ಜೈಪುರ: ತಿಥಿ ಊಟದಲ್ಲಿ ಸಾಂಪ್ರದಾಯಿಕ ಸಿಹಿ ತಿಂಡಿಯಾದ 'ಮಾಲ್ಪುವಾ' ಬಡಿಸಲಿಲ್ಲ ಎಂಬ ಕಾರಣಕ್ಕೆ ಬಡ ಕುಟುಂಬವೂ ಸೇರಿದಂತೆ ಒಟ್ಟು 43 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆಘಾತಕಾರಿ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯ ಮಂಡ್ವಾರಿಯಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬವೊಂದು ಇತ್ತೀಚೆಗೆ ನಡೆದ ಅಂತ್ಯಕ್ರಿಯೆಯ ನಂತರ ಸರಳ ಊಟದ ವ್ಯವಸ್ಥೆ ಮಾಡಿತ್ತು. ಆದರೆ, ಸ್ಥಳೀಯ ಸಂಪ್ರದಾಯದ ಪ್ರಕಾರ ಭೋಜನಕೂಟದಲ್ಲಿ ʼತುಪ್ಪದ ಮಾಲ್ಪುವಾʼ ಸಿಹಿಯನ್ನು ಬಡಿಸಲು ಆ ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸಮುದಾಯದ ಹಿರಿಯರು (ಪಂಚರು) ಜೂನ್ 18ರಂದು ಆ ಕುಟುಂಬ ಮತ್ತು ಅವರಿಗೆ ಬೆಂಬಲ ನೀಡಿದ ಇತರೆ 42 ಕುಟುಂಬಗಳಿಗೆ ಬಹಿಷ್ಕಾರ ಹಾಕುವಂತೆ ಆದೇಶ ಹೊರಡಿಸಿದ್ದಾರೆ.
ಸಿನಿಮಾ ನಿರ್ದೇಶಕ, ಲೇಖಕ ಎನ್.ಎಸ್. ಶಂಕರ್ ಇನ್ನಿಲ್ಲರಾಮ ಮಂದಿರದ ಹೆಸರಲ್ಲಿ ಲೂಟಿ ಮಾಡುತ್ತಿರುವವರು 'ಬಾಬರನ ವಂಶಸ್ಥರು':ಉದ್ಧವ್ ಠಾಕ್ರೆಸಾಮಾಜಿಕ ಬಹಿಷ್ಕಾರ ಎದುರಿಸುತ್ತಿರುವ ಕುಟುಂಬಗಳು ಸದ್ಯ ಗ್ರಾಮದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ತಮಗೆ ದಿನನಿತ್ಯದ ಅಗತ್ಯ ಸೇವೆಗಳನ್ನು ನಿರಾಕರಿಸಲಾಗುತ್ತಿದೆ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಸ್ಥಳೀಯ ಅಂಗಡಿಯವರು ಈ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿಲ್ಲ. ಗ್ರಾಮದ ಸಾರ್ವಜನಿಕ ಬಾವಿಯಿಂದ ಕುಡಿಯುವ ನೀರು ಸೇದಲು ಇವರಿಗೆ ಅವಕಾಶ ನೀಡುತ್ತಿಲ್ಲ. ಸ್ಥಳೀಯ ಜಮೀನುದಾರರು ಈ ಕುಟುಂಬಗಳ ಸದಸ್ಯರಿಗೆ ತಮ್ಮ ಹೊಲಗಳಲ್ಲಿ ಕೃಷಿ ಕೆಲಸ ನೀಡಲು ನಿರಾಕರಿಸಿದ್ದಾರೆ.
ʼನಮ್ಮ ಪರಿಸ್ಥಿತಿ ತೀರಾ ಕಷ್ಟಕರವಾಗಿದೆ. ನಮಗೆ ರೇಷನ್ ಸಿಗುತ್ತಿಲ್ಲ, ಕುಡಿಯಲು ಬಾವಿಯಿಂದ ನೀರು ತರಲೂ ಬಿಡುತ್ತಿಲ್ಲʼ ಎಂದು ಸಂತ್ರಸ್ತರಲ್ಲೊಬ್ಬರಾದ ತೇಜಾರಾಮ್ ನೋವು ಹಂಚಿಕೊಂಡಿದ್ದಾರೆ.
ಲೋಹಾಗಢ ಕೊಲೆ ಪ್ರಕರಣ: ಆರೋಪಿ ಬಳಸಿದ್ದ ದ್ವಿಚಕ್ರ ವಾಹನ ವಶಕ್ಕೆ, ತನಿಖೆ ಚುರುಕುಕದನ ವಿರಾಮ ಉಲ್ಲಂಘನೆ: ಇರಾನ್ ಸೇನಾ ನೆಲೆಗಳ ಮೇಲೆ US ದಾಳಿ, ಟ್ರಂಪ್ ಎಚ್ಚರಿಕೆಮತ್ತೊಬ್ಬ ಸಂತ್ರಸ್ತ ಗೋಪಾಲ್ ಮಾತನಾಡಿ, ʼಜೂನ್ 20ರಂದು ನನ್ನ ಸಂಬಂಧಿಕರ ಮದುವೆ ಇತ್ತು. ಆದರೆ ಹಿರಿಯರು ವಿಧಿಸಿರುವ ದಂಡದ ಭಯದಿಂದ ನಾನು ಮದುವೆಗೆ ಹೋಗಲಿಲ್ಲʼ ಎಂದಿದ್ದಾರೆ. ಬಹಿಷ್ಕಾರದ ನಿಯಮ ಉಲ್ಲಂಘಿಸುವವರಿಗೆ ₹11,000 ದಂಡ ಹಾಗೂ ಇಡೀ ಸಮುದಾಯಕ್ಕೆ ಉಚಿತ ಭೋಜನ ನೀಡಬೇಕು ಎಂಬ ಕಠಿಣ ನಿಯಮ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಮೆಟ್ಟಿಲೇರಿದ ಕುಟುಂಬಗಳು
ಬಹಿಷ್ಕಾರಕ್ಕೊಳಗಾದ ಕುಟುಂಬಗಳು ಜೂನ್ 20ರಂದೇ ಬಾರ್ಲೂಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಹೀಗಾಗಿ, ಗುರುವಾರ ಎಲ್ಲಾ 43 ಕುಟುಂಬಗಳ ಸದಸ್ಯರು ಸಿರೋಹಿ ಜಿಲ್ಲಾಧಿಕಾರಿ ರೋಹಿತಾಶ್ವ ಸಿಂಗ್ ಅವರನ್ನು ಭೇಟಿ ಮಾಡಿ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ರೋಹಿತಾಶ್ವ ಸಿಂಗ್, 'ಸಂತ್ರಸ್ತ ಕುಟುಂಬಗಳು ಮನವಿ ಪತ್ರ ಸಲ್ಲಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮೇಲ್ನೋಟಕ್ಕೆ ಇದು ಹಳೆಯ ವೈಷಮ್ಯದ ಪ್ರಕರಣದಂತೆ ಕಾಣಿಸುತ್ತಿದೆ' ಎಂದಿದ್ದಾರೆ.
ಮುಂದಿನ ವರ್ಷ ವಿಮಾನ ನಿಲ್ದಾಣಕ್ಕೆ ಮೆಟ್ರೊ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಹಣಕಾಸು ವಿಚಾರಕ್ಕೆ ತ್ರಿವಳಿ ಕೊಲೆ?: ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರು
