ನವದೆಹಲಿ/ದುಬೈ: ಒಮಾನ್‌ನ ಜಲಗಡಿಯಲ್ಲಿ ಸಾಗುತ್ತಿದ್ದ, ಯುಎಇಗೆ ಸೇರಿದ ಎರಡು ತೈಲ ಹಡಗುಗಳ ಮೇಲೆ ಇರಾನ್ ಮಂಗಳವಾರ ದಾಳಿ ನಡೆಸಿದ್ದು, ಇವುಗಳಲ್ಲಿ ಒಂದು ಹಡಗಿನಲ್ಲಿದ್ದ ಒಬ್ಬ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದಾರೆ.
ಯುಎಇ ಹಡಗುಗಳ ಮೇಲೆ ಇರಾನ್ ದಾಳಿ: ಭಾರತೀಯ ನಾವಿಕ ಸಾವು, ಭಾರತ ಖಂಡನೆಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿ ಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಅಮೆರಿಕ-ಇರಾನ್ ಸಂಘರ್ಷ: ಭಾರತೀಯ ಹಡಗು ಸಿಬ್ಬಂದಿಗೆ ಮೃತ್ಯುಕೂಪವಾದ 'ಹೊರ್ಮುಜ್'
ಒಂದು ಸಾಲಿನಲ್ಲಿಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ನಾವಿಕರಿಗೆ ಉಂಟಾಗಿರುವ ತೀವ್ರ ಅಪಾಯ ಮತ್ತು ಸಾವುನೋವುಗಳ ಕುರಿತ ವರದಿ.ಪ್ರಮುಖ ಮುಖ್ಯಾಂಶಗಳು• ಇರಾನ್ ದಾಳಿಯಲ್ಲಿ ಭಾರತೀಯನ ಸಾವುಒಮಾನ್ ಜಲಗಡಿಯಲ್ಲಿ ಸಾಗುತ್ತಿದ್ದ ಯುಎಇ ತೈಲ ಹಡಗುಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.• ಹೊರ್ಮುಜ್ ಜಲಸಂಧಿ ಅಪಾಯಕಾರಿಫೆಬ್ರವರಿ ತಿಂಗಳಿನಿಂದ ಅಮೆರಿಕ-ಇರಾನ್ ನಡುವಿನ ಸಂಘರ್ಷ ಹೆಚ್ಚಾಗಿರುವುದರಿಂದ ಈ ಜಲಮಾರ್ಗವು ಭಾರತೀಯ ಸೇರಿದಂತೆ ಅಂತರರಾಷ್ಟ್ರೀಯ ಹಡಗು ಸಿಬ್ಬಂದಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.• ಘಟನೆ ಖಂಡಿಸಿದೆ ಭಾರತವಾಣಿಜ್ಯ ಹಡಗುಗಳ ಮೇಲಿನ ದಾಳಿಯನ್ನು ಭಾರತ ಕಠಿಣವಾಗಿ ಖಂಡಿಸಿದ್ದು, ಇರಾನ್ ಉಪ ರಾಯಭಾರಿಯನ್ನು ಕರೆಸಿ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ.• ಸಂಕಷ್ಟದಲ್ಲಿರುವ ಒಟ್ಟು ಭಾರತೀಯರುಸದ್ಯ ಪರ್ಷಿಯನ್ ಗಲ್ಫ್‌ನಲ್ಲಿರುವ 7 ಹಡಗುಗಳಲ್ಲಿ 148 ಭಾರತೀಯ ನಾವಿಕರಿದ್ದು, ಯುದ್ಧದ ಪರಿಸ್ಥಿತಿಯಿಂದಾಗಿ ಅವರು ತಮ್ಮ ಪ್ರಯಾಣಿಕರ ಸುರಕ್ಷತೆಯ ಭೀತಿಯಲ್ಲಿದ್ದಾರೆ.• ಹೆಚ್ಚಿದ ಭಾರತೀಯರ ಸಾವಿನ ಸಂಖ್ಯೆಫೆಬ್ರವರಿ 28ರಂದು ಘರ್ಷಣೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ನಡೆದ ವಿವಿಧ ದಾಳಿಗಳಲ್ಲಿ ಒಟ್ಟು 14 ಭಾರತೀಯ ನಾವಿಕರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.ಪ್ರಮುಖ ಅಂಕಿಅಂಶಗಳು14ಒಟ್ಟು ಮೃತಪಟ್ಟ ಭಾರತೀಯ ನಾವಿಕರು148ಪ್ರಸ್ತುತ ಸಂಕಷ್ಟದಲ್ಲಿರುವ ಭಾರತೀಯ ನಾವಿಕರುಫೆಬ್ರವರಿ 28ಸಂಘರ್ಷ ಆರಂಭವಾದ ದಿನಾಂಕ7ಪ್ರಸ್ತುತ ಪರ್ಷಿಯನ್ ಗಲ್ಫ್‌ಲ್ಲಿರುವ ಭಾರತೀಯ ಹಡಗುಗಳುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಯುಎಇ ಟ್ಯಾಂಕರ್ ಮೇಲೆ ದಾಳಿ, ಭಾರತೀಯ ಸಿಬ್ಬಂದಿ ಸಾವು
ಸೋಮವಾರ, ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಯುದ್ಧ ಆರಂಭವಾದ ಬೆನ್ನಲ್ಲೇ, ಯುಎಇನ ಎರಡು ತೈಲ ಹಡಗುಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. 'ಎಂಟಿ ಅಲ್ ಬಹಿಯಾ' ಮತ್ತು 'ಎಂಟಿ ಮೊಂಬಾಸಾ' ಎಂಬ ಈ ಹಡಗುಗಳು ಒಮಾನ್‌ನ ಜಲಗಡಿಯಲ್ಲಿ ಸಾಗುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ.
ದಾಳಿಯಲ್ಲಿ 'ಮೊಂಬಾಸಾ' ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಅಲ್ಲದೇ 10 ಭಾರತೀಯರಿಗೆ ಗಾಯಗಳಾಗಿವೆ, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರಲ್ಲಿ ಇಬ್ಬರು ಉಕ್ರೇನ್ ಪ್ರಜೆಗಳೂ ಸೇರಿದ್ದಾರೆ ಎಂದು ಯುಎಇ ತಿಳಿಸಿದೆ.
ಇರಾನ್ ಎಚ್ಚರಿಕೆ
ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಇರಾನ್, 'ನಾವು ಪದೇಪದೇ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷಿಸಿ ಜಲಸಂಧಿಯಿಂದ ಹಾದು ಹೋಗುವ 'ಅಪರಾಧ' ಎಸಗಿದ ಎರಡು ಹಡಗುಗಳ ಮೇಲೆ ದಾಳಿ ನಡೆಸಿದ್ದೇವೆ' ಎಂದು ತಿಳಿಸಿದೆ. ಯುಎಇ ಮಾಹಿತಿ ನೀಡಿದ ಹಡಗುಗಳ ಕುರಿತೇ ಇರಾನ್ ಈ ಹೇಳಿಕೆ ನೀಡಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಅಕ್ರಮ ಮಾರ್ಗದಲ್ಲಿ ಪ್ರಚೋದನೆಗೆ ಮುಂದಾಗಲು ಅಮೆರಿಕವು ಒತ್ತಡ ಹೇರುತ್ತಿದೆ. ಸದಾ ಆಕ್ರಮಣಕಾರಿಯಾಗಿ ವರ್ತಿಸುವ ನಮ್ಮ ಶತ್ರುಗಳಿಗೆ ಸಹಕಾರ ನೀಡಬಾರದು. ಇದು ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಜಲಸಂಧಿಯು ಮುಕ್ತ ಸಂಚಾರಕ್ಕೆ ತೆರೆದುಕೊಳ್ಳುವುದನ್ನು ವಿಳಂಬ ಮಾಡಲಿದೆ ಎಂದೂ ಇರಾನ್ ಎಚ್ಚರಿಸಿದೆ.
ದಾಳಿ ಖಂಡಿಸಿದ ಭಾರತ, ಯುಎಇ
ಭಾರತವು ಇರಾನ್ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ತೀವ್ರವಾಗಿ ಖಂಡಿಸಿದೆ. ನವದೆಹಲಿಯಲ್ಲಿರುವ ಇರಾನ್‌ನ ಉಪ ರಾಯಭಾರಿಯನ್ನು ಕರೆಸಿ, ಈ ಸಂಬಂಧ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ. ದಾಳಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸಿದೆ. ಮಾತುಕತೆ ಮೂಲಕ ಸಂಘರ್ಷ ಅಂತ್ಯಗೊಳಿಸಿಕೊಳ್ಳುವಂತೆಯೂ ಕರೆ ನೀಡಿದೆ.
