹಾಡಿನಲ್ಲಿ ಯಶ್ ಜೊತೆ ಬಾಲಿವುಡ್ ಬ್ಯೂಟಿ ರೊಮ್ಯಾನ್ಸ್

ಈ ಚಿತ್ರವನ್ನು ಬುಚಿ ಬಾಬು ಸನಾ ನಿರ್ದೇಶಿಸಿದ್ದಾರೆ. ಮಾರ್ಚ್ 27 ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ, 'ಧೈರ್ಯವೇ ಅವನ ಕಥೆ. ದೃಢನಿಶ್ಚಯವೇ ಅವನ ಆಯುಧ. ಪೆದ್ದಿ ಜೂನ್ 4 ರಂದು ವಿಶ್ವದಾ‌ದ್ಯಂತ ಬಿಡುಗಡೆಯಾಗಲಿದೆ' ಎಂದು ಪೋಸ್ಟರ್‌ ಹಂಚಿಕೊಂಡಿದೆ.

ಸಿನಿಮಾದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೊ ಶಿವ ರಾಜ್‌ಕುಮಾರ್, ಜಗಪತಿ ಬಾಬು ಮತ್ತು 'ಮಿರ್ಜಾಪುರ್'ನಟ ದಿವ್ಯೇಂದು ಶರ್ಮಾ ನಟಿಸಿದ್ದಾರೆ.

ವೃದ್ಧಿ ಸಿನಿಮಾಸ್‌ ಬ್ಯಾನರ್‌ ಅಡಿಯಲ್ಲಿ ವೆಂಕಟ ಸತೀಶ್‌ ಕಿಲಾರು ಈ ಸಿನಿಮಾ ನಿರ್ಮಾಣ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್‌ ರೈಟಿಂಗ್ಸ್‌ ಬ್ಯಾನರ್‌ಗಳು ಚಿತ್ರವನ್ನು ಪ್ರಸ್ತುತಪಡಿಸುತ್ತಿವೆ. ಆರ್‌. ರತ್ನವೇಲು ಛಾಯಾಚಿತ್ರಗ್ರಹಣ, ನವೀನ್ ನೂಲಿ ಸಂಕಲನ ಸಿನಿಮಾಗಿದೆ. ಎ.ಆರ್‌. ರೆಹಮಾನ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

2025ರಲ್ಲಿ ರಾಮ್‌ ಚರಣ್ ನಟನೆಯ 'ಗೇಮ್ ಚೇಂಜರ್' ಬಿಡುಗಡೆಯಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Prajavani