Dailyhunt Logo
  • Light mode
    Follow system
    Dark mode
    • Play Story
    • App Story
ಭೂಮಿಗಿಂತ ಮೊದಲೇ ಬಾಹ್ಯಾಕಾಶದಲ್ಲಿ ಸಕ್ಕರೆ ಇತ್ತೇ? ಹೊಸ ಸಂಶೋಧನೆಯಲ್ಲಿ ಸುಳಿವು

ಭೂಮಿಗಿಂತ ಮೊದಲೇ ಬಾಹ್ಯಾಕಾಶದಲ್ಲಿ ಸಕ್ಕರೆ ಇತ್ತೇ? ಹೊಸ ಸಂಶೋಧನೆಯಲ್ಲಿ ಸುಳಿವು

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಭೂಮಿಗಿಂತ ಮೊದಲೇ ಬಾಹ್ಯಾಕಾಶದಲ್ಲಿ ಸಕ್ಕರೆ ಇತ್ತೇ? ಹೊಸ ಸಂಶೋಧನೆಯಲ್ಲಿ ಸುಳಿವು

ಒಂದು ಸಾಲಿನಲ್ಲಿವಿಜ್ಞಾನಿಗಳು ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ 'ಎರಿಥ್ರುಲೋಸ್' ಎಂಬ ಸಕ್ಕರೆ ಅಣುವನ್ನು ಪತ್ತೆಹಚ್ಚಿದ್ದು, ಇದು ಜೀವದ ಮೂಲ ಹುಡುಕಾಟದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಪ್ರಮುಖ ಪ್ರಶ್ನೋತ್ತರ


ಬಾಹ್ಯಾಕಾಶದಲ್ಲಿ ಸಕ್ಕರೆ ಅಣು ಪತ್ತೆಯಾಗಿದ್ದು ಹೇಗೆ?

ವಿಜ್ಞಾನಿಗಳು ದೂರದರ್ಶಕಗಳ ಮೂಲಕ ಪಡೆದ ಬೆಳಕಿನ ಸಂಕೇತಗಳನ್ನು (ಸ್ಪೆಕ್ಟ್ರಮ್) ವಿಶ್ಲೇಷಿಸಿದಾಗ, ಎರಿಥ್ರುಲೋಸ್ ಸಕ್ಕರೆಯ ವೈಶಿಷ್ಟ್ಯಗಳು ಕಂಡುಬಂದಿರುವುದನ್ನು ದೃಢಪಡಿಸಿದ್ದಾರೆ.


ಎರಿಥ್ರುಲೋಸ್ ಸಕ್ಕರೆ ಎಂದರೇನು?

ಇದು ನಾಲ್ಕು ಕಾರ್ಬನ್, ಎಂಟು ಹೈಡ್ರೋಜನ್ ಮತ್ತು ನಾಲ್ಕು ಆಮ್ಲಜನಕ ಪರಮಾಣುಗಳನ್ನು ಹೊಂದಿರುವ ಸಕ್ಕರೆ ಅಣುವಾಗಿದ್ದು, ಇದು ರಾಸ್ಪ್‌ಬೆರಿ ಹಣ್ಣಿನಲ್ಲಿಯೂ ಕಂಡುಬರುತ್ತದೆ.


ಸಕ್ಕರೆ ಅಣುವಿನ ಸಂಶೋಧನೆ ಏಕೆ ಮುಖ್ಯ?

ಡಿಎನ್‌ಎ ಮತ್ತು ಆರ್‌ಎನ್‌ಎ ರಚನೆಯಲ್ಲಿ ಸಕ್ಕರೆ ಪಾತ್ರ ನಿರ್ವಹಿಸುವುದರಿಂದ, ಭೂಮಿಯಲ್ಲಿ ಜೀವ ಹೇಗೆ ಉಗಮವಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಸಹಕಾರಿಯಾಗಿದೆ.


ಸಕ್ಕರೆ ಅಣು ಎಲ್ಲಿ ಕಂಡುಬಂದಿದೆ?

ನಮ್ಮ ಆಕಾಶಗಂಗೆಯ ಕೇಂದ್ರ ಭಾಗದ ಸಮೀಪವಿರುವ 'ಇಂಟರ್‌ಸ್ಟೆಲ್ಲರ್ ಮೀಡಿಯಂ' ಎಂಬ ಅನಿಲ ಮತ್ತು ಧೂಳಿನ ಬೃಹತ್ ಮೋಡದಲ್ಲಿ ಈ ಅಣುವನ್ನು ಗುರುತಿಸಲಾಗಿದೆ.


ಈ ಸಂಶೋಧನೆಯಿಂದ ತಿಳಿದುಬರುವ ಹೊಸ ವಿಷಯವೇನು?

ನಕ್ಷತ್ರಗಳು ಮತ್ತು ಗ್ರಹಗಳ ನಿರ್ಮಾಣಕ್ಕೂ ಮುನ್ನವೇ ಬಾಹ್ಯಾಕಾಶದಲ್ಲಿ ಜೀವಿಗಳ ಸಹಾಯವಿಲ್ಲದೆ ಸಕ್ಕರೆ ಅಣುಗಳು ಸಹಜವಾಗಿ ರೂಪುಗೊಳ್ಳಬಲ್ಲವು ಎಂದು ಈ ಅಧ್ಯಯನ ಸಾಬೀತುಪಡಿಸಿದೆ.

ಪ್ರಮುಖ ಅಂಕಿಅಂಶಗಳು

4ಅಣುವಿನಲ್ಲಿರುವ ಕಾರ್ಬನ್ ಪರಮಾಣುಗಳ ಸಂಖ್ಯೆ8ಅಣುವಿನಲ್ಲಿರುವ ಹೈಡ್ರೋಜನ್ ಪರಮಾಣುಗಳ ಸಂಖ್ಯೆ4ಅಣುವಿನಲ್ಲಿರುವ ಆಮ್ಲಜನಕ ಪರಮಾಣುಗಳ ಸಂಖ್ಯೆ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಭೂಮಿಯ ಮೇಲೆ ಸಕ್ಕರೆ ಹೇಗೆ ಬಂದಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಿರುವ ವಿಜ್ಞಾನಿಗಳಿಗೆ ಮಹತ್ವದ ಸುಳಿವೊಂದು ಸಿಕ್ಕಿದೆ. ಮೊದಲ ಬಾರಿಗೆ ಮಿಲ್ಕಿ ವೇ ನಕ್ಷತ್ರಗಳ ನಡುವಿನ ಬಾಹ್ಯಾಕಾಶ ಪ್ರದೇಶದಲ್ಲಿ ಸಕ್ಕರೆ ಅಣುವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಅರ್ಜೆಂಟೀನಾ vs ಇಂಗ್ಲೆಂಡ್: ಮೈದಾನದಾಚೆಗೂ ಹೋರಾಟದ ಕಿಚ್ಚು, ರೋಚಕ ಇತಿಹಾಸ

ಈ ಅಧ್ಯಯನವು 'ನೇಚರ್ ಅಸ್ಟ್ರೋನಮಿ' ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಇದು ಸಾಮಾನ್ಯ ಅಡುಗೆ ಸಕ್ಕರೆ ಅಲ್ಲ. 'ಎರಿಥ್ರುಲೋಸ್' (Erythrulose) ಎಂಬ ಸಕ್ಕರೆ ಅಣುವನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಅಣುವಿನಲ್ಲಿ ನಾಲ್ಕು ಕಾರ್ಬನ್, ಎಂಟು ಹೈಡ್ರೋಜನ್ ಮತ್ತು ನಾಲ್ಕು ಆಮ್ಲಜನಕ (ಆಕ್ಸಿಜನ್) ಪರಮಾಣುಗಳಿವೆ. ಇದೇ ಸಕ್ಕರೆ ರಾಸ್ಪ್‌ಬೆರಿ ಹಣ್ಣಿನಲ್ಲಿಯೂ ಕಂಡುಬರುತ್ತದೆ.

ಸಕ್ಕರೆ ಏಕೆ ಮುಖ್ಯ?

