ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ನಾಳೆ (ಆಗಸ್ಟ್ 26) ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ. ಈ ನಡುವೆ ಒಡಿಶಾ ರಾಜ್ಯ ಪೊಲೀಸರು ಟಾಕ್ಸಿಕ್ ಸಿನಿಮಾದ ಟೈಟಲ್ ಬಳಸಿಕೊಂಡು, ಸಾರ್ವಜನಿಕರಲ್ಲಿ ಡ್ರಗ್ಸ್ ಹಾಗೂ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಒಡಿಶಾ ರಾಜ್ಯ ಪೊಲೀಸರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ ಟಾಕ್ಸಿಕ್ ಸಿನಿಮಾ ಟೈಟಲ್ ಅನ್ನು ಬಳಸಿಕೊಂಡು 'ನಿಜವಾಗಿಯೂ ಕುತೂಹಲ ಮೂಡಿಸುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಿ, ಟಾಕ್ಸಿಕ್ (ಡ್ರಗ್ಸ್) ವ್ಯಸನವಲ್ಲ' ಎಂದು ಬರೆದಿದ್ದಾರೆ.
ಟಾಕ್ಸಿಕ್: ಕಾತರ ತಣಿಯಲು ಎರಡು ದಿನ ಬಾಕಿಮಾತ್ರವಲ್ಲದೆ, ಪೋಸ್ಟ್‌ನ ಒಕ್ಕಣೆಯಲ್ಲಿ 'ನಿಮ್ಮ ಅಭಿರುಚಿಗೆ ಅನುಗುಣವಾಗಿ ಬದುಕುವುದರಲ್ಲಿ ಉತ್ಸಾಹವಿರಲಿದೆ. ಅದನ್ನು ಬಿಟ್ಟು ಮಾದಕ ವ್ಯಸನಕ್ಕೆ ಬಲಿಯಾಗುವುದರಲ್ಲಿ ಅಲ್ಲ' ಎಂದು ಬರೆಯುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
'ಟಾಕ್ಸಿಕ್' ಮುಂಗಡ ಟಿಕೆಟ್ ಬುಕಿಂಗ್; 48 ಗಂಟೆಗಳಲ್ಲಿ ಗಳಿಸಿದ್ದೆಷ್ಟು?ಸದ್ಯ 'ಟಾಕ್ಸಿಕ್' ಸಿನಿಮಾ ಟೈಟಲ್ ಬಳಸಿಕೊಂಡು 'ನಶಾ ಮುಕ್ತ ಒಡಿಶಾ ಅಭಿಯಾನ'ದ ಅಡಿಯಲ್ಲಿ ಸಮಾಜಕ್ಕೆ ಜಾಗೃತಿಯ ಸಂದೇಶ ನೀಡುತ್ತಿರುವ ಪೊಲೀಸರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಗೀತು ಮೋಹನ್ ದಾಸ್ ಅವರು 'ಟಾಕ್ಸಿಕ್' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ, ನಯನತಾರಾ, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ನಟಿಸಿದ್ದಾರೆ.

