ಪುಣೆ: ಮಹಾರಾಷ್ಟ್ರದ ಪುಣೆ ಬಳಿಯ ಲೋಹಾಗಢ ಕೋಟೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್‌ವಾಲ್ ಕೊಲೆ ಪ್ರಕರಣದ ತನಿಖೆಯಲ್ಲಿ ಸದ್ಯ ಆಘಾತಕಾರಿ ಸತ್ಯಗಳು ಹೊರಬರುತ್ತಿವೆ.
ಕೇತನ್‌ನನ್ನು ಕಂದಕಕ್ಕೆ ತಳ್ಳಿ ಕೊಲೆ ಮಾಡಿದ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ, ಕೊಲೆಗೂ ಮುನ್ನ 'ಕೊಲೆ ಮಾಡುವುದು ಹೇಗೆ?'
ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದರು ಎಂಬ ಕರಾಳ ಸತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ.
ನಾಡ ಬಾಂಬ್‌ಗಳು ಕೆಲಸ ಮಾಡುವುದು ಹೇಗೆ? ತುಮಕೂರು ದುರಂತದ ವಿವರಣೆ ಇಲ್ಲಿದೆನಿಶ್ಚಿತಾರ್ಥದ ಸುಂದರ ಕ್ಷಣಗಳನ್ನು ಹಂಚಿಕೊಂಡ ನಟಿ ಶರ್ಮಿಳಾ ಮಾಂಡ್ರೆಪೊಲೀಸ್ ಮೂಲಗಳ ಪ್ರಕಾರ, ಇವರಿಬ್ಬರೂ ಕೃತ್ಯ ಎಸಗುವ ಮುನ್ನವೇ ಲೋಹಾಗಢ ಕೋಟೆಗೆ ಒಂಟಿಯಾಗಿ ಭೇಟಿ ನೀಡಿ, ಕೊಲೆ ಹೇಗೆ ಮಾಡಬೇಕು ಎಂಬುದರ 'ರಿಹರ್ಸಲ್' (ತಾಲೀಮು) ನಡೆಸಿದ್ದರು. ಒಂದು ವೇಳೆ ಪೊಲೀಸರಿಗೆ ಸಿಕ್ಕಿಬಿದ್ದರೆ ಯಾವ ರೀತಿ ಉತ್ತರಿಸಬೇಕು ಎಂಬುದನ್ನು ಸಹ ಮೊದಲೇ ಸಿದ್ಧಪಡಿಸಿಕೊಂಡು ತರಬೇತಿ ನಡೆಸಿದ್ದರು.
ಸಾಕ್ಷ್ಯ ನಾಶ
ಸಿಕ್ಕಿಬೀಳುವ ಭಯದಿಂದ ಆರೋಪಿಗಳಾದ ಸಿಯಾ ಮತ್ತು ಚೇತನ್ ಕೊಲೆಗೆ ಮುನ್ನ ಮತ್ತು ಕೊಲೆಯ ನಂತರ ತಮ್ಮ ಮೊಬೈಲ್‌ನ ಚಾಟ್ ಹಿಸ್ಟರಿ ಹಾಗೂ ರಿಸೈಕಲ್ ಬಿನ್ ಅನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ್ದರು. ಸದ್ಯ ಇವರ ಮೊಬೈಲ್‌ಗಳನ್ನು ಡಿಲೀಟ್ ಆದ ಡೇಟಾ ಮರುಪಡೆಯಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಹತ್ಯೆ ಮಾಡುವ ಸಮಯದಲ್ಲಿ ಯಾರೂ ಗುರುತಿಸಬಾರದು ಎಂಬ ಕಾರಣಕ್ಕೆ ಇಬ್ಬರೂ ವೇಷ ಮರೆಸಿಕೊಳ್ಳಲು ಯೋಜಿಸಿದ್ದರು.
ಒಂದು ವೇಳೆ ಮೊದಲಿನ ಯೋಜನೆಗಳು ವಿಫಲವಾದರೆ ಬಳಸಲು ಮತ್ತೊಂದು ಪ್ಲಾನ್ ಕೂಡ ಇವರ ಬಳಿ ಸಿದ್ಧವಿತ್ತು ಎಂದು ಮಾಹಿತಿ ತಿಳಿದುಬಂದಿದೆ.
ಮೊಹರಂ ದಿನ ವಿಷದ ಮಾತ್ರೆ ಕೊಟ್ಟು 15 ಸಾವಿರ ಜನರ ಕೊಲ್ಲುವ ಸಂಚು; ವ್ಯಕ್ತಿ ಬಂಧನಮಹಿಳೆಯರ ಖಾಸಗಿ ಅಂಗದಲ್ಲಿ ಡ್ರಗ್ಸ್ ಸಾಗಣೆ: ಯುವತಿಯರು ಸೇರಿ ಏಳು ಜನ ಬಂಧನಮೊದಲ ಪ್ರಯತ್ನ ವಿಫಲವಾದಾಗ 'ಹಾವಿನ' ನಾಟಕವಾಡಿದ್ದ ಸಿಯಾ!
ಜೂನ್ 18 ರಂದು ಕೇತನ್‌ನನ್ನು ಕೊಂದ ಆರೋಪಿಗಳು, ಅದಕ್ಕೂ ಮುನ್ನ ಜೂನ್ 14 ರಂದೇ ಆತನನ್ನು ಕೊಲ್ಲಲು ಯತ್ನಿಸಿದ್ದರು. ಅಂದು ಸಿಯಾ ಕೇತನ್‌ನನ್ನು ಕೋಟೆಗೆ ಕರೆದೊಯ್ದು ಕಂದಕಕ್ಕೆ ತಳ್ಳಿದ್ದಳು. ಆದರೆ ಕೇತನ್ ಪ್ರಪಾತದ ಪೊದೆಯೊಂದನ್ನು ಗಟ್ಟಿಯಾಗಿ ಹಿಡಿದು ಪ್ರಾಣ ಉಳಿಸಿಕೊಂಡಿದ್ದನು. ತಕ್ಷಣವೇ ತೇಪೆ ಹಚ್ಚಿದ್ದ ಸಿಯಾ, ʼಅಲ್ಲಿ ಹಾವು ಇದೆʼ ಎಂದು ಜೋರಾಗಿ ಕಿರುಚಾಡಿ ದಿಕ್ಕು ತಪ್ಪಿಸಿ, ಕೇತನ್‌ನನ್ನು ಅಪ್ಪಿಕೊಂಡು ನಾಟಕವಾಡಿದ್ದಳು. ನಂತರ ಜೂನ್ 18ರಂದು ಮತ್ತೊಮ್ಮೆ ನಂಬಿಸಿ ಕೋಟೆಗೆ ಕರೆತಂದು, ಪ್ರಿಯಕರ ಚೇತನ್ ಜೊತೆ ಸೇರಿ ಹಿಂಬದಿಯಿಂದ ತಳ್ಳಿ ಕೊಲೆ ಮಾಡಿದ್ದಾಳೆ.
ತಿಥಿ ಊಟದಲ್ಲಿ 'ಸಿಹಿ' ಬಡಿಸಲಿಲ್ಲವೆಂದು 43 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ!ರಾಮ ಮಂದಿರದ ಹೆಸರಲ್ಲಿ ಲೂಟಿ ಮಾಡುತ್ತಿರುವವರು 'ಬಾಬರನ ವಂಶಸ್ಥರು':ಉದ್ಧವ್ ಠಾಕ್ರೆಸ್ಥಳ ಮಹಜರು
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪುಣೆ ಗ್ರಾಮಾಂತರ ಪೊಲೀಸರು ಇಂದು (ಭಾನುವಾರ) ಆರೋಪಿಗಳಾದ ಸಿಯಾ ಮತ್ತು ಚೇತನ್‌ನನ್ನು ಲೋಹಾಗಢ ಕೋಟೆಗೆ ಕರೆದೊಯ್ದಿದ್ದಾರೆ. ಕೃತ್ಯ ನಡೆದ ದಿನ ಅವರು ಯಾವ ಮಾರ್ಗವಾಗಿ ಬಂದರು, ಎಲ್ಲೆಲ್ಲಿ ನಿಂತಿದ್ದರು. ಕೇತನ್‌ನನ್ನು ಹೇಗೆ ತಳ್ಳಿದರು ಎಂಬ ಇಡೀ ಘಟನಾವಳಿಗಳನ್ನು ಪೊಲೀಸರು ಸ್ಥಳದಲ್ಲೇ ಮರುಸೃಷ್ಟಿಸಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.