ಸಕ್ಕರೆ ಎಂದರೆ ಕೇವಲ ಆಹಾರಕ್ಕೆ ಸಿಹಿ ನೀಡುವ ಪದಾರ್ಥವಲ್ಲ. ಜೀವದ ಅಸ್ತಿತ್ವಕ್ಕೂ ಅದು ಮುಖ್ಯ. ಜೀವಕೋಶಗಳ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆಗೆ ಕೆಲವು ವಿಶೇಷ ರೀತಿಯ ಸಕ್ಕರೆ ಅಣುಗಳು ಅಗತ್ಯ. ನಮ್ಮ ದೇಹದ ಆನುವಂಶಿಕ ಮಾಹಿತಿಯನ್ನು ಸಂಗ್ರಹಿಸುವ ಡಿಎನ್‌ಎ (ಡಿಎನ್‌ಎ) ಮತ್ತು ಆ ಮಾಹಿತಿಯನ್ನು ಜೀವಕೋಶಗಳಿಗೆ ತಲುಪಿಸುವ ಆರ್‌ಎನ್‌ಎ (ಆರ್‌ಎನ್‌ಎ) ರಚನೆಯಲ್ಲಿ ಈ ಸಕ್ಕರೆ ಅಣುಗಳು ಪ್ರಮುಖ ಭಾಗವಾಗಿವೆ. ಆದ್ದರಿಂದ ಸಕ್ಕರೆ ಹೇಗೆ ರೂಪುಗೊಂಡಿತು ಎಂಬುದನ್ನು ತಿಳಿದುಕೊಳ್ಳುವುದು, ಭೂಮಿಯಲ್ಲಿ ಜೀವ ಹೇಗೆ ಆರಂಭವಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಒಪ್ಪಂದದ ಭಾಷೆಯಲ್ಲೇ ಹೊಸ ಬಿಕ್ಕಟ್ಟು: ಹೊರ್ಮುಜ್ ಈಗ ಜಾಗತಿಕ ಪೈಪೋಟಿಯ ಅಖಾಡ

ಪತ್ತೆಯಾದದ್ದು ಎಲ್ಲಿ?

ಈ ಸಕ್ಕರೆ ಅಣು ನಕ್ಷತ್ರಪುಂಜವಾದ ಮಿಲ್ಕಿ ವೇಯ ಕೇಂದ್ರ ಭಾಗದ ಸಮೀಪದಲ್ಲಿರುವ ಅನಿಲ ಮತ್ತು ಧೂಳಿನಿಂದ ಕೂಡಿದ ಬೃಹತ್ ಮೋಡದಲ್ಲಿ ಪತ್ತೆಯಾಗಿದೆ. ನಕ್ಷತ್ರಗಳ ನಡುವಿನ ಈ ಪ್ರದೇಶವನ್ನು 'ಇಂಟರ್‌ಸ್ಟೆಲ್ಲರ್ ಮೀಡಿಯಂ' ಎಂದು ಕರೆಯಲಾಗುತ್ತದೆ.

ಇದು ಸಂಪೂರ್ಣ ಖಾಲಿ ಜಾಗವಲ್ಲ. ಇಲ್ಲಿ ಹೈಡ್ರೋಜನ್, ಹೀಲಿಯಂ ಸೇರಿದಂತೆ ಹಲವು ಅನಿಲಗಳು, ಧೂಳಿನ ಕಣಗಳು ಮತ್ತು ವಿವಿಧ ರಾಸಾಯನಿಕ ಅಣುಗಳು ಇರುತ್ತವೆ. ಇದೇ ಪ್ರದೇಶದಲ್ಲಿ ಹೊಸ ನಕ್ಷತ್ರಗಳು ಮತ್ತು ಗ್ರಹಗಳು ರೂಪುಗೊಳ್ಳುತ್ತವೆ. ಈ ಪ್ರದೇಶದಲ್ಲಿ ಈಗಾಗಲೇ ನೂರಾರು ವಿಧದ ರಾಸಾಯನಿಕ ಅಣುಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದು, ಇದೀಗ ಮೊದಲ ಬಾರಿಗೆ ಸಕ್ಕರೆ ಅಣುವೂ ಕಂಡುಬಂದಿದೆ.

ವಿಜ್ಞಾನಿಗಳು ಪತ್ತೆಹಚ್ಚಿದ್ದು ಹೇಗೆ?

ಬಾಹ್ಯಾಕಾಶದಲ್ಲಿರುವ ಪ್ರತಿಯೊಂದು ಅಣುವೂ ನಿರ್ದಿಷ್ಟ ರೀತಿಯ ಬೆಳಕಿನ ಸಂಕೇತಗಳನ್ನು (ಸ್ಪೆಕ್ಟ್ರಮ್) ಹೊರಸೂಸುತ್ತದೆ. ವಿಜ್ಞಾನಿಗಳು ದೂರದರ್ಶಕಗಳ ಮೂಲಕ ಪಡೆದ ಸಂಕೇತಗಳನ್ನು ವಿಶ್ಲೇಷಿಸಿದಾಗ, ಅವು ಎರಿಥ್ರುಲೋಸ್ ಸಕ್ಕರೆಯ ಗುರುತುಗಳಿಗೆ ಹೊಂದಿಕೆಯಾಗಿರುವುದು ಕಂಡುಬಂದಿದೆ. ಈ ಮೂಲಕ ಆ ಸಕ್ಕರೆ ಅಣು ಅಲ್ಲಿ ಇರುವುದನ್ನು ದೃಢಪಡಿಸಲಾಗಿದೆ.

