ಟೆಹರಾನ್: ಇರಾನ್ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಕುಟುಂಬ ಹಾಗೂ ಇರಾನ್‌ನ ಉನ್ನತ ಮಟ್ಟದ ನಾಯಕರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ವಾಯುದಾಳಿಯಲ್ಲಿ ಮೊಜ್ತಬಾ ಖಮೇನಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎನ್ನಲಾಗಿದೆ.
ಇಸ್ರೇಲ್ ಹಾಗೂ ಅಮೆರಿಕ ಸೇನಾ ಪಡೆಗಳು ಫೆಬ್ರುವರಿ 28ರಂದು ನಡೆಸಿದ ದಾಳಿಯಲ್ಲಿ ಮೊಜ್ತಬಾ ಅವರ ತಂದೆ ಹಾಗೂ ಹಿಂದಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವರು ಹತ್ಯೆಯಾಗಿದ್ದರು.
ಅದೇ ದಾಳಿ ವೇಳೆ ಮೊಜ್ತಬಾ ಗಾಯಗೊಂಡಿದ್ದಾರೆ ಎನ್ನಲಾದ ಆಡಿಯೊ 'The Telegraph'ಗೆ ಲಭ್ಯವಾಗಿದೆ.
ಅಂದು ಇಸ್ರೇಲ್ ಕ್ಷಿಪಣಿಗಳು ದಾಳಿ ನಡೆದ ಸ್ವಲ್ಪವೇ ಸಮಯಕ್ಕೂ ಮುನ್ನ ಮೊಜ್ತಬಾ ಅವರು, ಅಯತೊಲ್ಲಾ ನಿವಾಸದ ಆವರಣದಲ್ಲಿರುವ ಉದ್ಯಾನದಲ್ಲಿ ವಿಹಾರಕ್ಕೆ ಬಂದಿದ್ದರು. ಇದೇ ಕಾರಣಕ್ಕೆ ಅವರ ಜೀವ ಉಳಿದಿದೆಯಾದರೂ, ಕಾಲಿಗೆ ಪೆಟ್ಟಾಗಿದೆ ಎನ್ನಲಾಗಿದೆ.
ಅಯತೊಲ್ಲಾ ಕಚೇರಿಯ ಶಿಷ್ಟಾಚಾರ ವ್ಯವಸ್ಥೆಯ ಮುಖ್ಯಸ್ಥ ಮಜಾಹೆರ್ ಹೊಸೇನಿ ಅವರು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್‌ಗಳನ್ನು ಉದ್ದೇಶಿಸಿ ಮಾಡಿರುವ ಭಾಷಣದ ಆಡಿಯೊ ರೆಕಾರ್ಡ್ ಮಾಡಲಾಗಿದೆ.
ದಾಳಿ ಸಂದರ್ಭದಲ್ಲಿ ಅಯತೊಲ್ಲಾ ಅವರ ನಿವಾಸದ ಆವರಣದಲ್ಲಿ ಏನೆಲ್ಲ ಆಯಿತು ಎಂಬುದು ಅದರಲ್ಲಿ ದಾಖಲಾಗಿದೆ. ಮೊಜ್ತಬಾ ಅವರ ಪತ್ನಿ ಜಹ್ರಾ ಹದ್ದಾದ್ ಅದೆಲ್ ಹಾಗೂ ಅವರ ಮಗ ಬಘೇರ್ ಮೃತಪಟ್ಟಿದ್ದಾರೆ ಎಂಬುದನ್ನು ಹೊಸೇನಿ ಬಹಿರಂಗಪಡಿಸಿದ್ದಾರೆ. ಹಾಗೆಯೇ, ಇಡೀ ಖಮೇನಿ ವಂಶವನ್ನೇ ನಾಶಮಾಡುವುದು ದಾಳಿಯ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.
'ಮೊಜ್ತಬಾ ನಿವಾಸದಿಂದ ಹೊರಗೆ ಹೋಗಿ ಬರಬೇಕು ಎಂಬುದು ದೇವರ ಇಚ್ಛೆಯಾಗಿತ್ತು. ಅದರಂತೆ ಹೊರಗೆ ಹೋಗಿದ್ದ ಅವರು, ನಿವಾಸದ ಮೆಟ್ಟಿಲುಗಳತ್ತ ಬರುವಾಗ ಕ್ಷಿಪಣಿ ಅಪ್ಪಳಿಸಿತ್ತು' ಎಂದು ಹೊಸೈನಿ ಹೇಳಿದ್ದಾರೆ.
ದಾಳಿ ವೇಳೆ ಅಯತೊಲ್ಲಾ, ಮೊಜ್ತಬಾ ಪತ್ನಿ, ಮಗ ಮಾತ್ರವಲ್ಲದೆ, IRGC ಮುಖ್ಯಸ್ಥ ಮೊಹಮ್ಮದ್ ರಕ್ಪೌರ್, ಇರಾನ್ ರಕ್ಷಣಾ ಸಚಿವ ಅಜಿಜ್ ನಾಸಿರ್ಜೇದ್ ಸೇರಿದಂತೆ ಹಲವು ಮಂದಿ ಉನ್ನತಾಧಿಕಾರಿಗಳು ದಾಳಿ ವೇಳೆ ಮೃತಪಟ್ಟಿದ್ದಾರೆ.
ಇದೀಗ ಮೊಜ್ತಬಾ ಖಮೇನಿ ಗಾಯಗೊಂಡಿರುವುದು ಮತ್ತು ದೇಶವನ್ನು ಮುನ್ನಡೆಸುವ ಅವರ ಸಾಮರ್ಥ್ಯದ ಕುರಿತು ಪ್ರಶ್ನೆಗಳು ಎದ್ದಿವೆ. ಇದರ ನಡುವೆಯೇ ಆಡಿಯೊ ಬಿಡುಗಡೆಯಾಗಿರುವುದು ಹಲವು ವದಂತಿಗಳಿಗೆ ಎಡೆ ಮಾಡಿಕೊಟ್ಟಿದೆ.
ಮೊತ್ತಬಾ ಅವರ ಸದ್ಯದ ಪರಿಸ್ಥಿತಿ ಬಗ್ಗೆ ಯಾವುದೇ ಮಾಹಿತಿ ಕಮಾಂಡರ್‌ಗಳಿಗೆ ಇಲ್ಲ ಎಂಬುದಾಗಿ ಇರಾನ್ ಅಧಿಕಾರಿಗಳು ತಿಳಿಸಿರುವುದಾಗಿ 'The Telegraph' ವರದಿ ಮಾಡಿದೆ.
ಈ ಹಿಂದೆಯೂ ಕಣ್ಮರೆಯಾಗಿದ್ದ ಮೊಜ್ತಬಾ
ಇಸ್ರೇಲ್, ಅಮೆರಿಕ ವಿರುದ್ಧದ ಸಂಘರ್ಷ ಆರಂಭವಾದಾಗಿನಿಂದ ಮೊಜ್ತಬಾ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರು ಹೀಗೆ, ನಾಪತ್ತೆಯಾಗಿರುವುದು ಇದೇ ಮೊದಲೇನಲ್ಲ.
ಇರಾಕ್ ವಿರುದ್ಧ 1985ರಲ್ಲಿ ನಡೆದ ಯುದ್ಧದಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಅವರು, ಒಂದು ವಾರದ ಕಣ್ಮರೆಯಾಗಿದ್ದರು. ಹೀಗಾಗಿ, IRGC ಕಮಾಂಡರ್‌ಗಳು ಅವರನ್ನು ಅನನುಭವಿ ಹೋರಾಟಗಾರ ಎಂದು ಹೇಳಿದ್ದರು. ಆದರೆ, ಮೊಜ್ತಬಾ ಬದುಕುಳಿದಿರುವುದು ಒಂದು ವಾರದ ನಂತರ ಗೊತ್ತಾಗಿತ್ತು.
ಮೊಜ್ತಬಾ ಮಾತ್ರವಲ್ಲ. ಸಂಘರ್ಷ ಆರಂಭವಾದಾಗಿನಿಂದ ಅಯತೊಲ್ಲ ಅವರ ಇತರ ಮಕ್ಕಳೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಮೊಜ್ತಬಾ ಅವರು ಯುದ್ಧದ ಕುರಿತು ದೂರದರ್ಶನದಲ್ಲಿ ಸಂದೇಶ ಓದಿದ್ದನ್ನು ಬಿಟ್ಟರೆ ಮತ್ತೆಲ್ಲೂ ಕಾಣಿಸಿಕೊಂಡಿಲ್ಲ.
ಮೊಜ್ತಬಾ ಅವರು ರಷ್ಯಾಗೆ ಪಲಾಯನ ಮಾಡಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವದಂತಿಗಳು ಹರಡಿವೆ. ಆದರೆ, ಈವರೆಗೆ ಅದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.ರಷ್ಯಾಗೆ ಪಲಾಯನ ಶಂಕೆ'ಇರಾನ್ ನಾಯಕ ಬದುಕಿರಬಹುದು': ಮೊಜ್ತಬಾ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಟ್ರಂಪ್ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಜೀವಕ್ಕೆ ಯಾವುದೇ ಖಾತ್ರಿ ಇಲ್ಲ: ನೆತನ್ಯಾಹುಸೂಚನೆ: ದಿ ಟೆಲಿಗ್ರಾಫ್, ಎನ್‌ಡಿಟಿವಿ ಸೇರಿದಂತೆ ವಿವಿಧ ಸುದ್ದಿವಾಹಿಗಳ ವರದಿಯನ್ನು ಉಲ್ಲೇಖಿಸಿ ಬರೆದ ವರದಿ.
ಇರಾನ್ ಪ್ರತಿಕಾರದ ಪರಿ ದಿಗ್ಭ್ರಮೆಗೊಳಿಸಿದೆ: ಒಪ್ಪಿಕೊಂಡ ಡೊನಾಲ್ಡ್ ಟ್ರಂಪ್‌ಇರಾನ್ ಬ್ರಹ್ಮಾಸ್ತ್ರ: ನೃತ್ಯ ಮಾಡುತ್ತಲೇ ಶತ್ರು ನೆಲೆಗೆ ಅಪ್ಪಳಿಸುವ ಘಾತಕ
