Dailyhunt
'ಟಾಕ್ಸಿಕ್' ಸಿನಿಮಾದ ಮೊದಲ ಹಾಡಿನಲ್ಲಿ ಯಶ್ ಜೊತೆ ಬಾಲಿವುಡ್ ಬ್ಯೂಟಿ ರೊಮ್ಯಾನ್ಸ್

'ಟಾಕ್ಸಿಕ್' ಸಿನಿಮಾದ ಮೊದಲ ಹಾಡಿನಲ್ಲಿ ಯಶ್ ಜೊತೆ ಬಾಲಿವುಡ್ ಬ್ಯೂಟಿ ರೊಮ್ಯಾನ್ಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಬಗ್ಗೆ ಚಿತ್ರತಂಡ ಒಂದೊಂದೆ ಅಪ್‌ಡೇಟ್‌ಗಳನ್ನು ನೀಡುತ್ತಿದೆ. ಈಗಾಗಲೇ ಟಾಕ್ಸಿಕ್ ಚಿತ್ರದ ಎರಡು ಟೀಸರ್​ಗಳು ಬಿಡುಗಡೆಯಾಗಿ ಸಖತ್ ಸದ್ದು ಮಾಡಿವೆ. ಈಗ ಟಾಕ್ಸಿಕ್‌ನ ಮೊದಲ ಹಾಡು ಬಿಡುಗಡೆಗೆ ಸಮಯ ನಿಗದಿಯಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಪೋಸ್ಟರ್ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. 'ಟಾಕ್ಸಿಕ್' ಸಿನಿಮಾದ ಮೊದಲ ಹಾಡು ಮಾರ್ಚ್ 2ರಂದು ರಿಲೀಸ್ ಆಗಲಿದೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Toxic: ಕನ್ನಡ ಅಲ್ಲ, ಈ ಭಾಷೆಯಲ್ಲಿ ಟಾಕ್ಸಿಕ್ ಟೀಸರ್‌ಗೆ ಬಂತು ದಾಖಲೆ ವೀಕ್ಷಣೆ
ಯಶ್ ಅವರ ಟಾಕ್ಸಿಕ್ಸ್‌ನಲ್ಲಿ ಮತ್ತೋರ್ವ ಬಹುಭಾಷಾ ನಟ; 'ಕರ್ಮಡಿ'ಯಾಗಿ ಸುದೇವ್

ಈ ಪೋಸ್ಟರ್‌ನಲ್ಲಿ ನಟ ಯಶ್ ಜೊತೆಗೆ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಅವರು ಕಾಣಿಸಿಕೊಂಡಿದ್ದಾರೆ. ಯಶ್‌ನನ್ನು ತಬ್ಬಿಕೊಂಡ ಲುಕ್‌ನಲ್ಲಿ ನಟಿ ಕಿಯಾರಾ ಅಡ್ವಾಣಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾವನ್ನು 'ಕೆವಿಎನ್ ಪ್ರೊಡಕ್ಷನ್ಸ್' ಸಂಸ್ಥೆ ನಿರ್ಮಾಣ ಮಾಡಿದ್ದು, ಮಾರ್ಚ್ 19ರಂದು ವಿಶ್ವದಾದ್ಯಂತ 'ಟಾಕ್ಸಿಕ್' ಬಿಡುಗಡೆಯಾಗಲಿದೆ. ಇದರ ಜೊತೆಗೆ 'ಧುರಂಧರ್ 2' ಕೂಡ ಬಿಡುಗಡೆಗೆ ಸಜ್ಜಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani