ಮುಂಬೈ (ಮಹಾರಾಷ್ಟ್ರ): ರಾಮ ಮಂದಿರದ ದೇಣಿಗೆ ದುರುಪಯೋಗ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂದಿರದ ಹೆಸರಿನಲ್ಲಿ 'ಲೂಟಿ' ಮಾಡುತ್ತಿರುವವರು ಬೇರೆ ಯಾರೂ ಅಲ್ಲ, ಅವರು 'ಬಾಬರನ ವಂಶಸ್ಥರು' ಎಂದು ಕಟುವಾಗಿ ಟೀಕಿಸಿದ್ದಾರೆ.
ಮಹಾರಾಷ್ಟ್ರದ ವಾಶಿಮ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಾಬರಿ ಮಸೀದಿ ಧ್ವಂಸದ ಸಮಯದಲ್ಲಿ ಓಡಿಹೋಗಿದ್ದ ಬಿಜೆಪಿ, ಈಗ ಮಂದಿರದ ಶ್ರೇಯಸ್ಸು ಪಡೆಯಲು ಅಹಂಕಾರ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.
ಲೋಹಾಗಢ ಕೊಲೆ ಪ್ರಕರಣ: ಆರೋಪಿ ಬಳಸಿದ್ದ ದ್ವಿಚಕ್ರ ವಾಹನ ವಶಕ್ಕೆ, ತನಿಖೆ ಚುರುಕುಪಾಕ್ ಸೇನಾ ಪಡೆ ಮೇಲೆ ಬಾಂಬ್ ದಾಳಿ: ನಾಲ್ವರು ಯೋಧರು ಸೇರಿ 11 ಸಾವುಬಾಬರಿ ಧ್ವಂಸದ ವೇಳೆ ಓಡಿಹೋದರು: ಠಾಕ್ರೆ ಆರೋಪ
'ಅವರಿಗೆ ಎಷ್ಟು ದುರಹಂಕಾರ ಬಂದಿದೆ ಎಂದರೆ ಈಗ ರಾಮಮಂದಿರವನ್ನೇ ಲೂಟಿ ಮಾಡಲು ಹೊರಟಿದ್ದಾರೆ. ಅಂದು ಬಾಬರಿ ಮಸೀದಿ ಧ್ವಂಸದ ಸಮಯದಲ್ಲಿ ಇವರೆಲ್ಲ ಓಡಿಹೋಗಿದ್ದರು. ಆ ಕೃತ್ಯಕ್ಕೂ ತಮಗೂ ಸಂಬಂಧವಿಲ್ಲ ಎಂದು ಸ್ವತಃ ಬಿಜೆಪಿ ನಾಯಕರೇ ಹೇಳಿಕೆ ನೀಡಿದ್ದರು. ಆದರೆ, ಸುಪ್ರೀಂ ಕೋರ್ಟ್ ಆದೇಶದ ನಂತರ ಭವ್ಯ ಮಂದಿರ ನಿರ್ಮಾಣವಾಗುತ್ತಿದ್ದಂತೆ, ಕ್ರೆಡಿಟ್ ತೆಗೆದುಕೊಳ್ಳಲು ಎಲ್ಲರೂ ಮುಗಿಬಿದ್ದರು' ಎಂದು ಠಾಕ್ರೆ ಲೇವಡಿ ಮಾಡಿದರು.
ʼರಾಮ ಮಂದಿರವನ್ನು ಲೂಟಿ ಮಾಡುತ್ತಿರುವವರು ಬಾಬರನ ವಂಶಸ್ಥರಲ್ಲದೆ ಇನ್ಯಾರು? ಇದು ಕೇವಲ ಶಿವಸೇನೆಗೆ ಮಾಡಿದ ದ್ರೋಹವಲ್ಲ, ಇಡೀ ಹಿಂದೂ ಸಮಾಜ ಮತ್ತು ಅವರ ಭಾವನೆಗಳಿಗೆ ಎಸಗಿದ ಅಪಚಾರ. ಈ ದ್ರೋಹಿಗಳಿಗೆ ಈ ವಿಷಯವನ್ನು ಸಂಸತ್ತಿನಲ್ಲಿ ಎತ್ತುವ ಧೈರ್ಯವಿದೆಯೇ?ʼ ಎಂದು ಪ್ರಶ್ನಿಸಿದ್ದಾರೆ.
ಕಾರ್ಮಿಕರನ್ನು ಬೀದಿಗೆ ತಳ್ಳಿದ ಮೋದಿ ಸರ್ಕಾರ: ಹರಿಪ್ರಸಾದ್ ಟೀಕೆಕದನ ವಿರಾಮ ಉಲ್ಲಂಘನೆ: ಇರಾನ್ ಸೇನಾ ನೆಲೆಗಳ ಮೇಲೆ US ದಾಳಿ, ಟ್ರಂಪ್ ಎಚ್ಚರಿಕೆಬಂಡಾಯಗಾರರಿಗೆ ಕಟು ಶಬ್ದಗಳಲ್ಲಿ ಎಚ್ಚರಿಕೆ
ಪಕ್ಷದ ಬಂಡಾಯ ನಾಯಕರು ಮತ್ತು ಟೀಕಾಕಾರರ ವಿರುದ್ಧ ಹರಿಹಾಯ್ದ ಠಾಕ್ರೆ, ʼಶಿವಸೇನೆ ಮುಗಿದುಹೋಗಿದೆ, ಉದ್ಧವ್ ಠಾಕ್ರೆ ಇನ್ನು ಮುಂದೆ ಜನರ ಮಧ್ಯೆ ಹೋಗುವುದಿಲ್ಲ ಎಂದು ಕೆಲವರು ನರಿಗಳಂತೆ ಊಳಿಡಲು ಆರಂಭಿಸಿದ್ದಾರೆ. ಆದರೆ ಪಕ್ಷದ ನಿಷ್ಠಾವಂತ ಮತ್ತು ಬದ್ಧತೆಯುಳ್ಳ ಶಿವಸೈನಿಕರು ಎಂದಿಗೂ ಧೃತಿಗೆಟ್ಟಿಲ್ಲ. ಇನ್ನು ಮುಂದೆ ನಮ್ಮಲ್ಲಿ ದ್ರೋಹಕ್ಕೆ ಯಾವುದೇ ಸ್ಥಾನವಿಲ್ಲʼ ಎಂದು ಗುಡುಗಿದರು.
ಠಾಕ್ರೆ ಬಣಕ್ಕೆ ಭಾರಿ ಹಿನ್ನಡೆ
ಉದ್ಧವ್ ಠಾಕ್ರೆ ಅವರ ಈ ಆಕ್ರೋಶದ ಮಾತುಗಳು ಅವರ ಪಕ್ಷವು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಬೆನ್ನಲ್ಲೇ ಬಂದಿದೆ. ಇತ್ತೀಚೆಗಷ್ಟೇ ಶಿವಸೇನಾ (ಯುಬಿಟಿ) ಪಕ್ಷದ ಆರು ಲೋಕಸಭಾ ಸಂಸದರು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಬಣಕ್ಕೆ ಸೇರ್ಪಡೆಯಾಗಿದ್ದಾರೆ.
ಪ್ರೇಯಸಿ ಜೊತೆ ಜಗಳ, ಕಾರಿನಲ್ಲಿ ನಾಡಬಾಂಬ್ ಸ್ಫೋಟಿಸಿದ ಯುವಕ: ಸಜೀವ ದಹನಒಳನೋಟ: ಅಂತರ್ಜಲದಲ್ಲೂ ಪ್ಲಾಸ್ಟಿಕ್ ಕಣ
