Dailyhunt Logo
  • Light mode
    Follow system
    Dark mode
    • Play Story
    • App Story
ಜಗತ್ತಿಗೆ ಸವಾಲಾಗುತ್ತಿದೆ ಎ.ಐ ಡೇಟಾ ಸೆಂಟರ್‌ಗಳ ವಿದ್ಯುತ್ ‍ದಾಹ

ಜಗತ್ತಿಗೆ ಸವಾಲಾಗುತ್ತಿದೆ ಎ.ಐ ಡೇಟಾ ಸೆಂಟರ್‌ಗಳ ವಿದ್ಯುತ್ ‍ದಾಹ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಜಗತ್ತಿಗೆ ಸವಾಲಾಗುತ್ತಿದೆ ಎ.ಐ ಡೇಟಾ ಸೆಂಟರ್‌ಗಳ ವಿದ್ಯುತ್ ‍ದಾಹ

ಒಂದು ಸಾಲಿನಲ್ಲಿಕೃತಕ ಬುದ್ಧಿಮತ್ತೆಯ ಡೇಟಾ ಸೆಂಟರ್‌ಗಳ ಅತಿಯಾದ ವಿದ್ಯುತ್ ಬಳಕೆಯು ಜಾಗತಿಕ ಇಂಧನ ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ಹೇರುತ್ತಿದ್ದು, ಶಾಶ್ವತ ವಿದ್ಯುತ್ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ.

