ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare Serial) ಸುನಿ ಕಥೆ ಮುಗಿಸಲು ಜೈದೇವ್ ಹರಸಾಹಸ ಪಡುತ್ತಿದ್ದಾನೆ. ಇನ್ನೊಂದು ಕಡೆ ಆನಂದ್ ಮಾಡಿದ ಎಡವಟ್ಟಿನಿಂದಾಗಿ ಭೂಮಿಕಾ ಕೂಡ ಗೌತಮ್ (Bhoomika Gowtham) ಮುಂದೆ ಪ್ರೇಮ ನಿವೇದನೆ ಮಾಡಿದ್ದಾಳೆ.
ಈ ಕ್ಯೂಟ್ ಜೋಡಿಯ ಅವತಾರ ಕಂಡು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ದಿಯಾ ಮಾಸ್ಟರ್ ಪ್ಲಾನ್
ಕೆಡಿ ಮಾವನಿಂದಾಗಿ ಆನಂದ್‌ಗೆ ಸುನಿಯನ್ನು ಕೊಲೆ ಮಾಡುತ್ತಿರುವ ಜೈದೇವ್ ಪ್ಲ್ಯಾನ್ ಬಗ್ಗೆ ಗೊತ್ತಾಗತ್ತೆ. ದಿಯಾ ಕೂಡ ತನ್ನ ಮಾಸ್ಟರ್ ಪ್ಲ್ಯಾನ್‌ನಿಂದ ಮಾವನನ್ನು ರೌಡಿಗಳಿಂದ ಬಿಡಿಸುತ್ತಾಳೆ. ಆದರೆ ಲೊಕೇಶನ್ ಆಕ್ಸೆಸ್ ಮೊಬೈಲ್‌ಗೆ ಹಾಕಿರುತ್ತಾಳೆ, ಹೀಗಾಗಿ ಆನಂದ್ ಮನೆಯವರೆಲ್ಲರನ್ನೂ ಅಜ್ಜಿ ಮನೆಗೆ ಸೀಕ್ರೆಟ್ ಆಗಿ ಕರೆದುಕೊಂಡು ಹೋಗಿರುವ ವಿಚಾರ ದಿಯಾಗೆ ಗೊತ್ತಾಗುತ್ತೆ. ಜೈದೇವ್ ಕೂಡ ಈ ಬಗ್ಗೆ ತಿಳಿದ ಕೂಡಲೇ ರೌಡಿಗಳನ್ನು ಸುನಿ ಕಥೆ ಮುಗಿಸಲು ಛೂ ಬಿಟ್ಟಿರುತ್ತಾನೆ.
Bhagyalakshmi Serial: ಶ್ರೇಷ್ಠಾ ಕಿಡ್ನಾಪ್; ತಾಂಡವ್ ಅಸಲಿ ಬಣ್ಣ ಬಯಲಾಗೋ ಹೊತ್ತಲ್ಲೇ ಭಾಗ್ಯಗೆ ಶಾಕ್!
ಆನಂದ್ ಕಣ್ಗಾವಲು
ಎಲ್ಲ ರಾತ್ರಿ ಮಲಗಿರುವಾಗ ಆನಂದ್ ಮಾತ್ರ ತುಂಬಾ ಎಚ್ಚರದಿಂದ ಇರುತ್ತಾನೆ. ಸುನಿ ಮಲಗಿರುವಾಗು ರೌಡಿ ಇನ್ನೇನು ಸಾಯಿಸಬೇಕು ಅನ್ನೋ ಅಷ್ಟರಲ್ಲಿ ಆನಂದ್ ಬಂದೂಕು ಹಿಡಿದು ರೌಡಿ ಮುಂದೆ ನಿಂತಿದ್ದಾನೆ. ಆನಂದ್ ರೌಡಿಗಳನ್ನು ಸೆದೆ ಬಡಿಯುತ್ತಾನಾ? ಸುನಿ ಇದರಿಂದ ಬಚಾವ್ ಆಗ್ತಾನಾ? ಆನಂದ್ ಮುಂದಿನ ನಡೆಯೇನು? ಗೌತಮ್ ಇಷ್ಟೂ ಗೊತ್ತಾದಮೇಲೂ ಜೈದೇವ್ ಸುಮ್ಮನೆ ಬಿಡ್ತಾನಾ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ರಾತ್ರಿಯ ಮುದ್ದು ಮಾತು ಭೂಮಿಕಾಗೆ ನಾಚಿಕೆ ಹೊತ್ತು ತಂತು!
ಮತ್ತೊಂದು ಕಡೆ ಆನಂದ್ ಮಾಡಿದ ಎಡವಟ್ಟಿನಿಂದಾಗಿ ಭೂಮಿಕಾ ನಶೆಯಲ್ಲಿ ತೇಲಿದ್ದಾಳೆ. ಮಾರ್ನಿಂಗ್ ಎದ್ದ ಕೂಡಲೇ ತಲೆ ನೋವು ಅಂತ ಗೌತಮ್ ಮುಂದೆ ಹೇಳಿದ್ದಾಳೆ. ಆ ಬಳಿಕ ಭೂಮಿಕಾ, ಗೌತಮ್ ಮುಂದೆ ಮಾತಾಡಿರುವ ಬಗ್ಗೆ ಎಲ್ಲವನ್ನೂ ಗೌತಮ್ ವಿವರಿಸುತ್ತಾನೆ. ಈ ಇಬ್ಬರ ಜೋಡಿಯ ಕ್ಯೂಟ್ ಮಾತುಕತೆ ನೋಡಿ ಪ್ರೇಕ್ಷಕರು ಸಖತ್ ಖುಷ್ ಆಗಿದ್ದಾರೆ.

