ತಾಸುಗಟ್ಟಲೆ ಮಾತನಾಡುತ್ತ, ಕಪ್ಪು ಹಲಗೆಗಳ ಮೇಲೆ ಬರೆಯುತ್ತ ಮಕ್ಕಳಿಗೆ ಮಾಡುವ ಪಾಠ ಬಹುಕಾಲ ನೆನಪಿನಲ್ಲಿ ಉಳಿಯುವುದು ಕಷ್ಟ. ಆದರೆ, ಗೊಂಬೆಗಳನ್ನು ಬಳಸಿ ಬೋಧಿಸಿದರೆ, ದೀರ್ಘ ಕಾಲದವರೆಗೆ ನೆನಪಿನಲ್ಲಿ ಉಳಿಯುತ್ತದೆ.
ಇಂತಹ ಕಲೆಯನ್ನು ಕರಗತ ಮಾಡಿಕೊಂಡವರು ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕು ಚಿಬ್ಬಲಗೇರಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸಿದ್ದು ಬಿರಾದಾರ.
ಗೊಂಬೆಗಳನ್ನು ಬಳಸಿ ಪಾಠ ಬೋಧಿಸುತ್ತಲೇ ಪ್ರಸಿದ್ಧಿಗೆ ಬಂದವರು ಸಿದ್ದು ಬಿರಾದಾರ. ಅವರ ಹೆಸರು ಈಗ ಹಳಿಯಾಳದ ಪುಟ್ಟ ಹಳ್ಳಿಯಿಂದ ಜರ್ಮನಿಯ ಫ್ರಾಂಕ್‍ಫರ್ಟ್‌ವರೆಗೆ ಹಬ್ಬಿಕೊಂಡಿದೆ. ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ ಶೈಕ್ಷಣಿಕ ತರಬೇತಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಅವರು ತೆರಳುತ್ತಾರೆ.
ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕು ಮುದ್ದಾಪುರದ ವೀರಭದ್ರಪ್ಪ ಹಾಗೂ ಯಮನವ್ವ ದಂಪತಿಗಳ ಪುತ್ರ ಸಿದ್ದು ಅವರು, ಈ ಮೊದಲು ಶಿರಸಿ ತಾಲ್ಲೂಕು ಸುಗಾವಿ ಮತ್ತು ಶೀಗೆಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡಿದ್ದರು. ಬಳಿಕ ಹಳಿಯಾಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸಲಾರಂಭಿಸಿದರು.


ಸಿದ್ದು ಬಿರಾದಾರ.
'ಮಕ್ಕಳಿಗೆ ಗೊಂಬೆಗಳೆಂದರೆ ಅಚ್ಚುಮೆಚ್ಚು. ಅವರು ಗೊಂಬೆಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಆ ಮೂಲಕ ಪಾಠ ಬೋಧನೆ ಮಾಡುವುದರಿಂದ ಪರಿಣಾಮಕಾರಿಯಾದ ಕಲಿಕೆ ಆಗುತ್ತದೆ. ಮಕ್ಕಳಿಗೆ ಗೊಂಬೆಯಾಟದ ಮೂಲಕ ಕ್ಲಿಷ್ಟಕರ ಪಾಠ ಬೋಧನೆ ಮಾಡುವಲ್ಲಿ ಯಶಸ್ಸನ್ನು ಕಂಡಿದ್ದೇನೆ' ಎನ್ನುತ್ತಾರೆ ಶಿಕ್ಷಕ ಸಿದ್ದು ಬಿರಾದಾರ.
ಗೊಂಬೆಯಾಟದ ಪಾಠ ನಾಲ್ಕು ಗೋಡೆಗಳ ನಡುವಿನ ಪಾಠಕ್ಕೆ ಸೀಮಿತವಾಗಿಲ್ಲ. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ಜೊತೆಗೆ ರಾಮಾಯಣ, ಮಹಾಭಾರತ ಸೇರಿದಂತೆ ನಾನಾ ಕಥೆಗಳ ಮೂಲಕ ಮಕ್ಕಳನ್ನು ರಂಜಿಸುತ್ತಿದ್ದಾರೆ.
ಹುಳಿಯಾರು: ನವರಾತ್ರಿ ಸಂಭ್ರಮಕ್ಕೆ 'ಬೊಂಬೆ' ಕೂರಿಸುವ ಸಂಪ್ರದಾಯಹಳಿಯಾಳದ ಗ್ರಾಮೀಣ ಭಾಗದಲ್ಲಿ ಜರುಗುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿದ್ದು ಗೊಂಬೆಯಾಟ ಪ್ರದರ್ಶಿಸುತ್ತಾರೆ. ಆ ಮೂಲಕ ಪೌರಾಣಿಕ ಕಥೆಗಳನ್ನು, ಪರಿಸರ ಸಂರಕ್ಷಣೆಯ ಪಾಠವನ್ನು ಸರಳ ರೀತಿಯಲ್ಲಿ, ಪ್ರಭಾವಶಾಲಿಯಾಗಿ ಗ್ರಾಮಸ್ಥರಿಗೆ ಹೇಳುತ್ತಾರೆ.
'ಶಿಕ್ಷಕ ಸಿದ್ದು ಬಿರಾದಾರ ಅವರು ಶಾಲೆಯ ಮಕ್ಕಳಿಗೂ ಗೊಂಬೆಯಾಟ ಪ್ರದರ್ಶನದ ತರಬೇತಿ ನೀಡಿದ್ದಾರೆ. ಮಕ್ಕಳು ಗೊಂಬೆಯಾಟದಲ್ಲಿ ಪರಿಸರ ಸಂರಕ್ಷಣೆಯ ಜೊತೆಗೆ ರಾಮಾಯಣ ಮಹಾಭಾರತ ಸೇರಿದಂತೆ ವಿವಿಧ ಸಾಮಾಜಿಕ ಜಾಗೃತಿ ಮೂಡಿಸುವ ನಾನಾ ಕಥೆಗಳನ್ನು ಪ್ರದರ್ಶಿಸಬಲ್ಲರು. ಹೀಗಾಗಿ ಗ್ರಾಮದ ಜನರು ಅವರನ್ನು ಪ್ರೀತಿಯಿಂದ 'ಗೊಂಬೆ ಮಾಸ್ತರ್' ಎನ್ನುತ್ತೇವೆ' ಎಂಬುದಾಗಿ ಚಿಬ್ಬಲಗೇರಿ ಭಾಗದ ಜನರು ಹೇಳುತ್ತಾರೆ.
ಬಿದಿರಿನಿಂದ ಬದುಕು ಕಟ್ಟಿಕೊಂಡ ಫಕ್ಕೀರಪ್ಪ:ಹಲವು ಕುಟುಂಬಗಳಿಗೆ ಸ್ವಾವಲಂಬನೆಯ ದಾರಿ'ಶಾಲಾ ಕೊಠಡಿಯನ್ನು ಗೊಂಬೆಯಾಟದ ಅಖಾಡವನ್ನಾಗಿಸಿ ಕಲಿಕೆಯ ವಾತಾವರಣ ಸೃಷ್ಠಿಸಿದ್ದಾರೆ. ತಾವೇ ತಯಾರಿಸಿದ ಬಗೆಬಗೆಯ 260ಕ್ಕಿಂತ ಹೆಚ್ಚು ಗೊಂಬೆಗಳನ್ನು ಬಳಸಿ ವಿಜ್ಞಾನ ಪಾಠ ಭೋದನೆ ಮಾಡುತ್ತಾರೆ. 'ನೋಡಿ ನಲಿ ಆಡಿ ಕಲಿ' ತತ್ವವನ್ನು ಹೇಳುವ ಅವರು ಮಕ್ಕಳಿಂದ ಗೊಂಬೆಯಾಟ ಮಾಡಿಸಿ, ಮಕ್ಕಳು ನಲಿಯುತ್ತಲೇ ಕಲಿಯಬಹುದು, ಕಲಿತಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ' ಎಂಬುದಾಗಿ ವಿದ್ಯಾರ್ಥಿ ಪಾಲಕರು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

ಮುಖವಾಡಗಳು
