ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಮುಂಗಡವಾಗಿ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಎಲ್ಲಾ ಭಾಷೆಗಳಿಂದ ಸೇರಿ 4.5 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.
ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಆಗಸ್ಟ್ 21ರ ಬೆಳಿಗ್ಗೆ 6 ಗಂಟೆಯಿಂದ 'ಟಾಕ್ಸಿಕ್' ಸಿನಿಮಾದ ಟಿಕೆಟ್ ಬುಕಿಂಗ್ ಆರಂಭವಾಗಿತ್ತು.
ಮೊದಲ ಎರಡು ದಿನಗಳಲ್ಲಿ ₹30 ಕೋಟಿಯನ್ನು ಮುಂಡಗವಾಗಿ ಗಳಿಸಿದೆ. ಈಗಾಗಲೇ ಭಾರತದಲ್ಲಿ 12,609 ಪ್ರದರ್ಶನಗಳು ಬುಕಿಂಗ್ ಆಗಿವೆ.
ಟಾಕ್ಸಿಕ್ ನೋಡಲು ಕಾತುರ ಲಕ್ಷಕ್ಕೂ ಅಧಿಕ ಟಿಕೆಟ್ ಬಿಕರಿ!ಕನ್ನಡದಲ್ಲಿ ₹9.6 ಕೋಟಿ ಹಾಗೂ ಹಿಂದಿಯಲ್ಲಿ ₹7.72 ಕೋಟಿಯನ್ನು ಮುಂಗಡವಾಗಿ ಗಳಿಸಿದೆ. ಇದರಲ್ಲಿ 2ಡಿ, ಐಮ್ಯಾಕ್ಸ್ ಮತ್ತು 4DX ಸೇರಿದಂತೆ ಪ್ರೀಮಿಯಂ ಪ್ರದರ್ಶನಗಳು ಒಳಗೊಂಡಿವೆ. ಬುಕಿಂಗ್ ಆರಂಭವಾದ ಮೊದಲ ದಿನ ₹27.38 ಕೋಟಿ ಗಳಿಸಿತ್ತು. ಎರಡನೇ ದಿನದ ಬುಕಿಂಗ್ ₹30 ಕೋಟಿ ತಲುಪಿದೆ.
ಟಿಕೆಟ್ ಬುಕಿಂಗ್‌ನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಒಟ್ಟು 1,744 ಪ್ರದರ್ಶನಗಳು ಬುಕ್ ಆಗಿವೆ. ಇದರಿಂದ ಒಟ್ಟಾರೆಯಾಗಿ ₹10.69 ಕೋಟಿ ಸಂಗ್ರಹವಾಗಿದೆ. ಗುಜರಾತ್‌ನಲ್ಲಿ 2,319 ಪ್ರದರ್ಶನ ಹಾಗೂ ಮಹಾರಾಷ್ಟ್ರದಲ್ಲಿ 2,189 ಪ್ರದರ್ಶನಗಳು ಮುಂಗಡವಾಗಿ ಬುಕ್ ಆಗಿವೆ.
ಯಶ್ ನಟನೆಯ 'ಟಾಕ್ಸಿಕ್' ಚಿತ್ರ ಬುಕ್ಕಿಂಗ್ ಇಂದಿನಿಂದಪಶ್ಚಿಮ ಬಂಗಾಳದಲ್ಲಿ ₹89.51, ದೆಹಲಿಯಲ್ಲಿ ₹87.92 ಲಕ್ಷ ಮತ್ತು ಉತ್ತರ ಪ್ರದೇಶದಲ್ಲಿ ₹80.29 ಲಕ್ಷ ಗಳಿಸಿದೆ.
ಗೀತು ಮೋಹನ್ ದಾಸ್ ಅವರ ನಿರ್ದೇಶನದ 'ಟಾಕ್ಸಿಕ್' ಆಗಸ್ಟ್ 26ರಂದು ಬಿಡುಗಡೆಯಾಗಲಿದೆ. ಪ್ರಮುಖ ಪಾತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದಾರೆ. ಕನ್ನಡ ಸೇರಿದಂತೆ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

