Dailyhunt Logo
  • Light mode
    Follow system
    Dark mode
    • Play Story
    • App Story
'ಹೊರ್ಮುಜ್' ಕಾವಲಿಗೆ ಯುದ್ಧ ನೌಕೆ ಕಳುಹಿಸಿ: 7 ರಾಷ್ಟ್ರಗಳಿಗೆ ಟ್ರಂ‍‍ಪ್ ಒತ್ತಾಯ

'ಹೊರ್ಮುಜ್' ಕಾವಲಿಗೆ ಯುದ್ಧ ನೌಕೆ ಕಳುಹಿಸಿ: 7 ರಾಷ್ಟ್ರಗಳಿಗೆ ಟ್ರಂ‍‍ಪ್ ಒತ್ತಾಯ

ಕೈರೊ: ಹೊರ್ಮುಜ್ ಜಲಸಂಧಿ ಮುಕ್ತವಾಗಿರಿಸಲು ಯುದ್ಧ ನೌಕೆಗಳನ್ನು ಕಳುಹಿಸಬೇಕು ಎಂದು 7 ರಾಷ್ಟ್ರಗಳೊಂದಿಗೆ ಬೇಡಿಕೆ ಇಟ್ಟಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಆದರೆ ಆ ರಾಷ್ಟ್ರಗಳು ಯಾವುದೆಂದು ಅವರು ಬಹಿರಂಗಪಡಿಸಲಿಲ್ಲ.

ಮಾತುಕತೆಗೆ ನಾವು ಸಿದ್ಧವಿದ್ದರೂ, ಇರಾನ್ ತಯಾರಿಲ್ಲ: ಅಮೆರಿಕ ಅಧ್ಯಕ್ಷ ಟ್ರಂಪ್

'ತಮ್ಮ ಪ್ರದೇಶವನ್ನು ಉಳಿಸಿಕೊಳ್ಳಲು ಈ ರಾಷ್ಟ್ರಗಳು ಮುಂದೆ ಬರಬೇಕು ಎಂದು ನಾನು ಒತ್ತಾಯಿಸುತ್ತೇನೆ.

ಯಾಕೆಂದರೆ ಅದು ಅವರದೇ ಪ್ರದೇಶ' ಎಂದು ಹೇಳಿದ್ದಾರೆ.

ಹೊರ್ಮುಜ್ ಜಲಸಂಧಿಯಿಂದ ಅಮೆರಿಕಕ್ಕೆ ಏನೂ ಆಗಬೇಕಿಲ್ಲ. ಯಾಕೆಂದರೆ ಅಮೆರಿಕಕ್ಕೆ ಸ್ವಂತ ತೈಲ ಲಭ್ಯತೆ ಇದೆ' ಎಂದು ವರದಿಗಾರರೊಂದಿಗೆ ಹೇಳಿದ್ದಾರೆ.

ಫ್ಲೋರಿಡಾದಿಂದ ವಾಷಿಂಗ್ಟನ್‌ಗೆ 'ಏರ್‌ಫೋರ್ಸ್ ಒನ್' ವಿಮಾನದಲ್ಲಿ ತೆರಳುವಾಗ ಆವರು ಮಾತನಾಡಿದ್ದಾರೆ.

ಚೀನಾಗೆ ಇದೇ ಜಲಸಂಧಿಯಿಂದ ಶೇ 90ರಷ್ಟು ತೈಲ ಬರುತ್ತದೆ. ಆದರೆ ಅಮೆರಿಕಕ್ಕೆ ಅಲ್ಪ ‍ಪ್ರಮಾಣದ ತೈಲ ಸರಬರಾಜಾಗುತ್ತದೆ ಎಂದು ಹೇಳಿದ ಅವರು, ಚೀನಾ ಕೈಜೋಡಿಸುವುದೇ ಎನ್ನುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ಹೊರ್ಮುಜ್ ಜಲಸಂಧಿಗೆ ಯುದ್ಧನೌಕೆಗಳನ್ನು ರವಾನಿಸಲು ಟ್ರಂಪ್ ಕರೆ

'ಇತರ ದೇಶಗಳು ನಮ್ಮೊಂದಿಗೆ ಜಲಸಂಧಿಯಲ್ಲಿ ಕಾವಲು ಇದ್ದರೆ ಒಳ್ಳೆಯದು, ಅವರಿಗೆ ನಾವು ಸಹಾಯ ಮಾಡುತ್ತೇವೆ. ನಾವು ಅವರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ' ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕ ಹಾಗೂ ಅದರ ಮಿತ್ರ ದೇಶಗಳನ್ನು ಹೊರತುಪಡಿಸಿ ಎಲ್ಲಾ ದೇಶಗಳ ಹಡಗುಗಳಿಗೆ ಹೊರ್ಮುಜ್ ಜಲಸಂಧಿ ಮುಕ್ತವಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಈ ಹಿಂದೆ ಹೇಳಿದ್ದರು.

'ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಲು ಅನುಮತಿ ನೀಡಬೇಕು ಎಂದು ಹಲವು ರಾಷ್ಟ್ರಗಳು ನಮಗೆ ಮನವಿ ಮಾಡಿವೆ. ಆದರೆ ಅದನ್ನು ನಮ್ಮ ಸೇನೆ ನಿರ್ಧರಿಸಲಿದೆ. ಈಗಾಗಲೇ ಹಲವು ದೇಶಗಳ ಹಡಗುಗಳಿಗೆ ಜಲಸಂಧಿಯನ್ನು ದಾಟಿ ಹೋಗಲು ಅನುಮತಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.

ಇರಾನ್‌ ಶರಣಾಗುವ ಹಂತದಲ್ಲಿದೆ: ಜಿ7 ಸಭೆಯಲ್ಲಿ ಡೊನಾಲ್ಡ್ ಟ್ರಂಪ್
Dailyhunt
Disclaimer: This content has not been generated, created or edited by Dailyhunt. Publisher: Prajavani