Dailyhunt Logo
  • Light mode
    Follow system
    Dark mode
    • Play Story
    • App Story
Amruthadhaare Serial: ಶಕುಂತಲಾಳಿಗೆ ತಲೆ ನೋವಾದ ಕೆಡಿ ಜೈದೇವ್‌; ಕಿಡಿ ಕಾರಿದ ಪಾರ್ಥ

Amruthadhaare Serial: ಶಕುಂತಲಾಳಿಗೆ ತಲೆ ನೋವಾದ ಕೆಡಿ ಜೈದೇವ್‌; ಕಿಡಿ ಕಾರಿದ ಪಾರ್ಥ

Vishwavani 6 months ago

ಜೀ ಕನ್ನಡ ವಾಹಿನಿಯಲ್ಲಿ(Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಇಷ್ಟೂ ದಿನ ಮಲ್ಲಿ ಮದುವೆ ಮೇಲೆ ಕಥೆ ಸಾಗುತ್ತಿತ್ತು. ಅಂತೂ ಮಲ್ಲಿ ಬದುಕು ಒಂದು ಕಡೆ ಸೆಟಲ್‌ ಆಗಿದೆ. ಆದರೀಗ ಜೈದೇವ್‌ (Jaidev) ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಆಗುವ ಮುನ್ಸೂಚನೆ ಎದ್ದು ಕಾಣುತ್ತಿದೆ.

ಮಾಡೋದೇ illegal ಬಿಸಿನೆಸ್‌. ಅದರಲ್ಲೂ ಕೆಡಿ ಜೈದೇವ್‌ ಅಹಂಕಾರ ಮಾತ್ರ ಕಡಿಮೆ ಆಗಿಲ್ಲ.

ಜೈದೇವ್‌ ತಪ್ಪು ದಾರಿ

ಜೈದೇವ್‌ ಈಗ ತಪ್ಪು ದಾರಿ ತುಳಿಯಲು ಸಜ್ಜಾಗಿದ್ದಾನೆ. ಗೌತಮ್‌ ನ್ಯಾಯವಾಗಿ ಮಾಡಿಟ್ಟ ಆಸ್ತಿಯನ್ನು ಅಕ್ರಮ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾನೆ. ಇದೀಗ ತನ್ನ ಅಕ್ರಮ ಕೆಲಸಕ್ಕಾಗಿ ಸಾಲ ಕೂಡ ಮಾಡಿದ್ದಾನೆ. ಕೊಟ್ಟ ಸಾಲಗಾರ ಕೂಡ, ಬಡ್ಡಿ ಸಮೇತ ಹಣ ವಾಪಸ್‌ ಬರಬೇಕು ಅಂತ ಶರತ್ತು ಹಾಕಿದ್ದಾನೆ. ತನ್ನ ಓರ್‌ ಕಾನ್‌ಫಿಡೆನ್ಸ್‌ ಇವಂದಾಗಿ ಜೈದೇವ್‌ ಒಪ್ಪಿಕೊಂಡಿದ್ದಾನೆ.

Ankita Jayaram: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 'ಕರ್ಣ' ನಟಿ ಅಂಕಿತಾ ಜಯರಾಮ್ ಗಳಿಸಿದ ಅಂಕವೆಷ್ಟು?

ಪಾರ್ಥ, ಮಹಿಮಾಗೂ ಕ್ಯಾರೆ ಅನ್ನದ ಜೈದೇವ್‌

ಆಸ್ತಿಯಲ್ಲಿ ಮಹಿಮಾ ಹಾಗೂ ಪಾರ್ಥ ಸಹಿ ಕೂಡ ಇದೆ. ಆದರೆ ಅವರಿಬ್ಬರ ಗಮನಕ್ಕೆ ಬಾರದೇ ಜೈದೇವ್‌ ತನ್ನ ಅಕ್ರಮ ಚಟುವಟಿಕೆ ಮುಂದುವರಿಸಿದ್ದಾನೆ. ಈ ವಿಚಾರ ಪಾರ್ಥ ಶಕುಂತಲಾ ಬಳಿ ವಿವರಿಸಿದ್ದಾನೆ. ಅಣ್ಣ ನ್ಯಾಯವಾಗಿ ಮಾಡಿಟ್ಟ ಆಸ್ತಿಯನ್ನು ಈ ರೀತಿ ಬಳಸಿಕೊಳ್ಳುತ್ತಿದ್ದಾನೆ ಎಂದಿದ್ದಾನೆ.

ಇದು ಶಕುಂತಲಾಗೂ ಕೋಪ ಬರಿಸಿದೆ. ಮಾಡೋದೇ illegal ಬ್ಯುಸಿನೆಸ್‌ , ಅದರಲ್ಲೂ ಸ್ವಂತ ತಮ್ಮ ಹಾಗೂ ತಂಗಿಗೆ ಮೋಸ ಮಾಡ್ತೀಯಾ ಅಂತ ಅಬ್ಬರಿಸಿದ್ದಾಳೆ. ಅಷ್ಟೇ ಅಲ್ಲ ಜೈದೇವ್‌ ಕೂಡ ಅತ್ಯಂತ ಅಹಂಕಾರದಿಂದ ಇದು ಆಸ್ತಿ ನನ್ನ ಹೆಸರಲ್ಲಿದೆ. ನಾನು ಏನೂ ಬೇಕಾದರೂ ಮಾಡುವೆ ಅಂತ ಕೂಗಾಡಿದ್ದಾನೆ. ತನ್ನ ಕಷ್ಟದ ದಿನಗಳಲ್ಲೂ ಗೌತಮ್‌ ತನ್ನ ತಂಗಿಗೆ ಆಸ್ತಿಯನ್ನು ಕೊಟ್ಟರೆ, ಇತ್ತ ಜೈದೇವ್‌ ಪಾರ್ಥ ಹಾಗೂ ತಂಗಿಗೆ ಮೋಸ ಮಾಡಿ ಅಹಂಕಾರದ ಮಾತುಗಳನ್ನು ಆಡಿದ್ದಾನೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani