Dailyhunt Logo
  • Light mode
    Follow system
    Dark mode
    • Play Story
    • App Story
ಮಕ್ಕಳ ಸಮ್ಮುಖದಲ್ಲೇ 3ನೇ ಮದುವೆಯಾದ ಅಮೀರ್: ನೆಟ್ಟಿಗರ ಗಮನ ಸೆಳೆದ ಗೌರಿ ಪುತ್ರ

ಮಕ್ಕಳ ಸಮ್ಮುಖದಲ್ಲೇ 3ನೇ ಮದುವೆಯಾದ ಅಮೀರ್: ನೆಟ್ಟಿಗರ ಗಮನ ಸೆಳೆದ ಗೌರಿ ಪುತ್ರ

ಮುಂಬೈ: ಬಾಲಿವುಡ್‌ ನಟ ಅಮೀರ್ ಖಾನ್ ತಮ್ಮ 61ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಗೌರಿ ಸ್ಪ್ರಾಟ್‌ ಅವರೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ.

ಸದ್ಯ ಇವರ ಮದುವೆಯ ಫೋಟೊ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿವೆ.

ಅಮೀರ್ ಜತೆಗೆ ಮದುವೆಯಾದ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಗೌರಿ, 'ಕೊನೆಗೂ' (Finally) ಎಂದು ಬರೆದುಕೊಂಡು ಹೃದಯದ ಎಮೋಜಿ ಹಾಕಿಕೊಂಡಿದ್ದಾರೆ.

ಗೌರಿ ಮತ್ತು ಅಮೀರ್ ಖಾನ್ ಯಾವುದೇ ಶಾಸ್ತ್ರ, ಹೆಚ್ಚಿನ ಅದ್ದೂರಿತನವೂ ಇಲ್ಲದೆ ಸರಳವಾಗಿ ರಿಜಿಸ್ಟ್ರರ್ ಮದುವೆಯಾಗಿದ್ದಾರೆ. ಇಬ್ಬರೂ ಮದುವೆ ಪ್ರಮಾಣ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ವೇಳೆ ಗೌರಿ ಅವರ ಮಗ ಕ್ವಿನ್ ಪಕ್ಕದಲ್ಲೇ ಕುಳಿತಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

ಅಲ್ಲದೆ, ಮದುವೆಯಲ್ಲಿ ಅಮೀರ್ ಖಾನ್ ಅವರ ಮಕ್ಕಳಾದ 15 ವರ್ಷದ ಮಗ ಆಜಾದ್ ರಾವ್ ಖಾನ್, ಇರಾ ಖಾನ್, ಜುನೇದ್ ಖಾನ್ ಭಾಗಿಯಾಗಿದ್ದರು. ಜತೆಗೆ ಸಿನಿಮಾ ನಿರ್ಮಾಪಕ ಅಶುತೋಶ್ ಗೋವಾರಿಕರ್, ಇರ್ಫಾನ್ ಪಠಾಣ್, ಅಂಬಾನಿ ಕುಟುಂಬ ಪಾಲ್ಗೊಂಡಿತ್ತು.

47 ವರ್ಷದ ಗೌರಿ ಅವರು ಮದುವೆಯಲ್ಲಿ ಸೂಕ್ಷ್ಮವಾಗಿ ನೇಯ್ದ ಕಸೂತಿಯಿಂದ ಕೂಡಿದ್ದ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು. ಅಮೀರ್ ಅವರು ಬಿಳಿಯ ಬಣ್ಣದ ಕುರ್ತಾ, ಐಷಾರಾಮಿ ಆಕರ್ಷಕ ಬ್ರೂಚ್, ಹಾಗೂ ಕಪ್ಪು ಕನ್ನಡಕ ಧರಿಸಿದ್ದರು.

ಗೌರಿ ಸ್ಪ್ರ್ಯಾಟ್ ಜೊತೆ 3ನೇ ವಿವಾಹವಾದ ನಟ ಅಮೀರ್ ಖಾನ್ಗೌರಿ ಜತೆ ನಟ ಅಮೀರ್ ಖಾನ್ ಮದುವೆಗೆ ಸಜ್ಜು; ಮಕ್ಕಳೇ ನಿರ್ಧರಿಸಿದ ವಿಶೇಷ ಮೆನುನಟ ಅಮೀರ್ ಖಾನ್ ಮನಗೆದ್ದ ಬೆಂಗಳೂರಿನ ಗೌರಿ ಯಾರು? ಹಿನ್ನೆಲೆಯೇನು?25 ವರ್ಷ ಪೂರೈಸಿದ ಲಗಾನ್: ಮೊದಲು ಕಥೆ ತಿರಸ್ಕರಿಸಿದ್ದ ಅಮೀರ್ ಖಾನ್! ಏಕೆ ಗೊತ್ತಾ?
Dailyhunt
Disclaimer: This content has not been generated, created or edited by Dailyhunt. Publisher: Prajavani