ಪ್ರಮುಖ ಅಂಶಗಳು• ಎಐನಿಂದ ಹೆಚ್ಚಿದ ವಿದ್ಯುತ್ ಬೇಡಿಕೆಕೃತಕ ಬುದ್ಧಿಮತ್ತೆಯ ಡೇಟಾ ಸೆಂಟರ್‌ಗಳ ಕ್ಷಿಪ್ರ ಬೆಳವಣಿಗೆಯಿಂದಾಗಿ ಜಾಗತಿಕ ಮಟ್ಟದಲ್ಲಿ ವಿದ್ಯುತ್ ಬೇಡಿಕೆ ಹಿಂದೆಂದೂ ಕಾಣದ ಮಟ್ಟದಲ್ಲಿ ಏರಿಕೆಯಾಗುತ್ತಿದೆ.• ತಾಂತ್ರಿಕ ಕಂಪನಿಗಳ ಬೃಹತ್ ಹೂಡಿಕೆಮೈಕ್ರೋಸಾಫ್ಟ್, ಅಮೆಜಾನ್ ಮತ್ತು ಗೂಗಲ್‌ನಂತಹ ಕಂಪನಿಗಳು ಎಐ ಮೂಲಸೌಕರ್ಯಕ್ಕಾಗಿ ನೂರಾರು ಬಿಲಿಯನ್ ಡಾಲರ್‌ಗಳನ್ನು ಸುರಿಯುತ್ತಿದ್ದು, ಹೊಸ ವಿದ್ಯುತ್ ಯೋಜನೆಗಳಿಗೆ ಮುಂದಾಗಿವೆ.• ಗ್ರಿಡ್‌ಗಳ ಮೇಲೆ ತೀವ್ರ ಒತ್ತಡಐರ್ಲೆಂಡ್ ಮತ್ತು ಅಮೆರಿಕದಂತಹ ದೇಶಗಳಲ್ಲಿ ಡೇಟಾ ಸೆಂಟರ್‌ಗಳ ವಿದ್ಯುತ್ ಬೇಡಿಕೆಯಿಂದಾಗಿ ಹೊಸ ಸಂಪರ್ಕಗಳನ್ನು ನೀಡಲು ವಿದ್ಯುತ್ ಸರಬರಾಜು ಸಂಸ್ಥೆಗಳು ಹಿಂಜರಿಯುತ್ತಿವೆ.• ಸಮನ್ವಯತೆ ಮತ್ತು ನೀತಿಯ ಕೊರತೆಎಐ ವಿಸ್ತರಣೆ ಮತ್ತು ದೀರ್ಘಕಾಲೀನ ಇಂಧನ ಯೋಜನೆಯ ನಡುವೆ ಸಮನ್ವಯದ ಕೊರತೆಯಿದೆ; ಯಾವುದೇ ದೇಶಗಳಲ್ಲಿ ಎಐ ಇಂಧನ ಬಳಕೆಯ ಬಗ್ಗೆ ಕಡ್ಡಾಯ ನಿಯಮಗಳಿಲ್ಲ.• ಪಳೆಯುಳಿಕೆ ಇಂಧನಗಳ ಸವಾಲುನವೀಕರಿಸಬಹುದಾದ ಇಂಧನಗಳ ಕಡೆಗೆ ಜಗತ್ತು ಸಾಗುತ್ತಿದ್ದರೂ, ಎಐನ ವಿದ್ಯುತ್ ಹಸಿವು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಹೆಚ್ಚಿಸುವ ಭೀತಿ ಹುಟ್ಟುಹಾಕಿದೆ.ಪ್ರಮುಖ ಅಂಕಿಅಂಶಗಳುಶೇ 92.52024ರಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ನವೀಕರಿಸಬಹುದಾದ ಇಂಧನದ ಪಾಲು183 ಟೆರಾವಾಟ್-ಅವರ್2024ರಲ್ಲಿ ಅಮೆರಿಕ ಡೇಟಾ ಸೆಂಟರ್‌ಗಳ ವಿದ್ಯುತ್ ಬಳಕೆ10 ಗಿಗಾವಾಟ್ಸ್ಟಾರ್‌ಗೇಟ್ ಯೋಜನೆಗೆ ಬೇಕಾಗುವ ವಿದ್ಯುತ್ಶೇ 21ಐರ್ಲೆಂಡ್ ವಿದ್ಯುತ್ ಬಳಕೆಯಲ್ಲಿ ಡೇಟಾ ಸೆಂಟರ್‌ಗಳ ಪಾಲುಶೇ 3ಭಾರತದ ವಿದ್ಯುತ್ ಬಳಕೆಯಲ್ಲಿ ಡೇಟಾ ಸೆಂಟರ್‌ಗಳ ಪಾಲುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಪಳೆಯುಳಿಕೆ ಇಂಧನಗಳಿಗಿಂತ ಸೌರಶಕ್ತಿ ಅಗ್ಗವಾಗಲಿದೆ, ಭವಿಷ್ಯದ ವಿದ್ಯುತ್ ಉತ್ಪಾದನೆಯಲ್ಲಿ ಅದು ಪ್ರಾಬಲ್ಯ ಸಾಧಿಸಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದರು. ಅದರಂತೆಯೇ 2024ರಲ್ಲಿ, ಜಾಗತಿಕವಾಗಿ ಉತ್ಪಾದನೆಯಾದ ಒಟ್ಟು ವಿದ್ಯುತ್‌ನಲ್ಲಿ ನವೀಕರಿಸಬಹುದಾದ ಇಂಧನದ ಪಾಲು ಶೇ 92.5 ರಷ್ಟಿತ್ತು. ಇದರಲ್ಲಿ ಸೌರಶಕ್ತಿಯು ಕೊಡುಗೆ ಭಾರಿ ದೊಡ್ಡದು. ಚೀನಾದಂತಹ ದೇಶಗಳು ಸೌರ ಫಲಕ ಮತ್ತು ಬ್ಯಾಟರಿ ಉತ್ಪಾದನೆಯನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಿವೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹಗಲಿನಲ್ಲಿ ಬಳಕೆಯಾಗುವುದಕ್ಕಿಂತ ಅಧಿಕ ವಿದ್ಯುತ್ ನವೀಕರಿಸಬಹುದಾದ ಮೂಲಗಳಿಂದಲೇ ಉತ್ಪಾದನೆಯಾಗುತ್ತದೆ.

