Dailyhunt Logo
  • Light mode
    Follow system
    Dark mode
    • Play Story
    • App Story
ಈ ಹಿಂದೆಯೂ ನಡೆದಿತ್ತು ಡೊನಾಲ್ಡ್‌ ಟ್ರಂಪ್ ಕೊಲೆಗೆ ವಿಫಲ ಯತ್ನಗಳು!

ಈ ಹಿಂದೆಯೂ ನಡೆದಿತ್ತು ಡೊನಾಲ್ಡ್‌ ಟ್ರಂಪ್ ಕೊಲೆಗೆ ವಿಫಲ ಯತ್ನಗಳು!

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಈ ಹಿಂದೆಯೂ ನಡೆದಿತ್ತು ಡೊನಾಲ್ಡ್‌ ಟ್ರಂಪ್ ಕೊಲೆಗೆ ವಿಫಲ ಯತ್ನಗಳು!

ಒಂದು ಸಾಲಿನಲ್ಲಿಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆದ ಸರಣಿ ಹತ್ಯೆ ಪ್ರಯತ್ನಗಳು ಅಮೆರಿಕದ ರಾಜಕೀಯ ಭದ್ರತೆ ಮತ್ತು ಬಂದೂಕು ನಿಯಂತ್ರಣ ನೀತಿಯ ಬಗೆಗಿನ ಗಂಭೀರ ಚರ್ಚೆಯನ್ನು ಮುನ್ನೆಲೆಗೆ ತಂದಿವೆ.

ಪ್ರಮುಖ ಅಂಶಗಳು• ಪೆನ್ಸಿಲ್ವೇನಿಯಾ ಘಟನೆಯ ವಿವರ2024ರ ಚುನಾವಣಾ ಸಮಾವೇಶದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಟ್ರಂಪ್ ಅವರ ಕಿವಿಗೆ ಗಾಯವಾಗಿತ್ತು.• ಬಂದೂಕು ನೀತಿಯ ಆತಂಕಅಮೆರಿಕದಲ್ಲಿ ಸುಲಭವಾಗಿ ಬಂದೂಕು ಲಭ್ಯವಿರುವುದು ಇಂತಹ ದುರಂತಗಳಿಗೆ ಪ್ರಮುಖ ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.• ಜಾಗತಿಕ ನಾಯಕರ ಖಂಡನೆಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಹಲವು ನಾಯಕರು ಈ ದಾಳಿಗಳನ್ನು ಖಂಡಿಸಿದ್ದು, ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ವಾಷಿಂಗ್ಟನ್‌: ವಾಷಿಂಗ್ಟನ್ ಹಿಲ್ಟನ್‌ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾಗವಹಿಸಿದ್ದ ಶ್ವೇತಭವನದ ವರದಿಗಾರರ ಔತಣಕೂಟದ ಕಾರ್ಯಕ್ರಮದಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ ನಡೆದಿದೆ.

ಇದು ಟ್ರಂಪ್ ಅವರನ್ನು ಗುರಿಯಾಗಿಸಿ ನಡೆದ ದಾಳಿಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಕ್ಯಾಲಿಫೋರ್ನಿಯಾ ಮೂಲದ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ತಕ್ಷಣವೇ ಡೊನಾಲ್ಡ್ ಟ್ರಂಪ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಳಿಕ ದಾಳಿಕೋರನ ಚಿತ್ರ ಹಾಗೂ ವಿಡಿಯೊವನ್ನು ಟ್ರಂಪ್ ಅವರೇ ಬಿಡುಗಡೆ ಮಾಡಿದ್ದರು.

ವೈಟ್ ಹೌಸ್ ಡಿನ್ನರ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ವರದಿ: ಟ್ರಂಪ್ ಸುರಕ್ಷಿತಟ್ರಂಪ್ ಭಾಗವಹಿಸಿದ್ದ ಡಿನ್ನರ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: ಆಗಿದ್ದೇನು?

ಟ್ರಂಪ್‌ಗೆ ಅತಿ ಹೆಚ್ಚು ಭದ್ರತಾ ಬೆದರಿಕೆ…

ಅಮೆರಿಕವನ್ನು ಪ್ರಬುದ್ಧ ಪ್ರಜಾಪ್ರಭುತ್ವ ಎಂದೇ ‍ಪರಿಗಣಿಸಲಾಗುತ್ತಿದೆ. ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ರಾಜಕೀಯವಾಗಿ ಅತ್ಯಂತ ದ್ವೇಷಮಯ ವಾತಾವರಣ ಅಲ್ಲಿ ಇದೆ. ಅಮೆರಿಕದಲ್ಲಿ ಟ್ರಂಪ್‌ ಅತಿ ಹೆಚ್ಚು ಭದ್ರತಾ ಬೆದರಿಕೆ ಎದುರಿಸುತ್ತಿರುವ ನಾಯಕರಾಗಿದ್ದಾರೆ. ಈ ಹಿಂದೆಯೂ ಟ್ರಂಪ್ ಅವರನ್ನು ಹತ್ಯೆಗೈಯುವ ವಿಫಲ ಯತ್ನ ನಡೆದಿತ್ತು.

ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ದಾಳಿ

2024ರ ಚುನಾವಣಾ ಸಮಾವೇಶದಲ್ಲಿ ನಡೆದ ದಾಳಿ…

2024ರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನದ ಚುನಾವಣೆ ಸನಿಹದಲ್ಲಿರುವ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್‌ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರ ಮೇಲೆ ಪೆನ್ಸಿಲ್ವೇನಿಯಾದ ಬಟ್ಲರ್‌ ಎಂಬಲ್ಲಿ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಟ್ರಂಪ್ ಅವರ ಕಿವಿಗೆ ಗಾಯವಾಗಿತ್ತು. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದನು.

ಹತ್ಯೆ ಪ್ರಯತ್ನ ನಡೆಸಿದ ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌ ಎಂಬ 20 ವರ್ಷದ ಯುವಕನನ್ನು ಸೀಕ್ರೆಟ್‌ ಸರ್ವಿಸ್‌ನ ಭದ್ರತಾ ಸಿಬ್ಬಂದಿಯು ಸ್ಥಳದಲ್ಲಿಯೇ ಹತ್ಯೆ ಮಾಡಿದ್ದರು. ಫೆಡರಲ್‌ ಬ್ಯೂರೊ ಆಫ್‌ ಇನ್‌ವೆಸ್ಟಿಗೇಷನ್‌ ನಡೆಸಿದ ತನಿಖೆಯಲ್ಲಿ ಇದು ಸಂಘಟಿತ ಕೃತ್ಯ ಅಲ್ಲ, ಬದಲಿಗೆ ಕ್ರೂಕ್ಸ್‌ ಏಕಾಂಗಿಯಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿತ್ತು.

ಬಳಿಕ ನಡೆದ ಚುನಾವಣೆಯಲ್ಲಿ ಗೆದ್ದಿದ್ದ ಟ್ರಂಪ್, ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಡೊನಾಲ್ಡ್ ಟ್ರಂಪ್ ಕಿವಿಗೆ ಗಾಯವಾಗಿರುವುದು

ಫ್ಲೋರಿಡಾ ಗಾಲ್ಫ್ ಕ್ಲಬ್‌…

ಫ್ಲೋರಿಡಾದಲ್ಲಿ ವೆಸ್ಟ್ ಪಾಮ್ ಬೀಚ್ ಕೋರ್ಸ್‌ನಲ್ಲಿ ಟ್ರಂಪ್ ಗಾಲ್ಫ್ ಆಡುತ್ತಿದ್ದಾಗ ಮತ್ತೊಮ್ಮೆ ಹತ್ಯೆಗೈಯುವ ಯತ್ನ ನಡೆದಿತ್ತು. ಪೊದೆಯೊಂದರಲ್ಲಿ ಅಡಗಿದ್ದ ಬಂದೂಕುಧಾರಿಯನ್ನು ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಪತ್ತೆಹಚ್ಚಿ ಅನಾಹುತವನ್ನು ತಪ್ಪಿಸಿದ್ದರು. ಬಂಧಿತ ಆರೋಪಿ ರಾನ್ ವೆಸ್ಲಿ ರೂತ್‌ಗೆ ಜೀವಾವಾಧಿ ಶಿಕ್ಷೆ ವಿಧಿಸಲಾಗಿತ್ತು.

ಈ ಎರಡೂ ದಾಳಿಗಳಿಂದಲೂ ಟ್ರಂಪ್ ಪಾರಾಗಿದ್ದರು. ಇದಲ್ಲದೆ ಹಲವು ಸಲ ಭದ್ರತಾ ಭೀತಿಯನ್ನು ಟ್ರಂಪ್ ಎದುರಿಸಿದ್ದಾರೆ.

ಅಮೆರಿಕ ಅಧ್ಯಕ್ಷರೇ ಟಾರ್ಗೆಟ್…

ಅಮೆರಿಕದ ಅಧ್ಯಕ್ಷರು ಅಥವಾ ಪ್ರಮುಖ ನಾಯಕರ ಹತ್ಯೆ ಮತ್ತು ಹತ್ಯೆ ಯತ್ನ ಈ ಹಿಂದೆಯೂ ನಡೆದಿತ್ತು. ಅಮೆರಿಕದ ಅತ್ಯಂತ ಜನಪ್ರಿಯ ಅಧ್ಯಕ್ಷರಲ್ಲಿ ಒಬ್ಬರಾದ ಅಬ್ರಹಾಂ ಲಿಂಕನ್‌ ಅವರನ್ನು 1865ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆ ಬಳಿಕವೂ ದಾಳಿ ಮುಂದುವರಿದಿತ್ತು.

ಬಂದೂಕು ನೀತಿ ಕಾರಣ?

ಇಂತಹ ದುರಂತಗಳಿಗೆ ಮುಖ್ಯವಾದ ಕಾರಣ ಅಲ್ಲಿನ ಬಂದೂಕು ನೀತಿ ಎನ್ನಲಾಗಿದೆ. ಅತ್ಯಂತ ಸುಲಭವಾಗಿ ಬಂದೂಕು ಖರೀದಿಸಲು ಅಲ್ಲಿ ಸಾಧ್ಯ. ಬಂದೂಕು ನೀತಿಯನ್ನು ಬದಲಾಯಿಸಿ, ಬಂದೂಕು ಖರೀದಿಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸುವ ಅಗತ್ಯ ಇದೆ ಎಂಬುದನ್ನು ಟ್ರಂಪ್‌ ಮೇಲಿನ ದಾಳಿಯು ತೋರಿಸುತ್ತದೆ.

ಇರಾನ್ ದಾಳಿಗೆ ನಂಟು?

ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ನಾಯಕರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಸ್ಥಾನವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಸ್ತುತ ಎಫ್‌ಬಿಐ ಹಾಗೂ ಗುಪ್ತಚರ ಇಲಾಖೆಯು ದಾಳಿಯ ಹಿಂದಿನ ಸಂಚು ಬಯಲು ಮಾಡಲು ತನಿಖೆ ನಡೆಸುತ್ತಿದೆ. ಇದಕ್ಕೂ ಇರಾನ್ ದಾಳಿಗೂ ಸಂಬಂಧವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani