ಅಬುಧಾಬಿ: ಯುಎಇಯಲ್ಲಿ ನೆಲೆಸಿರುವ ಭಾರತೀಯ ಅನಿವಾಸಿಯೊಬ್ಬರು ಶಾರ್ಜಾ ಇಸ್ಲಾಮಿಕ್ ಬ್ಯಾಂಕ್ (ಎಸ್‌ಐಬಿ) ನಡೆಸಿದ 'ಮಿಲಿಯನೇರ್' ಅಭಿಯಾನದ ಡ್ರಾದಲ್ಲಿ 20 ಲಕ್ಷ ದಿರ್ಹಮ್ (ಸುಮಾರು ₹4.6 ಕೋಟಿ) ಬಹುಮಾನ ಗೆದ್ದಿದ್ದಾರೆ.
ಕೇರಳಂ ಮೂಲದ 34 ವರ್ಷದ ಶಾಜೀರ್ ವೆಂಗಾ ಅವರೇ ಡ್ರಾನಲ್ಲಿ ಹಣ ಗೆದ್ದ ಅದೃಷ್ಟಶಾಲಿ. ಸುಮಾರು ಎರಡು ತಿಂಗಳ ಹಿಂದಷ್ಟೇ ಶಾರ್ಜಾ ಇಸ್ಲಾಮಿಕ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದಿದ್ದರು. ಬ್ಯಾಂಕ್‌ನ ಡಿಜಿಟಲ್ ಆಯಪ್ ಮೂಲಕ ಖಾತೆ ತೆರೆದಕೆಲವೇ ವಾರಗಳಲ್ಲಿ ನಡೆದ ಡ್ರಾದಲ್ಲಿ ಅವರು ಅದೃಷ್ಟಶಾಲಿಯಾಗಿ ಹೊರಹೊಮ್ಮಿದ್ದಾರೆ.
'ಶಾರ್ಜಾ ಇಸ್ಲಾಮಿಕ್ ಬ್ಯಾಂಕ್‌ನ ಮಿಲಿಯನೇರ್ ಅಭಿಯಾನದ ಬಗ್ಗೆ ಸಾಕಷ್ಟು ಓದಿದ್ದೆ. ಒಂದು ದಿನ ನಾನು ಕೂಡ ವಿಜೇತನಾಗಬೇಕು ಎಂಬ ಕನಸಿತ್ತು. ಆದರೆ ಇಷ್ಟು ಬೇಗ ಅದು ನನಸಾಗುತ್ತದೆ ಎಂದು ಊಹಿಸಿರಲಿಲ್ಲ' ಎಂದು 'ಖಲೀಜ್ ಟೈಮ್ಸ್' ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಬಹುಮಾನ ತಮ್ಮ ಜೀವನವನ್ನೇ ಬದಲಾಯಿಸಲಿದೆ. ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಹಾಗೂ ಭಾರತದಲ್ಲಿರುವ ಕುಟುಂಬವನ್ನು ಯುಎಇಗೆ ಕರೆತರಲು ಈ ಮೊತ್ತ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ದುಬೈ ಕನ್ನಡಿಗರ ಕೂಟಕ್ಕೆ ಎಂ.ಕೆ. ಅರುಣ್‌ಕುಮಾರ್ ಆಯ್ಕೆ'ಒಂದು ಕಾಲದಲ್ಲಿ ಕನಸಾಗಿದ್ದ ವಿಷಯವನ್ನು ಶಾರ್ಜಾ ಇಸ್ಲಾಮಿಕ್ ಬ್ಯಾಂಕ್ ನನಸಾಗಿಸಿದೆ' ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಡ್ರಾದಲ್ಲಿ ಎಮಿರೇಟ್ಸ್‌ನ ಮೊಝಾ ಬುಟ್ಟಿ ಎಂಬುವವರಿಗೆ ಐಷಾರಾಮಿ ಬಿಎಂಡಬ್ಲ್ಯೂ ಕಾರು ಲಭಿಸಿದ್ದು, ಇನ್ನೂ 40 ಮಂದಿ ನಗದು ಬಹುಮಾನ ಪಡೆದಿದ್ದಾರೆ.
ಉಳಿತಾಯವನ್ನು ಉತ್ತೇಜಿಸುವುದರ ಜೊತೆಗೆ ಗ್ರಾಹಕರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಮತ್ತು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಈ ಅಭಿಯಾನ ನೆರವಾಗುತ್ತಿದೆ ಎಂದು ಶಾರ್ಜಾ ಇಸ್ಲಾಮಿಕ್ ಬ್ಯಾಂಕ್‌ನ ರೀಟೇಲ್ ಬ್ಯಾಂಕಿಂಗ್ ವಿಭಾಗದ ಮುಖ್ಯಸ್ಥ ನಬೀಲ್ ಅಬು ಅಲ್‌ವಾನ್ ಹೇಳಿದ್ದಾರೆ.
ಮುಂದಿನ ಡ್ರಾದಲ್ಲಿ ಎರಡು 10 ಲಕ್ಷ ದಿರ್ಹಮ್‌ಗಳ ಬಹುಮಾನ ಘೋಷಿಸಲಾಗಿದ್ದು, ಒಂದನ್ನು ಯುಎಇ ಪ್ರಜೆಗಳಿಗೆ ಹಾಗೂ ಮತ್ತೊಂದನ್ನು ಎಲ್ಲ ದೇಶಗಳ ಗ್ರಾಹಕರಿಗೆ ಮೀಸಲಿರಿಸಲಾಗಿದೆ. ಇದರ ಜತೆಗೆ 40 ನಗದು ಬಹುಮಾನಗಳೂ ಇರಲಿವೆ.
ಇತ್ತಿಹಾದ್ ರೈಲು: ಅಬುಧಾಬಿ-ಫುಜೈರಾ ನಡುವೆ ಕೇವಲ 90 ನಿಮಿಷಗಳ ಪ್ರಯಾಣ!'ಮಿಲಿಯನೇರ್' ಅಭಿಯಾನ ಎಂದರೇನು?
ಇದು ಶಾರ್ಜಾ ಇಸ್ಲಾಮಿಕ್ ಬ್ಯಾಂಕ್ ತನ್ನ ಗ್ರಾಹಕರಲ್ಲಿ ಉಳಿತಾಯದ ಅಭ್ಯಾಸವನ್ನು ಉತ್ತೇಜಿಸುವ ಉದ್ದೇಶದಿಂದ ನಡೆಸುತ್ತಿರುವ ವಿಶೇಷ ಬಹುಮಾನ ಯೋಜನೆ. ಅರ್ಹ ಉಳಿತಾಯ ಖಾತೆದಾರರನ್ನು ನಿಗದಿತ ಅವಧಿಯಲ್ಲಿ ಡ್ರಾಗೆ ಸೇರಿಸಲಾಗುತ್ತದೆ. ವಿಜೇತರಿಗೆ ಲಕ್ಷಾಂತರ ದಿರ್ಹಮ್‌ಗಳ ನಗದು ಬಹುಮಾನ, ಐಷಾರಾಮಿ ಕಾರುಗಳು ಸೇರಿದಂತೆ ವಿವಿಧ ಬಹುಮಾನ ನೀಡಲಾಗುತ್ತದೆ.
ಆಧಾರ: ಖಲೀಜ್ ಟೈಮ್ಸ್
ಶಾರ್ಜಾ| ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ, 7 ಜನರಿಗೆ ಗಾಯ