ಜಗತ್ತನ್ನು ಬದಲಿಸಲಿರುವ ಇಂಧನ ಬಿಕ್ಕಟ್ಟು

ಆದರೆ, ಕೃತಕ ಬುದ್ಧಿಮತ್ತೆಯ ಡೇಟಾ ಸೆಂಟರ್‌ಗಳ ಕ್ಷಿಪ್ರ ಬೆಳವಣಿಗೆಯು ವಿದ್ಯುತ್ ವ್ಯವಸ್ಥೆಗಳ ಮೇಲೆ ಹಿಂದೆಂದೂ ಕಾಣದ ಒತ್ತಡವನ್ನು ಸೃಷ್ಟಿಸುತ್ತಿದೆ.

ವರದಿಗಳ ಪ್ರಕಾರ, ಅಮೆರಿಕದ ಡೇಟಾ ಸೆಂಟರ್‌ಗಳು 2024ರಲ್ಲಿ 183 ಟೆರಾವಾಟ್-ಅವರ್ (TWh) ವಿದ್ಯುತ್ ಬಳಕೆ ಮಾಡಿವೆ. ಇದು ಪಾಕಿಸ್ತಾನದ ವಾರ್ಷಿಕ ವಿದ್ಯುತ್ ಬೇಡಿಕೆಗೆ ಸಮ. ಮುಂಬರುವ ವರ್ಷಗಳಲ್ಲಿ ಎಐ ತಂತ್ರಜ್ಞಾನಗಳಿಂದಾಗಿ ವಿದ್ಯುತ್ ಬೇಡಿಕೆಯು ತೀವ್ರವಾಗಿ ಏರಿಕೆಯಾಗುವ ಸಾಧ್ಯತೆ ಇದೆ. 2028ರ ವೇಳೆಗೆ, ಡೇಟಾ ಸೆಂಟರ್‌ಗಳ ಒಟ್ಟು ವಿದ್ಯುತ್ ಬಳಕೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಎ.ಐ ಸಂಬಂಧಿತ ಕಾರ್ಯಾಚರಣೆಗಳಿಗೇ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಪ್ರಮುಖ ತಂತ್ರಜ್ಞಾನ ಕಂಪನಿಗಳು ಈಗ ಎಐ ಮೂಲಸೌಕರ್ಯಗಳಲ್ಲಿ ಭಾರಿ ಹೂಡಿಕೆ ಮಾಡುತ್ತಿವೆ. ಓಪನ್ ಎಐ, ಸಾಫ್ಟ್‌ಬ್ಯಾಂಕ್, ಒರಾಕಲ್ ಮತ್ತು ಎಂಜಿಎಕ್ಸ್ ಕಂಪನಿಗಳು ಸೇರಿ 500 ಬಿಲಿಯನ್ ಡಾಲರ್ ವೆಚ್ಚದ 'ಸ್ಟಾರ್‌ಗೇಟ್ ಪ್ರಾಜೆಕ್ಟ್' ಅನ್ನು ಘೋಷಿಸಿವೆ. ಇತ್ತ ಮೆಟಾ, ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಆಲ್ಫಾಬೆಟ್ ಕಂಪನಿಗಳು 2025ರಲ್ಲೇ ಎಐ ಮೂಲಸೌಕರ್ಯಕ್ಕಾಗಿ ಸುಮಾರು 320 ಬಿಲಿಯನ್ ಡಾಲರ್ ಹೂಡಿಕೆ ಮಾಡಿವೆ.

ಅಮೆರಿಕದ ಎ.ಐ ತಂತ್ರಜ್ಞಾನವನ್ನು ಚೀನಾ ಕದಿಯುತ್ತಿದೆ: ಶ್ವೇತಭವನದ ಅಧಿಕಾರಿ

ಭವಿಷ್ಯದ ಇಂಧನ ಬೇಡಿಕೆಯ ಪ್ರಮಾಣ ಯಾವ ಮಟ್ಟದಲ್ಲಿ ಇರಬಹುದು ಎನ್ನುವುದನ್ನು ಈ ಬೃಹತ್ ಯೋಜನೆಗಳು ಸಾಬೀತುಪಡಿಸುತ್ತವೆ:

  • ಮೈಕ್ರೋಸಾಫ್ಟ್ ತನ್ನ ಎಐ ಕಾರ್ಯಾಚರಣೆಗಳಿಗೆ ಬೇಕಾದ ವಿದ್ಯುತ್ ಹೊಂದಿಸಿಕೊಳ್ಳಲು 'ತ್ರೀ ಮೈಲ್ ಐಲ್ಯಾಂಡ್'ನಲ್ಲಿರುವ ಪರಮಾಣು ರಿಯಾಕ್ಟರ್ ಅನ್ನು ಪುನರಾರಂಭಿಸಲು ಕಾನ್‌ಸ್ಟೆಲೇಷನ್ ಎನರ್ಜಿ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

  • ಇಂಡಿಯಾನಾದಲ್ಲಿ ಅಮೆಜಾನ್ 30-ಡೇಟಾ ಸೆಂಟರ್‌ಗಳ ಸಂಕೀರ್ಣವನ್ನು ನಿರ್ಮಿಸುತ್ತಿದ್ದು, ಇದಕ್ಕೆ 2.2 ಗಿಗಾವಾಟ್ ವಿದ್ಯುತ್ ಬೇಕಾಗುವ ನಿರೀಕ್ಷೆಯಿದೆ.

  • ಮೆಟಾ ಕಂಪನಿಯ ಲೂಯಿಸಿಯಾನ ಡೇಟಾ ಸೆಂಟರ್ ಕ್ಯಾಂಪಸ್ ಸ್ಥಳೀಯ ವಿದ್ಯುತ್ ಸರಬರಾಜು ಸಂಸ್ಥೆಯ ಬೇಡಿಕೆಯನ್ನು ಶೇ 30 ರಷ್ಟು ಹೆಚ್ಚಿಸಲಿದೆ.

  • ಸ್ಟಾರ್‌ಗೇಟ್ ಯೋಜನೆಗೆ 10 ಗಿಗಾವಾಟ್ ಸಾಮರ್ಥ್ಯದ ವಿದ್ಯುತ್ ಬೇಕಾಗಬಹುದು. ಇದು ಸುಮಾರು 1 ಕೋಟಿ ಮನೆಗಳು ಬಳಸುವ ವಿದ್ಯುತ್‌ಗೆ ಸಮ.

ಗೂಗಲ್‌ಗೆ ಸವಾಲೊಡ್ಡಿದ ಚೀನಾದ ಡೀಪ್‌ಸೀಕ್‌ನ ಹೊಸ ಎ.ಐ ಮಾದರಿ

ಅತಿಯಾದ ವಿದ್ಯುತ್ ಬಳಕೆಯ ಪರಿಣಾಮವು ಈಗಾಗಲೇ ಕೆಲವು ಗೋಚರಿಸತೊಡಗಿವೆ. ಐರ್ಲೆಂಡ್‌ನ ಒಟ್ಟು ವಿದ್ಯುತ್ ಬಳಕೆಯ ಶೇ 21 ರಷ್ಟು ಡೇಟಾ ಸೆಂಟರ್‌ಗಳು ಬಳಸುತ್ತಿವೆ. 2030ರ ವೇಳೆಗೆ ಶೇ 30ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ. ವಿದ್ಯುತ್ ಪೂರೈಕೆಯ ಆತಂಕದ ಹಿನ್ನೆಲೆಯಲ್ಲಿ ಐರ್ಲೆಂಡ್, ಜರ್ಮನಿ, ಸಿಂಗಾಪುರ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಗ್ರಿಡ್ ಆಪರೇಟರ್‌ಗಳು ಹೊಸ ಡೇಟಾ ಸೆಂಟರ್‌ಗಳಿಗೆ ವಿದ್ಯುತ್ ಸಂಪರ್ಕ ನೀಡುವುದನ್ನೇ ನಿಲ್ಲಿಸಿದ್ದಾರೆ. ಭಾರತದಲ್ಲೂ ಕೂಡ ಡೇಟಾ ಸೆಂಟರ್‌ಗಳು ವಾರ್ಷಿಕವಾಗಿ 10-15 ಟೆರಾ ಅವರ್‌ಗಳಷ್ಟು ವಿದ್ಯುತ್ ಬಳಕೆ ಮಾಡುತ್ತಿವೆ. ಇದು ಭಾರತದ ವಿದ್ಯುತ್ ಬಳಕೆಯ ಶೇ 3ಕ್ಕೆ ಸಮ.

ವಿದ್ಯುತ್ ಪ್ರಸರಣ ಮೂಲಸೌಕರ್ಯ ವಿಸ್ತರಣೆಗಿಂತಲೂ ವೇಗವಾಗಿ ಎಐಗೆ ವಿದ್ಯುತ್ ಬೇಡಿಕೆ ಬೆಳೆಯುತ್ತಿದೆ. ಡೇಟಾ ಸೆಂಟರ್‌ಗಳ ಬೆಳವಣಿಗೆಗೆ ಪೂರಕವಾಗಿ ಮೂಲಸೌಕರ್ಯ ಮೇಲ್ದರ್ಜೆಗೇರಿಸಬೇಕಾಗಿರುವುದರಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ದರ ಏರಿಕೆಯಾಗುತ್ತಿವೆ. ವಿದ್ಯುತ್ ಪೂರೈಕೆ ಸಂಸ್ಥೆಗಳು ಹೊಸ ಗ್ಯಾಸ್ ಪವರ್ ಪ್ಲಾಂಟ್‌ಗಳ ಬಗ್ಗೆ ಆಲೋಚಿಸುವಂತಾಗಿದೆ.

ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್‌ನ ಮಿಥೋಸ್: ಚೀನಾ, ರಷ್ಯಾಗೆ ನಡುಕ

ಸದ್ಯ ಯಾವುದೇ ದೇಶಗಳು ಎ.ಐ ಇಂಧನ ಬಳಕೆಯ ಬಗ್ಗೆ ಸ್ಪಷ್ಟ ನಿಯಮಗಳನ್ನು ರೂಪಿಸಿಲ್ಲ. ಎಐ ವ್ಯವಸ್ಥೆಗಳಿಗೆ ಯಾವುದೇ ಕಡ್ಡಾಯ ದಕ್ಷತೆಯ ಮಾನದಂಡಗಳಿಲ್ಲ. ಎಐ ವಿಸ್ತರಣೆ ಹಾಗೂ ದೀರ್ಘಕಾಲೀನ ಇಂಧನ ಯೋಜನೆಯ ನಡುವೆ ಸಮನ್ವಯದ ಕೊರತೆ ಎದುರಾಗಿದೆ.

ನವೀಕರಿಸಬಹುದಾದ ಇಂಧನ ಬೆಳವಣಿಗೆಯು ಮುಂದುವರಿಯುತ್ತಿದ್ದರೂ, ಎಐನಿಂದ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯು ಇಂಧನ ವ್ಯವಸ್ಥೆಗಳ ಮೇಲೆ ತೀವ್ರ ಒತ್ತಡವನ್ನು ಹೇರಬಹುದು. ಇದು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಜಾಗತಿಕ ಪ್ರಯತ್ನಗಳನ್ನು ಸಂಕೀರ್ಣಗೊಳಿಸಬಹುದು.

(ಆಧಾರ: ದಿ ನ್ಯೂಯಾರ್ಕ್ ಟೈಮ್ಸ್, ರಾಯಿಟರ್ಸ್)

ಎ.ಐ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಕೊಲ್ಲಿ ಸಂಘರ್ಷ
Dailyhunt
Disclaimer: This content has not been generated, created or edited by Dailyhunt. Publisher: Prajavani