Dailyhunt Logo
  • Light mode
    Follow system
    Dark mode
    • Play Story
    • App Story
ಯುಎಇ | ಇತ್ತಿಹಾದ್ ರೈಲು ಸೇವೆ ಆರಂಭ: ಮೊದಲ ದಿನವೇ ಭಾರಿ ಪ್ರತಿಕ್ರಿಯೆ

ಯುಎಇ | ಇತ್ತಿಹಾದ್ ರೈಲು ಸೇವೆ ಆರಂಭ: ಮೊದಲ ದಿನವೇ ಭಾರಿ ಪ್ರತಿಕ್ರಿಯೆ

ಬುಧಾಬಿ: ಯುಎಇಯ ರಾಷ್ಟ್ರೀಯ ಪ್ರಯಾಣಿಕರ ರೈಲು ಸೇವೆಯಾಗಿರುವ ಇತ್ತಿಹಾದ್ ರೈಲು ಮಂಗಳವಾರ ಅಧಿಕೃತವಾಗಿ ಆರಂಭಗೊಂಡಿದ್ದು, ಮೊದಲ ದಿನದ ಕಾರ್ಯಾಚರಣೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.

ಬೆಳಿಗ್ಗೆ 5.34ಕ್ಕೆ ಫುಜೈರಾದಿಂದ ಹೊರಟ ಉದ್ಘಾಟನಾ ರೈಲು ನಿಗದಿತ ಸಮಯಕ್ಕಿಂತ ಮೊದಲೇ ಅಬುಧಾಬಿಯ ಮೊಹಮ್ಮದ್ ಬಿನ್ ಜಾಯೆದ್ ಸಿಟಿ ನಿಲ್ದಾಣವನ್ನು ತಲುಪಿತು.

ಇತ್ತಿಹಾದ್ ರೈಲು: ಅಬುಧಾಬಿ-ಫುಜೈರಾ ನಡುವೆ ಕೇವಲ 90 ನಿಮಿಷಗಳ ಪ್ರಯಾಣ!


ಇತ್ತಿಹಾದ್ ರೈಲು

ಮೊದಲ ದಿನ ಒಟ್ಟು ಆರು ರೈಲುಗಳು ಸಂಚರಿಸಲಿವೆ. ಮುಂದಿನ ಕೆಲವು ದಿನಗಳಲ್ಲಿ ಸಂಚರಿಸಲಿರುವ ಹೆಚ್ಚಿನ ರೈಲುಗಳ ಬಹುತೇಕ ಎಲ್ಲ ಆಸನಗಳು ಈಗಾಗಲೇ ಭರ್ತಿಯಾಗಿವೆ.

'ಫುಜೈರಾದಿಂದ ಮೊದಲ ರೈಲು ಹೊರಟ ಕ್ಷಣದಿಂದ ರಾಷ್ಟ್ರೀಯ ಕನಸೊಂದು ಜನರ ದೈನಂದಿನ ಬದುಕಿನ ಭಾಗವಾಗಿದೆ. ಇದು ಜನರನ್ನು, ಅವಕಾಶಗಳನ್ನು ಮತ್ತು ದೇಶದ ವಿವಿಧ ಭಾಗಗಳನ್ನು ಹೊಸ ರೀತಿಯಲ್ಲಿ ಸಂಪರ್ಕಿಸುತ್ತದೆ. ಇಂದಿನ ಪ್ರಯಾಣಿಕರು ಈ ಐತಿಹಾಸಿಕ ಆರಂಭದ ಸಾಕ್ಷಿಗಳಾಗಿದ್ದಾರೆ' ಎಂದು ಇತ್ತಿಹಾದ್ ರೈಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜ್ಜಾ ಅಲ್ ಸುವೈದಿ ಹೇಳಿದ್ದಾರೆ.

ಯುಎಇ: ಶಾರ್ಜಾ ಇಸ್ಲಾಮಿಕ್ ಬ್ಯಾಂಕ್ ಡ್ರಾದಲ್ಲಿ ₹4.6 ಕೋಟಿ ಬಹುಮಾನ ಗೆದ್ದ ಭಾರತೀಯ

ಉದ್ಘಾಟನಾ ರೈಲಿನಲ್ಲಿ ಪ್ರಯಾಣಿಸಲು ಅನೇಕರು ವಿಶೇಷವಾಗಿ ಸಿದ್ಧತೆ ಮಾಡಿಕೊಂಡಿದ್ದರು. ದುಬೈ ನಿವಾಸಿ ಅಮೀನಾ ಸಲೀಂ ಅವರು ಸ್ನೇಹಿತ ಫಾರಿಸ್ ಜೊತೆ ರಾತ್ರಿ 3 ಗಂಟೆಗೆ ಫುಜೈರಾಗೆ ತೆರಳಿ, ಮೊದಲ ರೈಲಿನಲ್ಲಿ ಪ್ರಯಾಣಿಸಿದರು. ಈ ಐತಿಹಾಸಿಕ ಕ್ಷಣದ ಭಾಗವಾಗಲು ಅವರು ಕೆಲಸಕ್ಕೂ ರಜೆ ಪಡೆದಿದ್ದರು. ಅದೇ ದಿನ ಸಂಜೆ 6 ಗಂಟೆಯ ರೈಲಿನಲ್ಲಿ ಮರಳಿ ಫುಜೈರಾಗೆ ಬರಲು ಟಿಕೆಟ್ ಕಾಯ್ದಿರಿಸಿದ್ದರು.

ಈ ಪ್ರಯಾಣದಲ್ಲಿ ಹಜರ್ ಪರ್ವತಗಳ ನಡುವೆ ಮೂಡಿದ ಸೂರ್ಯೋದಯದ ದೃಶ್ಯ ತಮ್ಮ ಜೀವನದ ಮರೆಯಲಾಗದ ಅನುಭವ ಎಂದು ಹಲವರು ಹೇಳಿದ್ದಾರೆ.

ಹೊಸ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಲು ಪಟ್ಟ ಸಾಹಸ, ರೈಲಿನಲ್ಲಿರುವ ಸೌಲಭ್ಯಗಳು ಹಾಗೂ ವಿನ್ಯಾಸದ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಧಾರ: ಖಲೀಜ್ ಟೈಮ್ಸ್

ಯುರೋಪ್‌ನಲ್ಲಿ ಉರಿ ಬಿಸಿಲು, ಸಾವಿರಾರು ಮಂದಿ ಸಾವು: ಏನಿದು 'ಹೀಟ್ ಡೋಮ್'?
Dailyhunt
Disclaimer: This content has not been generated, created or edited by Dailyhunt. Publisher: Prajavani