Dailyhunt Logo
  • Light mode
    Follow system
    Dark mode
    • Play Story
    • App Story
Video | ಬಜೆಟ್‌ ಮಂಡನೆಗೂ ಮುನ್ನ ನಿರ್ಮಲಾಗೆ ಮೊಸರು-ಸಕ್ಕರೆ ತಿನಿಸಿದ ಮುರ್ಮು

Video | ಬಜೆಟ್‌ ಮಂಡನೆಗೂ ಮುನ್ನ ನಿರ್ಮಲಾಗೆ ಮೊಸರು-ಸಕ್ಕರೆ ತಿನಿಸಿದ ಮುರ್ಮು

ವದೆಹಲಿ: 2026-27ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು(ಭಾನುವಾರ) ಮಂಡಿಸಲಿದ್ದಾರೆ.

ಸಂಪ್ರದಾಯದಂತೆ ಸಂಸತ್ತಿಗೆ ತೆರಳುವ ಮುನ್ನ ನಿರ್ಮಲಾ ಸೀತಾರಾಮನ್‌ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.

ಈ ವೇಳೆ ದ್ರೌಪದಿ ಮುರ್ಮು ಅವರು ನಿರ್ಮಲಾ ಸೀತಾರಾಮನ್‌ ಅವರಿಗೆ ಮೊಸರು-ಸಕ್ಕರೆ ತಿನಿಸಿ ಶುಭ ಕೋರಿದ್ದಾರೆ.

Union Budget 2026: ಆರ್ಥಿಕ ಬೆಳವಣಿಗೆ, ಕುಟುಂಬ ಆದಾಯದ ಹೆಚ್ಚಳವೇ ನಿರ್ಮಲಾ ಆಯವ್ಯಯದ ಸೂತ್ರ Budget 2026: ತಮಿಳುನಾಡಿನ ಕಾಂಚೀವರಂ ಸೀರೆಯುಟ್ಟು ಬಂದ ನಿರ್ಮಲಾ ಸೀತಾರಾಮನ್

ರಾಷ್ಟ್ರಪತಿ ಭವನಕ್ಕೆ ಹೋಗುವ ಮೊದಲು, ಸೀತಾರಾಮನ್ ತಮ್ಮ ಬಜೆಟ್ ತಂಡದ ಸದಸ್ಯರೊಂದಿಗೆ ಕರ್ತವ್ಯ ಭವನದ ಮುಂದೆ ರಾಷ್ಟ್ರೀಯ ಲಾಂಛನವಿರುವ ಟ್ಯಾಬ್ಲೆಟ್ ಅನ್ನು ಪ್ರದರ್ಶಿಸಿದರು. ಈ ಬಾರಿ ನಿರ್ಮಲಾ ಅವರು ಕೆನ್ನೇರಳೆ ಬಣ್ಣದ ತಮಿಳುನಾಡಿದ ಕಾಂಚೀವರಂ ಸೀರೆ ಧರಿಸಿ, ಶಾಲು ತೊಟ್ಟು ಬಂದಿದ್ದಾರೆ.

ಈ ವೇಳೆ ಸಚಿವ ಪಂಕಜ್ ಚೌಧರಿ ಸೇರಿದಂತೆ ಸಚಿವಾಲಯದ ಆರು ಕಾರ್ಯದರ್ಶಿಗಳು ನಿರ್ಮಲಾಗೆ ಸಾಥ್‌ ನೀಡಿದ್ದಾರೆ.

‌ಕೇಂದ್ರ ಬಜೆಟ್ 2026-27: ಸವಾಲುಗಳೇನು? ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ₹ 49 ಹೆಚ್ಚಳ: ಬೆಂಗಳೂರಿನಲ್ಲಿ ಎಷ್ಟು?

ಸತತ 9ನೇ ಬಾರಿಗೆ ಬಜೆಟ್‌ ಮಂಡಿಸಲು ಸಜ್ಜಾಗಿರುವ ನಿರ್ಮಲಾ ಸೀತಾರಾಮನ್, ಈ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಲಿದ್ದಾರೆ.

ಈ ಬಾರಿಯ ಬಜೆಟ್‌ ಮೇಲೆ ಮಧ್ಯಮ ವರ್ಗದವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದು, ಜನಸಾಮಾನ್ಯರಿಗೆ ಯಾವೆಲ್ಲಾ ಕ್ಷೇತ್ರಗಳಲ್ಲಿ ಏನೆಲ್ಲಾ ಸಿಗುತ್ತದೆ ಎಂದು ಕಾದು ನೋಡಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani