Dailyhunt Logo
  • Light mode
    Follow system
    Dark mode
    • Play Story
    • App Story
ರಷ್ಯಾ ನಿರ್ಬಂಧ ಮಸೂದೆಗೆ ಅಮೆರಿಕ ಒಪ್ಪಿಗೆ: ಭಾರತದ ಮೇಲೆ ಭಾರಿ ಸುಂಕದ ಸಾಧ್ಯತೆ

ರಷ್ಯಾ ನಿರ್ಬಂಧ ಮಸೂದೆಗೆ ಅಮೆರಿಕ ಒಪ್ಪಿಗೆ: ಭಾರತದ ಮೇಲೆ ಭಾರಿ ಸುಂಕದ ಸಾಧ್ಯತೆ

ವಾಷಿಂಗ್ಟನ್: ರಷ್ಯಾ ಹಾಗೂ ಅದರಿಂದ ತೈಲ ಖರೀದಿ ಮಾಡುವ ರಾಷ್ಟ್ರಗಳ ಮೇಲೆ ಭಾರಿ ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ನೀಡುವ ಮಸೂದೆಗೆ ಅಮೆರಿಕ ಸಂಸತ್ತಿನ ಕೆಳಮನೆ (ಪ್ರತಿನಿಧಿಗಳ ಸಭೆ) ಒಪ್ಪಿಗೆ ನೀಡಿದೆ. ಇದರಿಂದ ಭಾರತ, ಚೀನಾ ಸೇರಿ ಹಲವು ರಾಷ್ಟ್ರಗಳ ಮೇಲೆ ಭಾರಿ ತೆರಿಗೆ ವಿಧಿಸಲು ಟ್ರಂಪ್‌ಗೆ ಅಧಿಕಾರ ಸಿಕ್ಕಂತಾಗಿದೆ.

ಭಾರತದ ಮೇಲೆ ಶೇ 100ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರ ಪ್ರಸ್ತಾಪ

ರಷ್ಯಾ ಹಾಗೂ ಇರಾನ್‌ ಮೇಲೆ ನಿರ್ಬಂಧ ವಿಧಿಸುವ ಲಿಂಡ್ಸೆ ಒ ಗ್ರಹಾಮ್ ಕಾಯ್ದೆಗೆ ಕಳೆದ ತಿಂಗಳು ಮೇಲ್ಮನೆ (ಸೆನೆಟ್) ಒಪ್ಪಿಗೆ ನೀಡಿತ್ತು. ಬುಧವಾರ ಕೆಳಮನೆ 262-159 ಬಹುಮತದಿಂದ ಮಸೂದೆಗೆ ಒಪ್ಪಿಗೆಯ ಮುದ್ರೆ ಒತ್ತಿದೆ. ಅಧ್ಯಕ್ಷರ ಅಂಕಿತ ಬಿದ್ದರೆ ಕಾನೂನು ಜಾರಿಗೆ ಬರುತ್ತದೆ.

203 ರಿಪಬ್ಲಿಕನ್ನರು, 58 ಡೆಮಾಕ್ರಟರ್‌ಗಳು ಹಾಗೂ ಓರ್ವ ಪಕ್ಷೇತರ ಸಂಸದ ಮಸೂದೆಯ ಪರ ಮತ ಹಾಕಿದರೆ, 7 ರಿಪಬ್ಲಿಕನ್ನರು ಹಾಗೂ 152 ಡೆಮಾಕ್ರಟ್‌ಗಳು ವಿರೋಧಿಸಿದರು.

ಟ್ರಂಪ್ ಅವರಿಗೆ ಸುಂಕ ವಿಧಿಸುವ ಅವಕಾಶ ನೀಡುವುದಕ್ಕೆ ಡೆಮಾಕ್ರಟ್ ಸಂಸದರು ವಿರೋಧ ದಾಖಲಿಸಿದ್ದರು.

ವ್ಯಾಪಾರ ಮಾತುಕತೆ ವಿಫಲ: ಅಮೆರಿಕದ ಮೇಲೆ ಪ್ರತೀಕಾರದ ಸುಂಕ ಘೋಷಿಸಿದ ಕೆನಡಾ

ಮಸೂದೆ ಬೆಂಬಲಿಸಿ ಅದಕ್ಕೆ ಒಂದು ವರ್ಷಕ್ಕೂ ಅಧಿಕ ಕೆಲಸ ಮಾಡಿದ್ದ ದಕ್ಷಿಣ ಕರೊಲಿನಾದ ರಿಪಬ್ಲಿಕನ್‌ ಸಂಸದ ಲಿಂಡ್ಸೆ ಗ್ರಹಾಮ್ ಜುಲೈನಲ್ಲಿ ನಿಧನರಾಗಿದ್ದರು. ಅವರ ಹೆಸರನ್ನು ಮಸೂದೆಗೆ ಇಡಲಾಗಿದೆ.

ಈ ಮಸೂದೆಯು ರಷ್ಯಾ ನಾಯಕತ್ವ ಹಾಗೂ ಇಂಧನ ವಲಯಗಳಿಗೆ ನಿರ್ಬಂಧ ವಿಧಿಸುತ್ತದೆ. ಜೊತೆಗೆ ರಷ್ಯಾ ಮೇಲಿನ ತೈಲ ನಿರ್ಬಂಧಗಳನ್ನು ತಪ್ಪಿಸಿ ತೈಲ ಸಾಗಿಸಲು ನೆರವಾಗುತ್ತಿರುವ ಹಡಗುಗಳ ಮೇಲೂ ನಿರ್ಬಂಧ ವಿಧಿಸುವಂತೆ ಒತ್ತಾಯಿಸಲಾಗಿತ್ತು.

ಅಲ್ಲದೆ ರಷ್ಯಾದಿಂದ ತೈಲ ಹಾಗೂ ಅನಿಲ ಖರೀದಿ ಮಾಡುವ ಭಾರತ ಹಾಗೂ ಚೀನಾದಂತಹ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವ ಅಧಿಕಾರ ಟ್ರಂಪ್ ಅವರಿಗೆ ಈ ಮಸೂದೆ ನೀಡುತ್ತದೆ. ಜೊತೆಗೆ ಇರಾನ್‌ ಮೇಲೆ ಹೆಚ್ಚಿನ ನಿರ್ಬಂಧ ಹೇರಲೂ ಅವಕಾಶ ಕಲ್ಪಿಸುತ್ತದೆ.

ಅಣು ವಿದ್ಯುತ್‌ ವಿಸ್ತರಣೆ ಬಗ್ಗೆ ಅಮೆರಿಕ ಇಂಧನ ಸಚಿವರೊಂದಿಗೆ ಖಟ್ಟರ್ ಚರ್ಚೆ

'ಚೀನಾ ಹಾಗೂ ಭಾರತ, ನೀವು ಬೇರೆ ಕಡೆಯಿಂದ ತೈಲ, ಅನಿಲ ಖರೀದಿ ಮಾಡುವುದು ಒಳಿತು' ಎಂದು ಮಸೂದೆ ಒಪ್ಪಿಗೆ ಸಿಕ್ಕ ಬಳಿಕ ಡೆಮಾಕ್ರಟ್ ಸೆನೆಟರ್ ರಿಚರ್ಡ್ ಬ್ಲುಮೆಂಥಲ್ ಮಾಧ್ಯಮದವರೊಂದಿಗೆ ಮಾತನಾಡುವಾಗ ಹೇಳಿದ್ದಾರೆ.

'ರಷ್ಯಾವು ಗುಪ್ತ ಹಡಗುಗಳ ಜಾಲದ ಮೂಲಕ ತೈಲ, ಅನಿಲ ಮಾರಾಟ ಮಾಡುತ್ತಿದೆ. ಈ ತೈಲವನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಚೀನಾ ಮತ್ತು ಭಾರತ ಸೇರಿದಂತೆ ದೇಶಗಳಿಗೆ ಸಾಗಿಸಲಾಗುತ್ತಿದೆ' ಎಂದು ಡೆಮಾಕ್ರಟಿಕ್‌ ಸೆನೆಟರ್‌ ಜೀನ್‌ ಶಹೀನ್‌ ಹೇಳಿದ್ದಾರೆ.

'ಚೀನಾವು ರಷ್ಯಾದ ಅತಿ ದೊಡ್ಡ ತೈಲ ಹಾಗೂ ಅನಿಲ ಖರೀದಿದಾರ ರಾಷ್ಟ್ರ. ಹೀಗಾಗಿ ನಾವು ಪುಟಿನ್‌ಗೆ ಮಾತ್ರವಲ್ಲ, ಚೀನಾಗೂ ಬಲವಾದ ಸಂದೇಶ ರವಾನಿಸಬೇಕಿದೆ. ಯಾರಾದರೂ ರಷ್ಯಾದ ತೈಲ ಅಥವಾ ಅನಿಲ ಖರೀದಿ ಮಾಡಿದರೆ ಅವರು ದುಬಾರಿ ಬೆಲೆ ತೆರಬೇಕಾಗುತ್ತದೆ' ಎಂದು ಅವರು ಹೇಳಿದ್ದಾರೆ.

ಚೀನಾ ಅಧ್ಯಕ್ಷ ಷಿ ಅವರ ಅಮೆರಿಕ ಭೇಟಿ ನಿಗದಿಯಾಗಿರುವಾಗಲೇ ಈ ಮಸೂದೆಗೆ ಒಪ್ಪಿಗೆ ಸಿಕ್ಕಿದೆ. ಕಳೆದ ತಿಂಗಳು ಈ ಮಸೂದೆಗೆ ಸೆನೆಟ್ 86-11ರ ಭಾರಿ ಬಹುಮತದ ಒಪ್ಪಿಗೆ ನೀಡಿತ್ತು.

ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ನಿಯೋಜನೆ: ಅಮೆರಿಕ
Dailyhunt
Disclaimer: This content has not been generated, created or edited by Dailyhunt. Publisher: Prajavani