Dailyhunt Logo
  • Light mode
    Follow system
    Dark mode
    • Play Story
    • App Story
Union Budget 2026: ಆರ್ಥಿಕ ಬೆಳವಣಿಗೆ, ಕುಟುಂಬ ಆದಾಯದ ಹೆಚ್ಚಳವೇ ನಿರ್ಮಲಾ ಆಯವ್ಯಯದ ಸೂತ್ರ

Union Budget 2026: ಆರ್ಥಿಕ ಬೆಳವಣಿಗೆ, ಕುಟುಂಬ ಆದಾಯದ ಹೆಚ್ಚಳವೇ ನಿರ್ಮಲಾ ಆಯವ್ಯಯದ ಸೂತ್ರ

Union Budget 2026: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ದಾಖಲೆಯ ಸತತ 9ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಆರ್ಥಿಕ ಸುಸ್ಥಿರತೆ ಹಾಗೂ ವಿವಿಧ ಕ್ಷೇತ್ರಗಳಿಗೆ ನೀಡಿರುವ ಅನುದಾನಗಳ ಸಮಗ್ರ ವಿವರ ಇಲ್ಲಿವೆ.

ತೆರಿಗೆ, ಬೆಲೆ ಏರಿಕೆ ತಗ್ಗುವ ನಿರೀಕ್ಷೆಯಲ್ಲಿ ಮಧ್ಯಮ ವರ್ಗ

ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ವರ್ಗ, ನೌಕರ ವರ್ಗ ಮತ್ತು ಪಿಂಚಣಿದಾರರು ಬಜೆಟ್‌ ಮೇಲೆ ಭಾರಿ ನಿರೀಕ್ಷೆ ಹೊಂದಿದ್ದಾರೆ. ಬೆಲೆ ಏರಿಕೆಯನ್ನು ನಿಯಂತ್ರಿಸುವ, ತೆರಿಗೆ ರಿಯಾಯಿತಿ ಘೋಷಿಸುವ, ಉದ್ಯೋಗ ಸೃಷ್ಟಿಸುವ, ಆರೋಗ್ಯ, ಶಿಕ್ಷಣ ಮತ್ತು ವಸತಿ ಯೋಜನೆಗಳಿಗೆ ನೆರವಾಗುವ ಬಜೆಟ್‌ ಆಗಬಹುದೇ ಎಂಬ ಚರ್ಚೆ ಸಾಮಾನ್ಯವಾಗಿದೆ. ಹೀಗಾಗಿ ಜನಸಾಮಾನ್ಯರು ನಿತ್ಯ ಎದುರಿಸುತ್ತಿರುವ ಆರ್ಥಿಕ ಒತ್ತಡವನ್ನು ತಗ್ಗಿಸುವ ಬಜೆಟ್‌ನ ನಿರೀಕ್ಷೆಯಲ್ಲಿದ್ದಾರೆ.

ವೇತನದಾರರು, ಪಿಂಚಣಿದಾರರ ತೆರಿಗೆ ರಿಯಾಯಿತಿ ನಿರೀಕ್ಷೆ

ವೇತನದಾರರು ತೆರಿಗೆ ವಿನಾಯಿತಿ ಮಿತಿಯು ತಗ್ಗುವ ನಿರೀಕ್ಷೆಯಲ್ಲಿದ್ದಾರೆ. ಇದರೊಂದಿಗೆ ಹೆಚ್ಚಿನ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮತ್ತು ಸರಳೀಕೃತ ತೆರಿಗೆ ಸ್ಲಾಬ್‌ಗಳ ನಿರೀಕ್ಷೆಯೂ ಅವರದ್ದಾಗಿದೆ. ಪಿಂಚಣಿದಾರರು ತಮ್ಮ ಆದಾಯಕ್ಕೆ ನ್ಯಾಯಸಮ್ಮತ ತೆರಿಗೆ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ.

ಕರ್ತವ್ಯ ಭವನಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್‌

ಬಜೆಟ್‌ ಮಂಡನೆ ಹಿನ್ನೆಲೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೆಹಲಿಯ ಸಂಸತ್‌ ಭವನದ ಆವರಣದಲ್ಲಿರುವ ಕರ್ತವ್ಯ ಭವನಕ್ಕೆ ಆಗಮಿಸಿದರು

ಉದ್ಯೋಗ ಮತ್ತು ಆದಾಯ ಭದ್ರತೆ ನಿರೀಕ್ಷೆ

ಉದ್ಯೋಗ ಮತ್ತು ಆದಾಯ ಭದ್ರತೆ ಯುವಜನರಲ್ಲಿ ನಿರುದ್ಯೋಗ ಮತ್ತು ಸಿಕ್ಕ ಕೆಲಸವೂ ಅಲ್ಪಾವಧಿಯಾಗುವ ಗಂಭೀರ ಸಮಸ್ಯೆ ಈಗಲೂ ಎದುರಿಸುತ್ತಿದ್ದಾರೆ. ಆದ್ದರಿಂದ ಉದ್ಯೋಗ ಸೃಷ್ಟಿಯೇ ಈ ಬಜೆಟ್‌ನ ಪ್ರಮುಖ ನಿರೀಕ್ಷೆಯಾಗಿದೆ. ಮೂಲಸೌಕರ್ಯ, ಉತ್ಪಾದನಾ ಕ್ಷೇತ್ರ ಮತ್ತು ಎಂಎಸ್‌ಎಂಇಗಳ ಹೂಡಿಕೆ ಹೆಚ್ಚಳದಿಂದ ಉದ್ಯೋಗಾವಕಾಶ ಹೆಚ್ಚಿಸಬೇಕು. ಸಣ್ಣ ಉದ್ಯಮಗಳಿಗೆ ಸುಲಭ ಸಾಲ, ಸರಳ ನಿಯಮಾವಳಿ ಮತ್ತು ಸರ್ಕಾರದ ನಿರಂತರ ಬೆಂಬಲವನ್ನೂ ಕೈಗಾರಿಕಾ ಕ್ಷೇತ್ರದ ಪ್ರಮುಖರು ಎದುರು ನೋಡುತ್ತಿದ್ದಾರೆ.

ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದ್ದು ಒಡಿಶಾ ರಾಜ್ಯದ ಯುವತಿ ಬಜೆಟ್‌ ನಿರೀಕ್ಷೆ ಬಗ್ಗೆ ಮಾತನಾಡಿದರು..

ಬಜೆಟ್ ದಾಖಲೆಗಳನ್ನು ಹೊಂದಿದ ಟ್ಯಾಬ್ಲೆಟ್ ಪ್ರದರ್ಶನ...

ಬಜೆಟ್ ದಾಖಲೆಗಳನ್ನು ಹೊಂದಿದ ಟ್ಯಾಬ್ಲೆಟ್ ಪ್ರದರ್ಶಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಬಜೆಟ್‌ ತಂಡದ ಸದಸ್ಯರು.

ಬಜೆಟ್‌ ನಿರೀಕ್ಷೆ: ಕೈಗೆಟುಕಲಿದೆಯೇ ಆರೋಗ್ಯ ಮತ್ತು ಶಿಕ್ಷಣ?

ದಿನದಿಂದ ದಿನಕ್ಕೆ ಹೊರೆಯಾಗುತ್ತಿರುವ ವೈದ್ಯಕೀಯ ವೆಚ್ಚಗಳಿಂದಾಗಿ ಅನೇಕ ಕುಟುಂಬಗಳು ಸಾಲದ ಸುಳಿಗೆ ಸಿಲುಕುತ್ತಿವೆ. ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಕಡಿಮೆ ದರದ ಔಷಧಗಳಿಗೆ ಹೆಚ್ಚಿನ ಅನುದಾನ ನೀಡಬೇಕೆಂಬುದು ಪ್ರಮುಖ ನಿರೀಕ್ಷೆಯಾಗಿದೆ.

ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ನೀಡುವ ಮೂಲಕ ಸರ್ಕಾರಿ ಶಾಲೆ-ಕಾಲೇಜುಗಳ ಸುಧಾರಣೆ, ಡಿಜಿಟಲ್ ಕಲಿಕೆ ಮೂಲಸೌಕರ್ಯ ಮತ್ತು ಉನ್ನತ ಶಿಕ್ಷಣಕ್ಕೆ ಲಭಿಸುವ ಸಾಲಗಳು ಇನ್ನಷ್ಟು ಸರಳ ಹಾಗೂ ಅಗ್ಗವಾಗುವತ್ತ ಪೋಷಕರ ಕಣ್ಣು ನೆಟ್ಟಿದೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ನಿರ್ಮಲಾ

ಬಜೆಟ್ ಮಂಡನೆಗೂ ಮುನ್ನ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಇಳಿಕೆ ಕಂಡುಬಂದಿವೆ.

ಷೇರುಪೇಟೆಯಲ್ಲಿ ವಿಶೇಷ ವಹಿವಾಟು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ ಇಂದು ಷೇರುಪೇಟೆಯಲ್ಲಿ ವಿಶೇಷ ವಹಿವಾಟು ಆರಂಭವಾಗಿದೆ. ಷೇರು ವಹಿವಾಟಿನಲ್ಲಿ ಏರಿಳಿತ ಕಂಡುಬಂದಿದೆ. ಬಿಎಸ್‌ಇ 13 ಅಂಶ ಏರಿಕೆ ಕಂಡರೆ ನಿಫ್ಟಿ7.90 ಅಂಶ ಇಳಿಕೆ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ 82,282.82 ಹಾಗೂ ನಿಫ್ಟಿ 25,312.75 ಅಂಶಕ್ಕೆ ತಲುಪಿದೆ.

ಸಾಮಾನ್ಯವಾಗಿ ಭಾನುವಾರದಂದು ಷೇರುಪೇಟೆ ವಹಿವಾಟು ನಡೆಯುವುದಿಲ್ಲ. ಆದರೆ, ಈ ಬಾರಿ ಫೆಬ್ರುವರಿ 1ರಂದು ಬಜೆಟ್‌ ಮಂಡನೆ ಇರುವುದರಿಂದ ವಿಶೇಷ ವಹಿವಾಟು ನಡೆಯುತ್ತಿದೆ. ಬೆಳಿಗ್ಗೆ 9.15ರಿಂದ ಮಧ್ಯಾಹ್ನ 3.30ರ ವರೆಗೆ ಷೇರುಪೇಟೆ ಕಾರ್ಯನಿರ್ವಹಿಸಲಿದೆ

ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ 2026ರ ಜನವರಿ ತಿಂಗಳಲ್ಲಿ ₹1.93 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಇದು ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಶೇ 6.2ರಷ್ಟು ಹೆಚ್ಚಳ ಕಂಡುಬಂದಿದೆ.

ಐತಿಹಾಸಿಕ ಬಜೆಟ್ ಆಗಲಿದೆ: ಕಿರಣ್ ರಿಜಿಜು

ಇದೊಂದು ಐತಿಹಾಸಿಕ ಬಜೆಟ್ ಆಗಲಿದ್ದು, ಪ್ರಧಾನಿ ಅವರ 'ಸುಧಾರಣಾ ಎಕ್ಸ್‌ಪ್ರೆಸ್' ವಿಕಸಿತ ಭಾರತದ ಕಡೆಗೆ ವೇಗವಾಗಿ ಸಂಚರಿಸುತ್ತದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ನಿರೀಕ್ಷೆಗಳನ್ನು ಕಳೆದುಕೊಂಡಿರುವ ಸರ್ಕಾರದಿಂದ ಏನು ನಿರೀಕ್ಷೆ ಮಾಡಲಿ?: ಅಖಿಲೇಶ್ ಯಾದವ್

ನಿರೀಕ್ಷೆಗಳನ್ನೇ ಕಳೆದುಕೊಂಡಿರುವ ಕೇಂದ್ರ ಸರ್ಕಾರದಿಂದ ಈ ಬಜೆಟ್‌ನಲ್ಲಿ ಏನನ್ನು ನಿರೀಕ್ಷೆ ಮಾಡಲಿ ಎಂದು ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.

ಶ್ರೀ ಗುರು ರವಿದಾಸ್ ವಿಶ್ರಮ್ ಧಾಮ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನವೀನ್

ಬಜೆಟ್ ಮಂಡನೆಗೂ ಮುನ್ನ ಸಚಿವ ಸಂಪುಟದಲ್ಲಿ ಭಾಗವಹಿಸಲು ಸಂಸತ್ ಭವನಕ್ಕೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಚುನಾವಣಾ ಹೊಸ್ತಿಲಲ್ಲಿರುವ ಕೇರಳಕ್ಕೆ ಬಜೆಟ್‌ನಲ್ಲಿ ಆದೇನು ನೀಡುತ್ತಾರೆ ಎನ್ನುವುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ: ಸಂಸದ ಶಶಿ ತರೂರ್

ಸಾಂಪ್ರದಾಯದಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಸಿಹಿ ತಿನಿಸಿದ ರಾಷ್ಟ್ರಪತಿ ದ್ರೌಪತಿ ಮುರ್ಮು

ಸಂಸತ್ತಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ಗೃಹ ಸಚಿವ ಅಮಿತ್ ಶಾ ಆಗಮನ

ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ಭೇಟಿ ಮಾಡಿದ ನಿರ್ಮಲಾ

ಬಜೆಟ್ ಮೇಲೆ ನಿರೀಕ್ಷೆ ಇಲ್ಲ. ಆದರೂ ಕಾದು ನೋಡೋಣ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯೆ

ಬಜೆಟ್ 2026ಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು ಎಂದಿದೆ.

ಬಜೆಟ್ ಸಮಗ್ರ ಮಾಹಿತಿಗಾಗಿ ಓದಿ...

Budget 2026: ತಮಿಳುನಾಡಿನ ಕಾಂಚೀವರಂ ಸೀರೆಯುಟ್ಟು ಬಂದ ನಿರ್ಮಲಾ ಸೀತಾರಾಮನ್ಇಂದು ಕೇಂದ್ರ ಬಜೆಟ್‌: ಆರ್ಥಿಕ ಸ್ಥಿರತೆ, ಅಭಿವೃದ್ಧಿ ಸಮನ್ವಯಕ್ಕೆ ಯತ್ನ? ‌ಕೇಂದ್ರ ಬಜೆಟ್ 2026-27: ಸವಾಲುಗಳೇನು? ಇಂದು ಕೇಂದ್ರ ಬಜೆಟ್‌: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..Video | ಬಜೆಟ್‌ ಮಂಡನೆಗೂ ಮುನ್ನ ನಿರ್ಮಲಾಗೆ ಮೊಸರು-ಸಕ್ಕರೆ ತಿನಿಸಿದ ಮುರ್ಮುUnion Budget 2026: ಎಂಸಿಎಕ್ಸ್ ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಕುಸಿತ

ಬಜೆಟ್ ಮಂಡನೆಗೂ ಮುನ್ನ ಸಂಸತ್ ಆವರಣದಲ್ಲಿ ವಿಪಕ್ಷಗಳ ನಾಯಕರಿಂದ ಪ್ರತಿಭಟನೆ

ಬಜೆಟ್ ಮಂಡನೆಗೂ ಮುನ್ನ ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಕುಸಿತ

Union Budget 2026: ಎಂಸಿಎಕ್ಸ್ ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಕುಸಿತ

ಕೇಂದ್ರ ಬಜೆಟ್ ನೇರ ಪ್ರಸಾರ ಇಲ್ಲಿ ವೀಕ್ಷಿಸಿ...

Union Budget 2026 LIVE| ಕೇಂದ್ರ ಬಜೆಟ್‌ ಮಂಡನೆ: ನೇರಪ್ರಸಾರ

ಸಂಸತ್ತಿನಲ್ಲಿ ಬಜೆಟ್ ಕಲಾಪ ಆರಂಭ.

ಲೋಕಸಭೆಯಲ್ಲಿ ಬಜೆಟ್ ಭಾಷಣ ಆರಂಭಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ದಾಖಲೆಯ ಸತತ 9ನೇ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ.

ಮೂರು ಕರ್ತವ್ಯಗಳ ಬಗ್ಗೆ ನಿರ್ಮಲಾ ಉಲ್ಲೇಖ

  • ಆರ್ಥಿಕ ಪ್ರಗತಿ

  • ಜನರ ನಿರೀಕ್ಷೆ ಈಡೇರಿಸುವುದು

  • ಸಬ್ ಕಾ ಸಾಥ್, ಸಬ್ ಕಾ ವಿಕಾಸ್

ವಿಕಸಿತ ಭಾರತದತ್ತ ಹೆಜ್ಜೆ ಇಡುವುದು ಮುಂದುವರಿಯಲಿದೆ: ನಿರ್ಮಲಾ

ದೇಶದ ಪ್ರತಿಯೊಬ್ಬ ನಾಗರಿಕರು, ರೈತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಯುವಜನರಿಗೆ ವೃದ್ಧಿಯನ್ನು ಖಾತ್ರಿಪಡಿಸಲಿದ್ದೇವೆ: ಬಜೆಟ್ ಭಾಷಣದಲ್ಲಿ ನಿರ್ಮಲಾ

12 ವರ್ಷಗಳ ಅಧಿಕಾರದಿಂದ ದೇಶದ ಆರ್ಥಿಕತೆ ಸ್ಥಿರತೆ ಕಂಡಿದ್ದು, ಹಣಕಾಸಿನ ಶಿಸ್ತು ಹಾಗೂ ನಿರಂತರ ಪ್ರಗತಿ ಸಾಧಿಸಿದೆ. ಅನಿಶ್ಚಿತತೆಗಳ ನಡುವೆಯೂ ಪ್ರಗತಿ ಸಾಧಿಸಿದ್ದೇವೆ: ನಿರ್ಮಲಾ

ಸುಸ್ಥಿರ ಬೆಳವಣಿಗೆ ಜೊತೆಗೆ ಜನರ ಆಕಾಂಕ್ಷೆಗಳನ್ನು ಈಡೇರಿಸುವುದು ನಮ್ಮ ಧ್ಯೇಯವಾಗಿದೆ: ನಿರ್ಮಲಾ

ವಿಕಸಿತ ಭಾರತದತ್ತ ದಿಟ್ಟ ಹೆಜ್ಜೆ: ನಿರ್ಮಲಾ

ಭಾರತ ಸೆಮಿಕಂಡಕ್ಟರ್ ಮಿಷನ್ 2.0 ಆರಂಭ ಎಂದು ನಿರ್ಮಲಾ ಘೋಷಣೆ

ಜಾಗತಿಕ ಬಯೋ-ಫಾರ್ಮಾ ಉತ್ಪಾದನಾ ಕೇಂದ್ರ

ಭಾರತವನ್ನು ಜಾಗತಿಕ ಬಯೋ-ಫಾರ್ಮಾ ಉತ್ಪಾದನಾ ಕೇಂದ್ರವಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ₹10 ಸಾವಿರ ಕೋಟಿ ಬಯೋ ಫಾರ್ಮಾ ಶಕ್ತಿ ಅನ್ನು ನಿರ್ಮಲಾ ಪ್ರಸ್ತಾಪಿಸಿದ್ದಾರೆ.

200 ಪ್ರಮುಖ ಕೈಗಾರಿಕಾ ಕ್ಲಸ್ಟರ್‌ಗಳ ನವೀಕರಣ: ನಿರ್ಮಲಾ ಘೋಷಣೆ

ಭಾರತವು ಗುಣಮಟ್ಟದ, ಕೈಗೆಟುಕುವ ಕ್ರೀಡಾ ಸಾಮಾಗ್ರಿಗಳ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಹೊಂದಿದೆ: ನಿರ್ಮಲಾ

ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ನಿರ್ಮಲಾ ಪ್ರಸ್ತಾಪ

ಒಡಿಶಾ, ಕೇರಳ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಖನಿಜಗಳ ಉತ್ಪಾದನೆಗೆ ಉತ್ತೇಜನ: ನಿರ್ಮಲಾ

ಬೆಂಗಳೂರು ಸೇರಿದಂತೆ ಏಳು ಹೈ ಸ್ಪೀಡ್‌ ರೈಲು ಯೋಜನೆ ಘೋಷಣೆ

ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಚೆನ್ನೈ, ಬೆಂಗಳೂರು-ಚೆನ್ನೈ, ದೆಹಲಿ-ವಾರಣಾಸಿ, ವಾರಣಾಸಿ-ಸಿಲಿಗುರಿ. ಈ ಯೋಜನೆ ಮೂಲಕ ಪ್ರಯಾಣ ಸಮಯ ಕಡಿಮೆ ಮಾಡುವ ಯೋಜನೆ.

ಮೆಡಿಕಲ್ ಹಬ್ ಘೋಷಣೆ - ಐದು ಪ್ರಾದೇಶಿಕ, ಖಾಸಗಿ ಸಹಭಾಗ್ವಿತ

ಮುಂದಿನ 5 ವರ್ಷಗಳಲ್ಲಿ 20 ಹೊಸ ಜಲಮಾರ್ಗ

ಮೀಸಲು ವ್ಯಾಪಾರ ಕಾರಿಡಾರ್‌ ಅಭಿವೃದ್ಧಿಗಾಗಿ ಮುಂದಿನ 5 ವರ್ಷಗಳಲ್ಲಿ 20 ಹೊಸ ಜಲಮಾರ್ಗಗಳನ್ನು ಕಾರ್ಯಗತಗೊಳಿಸಲಾಗುವುದು. ಹಡಗು ದುರಸ್ತಿ ಕೇಂದ್ರಗಳನ್ನು ವಾರಣಾಸಿ ಮತ್ತು ಪಟ್ನಾದಲ್ಲಿ ಸ್ಥಾಪಿಸುವ ಉದ್ದೇಶ. ಜತೆಗೆ ಕರಾವಳಿ ಕಾರ್ಗೊ ಉತ್ತೇಜನ ಯೋಜನೆಯನ್ನು ಒಳನಾಡು ಜಲಮಾರ್ಗ ಮತ್ತು ಕರಾವಳಿಯಲ್ಲೂ ಜಾರಿಗೆ ತರಲಾಗುವುದು.

ಖಾಸಗಿ ಡೆವಲಪರ್‌ಗಳ ನೆರವಿವಾಗಿ 'ಮೂಲಸೌಕರ್ಯ ಅಪಾಯ ನಿಧಿ' ಪ್ರಸ್ತಾಪಿಸಿದ ನಿರ್ಮಲಾ.

ಕರ್ತವ್ಯ ಮಂತ್ರ ಪಠಿಸಿದ ನಿರ್ಮಲಾ ಸೀತಾರಾಮನ್

ಬಜೆಟ್‌ನಲ್ಲಿ 'ಕರ್ತವ್ಯ ಮಂತ್ರ' ಪಠನೆ : ಸರ್ವರಿಗೂ ವಿತ್ತ ಸಚಿವೆಯ ಆದ್ಯತೆ

ಇಂಧನ ಹಣಕಾಸು ನಿಗಮ (PFC) ಹಾಗೂ ಗ್ರಾಮೀಣ ವಿದ್ಯುತೀಕರಣ ನಿಗಮ (REC) ಪುನರ್‌ರಚನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ.

ಪೂರ್ವ ಭಾರತಕ್ಕೆ ವಿನ್ಯಾಸ ಶಿಕ್ಷಣ ಕ್ಷೇತ್ರ - ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್

ಪ್ರತಿ ಜಿಲ್ಲೆಯಲ್ಲಿ ಒಂದು ಬಾಲಕಿಯರ ವಿದ್ಯಾರ್ಥಿ ನಿಲಯ

20 ಸಾವಿರ ಪ್ರವಾಸಿ ತಾಣಗಳಲ್ಲಿ ಮಾಹಿತಿ ನೀಡಲು 10 ಸಾವಿರ ಗೈಡ್‌ಗಳಿಗೆ ತರಬೇತಿ

ವಿಶ್ವದರ್ಜೆಯ ಟ್ರೆಕಿಂಗ್: ಕರ್ನಾಟಕದ ಕರಾವಳಿಯಲ್ಲಿ ಟ್ರೆಕಿಂಗ್ ಮಾರ್ಗ ಅಭಿವೃದ್ಧಿ ಯೋಜನೆ

2026-27ನೇ ಸಾಲಿನಲ್ಲಿ ಬಂಡವಾಳ ವೆಚ್ಚಕ್ಕೆ ₹ 12.12 ಕೋಟಿ ಖರ್ಚು ಮಾಡಲು ಉದ್ದೇಶಿಸಲಾಗಿದೆ‌.

ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕಚೇರಿ

ದೇಶದ 5 ನಗರಗಳಲ್ಲಿ ವಿಶ್ವವಿದ್ಯಾಲಯ ಟೌನ್‌ಶಿಪ್ ನಿರ್ಮಾಣ

ದೇಶದಲ್ಲಿ ಹೊಸ ಕ್ರೀಡಾ ಸಂಕೀರ್ಣಗಳ ನಿರ್ಮಾಣ ಘೋಷಣೆ

ಹತ್ತಿ ಮತ್ತು ಹೈಮಗ್ಗಕ್ಕೆ ಉತ್ತೇಜನ ನೀಡಲು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಉಪಕ್ರಮ: ನಿರ್ಮಲಾ

ಉದ್ಯೋಗ ಹೆಚ್ಚಿಸಲು ಪಶುಸಂಗೋಪನಾ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ

ಕೃಷಿ: ಕರಾವಳಿಯಲ್ಲಿ ತೆಂಗು, ಗಂಧ, ಗೇರು ಬೆಳೆ ಉತ್ತೇಜನ

2030ರ ಹೊತ್ತಿಗೆ ಜಾಗತಿಕ ಉತ್ಪನ್ನಗಳಲ್ಲಿ ಭಾರತದ ಗೇರು ಮತ್ತು ಕೋಕೊ

ಭಾರತ್‌ ವಿಸ್ತಾ ಬಹುಭಾಷಾ ಎಐ ಟೂಲ್‌ ಮೂಲಕ ಕೃಷಿ ಹಾಗೂ ಇನ್ನಿತರ ಕ್ಷೇತ್ರಗಳಿಗೆ ನೆರವು

25 ಕೋಟಿ ಜನ ಬಡತನದಿಂದ ಮುಕ್ತ: ನಿರ್ಮಲಾ

ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆಗೆ ಇನ್ನಷ್ಟು ಉತ್ತೇಜನ

ದಿವ್ಯಾಂಜನ್‌ ಯೋಜನೆ ಮೂಲಕ ಕೃತಕ ಕಾಲು ತಯಾರಿಕಾ ಘಟಕಗಳಿಗೆ ತಂತ್ರಜ್ಞಾನ ನೆರವು ಮೂಲಕ ಅವುಗಳನ್ನು ಮೇಲ್ದರ್ಜೆಗೆ ಏರಿಸಲು ಯೋಜನೆ

ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್‌-2 ರಾಂಚಿಯಲ್ಲಿ ಸ್ಥಾಪನೆ

'ಬ್ಯಾಂಕಿಂಗ್ ಫಾರ್ ವಿಕಸಿತ ಭಾರತ'ಕ್ಕಾಗಿ ಹೈ-ಲೆವೆಲ್ ಸಮಿತಿ ರಚನೆ. ಅಭಿವೃದ್ಧಿ ಸಂಪರ್ಕಕ್ಕಾಗಿ ನಗರಗಳ ಮಧ್ಯೆ 7 ಹೈ ಸ್ಪೀಡ್ ಕಾರಿಡಾರ್

ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್‌-2 ರಾಂಚಿಯಲ್ಲಿ ಸ್ಥಾಪನೆ

ಪೂರ್ವೋದಯ- ಪೂರ್ವ ಕರಾವಳಿಯಲ್ಲಿ ಕೈಗಾರಿಕಾ ಕಾರಿಡಾರ್‌.

ಈಶಾನ್ಯ ಭಾರತ- ಬುದ್ಧ ಸರ್ಕೀಟ್, ಅರುಣಾಚಲ, ಸಿಕ್ಕೀಂ, ಮೀಜೋರಾಂ, ತ್ರಿಪುರ, ಅಸ್ಸಾಂನಲ್ಲಿ

2027ರ ಆರ್ಥಿಕ ಸಾಲಿನಲ್ಲಿ ಎಂಎಸ್‌ಎಂಇಗಳ ಉತ್ತೇಜನಕ್ಕಾಗಿ ಸ್ವಾವಲಂಬಿ ಭಾರತ ನಿಧಿ ಅಡಿಯಲ್ಲಿ ₹4000 ಕೋಟಿ: ನಿರ್ಮಲಾ

ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ ₹1.43 ಲಕ್ಷ ಕೋಟಿ

ಹೊಸ ಆದಾಯ ತೆರಿಗೆ 2025ರ ಜುಲೈನಲ್ಲಿ ಮಂಡನೆ. ಸರಳೀಕೃತ ಆದಾಯ ತೆರಿಗೆ ಅಧಿಸೂಚನೆ ಶೀಘ್ರದಲ್ಲಿ ಪ್ರಕಟ

ಮೋಟಾರ್ ಆಕ್ಸಿಡೆಂಟ್‌ ಕ್ಲೇಮುಗಳಿಗೆ ತೆರಿಗೆ ಇಲ್ಲ

ವೈದ್ಯಕೀಯ ಪ್ರವಾಸೋದ್ಯಮಕ್ಕಾಗಿ ಐದು ಕೇಂದ್ರ ಸ್ಥಾಪನೆಗಾಗಿ ರಾಜ್ಯಗಳಿಗೆ ನೆರವು: ನಿರ್ಮಲಾ

ಬಜೆಟ್: ಬೆಂಗಳೂರು ಸೇರಿ ಪ್ರಮುಖ ನಗರಗಳನ್ನು ಬೆಸೆಯುವ ಹೈಸ್ಪೀಡ್ ರೈಲು ಕಾರಿಡಾರ್

ಬಜೆಟ್: ಬೆಂಗಳೂರು ಸೇರಿ ಪ್ರಮುಖ ನಗರಗಳನ್ನು ಬೆಸೆಯುವ ಹೈಸ್ಪೀಡ್ ರೈಲು ಕಾರಿಡಾರ್

ಹೊಸ ತೆರಿಗೆ ಪದ್ಧತಿ 2026ರ ಏಪ್ರಿಲ್‌ನಿಂದ ಜಾರಿ

ವಿದೇಶಗಳಲ್ಲಿ ಆಸ್ತಿ ಘೋಷಣೆಗೆ 6 ತಿಂಗಳ ಅವಕಾಶ

ಖಗೋಳ ಭೌತಶಾಸ್ತ್ರ ಮತ್ತು ಖಗೋಗಶಾಸ್ತ್ರ ಉತ್ತೇಜನಕ್ಕೆ ಟೆಲಿಸ್ಕಾಪ್ ಮೂಲಸೌಕರ್ಯದ ನವೀಕರಣ

ವಿದೇಶ ಯಾತ್ರೆ ಕೈಗೊಳ್ಳುವವರಿಗಾಗಿ ಈವರೆಗೂ ಇದ್ದ ಟಿಡಿಎಸ್ ಮೊತ್ತ ಶೇ 2ಕ್ಕೆ ಇಳಿಕೆ. ಅನಿವಾಸಿ ಭಾರತೀಯರ ಆಸ್ತಿ ಮಾರಾಟದ ಮೇಲಿನ ಟಿಡಿಎಸ್‌ ಕಡಿತ

ಲೋಥಾಲ್, ಹಸ್ತಿನಾಪುರ ಸೇರಿದಂತೆ 15 ಪುರಾತತ್ವ ಸ್ಥಳಗಳ ಅಭಿವೃದ್ಧಿಗೆ ಪ್ರಸ್ತಾಪ

ಒಟ್ಟು ಮಾರುಕಟ್ಟೆ ಸಾಲ ₹ 17.2 ಲಕ್ಷ ಕೋಟಿ: ನಿರ್ಮಲಾ

ಮುಂಬರುವ 2026-202ರಲ್ಲಿ ಸಾಲಯೇತರ ಆದಾಯದಿಂದ ಒಟ್ಟು ಖರ್ಚು ಕ್ರಮವಾಗಿ ₹ 36.5 ಲಕ್ಷ ಕೋಟಿ ಹಾಗೂ ₹ 53.5 ಲಕ್ಷ ಕೋಟಿಯಾಗಬಹುದು ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದ ಒಟ್ಟು ತೆರಿಗೆ ಆದಾಯ ₹ 28.7 ಕೋಟಿ ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆ ನೀಗಿಸಲು, ಸೆಕ್ಯೂರಿಟಿಗಳಿಂದ ₹ 11.7 ಲಕ್ಷ ಕೋಟಿ ಪಡೆಯಲಾಗುವುದು. ಉಳಿದ ಹಣವನ್ನು ಸಣ್ಣ ಉಳಿತಾಯ ಹಾಗೂ ಇತರ ಮೂಲಗಳಿಂದ ಸಂಗ್ರಹಿಸಲಾಗುವುದು. ಒಟ್ಟು ಮಾರುಕಟ್ಟೆ ಸಾಲ ₹ 17.2 ಲಕ್ಷ ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ.

ಆದಾಯ ತೆರಿಗೆ ವಿಳಂಬ ಪಾವತಿಗೆ ಶೇ 10ರಷ್ಟು ದಂಡ ಸಾಧ್ಯತೆ

ಮದ್ಯದ ಬೆಲೆ ಏರಿಕೆ

2026-27ನೇ ಸಾಲಿನಲ್ಲಿ ವಿತ್ತೀಯ ಕೊರಜೆ ಜಿಡಿಪಿಯ 4.4ರಷ್ಟಿತ್ತು. 2027ನೇ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು 4.3ರಷ್ಟಿರಲಿದೆ.

ಭಾರತದ ಹೊರಗಡೆ ನೆಲೆಸಿರುವ ವ್ಯಕ್ತಿಗಳಿಗೆ ಪಟ್ಟಿ ಮಾಡಲಾದ ದೇಶದ ಕಂಪನಿಗಳಲ್ಲಿ ಹೂಡಿಕೆ ಮಾಡಲು ಅನುಮತಿ

ಜಾಮ್‌ನಗರದಲ್ಲಿ ಆಯುಷ್ ಔಷಧಾಯಲಗಳು, ಔಷಧ ಪರೀಕ್ಷಾ ಪ್ರಯೋಗಾಲಯಗಳು, ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಹಣಕಾಸು ಸಚಿವೆ ಪ್ರಸ್ತಾಪ

ಸಿಗರೇಟು ಮೇಲೆ ತೆರಿಗೆ ಹೆಚ್ಚಿಸಿದ ಕೇಂದ್ರ

7 ಅಪರೂಪದ ಕಾಯಿಲೆಗಳ ಔಷಧಗಳ ಬೆಲೆ ಇಳಿಕೆ. ಕ್ಯಾನ್ಸರ್‌ಗೆ ಸಂಬಂಧಿಸಿದ 17 ಪ್ರಮುಖ ಔಷಧಗಳ ಮೇಲಿನ ತೆರಿಗೆ ಕಡಿತ

ಆರ್ಥಿಕ ಸುಸ್ಥಿರತೆ, ಅಭಿವೃದ್ಧಿ ಕಡೆಗೆ ಒತ್ತು ನೀಡುವು ಉದ್ದೇಶದೊಂದಿಗೆ ಹಲವು ಘೋಷಣೆಗಳ ಮೂಲಕ ಬಜೆಟ್ ಭಾಷಣೆ ಕೊನೆಗೊಳಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.

ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ನಿರ್ಮಲಾ ಘೋಷಣೆ

ಬಜೆಟ್‌ನಲ್ಲಿ ಪ್ರಮುಖ ಘೋಷಣೆಗಳು

Union Budget 2026; ಬಜೆಟ್ ಮುಖ್ಯಾಂಶಗಳು ಬಜೆಟ್: ಬೆಂಗಳೂರು ಸೇರಿ ಪ್ರಮುಖ ನಗರಗಳನ್ನು ಬೆಸೆಯುವ ಹೈಸ್ಪೀಡ್ ರೈಲು ಕಾರಿಡಾರ್ಬಜೆಟ್‌ನಲ್ಲಿ 'ಕರ್ತವ್ಯ ಮಂತ್ರ' ಪಠನೆ : ಸರ್ವರಿಗೂ ವಿತ್ತ ಸಚಿವೆಯ ಆದ್ಯತೆ Union Budget 2026: ದೇಶದ ಪ್ರತಿ ಜಿಲ್ಲೆಗೆ ಬಾಲಕಿಯರ ಹಾಸ್ಟೆಲ್‌ ಘೋಷಣೆGST collections: ಜನವರಿಯಲ್ಲಿ ₹1.93 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹUnion Budget 2026: ಎಂಸಿಎಕ್ಸ್ ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಕುಸಿತBudget 2026: ತಮಿಳುನಾಡಿನ ಕಾಂಚೀವರಂ ಸೀರೆಯುಟ್ಟು ಬಂದ ನಿರ್ಮಲಾ ಸೀತಾರಾಮನ್ಬಜೆಟ್ 2026 | ವಿದೇಶಿ ಪ್ರವಾಸ, ಶಿಕ್ಷಣ, ಚಿಕಿತ್ಸೆ ಅಗ್ಗ: ಟಿಸಿಎಸ್‌ನಲ್ಲಿ ಇಳಿಕೆದಾಖಲೆಯ ಸತತ 9ನೇ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮ‌ನ್: ಇವರೇ ಮೊದಲುUnion Budget 2026: ಆರ್ಥಿಕ ಬೆಳವಣಿಗೆ, ಕುಟುಂಬ ಆದಾಯದ ಹೆಚ್ಚಳವೇ ನಿರ್ಮಲಾ ಆಯವ್ಯಯದ ಸೂತ್ರ

ಸುಮಾರು ಒಂದು ಗಂಟೆ 25 ನಿಮಿಷಗಳ ಕಾಲ ಬಜೆಟ್ ಭಾಷಣ ಮಂಡಿಸಿದ ನಿರ್ಮಲಾ ಸೀತಾರಾಮನ್

ಜನಪರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರನ್ನು ನಾನು ಅಭಿನಂದಿಸುತ್ತೇನೆ. ಬಂಡವಾಳ ವೆಚ್ಚಕ್ಕಾಗಿ ₹1.4 ಲಕ್ಷ ಕೋಟಿ ಹಂಚಿಕೆ ಮಾಡುವುದರಿಂದ ರಾಜ್ಯಗಳಿಗೆ ನೆರವಾಗಲಿದೆ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ

ನೀರಸ ಬಜೆಟ್: ಕಾಂಗ್ರೆಸ್ ಪ್ರತಿಕ್ರಿಯೆ

ಕೇಂದ್ರ ಬಜೆಟ್ ಅತ್ಯಂತ ನಿರಾಸೆಯನ್ನುಂಟು ಮಾಂಡಿದೆ ಎಂದು ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಬಜೆಟ್ ಭಾಷಣ ಪಾರದರ್ಶಕವಾಗಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಬಜೆಟ್ 2026: ಏರಿಕೆ-ಇಳಿಕೆ

Union Budget 2026: ಯಾವುದೆಲ್ಲ ಇಳಿಕೆ, ಯಾವುದೆಲ್ಲ ಏರಿಕೆ?

ರೂಪಾಯಿ ಜಮೆ ಹೀಗೆ...

ಕೇಂದ್ರ ಬಜೆಟ್ ಬಗ್ಗೆ ಶಶಿ ತರೂರ್ ಪ್ರತಿಕ್ರಿಯೆ

ಚುನಾವಣಾ ಹೊಸ್ತಿಲಲ್ಲಿರುವ ಕೇರಳ ಹಾಗೂ ತಮಿಳುನಾಡಿನ ಹೆಸರುಗಳು ಹೆಚ್ಚೆಚ್ಚು ಉಲ್ಲೇಖ ಆಗಬಹುದು ಎಂದು ಅಂದುಕೊಂಡಿದ್ದೆ. ಆದರೆ ಹಾಗಾಗಲಿಲ್ಲ: ಶಶಿ ತರೂರ್ ಪ್ರತಿಕ್ರಿಯೆ

ಬಜೆಟ್ ಬಗ್ಗೆ ನಾಳೆ ಸಂಸತ್ತಿನಲ್ಲಿ ಪ್ರತಿಕ್ರಿಯಿಸುತ್ತೇನೆ ಎಂದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆಯ ಸತತ 9ನೇ ಬಾರಿಗೆ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಸುಸ್ಥಿರ ಆರ್ಥಿಕ ಬೆಳವಣಿಗೆ, ಜನರ ಬೇಡಿಕೆಗಳನ್ನು ಈಡೇರಿಸುವುದು ಮತ್ತು ಸಬ್ ಕಾ ಸಾಥ್ ಹಾಗೂ ಸಬ್ ಕಾ ವಿಕಾಸ್ ಎಂಬ ಮೂರು ಕರ್ತವ್ಯಗಳನ್ನು ಉಲ್ಲೇಖಿಸುತ್ತಾ 2026-27ನೇ ಸಾಲಿನ ಬಜೆಟ್ ಅನ್ನು ಮಂಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani