ದೇಶ ಹಾಗೂ ರಾಜ್ಯದ ಅಭಿವೃದ್ಧಿಯಲ್ಲಿ ಅನಿವಾಸಿಗಳ ಕೊಡುಗೆ ಬಹಳ ದೊಡ್ಡದು. ವಿದೇಶಗಳಲ್ಲಿ ಸಣ್ಣ-ಪುಟ್ಟ ಉದ್ಯಮಗಳನ್ನು ನಡೆಸುತ್ತಾ ನೂರಾರು ಮಂದಿಗೆ ಉದ್ಯೋಗ ನೀಡುವ ಮೂಲಕ ರಾಜ್ಯದ ಆರ್ಥಿಕತೆಯನ್ನು ಬಲಪಡಿಸುತ್ತಿರುವ ಅನಿವಾಸಿ ಕನ್ನಡಿಗರು ಒಂದೆಡೆಯಾದರೆ, ತಮ್ಮ ದುಡಿಮೆಯ ಹಣವನ್ನು ಉಳಿಸಿ ತಾಯ್ನಾಡಿನಲ್ಲಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಿ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರುವವರು ಮತ್ತೊಂದೆಡೆ.
ಒಟ್ಟಿನಲ್ಲಿ ಅವರ ಉದ್ದೇಶ ಒಂದೇ - ತಮ್ಮ ಅಳಿಲುಸೇವೆಯ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಕೈಜೋಡಿಸುವುದು.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ತಾಯ್ನಾಡಿಗಾಗಿ ದುಡಿದರೂ, ಸೌಲಭ್ಯ ದೂರ: ಸರ್ಕಾರಕ್ಕೆ ಕೇಳುವುದೇ ಅನಿವಾಸಿಗಳ ಕೂಗು?
ಒಂದು ಸಾಲಿನಲ್ಲಿರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುವ ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಪ್ರತ್ಯೇಕ ಸಚಿವಾಲಯ ಮತ್ತು ಕಲ್ಯಾಣ ಯೋಜನೆಗಳನ್ನು ಶೀಘ್ರವೇ ಜಾರಿಗೆ ತರಬೇಕಿದೆ.
ಪ್ರಮುಖ ಪ್ರಶ್ನೋತ್ತರ
ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೇನು?
ಅನಿವಾಸಿ ಕನ್ನಡಿಗರು ಅನಾರೋಗ್ಯ, ಉದ್ಯೋಗ ನಷ್ಟ, ಅಪಘಾತ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಸೂಕ್ತ ಸರ್ಕಾರಿ ಬೆಂಬಲ ಮತ್ತು ರಕ್ಷಣೆಯಿಲ್ಲದೆ ಪರದಾಡುವಂತಾಗಿದೆ.
ಅನಿವಾಸಿ ಕನ್ನಡಿಗರಿಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳೇನು?
ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಎನ್‌ಆರ್‌ಐ (NRI) ಸಚಿವಾಲಯವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಹಳೆಯ ಎನ್‌ಆರ್‌ಕೆ (NRK) ಕಾರ್ಡ್ ಯೋಜನೆಯ ಸ್ಥಿತಿಗತಿಯೇನು?
ಹಿಂದಿನ ಸರ್ಕಾರದಲ್ಲಿ ಆರಂಭವಾಗಿದ್ದ ಎನ್‌ಆರ್‌ಕೆ ಕಾರ್ಡ್ ಯೋಜನೆ, ಸರ್ಕಾರ ಬದಲಾದ ನಂತರ ನಿಧಾನವಾಗಿ ನೇಪಥ್ಯಕ್ಕೆ ಸರಿದಿದ್ದು, ಇದು ಅನಿವಾಸಿಗಳಲ್ಲಿ ನಿರಾಸೆ ಮೂಡಿಸಿದೆ.
ಕೇರಳದ ಮಾದರಿ ಕರ್ನಾಟಕಕ್ಕೆ ಏಕೆ ಸ್ಫೂರ್ತಿ?
ಕೇರಳ ಸರ್ಕಾರವು ಅನಿವಾಸಿ ಕೇರಳೀಯರಿಗಾಗಿ ಜಾರಿಗೆ ತಂದಿರುವ 'NORKA' ಮಾದರಿಯು ದಶಕಗಳಿಂದ ಸಾವಿರಾರು ಕುಟುಂಬಗಳಿಗೆ ಆರ್ಥಿಕ ಮತ್ತು ವೈದ್ಯಕೀಯ ನೆರವು ನೀಡುತ್ತಾ ಯಶಸ್ವಿಯಾಗಿದೆ.
ಅನಿವಾಸಿ ಕನ್ನಡಿಗರು ಸರ್ಕಾರದಿಂದ ಏನು ನಿರೀಕ್ಷಿಸುತ್ತಿದ್ದಾರೆ?
ಅವರು ಆರೋಗ್ಯ ವಿಮೆ, ಪಿಂಚಣಿ, ಕಾನೂನು ಸಹಾಯ ಮತ್ತು ತುರ್ತು ಸಂದರ್ಭಗಳಲ್ಲಿ ಮೃತದೇಹಗಳನ್ನು ತಾಯ್ನಾಡಿಗೆ ತರುವಂತಹ ಮೂಲಭೂತ ಸರ್ಕಾರಿ ಸೌಲಭ್ಯಗಳನ್ನು ಬಯಸುತ್ತಿದ್ದಾರೆ.
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಹೊರನಾಡ ಕನ್ನಡಿಗರು: ಒಮಾನ್‌ನಲ್ಲಿ ಮಸ್ಕತ್ ಚಾಲುಕ್ಯ ಕೂಟದ ಸಂಕ್ರಾಂತಿ ಹಿಗ್ಗು!ದಶಕಗಳಿಂದ ಕನ್ನಡ ನಾಡಿಗಾಗಿ ತಮ್ಮ ಕಠಿಣ ಪರಿಶ್ರಮದ ಮೂಲಕ ಕೊಡುಗೆ ನೀಡುತ್ತಿರುವ ಅನಿವಾಸಿ ಕನ್ನಡಿಗರಿಗೆ ಸಿಗಬೇಕಾದ ಸೌಲಭ್ಯಗಳು ಮಾತ್ರ ಇನ್ನೂ ಕೈಗೆಟುಕಿಲ್ಲ. ಮೈಕೊರೆವ ಚಳಿ, ತಡೆಯಲಾರದ ಬಿಸಿಲು, ಆಹೋರಾತ್ರಿ ದುಡಿಮೆ, ಕುಟುಂಬದಿಂದ ದೂರದ ಜೀವನ - ಇವೆಲ್ಲದರ ನಡುವೆ ಅನೇಕರು ಆರೋಗ್ಯ ಸಮಸ್ಯೆ, ಅಪಘಾತ ಮತ್ತು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರ ಜೊತೆ ನಿಲ್ಲುವ ವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂಬ ಪ್ರಶ್ನೆಗೆ ಸಮಾಧಾನಕರ ಉತ್ತರ ಸಿಗುವುದಿಲ್ಲ.
ಅನಾರೋಗ್ಯ, ಉದ್ಯೋಗ ನಷ್ಟ ಅಥವಾ ಇತರ ತುರ್ತು ಪರಿಸ್ಥಿತಿಗಳು ಎದುರಾದಾಗ ಅನಿವಾಸಿ ಕನ್ನಡಿಗರು ಒಂಟಿಯಾಗಿಬಿಡುತ್ತಾರೆ. ಅಂತಹ ಸಮಯದಲ್ಲಿ ಅವರಿಗೆ ಕೇವಲ ಸಾಂತ್ವನವಲ್ಲ, ಸರ್ಕಾರಿ ಬೆಂಬಲದ ಅಗತ್ಯವಿರುತ್ತದೆ. ಅದಕ್ಕಾಗಿಯೇ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಅಥವಾ ಸಮಗ್ರ ಕಲ್ಯಾಣ ವ್ಯವಸ್ಥೆ ರೂಪಿಸಬೇಕೆಂಬ ಬೇಡಿಕೆ ವರ್ಷಗಳಿಂದ ಕೇಳಿಬರುತ್ತಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಎನ್‌ಆರ್‌ಐ ಸಚಿವಾಲಯ ಸ್ಥಾಪಿಸುವುದಾಗಿ ಘೋಷಿಸಿರುವುದು ಆಶಾದಾಯಕ ಬೆಳವಣಿಗೆ. ಈ ಘೋಷಣೆ ಅನಿವಾಸಿ ಕನ್ನಡಿಗರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಆದರೆ ಇದು ಕೇವಲ ಘೋಷಣೆಯಾಗಿ ಉಳಿಯದೇ, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಬೇಕು.
ಯುಎಇ ಮೇಲೆ ಎಲ್ ನಿನೊ ಪ್ರಭಾವ: ಅನಿವಾಸಿಗಳು ತಿಳಿಯಬೇಕಾದ ಪ್ರಮುಖ ಸಂಗತಿಗಳುಇದಕ್ಕೂ ಮುನ್ನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇರಳದ NORKA ಮಾದರಿಯಲ್ಲೇ ಅನಿವಾಸಿ ಕನ್ನಡಿಗರಿಗಾಗಿ 'ಎನ್‌ಆರ್‌ಕೆ ಕಾರ್ಡ್' (NRK Card) ಯೋಜನೆ ಘೋಷಿಸಲಾಗಿತ್ತು. ಡಾ. ಆರತಿ ಕೃಷ್ಣ ಅವರ ನೇತೃತ್ವದಲ್ಲಿ ಈ ಯೋಜನೆಗೆ ಬೇಕಾದ ಸಿದ್ಧತೆಗಳೂ ನಡೆದಿದ್ದವು. ಅನೇಕ ಅನಿವಾಸಿ ಕನ್ನಡಿಗರು ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಎನ್‌ಆರ್‌ಕೆ ಕಾರ್ಡ್ ಮಾಡಿಸಿಕೊಂಡಿದ್ದರು. ಆದರೆ ಸರ್ಕಾರ ಬದಲಾದ ನಂತರ ಆ ಯೋಜನೆಯೂ ನಿಧಾನವಾಗಿ ನೇಪಥ್ಯಕ್ಕೆ ಸರಿಯಿತು.
ಇಲ್ಲಿಯೇ ಅನಿವಾಸಿ ಕನ್ನಡಿಗರ ಪ್ರಶ್ನೆ ಆರಂಭವಾಗುತ್ತದೆ. ಸರ್ಕಾರಗಳು ಬದಲಾಗಬಹುದು, ಆದರೆ ಅನಿವಾಸಿಗಳ ಕಲ್ಯಾಣಕ್ಕೆ ಸಂಬಂಧಿಸಿದ ಯೋಜನೆಗಳು ಯಾಕೆ ಬದಲಾಗಬೇಕು? ಅನಿವಾಸಿ ಕನ್ನಡಿಗರ ಹಿತಾಸಕ್ತಿಗಳು ರಾಜಕೀಯ ಬದಲಾವಣೆಗಳ ಬಲಿಯಾಗುವುದು ಎಷ್ಟು ಸರಿ? ಯಾವ ಸರ್ಕಾರ ಅಧಿಕಾರದಲ್ಲಿದ್ದರೂ ಅನಿವಾಸಿ ಕನ್ನಡಿಗರಿಗೆ ಸಿಗಬೇಕಾದ ಸೌಲಭ್ಯಗಳು ನಿರಂತರವಾಗಿ ಮುಂದುವರಿಯಬೇಕು.
ವಿದೇಶಗಳಲ್ಲಿ, ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಉದ್ಯಮಿಗಳ ಸಂಖ್ಯೆ ಕಡಿಮೆ. ವೃತ್ತಿಪರರು ಗಣನೀಯ ಸಂಖ್ಯೆಯಲ್ಲಿದ್ದರೂ, ಬಹುಪಾಲು ಮಂದಿ ಕಾರ್ಮಿಕ ವರ್ಗಕ್ಕೆ ಸೇರಿದವರೇ ಆಗಿದ್ದಾರೆ. ತಮ್ಮ ಬೆವರಿನ ದುಡಿಮೆಯಿಂದ ಗಳಿಸಿದ ಹಣವನ್ನು ತಾಯ್ನಾಡಿಗೆ ಕಳುಹಿಸುವ ಮೂಲಕ ಅವರು ಸಾವಿರಾರು ಕುಟುಂಬಗಳ ಬದುಕಿಗೆ ಆಸರೆಯಾಗಿದ್ದಾರೆ. ರಾಜ್ಯದ ಆರ್ಥಿಕತೆಯಲ್ಲಿಯೂ ಅವರ ಕೊಡುಗೆ ಗಮನಾರ್ಹವಾಗಿದೆ.
ದುಬೈನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಭಟ್ಕಳ ಮೂಲದ ಯುವಕ ಸಾವುಆದರೆ ಅವರ ಸಮಸ್ಯೆಗಳು, ಆಶೋತ್ತರಗಳು ಮತ್ತು ಕಲ್ಯಾಣದ ಪ್ರಶ್ನೆಗಳು ಸಾರ್ವಜನಿಕ ಚರ್ಚೆಗಳಲ್ಲಿ ಬೇಕಾದಷ್ಟು ಸ್ಥಾನ ಪಡೆಯುತ್ತಿಲ್ಲ. ಆರೋಗ್ಯ ವಿಮೆ, ಪಿಂಚಣಿ, ತುರ್ತು ನೆರವು, ಕಾನೂನು ಸಹಾಯ, ವಿದೇಶದಲ್ಲಿ ಮೃತಪಟ್ಟವರ ಮೃತದೇಹವನ್ನು ಸರ್ಕಾರದ ನೆರವಿನಿಂದ ತಾಯ್ನಾಡಿಗೆ ತರಿಸುವ ವ್ಯವಸ್ಥೆ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳು ಅವರಿಗೆ ಸುಲಭವಾಗಿ ಲಭ್ಯವಾಗಬೇಕು.
ಈ ವಿಷಯದಲ್ಲಿ ಕೇರಳ ಸರ್ಕಾರದ NORKA ಮಾದರಿ ಕನ್ನಡಿಗರಿಗೆ ಮತ್ತೆ ಮತ್ತೆ ನೆನಪಾಗುತ್ತದೆ. ಅನಿವಾಸಿ ಕೇರಳೀಯರ ಕಲ್ಯಾಣಕ್ಕಾಗಿ ರೂಪುಗೊಂಡಿರುವ ಈ ವ್ಯವಸ್ಥೆ ವರ್ಷಗಳಿಂದ ಸಾವಿರಾರು ಕುಟುಂಬಗಳಿಗೆ ನೆರವಾಗುತ್ತಿದೆ. ಹಾಗಿದ್ದರೆ ಕರ್ನಾಟಕದಲ್ಲಿ ಯಾಕೆ ಸಾಧ್ಯವಿಲ್ಲ? ಅನಿವಾಸಿ ಕನ್ನಡಿಗರಿಗೆ ಮಾತ್ರ ಈ ತಾರತಮ್ಯ ಯಾಕೆ?
ಅನಿವಾಸಿ ಕನ್ನಡಿಗರು ಕೇವಲ ವಿದೇಶದಲ್ಲಿ ನೆಲೆಸಿರುವ ನಾಗರಿಕರಲ್ಲ. ಅವರು ಕರ್ನಾಟಕದ ಆರ್ಥಿಕ ಅಭಿವೃದ್ಧಿಯ ಪಾಲುದಾರರು. ಕನ್ನಡದ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವದ ಮೂಲೆಮೂಲೆಗೂ ಕೊಂಡೊಯ್ಯುತ್ತಿರುವ ರಾಯಭಾರಿಗಳು. ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಭರವಸೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ. ಮುಂದಿನ ಬಜೆಟ್ ಅಧಿವೇಶನದಲ್ಲೇ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಅಸ್ತಿತ್ವಕ್ಕೆ ಬರಲಿ. ಆರೋಗ್ಯ ವಿಮೆ, ಪಿಂಚಣಿ, ತುರ್ತು ನೆರವು ಮತ್ತು ಕಲ್ಯಾಣ ಯೋಜನೆಗಳು ಜಾರಿಯಾಗಲಿ. ವರ್ಷಗಳಿಂದ ಕರ್ನಾಟಕದ ಅಭಿವೃದ್ಧಿಗೆ ತಮ್ಮ ಬೆವರನ್ನು ಸುರಿಸಿರುವ ಲಕ್ಷಾಂತರ ಅನಿವಾಸಿ ಕನ್ನಡಿಗರ 'ಎನ್‌ಆರ್‌ಕೆ' ಕನಸು ಮತ್ತೊಮ್ಮೆ ಅಪೂರ್ಣ ಕನಸಾಗಿ ಉಳಿಯದಿರಲಿ.
ಲೇಖಕ: ಸೌದಿ ಅರೇಬಿಯಾದಲ್ಲಿ ಉದ್ಯಮಿ
ವಿವೇಕ್ ತೋಂಟದಾರ್ಯ ಲೇಖನ: ವೆಚ್ಚವೋ, ಹೂಡಿಕೆಯೋ? ಕಲ್ಯಾಣ ಯೋಜನೆಗಳ ಅರ್ಥಶಾಸ್ತ್ರ