ಪದವೀಧರೆಯ ಗೊಂಬೆ ಪ್ರೀತಿ ಸಂಸ್ಕೃತಿ, ಪರಂಪರೆಯ ಅಭಿವ್ಯಕ್ತಿವಿಜ್ಞಾನ ವಿಷಯದ ಜೊತೆ ಜೊತೆಗೆ ಜಾಗತಿಕ ತಾಪಮಾನ, ಪರಿಸರದ ಪರಿಚಯ ಮತ್ತು ಸಂರಕ್ಷಣೆ, ನಮ್ಮ ಆರೋಗ್ಯ, ಹೂಗಳ ಪರಿಚಯ, ಸಮಾಜಕ್ಕೆ ಶರಣರ, ಬೆಳಕು ಹಂಚಿದ ಬಾಲಕ, ಪುಷ್ಪರಾಣಿ ಹೂಗಳ ಪರಿಚಯ ಸೇರಿದಂತೆ 35ಕ್ಕೂ ಹೆಚ್ಚು ರೂಪಕಗಳನ್ನು ಪ್ರದರ್ಶಿಸುತ್ತಾರೆ. ಬೆರಳುಗೊಂಬೆ, ಕೈಗೌಸುಗೊಂಬೆ, ಸುತ್ರದಗೊಂಬೆ, ಕಡ್ಡಿ ಗೊಂಬೆ, ನೆರಳು ಬೆಳಕಿನ ಗೊಂಬೆ, ಮುಖವಾಡ ಗೊಂಬೆ, ಹೀಗೆ 360ಕ್ಕೂ ಹೆಚ್ಚು ಗೊಂಬೆಗಳನ್ನು ಬಳಸುತ್ತಾರೆ.35ಕ್ಕೂ ಹೆಚ್ಚು ರೂಪಕಹಳೆ ವಿದ್ಯಾರ್ಥಿಗಳ ಗೊಂಬೆಯಾಟ ತಂಡದೊಂದಿಗೆ ದೇಶದ ಪ್ರತಿಷ್ಟಿತ ಉತ್ಸವಗಳಾದ ಮೈಸೂರು ದಸರಾ ಉತ್ಸವ, ವಿಶ್ವ ಪ್ರಸಿದ್ಧ ಹಂಪಿ ಉತ್ಸವ, ಹೊರನಾಡು ಉತ್ಸವ ಅಷ್ಟೇ ಅಲ್ಲದೆ ದೆಹಲಿ, ಆಸ್ಸಾಂ, ಹರಿಯಾಣ, ಉತ್ತರಪ್ರದೇಶ, ತಮಿಳನಾಡು, ಮಹಾರಾಷ್ಟ್ರ, ಕೇರಳಂ, ಗೋವಾ, ಆಂಧ್ರಪ್ರದೇಶ ಹಾಗೂ ಹೊರದೇಶ ನೇಪಾಳದಲ್ಲೂ ಗೊಂಬೆಯಾಟದ ಪ್ರದರ್ಶನ ನೀಡಿದ್ದಾರೆ. ಕದಂಬೋತ್ಸವ, ಕರಾವಳಿ ಉತ್ಸವ, ಮಲೆನಾಡು ಉತ್ಸವ ಹೀಗೆ ನಾನಾ ಉತ್ಸವಗಳಲ್ಲಿ ಕಳೆದ 15 ವರ್ಷಗಳಿಂದ ಗೊಂಬೆಗಳು ಪ್ರದರ್ಶನಗೊಂಡಿವೆ.ಗೊಂಬೆಯ ನಡಿಗೆ'ಶಿಕ್ಷಣಕ್ಕೆ ಒತ್ತು ನೀಡಿ'
ಗೊಂಬೆ ಮಾಸ್ತರ್
'ಬಾಲ್ಯದಿಂದಲೂ ಕಲೆ, ಸಂಗೀತ, ಸಾಹಿತ್ಯದಲ್ಲಿ ಆಸಕ್ತಿಯಿತ್ತು. ನವದೆಹಲಿಯ ಸಿಸಿಆರ್‌ಟಿಯಿಂದ 2005ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಪಠ್ಯಕ್ರಮ ಬೋಧನೆಯಲ್ಲಿ ಗೊಂಬೆಗಳ ಪಾತ್ರ ಎಂಬ ತರಬೇತಿ ಪಡೆದೆ. ಆನಂತರ ಗೊಂಬೆಗಳೊಂದಿಗೆ ಪಾಠ ಮಾಡುವ ರೂಢಿಯನ್ನು ಆರಂಭಿಸಿದೆ. ನನ್ನ ವೇತನದಿಂದ ಗೊಂಬೆಯಾಟದ ಸಾಮಗ್ರಿ ಸಿದ್ಧಪಡಿಸುವೆ. ಪತ್ನಿ ಸುಜಾತಾ, ಮಕ್ಕಳಾದ ಪ್ರಜ್ವಲ್, ಶ್ರೇಯಾ, ಜೊತೆಗೆ ಶಾಲಾ ಮಕ್ಕಳು ನೆರವು ನೀಡುತ್ತಾರೆ. ಕಡ್ಡಿಗೊಂಬೆ, ಕೀಲು ಗೊಂಬೆ, ಸೂತ್ರದ ಗೊಂಬೆ, ಕೈಗೊಂಬೆ, ಮುಖವಾಡ ಗೊಂಬೆ ಅವರು ತಯಾರಿಸುತ್ತೇನೆ. ಆಸಕ್ತರಿಗೆ ತರಬೇತಿ ನೀಡುತ್ತೇನೆ' ಎನ್ನುತ್ತಾರೆ ಸಿದ್ದು ಬಿರಾದಾರ.
ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯ, ಕೇಂದ್ರ ಸರ್ಕಾರದ ಸಾಂಸ್ಕೃತಿಕ ಮಂತ್ರಾಲಯದ ಸಿಸಿಆರ್‌ಟಿಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿರುವ ಸಿದ್ದು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಪ್ರತಿ ವರ್ಷ ಜಿಲ್ಲೆಯ 100 ಶಿಕ್ಷಕರಿಗೆ ಪಠ್ಯಕ್ರಮ ಭೋಧನೆಯಲ್ಲಿ ಸಂಸ್ಕೃತಿ ಅಳವಡಿಕೆ ಎಂಬ ಕಾರ್ಯಾಗಾರ ನಡೆಸಿಕೊಡುತ್ತಾರೆ.
ವಿಜ್ಞಾನ ಶಿಕ್ಷಕ, ಸಿದ್ದು ಬಿರಾದಾರಗೊಂಬೆಗಳ ಬಳಕೆ ಮಾಡುತ್ತಾ ಮಕ್ಕಳಿಗೆ ಜೊತೆ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಪರಿಚಯ ಮಾಡುವುದರೊಂದಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿರುವುದು ಮಕ್ಕಳಲ್ಲಿ ಸಂತಸದಾಯಕ ಕಲಿಕೆಗೆ ಕಾರಣವಾಗಿದೆ.'ಗಾಳಿಯ ಗಮ್ಮತ್ತು', 'ಮಕ್ಕಳಿಗಾಗಿ ಗೊಂಬೆಯಾಟ' ಎಂಬ ಪುಸ್ತಕಗಳ ಜೊತೆಗೆ, 'ಸೂತ್ರದ ಗೊಂಬೆಯಾಟದ ಹುಟ್ಟು ಮತ್ತು ಬೆಳವಣಿಗೆ', 'ಬಡಾ ಬಡಗು ತಿಟ್ಟು ಯಕ್ಷಗಾನದಲ್ಲಿ ವಸ್ತ್ರ ವಿನ್ಯಾಸ ಮತ್ತು ವೈವಿಧ್ಯತೆ', 'ಮಕ್ಕಳ ಕಲಿಕೆಯಲ್ಲಿ ನಾಟಕಗಳ ಪಾತ್ರ' ಎಂಬ ಸಂಶೋಧನಾ ಗ್ರಂಥ ರಚಿಸಿದ್ದಾರೆ.
ಚಿತ್ರದುರ್ಗ ಮುರಘಾ ಮಠದಿಂದ ಶರಣ ದಂಪತಿಗಳ ಸನ್ಮಾನ, ಉಡುಪಿಯ ಶ್ರೀಕೃಷ್ಣ ಮಠದ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ 'ಪಚ್ಛೇವನಶ್ರೀ ಪ್ರಶಸ್ತಿ', 'ಗುರುಶ್ರೀ' ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ.