ಹೊರ್ಮುಜ್‌ನಲ್ಲಿ ಶೇ 20 ಶುಲ್ಕ? ಜಾಗತಿಕ ವ್ಯಾಪಾರಕ್ಕೆ ಹೊಸ ಆರ್ಥಿಕ ಆಘಾತ

ಈ ಸಂಶೋಧನೆಯ ಮಹತ್ವವೇನು?

ಇಲ್ಲಿಯವರೆಗೆ ಸಕ್ಕರೆ ಅಣುಗಳು ಭೂಮಿಯಲ್ಲಿ, ಉಲ್ಕಾಶಿಲೆಗಳಲ್ಲಿ ಮತ್ತು ಕೆಲವು ಕ್ಷುದ್ರಗ್ರಹಗಳಲ್ಲಿ ಮಾತ್ರ ಪತ್ತೆಯಾಗಿದ್ದವು. ಆದರೆ ಈಗ ಮೊದಲ ಬಾರಿಗೆ ನಕ್ಷತ್ರಗಳು ಮತ್ತು ಗ್ರಹಗಳು ಹುಟ್ಟುವ ಮುನ್ನವೇ ಇದ್ದ, ಈಗಲೂ ಇರುವ ಬಾಹ್ಯಾಕಾಶದ ಅನಿಲ-ಧೂಳಿನ ಮೋಡದಲ್ಲಿ ಸಕ್ಕರೆ ಅಣು ಪತ್ತೆಯಾಗಿದೆ.

ಇದರಿಂದ ಸಕ್ಕರೆ ಅಣುಗಳು ನಕ್ಷತ್ರಗಳು ಮತ್ತು ಗ್ರಹಗಳು ರೂಪುಗೊಳ್ಳುವ ಮೊದಲೇ, ಅಣುಗಳು ಜೀವಿಗಳ ಸಹಾಯವಿಲ್ಲದೇ ಬಾಹ್ಯಾಕಾಶದಲ್ಲೇ ಸಹಜವಾಗಿ ನಿರ್ಮಾಣವಾಗಿರಬಹುದು ಎನ್ನುವುದಕ್ಕೆ ಈ ಅಧ್ಯಯನವು ಹೊಸ ಸಾಕ್ಷ್ಯ ಒದಗಿಸಿದೆ.

ಅಧ್ಯಯನ ನಡೆಸಿದವರು ಯಾರು?

ಈ ಸಂಶೋಧನೆಗೆ ಸ್ಪೇನ್‌ನ 'ಸೆಂಟರ್ ಫಾರ್ ಅಸ್ಟ್ರೋಬಯಾಲಜಿ'ಯ ಖಗೋಳ ರಸಾಯನ ವಿಜ್ಞಾನಿ ಇಜಾಸ್ಕುನ್ ಜಿಮೆನೇಸ್-ಸೆರಾ ನೇತೃತ್ವ ವಹಿಸಿದ್ದರು.

'ಈ ರೀತಿಯ ಅಣುಗಳನ್ನು ಪತ್ತೆಹಚ್ಚುವ ಬಗ್ಗೆ ವಿಜ್ಞಾನಿಗಳಲ್ಲಿ ಹಲವು ವರ್ಷಗಳಿಂದ ಹೆಚ್ಚಿನ ಆಸಕ್ತಿ ಇತ್ತು. ಈಗ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಅವುಗಳನ್ನು ಗುರುತಿಸಲು ಸಾಧ್ಯವಾಗಿದೆ' ಎಂದು ಅವರು ಹೇಳಿದ್ದಾರೆ.

ಆಧಾರ: ನೇಚರ್ ಅಸ್ಟ್ರೋನಮಿ ಸಂಶೋಧನಾ ವರದಿ, ಎಪಿ, ನೇಚರ್ ನ್ಯೂಸ್.

ಒಪ್ಪಂದದ ಭಾಷೆಯಲ್ಲೇ ಹೊಸ ಬಿಕ್ಕಟ್ಟು: ಹೊರ್ಮುಜ್ ಈಗ ಜಾಗತಿಕ ಪೈಪೋಟಿಯ ಅಖಾಡ
Dailyhunt
Disclaimer: This content has not been generated, created or edited by Dailyhunt. Publisher: Prajavani