ಲಾ ಗ್ವೈರಾ : ವೆನೆಜುವೆಲಾದಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ ಎಂದು ಶಾಸಕ ಜಾರ್ಜ್ ರೊಡ್ರಿಗಸ್ ಹೇಳಿದ್ದಾರೆ.
ಈ ದುರಂತದಲ್ಲಿ 5,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 15,000ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ ಎಂದು ರೊಡ್ರಿಗಸ್ ಮಾಹಿತಿ ನೀಡಿದ್ದಾರೆ.
ವೆನೆಜುವೆಲಾದಲ್ಲಿ ಶತಮಾನದ ಅವಧಿಯಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪ ಇದಾಗಿದ್ದು, ದೇಶದ ವಿವಿಧ ನಗರಗಳಲ್ಲಿ ಸಾವಿರಾರು ಕಟ್ಟಡಗಳು ನೆಲಕ್ಕುರುಳಿವೆ.
ಅವಳಿ ಭೂಕಂಪಗಳಿಂದ ಭಯಭೀತರಾದ ದೇಶದ ವಿವಿಧ ನಗರಗಳ ಜನರು ಕಟ್ಟಡಗಳ ಅವಶೇಷಗಳ ಬಳಿ ಕಾಣೆಯಾದವರಿಗಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಕೆಲವರು ತಮ್ಮ ಮಕ್ಕಳು, ಕುಟುಂಬದ ಸದಸ್ಯರ ಹೆಸರುಗಳನ್ನು ಕೂಗುತ್ತಾ ಅವಶೇಷಗಳಡಿ ತಡಕಾಡಿದರು. ಹಲವರು ಮಕ್ಕಳಿಗಾಗಿ ಹುಡುಕಿ ಕಣ್ಣೀರು ಹಾಕಿದ ದೃಶ್ಯಗಳು ಮನಕಲಕುವಂತಿತ್ತು.
ತಮಿಳುನಾಡು ಸೀಫುಡ್ ರಫ್ತು ಘಟಕದಲ್ಲಿ ಅನಿಲ ಸೋರಿಕೆ: ಸಾವಿನ ಸಂಖ್ಯೆ 16ಕ್ಕೆ ಏರಿಕೆಅಫ್ಗಾನ್ ಮೇಲೆ ಪಾಕ್ ನಡೆಸಿದ ವಾಯುದಾಳಿ ವೇಳೆ ನಾಗರಿಕರ ಹತ್ಯೆ: ಭಾರತ ಖಂಡನೆ