'ವಾಣಿಜ್ಯ ಹಡಗುಗಳು ಮತ್ತು ದೇಶಗಳ ಮೂಲಸೌಕರ್ಯಗಳನ್ನು ಗುರಿಯಾಗಿಸುವುದನ್ನು ನಿಲ್ಲಿಸಬೇಕು. ಅಂತರರಾಷ್ಟ್ರೀಯ ಸಮುದ್ರದಲ್ಲಿ ಮುಕ್ತ ಸಂಚಾರಕ್ಕೆ ಯಾವುದೇ ತಡೆ ಇರಬಾರದು. ಅಂತರರಾಷ್ಟ್ರೀಯ ಕಾನೂನುಗಳ ಅನ್ವಯ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಿ' ಎಂದೂ ಭಾರತವು ಇರಾನ್‌ಗೆ ಹೇಳಿದೆ.
'ಯುಎಇ ಮತ್ತು ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಎರಡೂ ದೇಶಗಳ ಸಂಬಂಧಪಟ್ಟ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ದಾಳಿಗಳಿಂದ ಪರಿಣಾಮ ಎದುರಿಸುತ್ತಿರುವ ಭಾರತೀಯ ನಾವಿಕರ ಅನುಕೂಲಕ್ಕಾಗಿ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ' ಎಂದಿದೆ.
ಈ ಭಾರತೀಯರು ಯುಎಇಗೆ ಸೇರಿದ ಹಡಗುಗಳಲ್ಲಿ ಉದ್ಯೋಗದಲ್ಲಿದ್ದರು. ಹಡಗುಗಳ ಮೇಲೆ ದಾಳಿ ನಡೆದ ಬಗ್ಗೆ ಯುಎಇ ರಕ್ಷಣಾ ಸಚಿವಾಲಯವು 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿತು. ಇದೇ ದಾಳಿಯಲ್ಲಿ ಇಬ್ಬರು ಉಕ್ರೇನ್ ಪ್ರಜೆಗಳಿಗೂ ಗಾಯಗಳಾಗಿವೆ. ಯುಎಇ ಕೂಡ ಈ ದಾಳಿಯನ್ನು ಖಂಡಿಸಿದೆ.
ಹಡಗುಗಳ ಮೇಲೆ ಸರಣಿ ದಾಳಿ
ಫೆ. 28ರಿಂದ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಪ್ರಾರಂಭವಾದಾಗಿನಿಂದ, ಹೊರ್ಮುಜ್ ಸಂಘರ್ಷದ ತಾಣವಾಗಿ ಮಾರ್ಪಟ್ಟಿದೆ. ಭಾರತ ಸೇರಿದಂತೆ ವಿವಿಧ ದೇಶಗಳ ಹಡಗು ಸಿಬ್ಬಂದಿ ನಿರಂತರವಾಗಿ ದಾಳಿಗೆ ತುತ್ತಾಗುತ್ತಿದ್ದಾರೆ.
ಪಲಾವು ದೇಶದ ಧ್ವಜ ಹೊತ್ತಿದ್ದ, 24 ಮಂದಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡಿದ್ದ 'ಮರಿವೆಕ್ಸ್' ಹಡಗಿನ ಮೇಲೆ ಜೂನ್ 8ರಂದು ಅಮೆರಿಕ ಪಡೆಗಳು ದಾಳಿ ನಡೆಸಿದ್ದವು. ಈ ವೇಳೆ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು.
ಬಳಿಕ ಜೂನ್ 10ರಂದು ಪಲಾವು ಧ್ವಜವಿದ್ದ 'ಸೆಟ್ಬೆಲ್ಲೊ' ಹೆಸರಿನ ಮತ್ತೊಂದು ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದ್ದು, ಹಡಗಿನಲ್ಲಿದ್ದ 24 ಮಂದಿ ಭಾರತೀಯ ಸಿಬ್ಬಂದಿಯ ಪೈಕಿ ಮೂವರು ಮೃತಪಟ್ಟಿದ್ದರು.
ಗಿನಿ-ಬಿಸ್ಸಾವ್ ದೇಶದ ಧ್ವಜವನ್ನು ಹೊತ್ತಿದ್ದ 'ಜಲವೀರ್' ಎಂಬ ಹಡಗಿನ ಮೇಲೂ ಜೂನ್ 11ರಂದು ದಾಳಿ ನಡೆದಿತ್ತು.
ಘಟನೆ ಖಂಡಿಸಿದ ಭಾರತ, ಪ್ರತಿಭಟನೆ ದಾಖಲಿಸಿತ್ತು. ಅಲ್ಲದೇ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಮೂವರು ಭಾರತೀಯರ ಸಾವು: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜತೆ ಜೈಶಂಕರ್ ಮಾತುಕತೆಮಾರ್ಚ್ 1ರಂದು ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ 'ಎಂಕೆಡಿ ವ್ಯೋಮ್' ಹಡಗಿನ ಮೇಲೆರ ನಡೆದ ದಾಳಿಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದರು. ಒಮಾನ್ ಕರಾವಳಿಯ ಬಳಿ ಈ ಹಡಗಿನ ಮೇಲೆ ಮಾನವರಹಿತ ಕ್ಷಿಪಣಿ ದಾಳಿ ನಡೆದಿತ್ತು. ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಳ್ಳದಿದ್ದರೂ, ಇರಾನ್ ಪಡೆಗಳೇ ಇದಕ್ಕೆ ಕಾರಣ ಎಂದು ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ದೂಷಿಸಿತ್ತು.
ಅದೇ ದಿನ ಒಮಾನ್‌ನ ಮುಸಂದಮ್ ಪರ್ಯಾಯ ದ್ವೀಪದ ಬಳಿ ಪಲಾವ್ ಧ್ವಜ ಹೊಂದಿದ್ದ 'ಸ್ಕೈಲೈಟ್' ಹಡಗಿನ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯ ಸಿಬ್ಬಂದಿ ಮೃತಪಟ್ಟು, ಮತ್ತೊಬ್ಬರು ನಾಪತ್ತೆಯಾಗಿದ್ದರು.
ಮೃತಪಟ್ಟ ಭಾರತೀಯರ ಸಂಖ್ಯೆ 14ಕ್ಕೆ ಏರಿಕೆ
ಭಾರತೀಯ ವಿದೇಶಾಂಗ ಸಚಿವಾಲಯ ನೀಡಿದ ಮಾಹಿತಿ ಫೆ.28ರಂದು ಅಮೆರಿಕ-ಇರಾನ್ ಸಂಘರ್ಷ ಯುದ್ಧ ಆರಂಭವಾದಾಗಿನಿಂದ ಬಲಿಯಾದ ಭಾರತೀಯರ ಸಂಖ್ಯೆ 14ಕ್ಕೆ ಏರಿದೆ.
ಇಲ್ಲಿವೆ ಏಳು ಭಾರತೀಯ ಹಡಗುಗಳು
ಪರ್ಷಿಯನ್ ಗಲ್ಫ್‌ನಲ್ಲಿ ಸದ್ಯ ಭಾರತೀಯ ಧ್ವಜ ಇರುವ 7 ಹಡಗುಗಳು ಇವೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ಮಂಗಳವಾರ ತಿಳಿಸಿದ್ದಾರೆ. 'ಈಗ ಮತ್ತೊಮ್ಮೆ ಆರಂಭವಾಗಿರುವ ಯುದ್ಧ ಕೊನೆಗೊಳ್ಳುವವರೆಗೂ ಇವು ಹೊರ್ಮುಜ್ ಜಲಸಂಧಿಯನ್ನು ದಾಟಲು ಸಾಧ್ಯವಿಲ್ಲ. ಜಲಸಂಧಿಯನ್ನು ದಾಟುವ ಯೋಚನೆಯನ್ನೂ ಈ ಹಡಗುಗಳು ಮಾಡುತ್ತಿಲ್ಲ' ಎಂದು ಅಧಿಕಾರಿ ತಿಳಿಸಿದ್ದಾರೆ.
ಏಳು ಹಡಗುಗಳಗಳ ಪೈಕಿ, 2 ತೈಲ ಕಂಟೇನರ್ ಹಡಗುಗಳು ಮತ್ತು 5 ಸರಕು ಸಾಗಣೆ ಹಡಗುಗಳು ಸೇರಿವೆ. ಈ ಏಳೂ ಹಡಗುಗಳಲ್ಲಿ ಒಟ್ಟು 148 ಭಾರತೀಯ ನಾವಿಕರಿದ್ದಾರೆ.
ಆಧಾರ: ಪಿಟಿಐ. ಎಎಫ್‌ಪಿ
ಹೊರ್ಮುಜ್-ಹಡಗುಗಳಿಗೆ ಶುಲ್ಕ ವಿಧಿಸುತ್ತೇವೆ: ಟ್ರಂಪ್ ಘೋಷಣೆ
