Dailyhunt Logo
  • Light mode
    Follow system
    Dark mode
    • Play Story
    • App Story
ವಿದ್ಯುತ್ ಸ್ಥಾವರಗಳ ರಕ್ಷಣೆಗೆ ಮಾನವ ಸರಪಳಿ ನಿರ್ಮಿಸಲು ಇರಾನ್ ಕರೆ

ವಿದ್ಯುತ್ ಸ್ಥಾವರಗಳ ರಕ್ಷಣೆಗೆ ಮಾನವ ಸರಪಳಿ ನಿರ್ಮಿಸಲು ಇರಾನ್ ಕರೆ

ದುಬೈ: ಇರಾನ್‌ನ ವಿವಿಧ ಭಾಗಗಳಲ್ಲಿ ಮಂಗಳವಾರ ನಡೆದ ವಾಯುದಾಳಿಗೆ ಕನಿಷ್ಠ 15 ಮಂದಿ ಸಾವಿಗೀಡಾಗಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಸೌದಿ ಅರೇಬಿಯಾ ಹಾಗೂ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಿದೆ. ಸೌದಿ ಅರೇಬಿಯಾದಲ್ಲಿ ಪ್ರಮುಖ ಸೇತುವೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಬೆದರಿಕೆಗಳಿಗೆ ಅಂಜುವ ಪ್ರಶ್ನೆಯೇ ಇಲ್ಲ: ಡೊನಾಲ್ಡ್ ಟ್ರಂಪ್‌ಗೆ ಇರಾನ್ ತಿರುಗೇಟು

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಟ್ರಂಪ್ ಬೆದರಿಕೆ: ವಿದ್ಯುತ್ ಸ್ಥಾವರಗಳ ಸುತ್ತ ಮಾನವ ಸರಪಳಿ ನಿರ್ಮಿಸಲು ಇರಾನ್ ಕರೆ

ಒಂದು ಸಾಲಿನಲ್ಲಿಟ್ರಂಪ್ ಅವರ ದಾಳಿಯ ಎಚ್ಚರಿಕೆಯ ಹಿನ್ನೆಲೆಯಲ್ಲಿ, ತಮ್ಮ ವಿದ್ಯುತ್ ಸ್ಥಾವರಗಳ ರಕ್ಷಣೆಗೆ ಮಾನವ ಸರಪಳಿ ನಿರ್ಮಿಸುವಂತೆ ಇರಾನ್ ತನ್ನ ನಾಗರಿಕರಿಗೆ ಕರೆ ನೀಡಿದೆ.ಪ್ರಮುಖ ಸಂಗತಿಗಳು• ಟ್ರಂಪ್ ಅವರ ಗಂಭೀರ ಬೆದರಿಕೆಹೊರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರ ಹಾಗೂ ಸೇತುವೆಗಳ ಮೇಲೆ ದಾಳಿ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.• ಮಾನವ ಸರಪಳಿ ನಿರ್ಮಾಣಕ್ಕೆ ಕರೆತಮ್ಮ ಪ್ರಮುಖ ವಿದ್ಯುತ್ ಸ್ಥಾವರಗಳನ್ನು ಅಮೆರಿಕದ ದಾಳಿಯಿಂದ ರಕ್ಷಿಸಿಕೊಳ್ಳಲು ಮಾನವ ಸರಪಳಿ ನಿರ್ಮಿಸುವಂತೆ ಇರಾನ್ ಸರ್ಕಾರ ದೇಶದ ಯುವಕರಿಗೆ ಕರೆ ನೀಡಿದೆ.• ಪ್ರತೀಕಾರ ಮತ್ತು ಸೇತುವೆಗಳ ಬಂದ್ಇರಾನ್ ತನ್ನ ಪ್ರತೀಕಾರದ ದಾಳಿಯನ್ನು ಸೌದಿ ಅರೇಬಿಯಾ ಮತ್ತು ಇಸ್ರೇಲ್ ಮೇಲೆ ನಡೆಸಿದ್ದು, ಕಿಂಗ್ ಫಹದ್ ಸೇತುವೆಯನ್ನು ಭದ್ರತಾ ಕಾರಣಗಳಿಗಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ.• ಸಂಭವಿಸಿರುವ ಸಾವು-ನೋವಿನ ವರದಿಯುದ್ಧದ ಪರಿಣಾಮವಾಗಿ ಇರಾನ್‌ನಲ್ಲಿ 1,900 ಜನರು ಮತ್ತು ಲೆಬನಾನ್‌ನಲ್ಲಿ 1,400 ಮಂದಿ ಮೃತಪಟ್ಟಿದ್ದಾರೆ, ಅಲ್ಲದೆ 10 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.• ಇಸ್ರೇಲ್‌ನ ಎಚ್ಚರಿಕೆರೈಲು ಮಾರ್ಗಗಳ ಮೇಲೆ ಇರಾನ್ ದಾಳಿ ನಡೆಸಬಹುದು ಎಂಬ ಭೀತಿಯಿಂದ, ಇರಾನ್ ನಾಗರಿಕರು ರೈಲು ಪ್ರಯಾಣ ಮಾಡದಂತೆ ಇಸ್ರೇಲ್ ಎಚ್ಚರಿಕೆ ನೀಡಿದೆ.ಪ್ರಮುಖ ಅಂಕಿಅಂಶಗಳು1,900ಇರಾನ್‌ನಲ್ಲಿ ಮೃತಪಟ್ಟವರ ಸಂಖ್ಯೆ1,400ಲೆಬನಾನ್‌ನಲ್ಲಿ ಮೃತಪಟ್ಟವರ ಸಂಖ್ಯೆ10 ಲಕ್ಷನಿರಾಶ್ರಿತರ ಸಂಖ್ಯೆ25 ಕಿ.ಮೀಕಿಂಗ್ ಫಹದ್ ಸೇತುವೆಯ ಉದ್ದಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಹೊರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ವಿದ್ಯುತ್‌ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದು, ‌ರಕ್ಷಣೆಗೆ ಸ್ಥಾವರಗಳ ಸುತ್ತ ಮಾನವ ಸರಪಳಿ ನಿರ್ಮಿಸಿ ಎಂದು ಯುವಕರಿಗೆ ಇರಾನ್ ಕರೆಕೊಟ್ಟಿದೆ.

ಹೊರ್ಮುಜ್ ಜಲಸಂಧಿಯನ್ನು ಮಂಗಳವಾರ ರಾತ್ರಿ 8 ಗಂಟೆಯೊಳಗೆ (ಬುಧವಾರ ಮುಂಜಾಬೆ 5.30 ಭಾರತದ ಸಮಯ) ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರ ಹಾಗೂ ಸೇತುವೆ ಮೇಲೆ ದಾಳಿ ನಡೆಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಈ ಸಮಯ ಸಮೀಪಿಸುತ್ತಿದ್ದಂತೆಯೇ ಮಾನವ ಸರಪಳಿ ನಿರ್ಮಿಸಲು ಇರಾನ್ ಕರೆ ನೀಡಿದೆ.

'ಇಂದು ರಾತ್ರಿಯಲ್ಲಿ ಇಡೀ ದೇಶವನ್ನು ನಾಶ ಮಾಡುತ್ತೇವೆ' ಎಂದು ಟ್ರಂಪ್ ಬೆದರಿಸಿದ್ದಾರೆ. ಈಗಾಗಲೇ ಇರಾನ್‌ಗೆ ಸಾಕಷ್ಟು ಸಮಯಾವಾಕಾಶ ನೀಡಿದ್ದೇವೆ ಎಂದೂ ಅವರು ಹೇಳಿದ್ದಾರೆ.

Explainer | ಇರಾನ್ ಯುದ್ಧಕ್ಕೆ ಹೂಥಿ ಪ್ರವೇಶ: ಎಲ್ಲರ ಚಿತ್ತ ಮಂಡೇಬ್ ಜಲಸಂಧಿಯತ್ತ

ಈ ನಡುವೆ ರೈಲು ಪ್ರಯಾಣ ಮಾಡಬೇಡಿ ಎಂದು ಇರಾನ್ ನಾಗರಿಕರಿಗೆ ಇಸ್ರೇಲ್ ಎಚ್ಚರಿಕೆ ನೀಡಿದೆ. ಇದು ರೈಲು ಮಾರ್ಗಗಳ ಮೇಲೆ ದಾಳಿ ನಡೆಸಬಹುದು ಎನ್ನುವ ಆತಂಕ ಸೃಜಿಸಿದೆ.

ಇರಾನ್‌ ಪ್ರತೀಕಾರದ ದಾಳಿಗೆ ಸೌದಿ ಅರೇಬಿಯಾ ಹಾಗೂ ಬಹರೇನ್ ಸಂಪರ್ಕಿಸುವ ಕಿಂಗ್‌ ಫಹದ್ ಸೇತುವೆಯನ್ನು ಕೆಲ ಗಂಟೆಗಳು ಮುಚ್ಚಲಾಗಿತ್ತು. 25 ಕಿ.ಮೀ ಉದ್ದದ ಈ ಸೇತುವೆ ಉಭಯ ದೇಶಗಳನ್ನು ಸಂಪರ್ಕಿಸುವ ಏಕೈಕ ರಸ್ತೆ ಮಾರ್ಗವೂ ಹೌದು. ಅಮೆರಿಕ ಸೇನಾ ನೆಲೆ ಕೂಡ ಅದೇ ಪ್ರದೇಶದಲ್ಲಿದೆ.

ಟೆಲ್ ಅವಿವ್ ಹಾಗೂ ಎಯಿಲಾಯತ್ ನಗರಗಳನ್ನು ಗುರಿಯಾಗಿಸಿಕೊಂಡು ಇರಾನ್‌ನ ಕ್ಷಿಪಣಿ ದಾಳಿ ಮುಂದುವರಿದಿದೆ.

ಯುದ್ಧ ಪ್ರಾರಂಭವಾಗಿನಿಂದ ಇರಾನ್‌ನಲ್ಲಿ 1,900 ಮಂದಿಯನ್ನು ಕೊಲ್ಲಲಾಗಿದೆ. ಆದರೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಲೆಬನಾನ್‌ನಲ್ಲಿ ಕನಿಷ್ಠ 1,400 ಮಂದಿ ಕೊಲ್ಲಲ್ಪಟ್ಟಿದ್ದಾರೆ. 10 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ.

(ಎಸೋಸಿಯೇಟ್ ಪ್ರೆಸ್ ಹಾಗೂ ರಾಯಿಟರ್ಸ್ ವರದಿ)

ನೆತನ್ಯಾಹು ಮಾತು ಕೇಳಿದರೆ ಪಶ್ಚಿಮ ಏಷ್ಯಾ ಹೊತ್ತಿ ಉರಿಯಲಿದೆ: ಟ್ರಂಪ್‌ಗೆ ಇರಾನ್
Dailyhunt
Disclaimer: This content has not been generated, created or edited by Dailyhunt. Publisher: Prajavani