ನವದೆಹಲಿ: ದೆಹಲಿಯಿಂದ ನೇಪಾಳದ ಕಠ್ಮಂಡುವಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದರಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮತ್ತೆ ದೆಹಲಿಗೆ ವಾಪಸ್ ಆಗಿದೆ.
ಶನಿವಾರ (ಸೆಪ್ಟೆಂಬರ್ 19) ದೆಹಲಿಯಿಂದ ಕಠ್ಮಂಡುವಿಗೆ ಪ್ರಯಾಣಿಸುತ್ತಿದ್ದ AI219 ವಿಮಾನದಲ್ಲಿ ತಾಂತ್ರಿಕ ದೋಷವಿರುವುದು ಪತ್ತೆಯಾಯಿತು.
ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನ ಸಿಬ್ಬಂದಿ, ನಿಗದಿತ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಿದರು. ವಿಮಾನವು ದೆಹಲಿ ವಿಮಾನ ನಿಲ್ದಾಣಕ್ಕೆ ವಾಪಸ್ ಆಯಿತು.
ವಾರ ಭವಿಷ್ಯ: 2026ರ ಸೆ.20-26; ಈ ರಾಶಿಯವರಿಗೆ ದೈವ ಬಲ ದೊರೆಯಲಿದೆಬೆಂಗಳೂರಲ್ಲಿ ಬೆಂಕಿ ಅವಘಡ: ಮೊಬೈಲ್, ಹೆಲ್ಮೆಟ್ ಮಳಿಗೆ ಭಸ್ಮವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಇಳಿದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಸಂಸ್ಥೆ, ಪ್ರಯಾಣಿಕರಿಗೆ ಉಂಟಾದ ಅಸೌಕರ್ಯಕ್ಕೆ ವಿಷಾದ ವ್ಯಕ್ತಪಡಿಸಿದೆ. ಮತ್ತೊಂದು ಪರ್ಯಾಯ ವಿಮಾನದ ಮೂಲಕ ಪ್ರಯಾಣಿಕರನ್ನು ಕಠ್ಮಂಡುವಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
ಎಲ್‌ಪಿಜಿ ಸಬ್ಸಿಡಿ ಪಡೆಯಲು ಆಧಾರ್ ದೃಢೀಕರಣ ಕಡ್ಡಾಯಅಮೆರಿಕ ಸುಂಕದ ಕಾನೂನಿನಿಂದ ಹೆಚ್ಚಿದ ಅನಿಶ್ಚಿತತೆ
