ಭಾರತದ ಹಣದುಬ್ಬರದ ಕಥೆ ಈಗ ವಿಚಿತ್ರವಾಗಿ ಕಾಣುತ್ತಿದೆ. ಎಲ್ಲವೂ ಸರಿಯಾಗಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದ್ದರೂ, ಅದರ ಪ್ರಭಾವ ಜನಸಾಮಾನ್ಯರಿಗೆ ಇನ್ನಷ್ಟೇ ಗೋಚರಿಸಬೇಕಾಗಿದೆ. ಜನ ಸಾಮಾನ್ಯರು ಅಂಗಡಿಗಳಲ್ಲಿ ಪಾವತಿಸುವ ಬೆಲೆಯಾದ ಚಿಲ್ಲರೆ ಹಣದುಬ್ಬರವು ಆರ್‌ಬಿಐ ನಿಗದಿಪಡಿಸಿರುವ ಮಟ್ಟಕ್ಕಿಂತ ಕೆಳಗೇ ಇದೆ.
ಸಗಟು ಬೆಲೆಗಳು ತೀವ್ರವಾಗಿ ಜಿಗಿದಿವೆ. ಇಂಧನ ಬೆಲೆ ಹೆಚ್ಚಳ ಇದಕ್ಕೆ ಕಾರಣ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಸದ್ಯಕ್ಕೆ ಶಾಂತ... ಮುಂದೆ ಇವೆಯಾ ಬೆಲೆ ಏರಿಕೆಯ ಸಂಕಷ್ಟದ ದಿನಗಳು?
ಒಂದು ಸಾಲಿನಲ್ಲಿಇಂಧನ ದರ ಏರಿಕೆಯಿಂದಾಗಿ ಸಗಟು ಹಣದುಬ್ಬರ ಗಗನಕ್ಕೇರಿದ್ದು, ಮುಂಬರುವ ದಿನಗಳಲ್ಲಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ.ಪ್ರಮುಖ ಅಂಶಗಳು• ಇಂಧನ ದರ ಏರಿಕೆಯ ಪ್ರಭಾವಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಲೀಟರ್‌ಗೆ 4 ರೂಪಾಯಿ ಏರಿಕೆಯಾಗಿದ್ದು, ಇದು ಸಾರಿಗೆ ಮತ್ತು ಉತ್ಪಾದನಾ ವೆಚ್ಚವನ್ನು ಹೆಚ್ಚಿಸುವ ಮೂಲಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿದೆ.• ಸಿಪಿಐ ಮತ್ತು ಡಬ್ಲ್ಯೂಪಿಐ ವ್ಯತ್ಯಾಸಗ್ರಾಹಕ ಬೆಲೆ ಸೂಚ್ಯಂಕ (CPI) ಜನಸಾಮಾನ್ಯರ ದೈನಂದಿನ ಖರ್ಚನ್ನು ಅಳೆಯುತ್ತದೆ, ಆದರೆ ಸಗಟು ಬೆಲೆ ಸೂಚ್ಯಂಕ (WPI) ಉತ್ಪಾದನಾ ಹಂತದ ಬೆಲೆ ಬದಲಾವಣೆಯನ್ನು ಸೂಚಿಸುತ್ತದೆ.• 42 ತಿಂಗಳ ಗರಿಷ್ಠ ಹಣದುಬ್ಬರಪಶ್ಚಿಮ ಏಷ್ಯಾ ಸಂಘರ್ಷ ಮತ್ತು ತೈಲ ಪೂರೈಕೆ ಅಡಚಣೆಯಿಂದಾಗಿ ಸಗಟು ಹಣದುಬ್ಬರ ಏಪ್ರಿಲ್‌ನಲ್ಲಿ ಶೇ 8.3ಕ್ಕೆ ತಲುಪಿ, 42 ತಿಂಗಳ ಗರಿಷ್ಠ ಮಟ್ಟವನ್ನು ದಾಖಲಿಸಿದೆ.• ಡೀಸೆಲ್ ದರ ಏರಿಕೆಯ ಭೀತಿಭಾರತದ ಒಟ್ಟು ಇಂಧನ ಬಳಕೆಯಲ್ಲಿ ಸುಮಾರು ಶೇ 40ರಷ್ಟು ಪಾಲು ಹೊಂದಿರುವ ಡೀಸೆಲ್ ಬೆಲೆ ಏರಿಕೆಯು ಸಾರಿಗೆ, ಕೃಷಿ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ನೇರ ಕಾರಣವಾಗುತ್ತದೆ.• ಮುಂಗಾರು ಮಳೆಯ ಅನಿಶ್ಚಿತತೆಮುಂಗಾರು ಮಳೆ ಮತ್ತು ಎಲ್ ನಿನೋ ಪರಿಣಾಮವು ಆಹಾರ ವಸ್ತುಗಳ ಬೆಲೆ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಹಣದುಬ್ಬರ ಹೆಚ್ಚಳದ ಭೀತಿ ಮುಂದುವರಿದಿದೆ.ಪ್ರಮುಖ ಅಂಕಿಅಂಶಗಳುಶೇ 8.3ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರಶೇ 24.71ಇಂಧನ ಮತ್ತು ವಿದ್ಯುತ್ ಹಣದುಬ್ಬರ ಜಿಗಿತಶೇ 3.48ಏಪ್ರಿಲ್‌ನ ಗ್ರಾಹಕ ಬೆಲೆ ಹಣದುಬ್ಬರಶೇ 3.15ಒಟ್ಟು ಸಗಟು ಹಣದುಬ್ಬರದಲ್ಲಿ ಇಂಧನ ಪಾಲುಶೇ 5.25ರೆಪೊ ದರಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಪೆಟ್ರೋಲ್, ಡೀಸೆಲ್ ದರ ಏರಿಕೆ: ತೈಲ ಮಾರುಕಟ್ಟೆ ಕಂಪನಿಗಳ ಷೇರುಗಳ ಬೆಲೆ ಜಿಗಿತಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಎರಡು ಹಂತಗಳಲ್ಲಿ ಲೀಟರ್‌ಗೆ ₹ 4 ರೂಪಾಯಿಗಳಷ್ಟು ಏರಿಸಲಾಗಿದೆ. ಇದರ ಪರಿಣಾಮ ಜನರ ಅಡುಗೆ ಮನೆಯಲ್ಲಿ ಇನ್ನಷ್ಟೇ ಗೋಚರವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೇಲ್ನೋಟಕ್ಕೆ ₹ 4 ಏರಿಕೆ ಚಿಕ್ಕದಾಗಿ ಕಾಣಿಸಬಹುದು. ಆದರೆ ಇಂಧನ ದರ ಏರಿಕೆಯು ದೈನಂದಿನ ಜೀವನದ ಪ್ರತಿಯೊಂದು ಭಾಗದ ಮೇಲೂ ಪರಿಣಾಮ ಬೀರುತ್ತದೆ. ಮಾರುಕಟ್ಟೆಗೆ ತಲುಪುವ ತರಕಾರಿಗಳಿಂದ ಹಿಡಿದು ಬಸ್ ದರ, ಹಾಲಿನ ಬೆಲೆ ಮತ್ತು ಕಾರ್ಖಾನೆಯ ವೆಚ್ಚಗಳವರೆಗೆ ಎಲ್ಲದರ ಮೇಲೂ ಇದು ಪರಿಣಾಮ ಬೀರುತ್ತದೆ.
ಇಂಧನ ದರ ಏರಿಕೆ ಬಗ್ಗೆ ಅರ್ಥಶಾಸ್ತ್ರಜ್ಞರು ಏಕೆ ಆತಂಕಗೊಂಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಮೊದಲು ಭಾರತದಲ್ಲಿ ಹಣದುಬ್ಬರವನ್ನು ಅಳೆಯುವ ಎರಡು ಪ್ರಮುಖ ವಿಧಾನಗಳಾದ ಸಿಪಿಐ ಮತ್ತು ಡಬ್ಲ್ಯೂಪಿಐ ಅನ್ನು ಅರ್ಥಮಾಡಿಕೊಳ್ಳಬೇಕು.
ಗ್ರಾಹಕ ಬೆಲೆ ಸೂಚ್ಯಂಕ ಅಥವಾ ಸಿಪಿಐ, ಆಹಾರ, ಮನೆ ಬಾಡಿಗೆ, ಸಾರಿಗೆ, ಆರೋಗ್ಯ ಮತ್ತು ಶಿಕ್ಷಣದಂತಹ ದೈನಂದಿನ ಅಗತ್ಯಗಳಿಗಾಗಿ ಗ್ರಾಹಕರು ಪಾವತಿಸುವ ವೆಚ್ಚವನ್ನು ಅಳೆಯುತ್ತದೆ. ಇದು ಸಾಮಾನ್ಯನ ಜೇಬಿಗೆ ನೇರವಾಗಿ ತಟ್ಟುವ ಹಣದುಬ್ಬರ. ದಿನಸಿ ವೆಚ್ಚ ಹೆಚ್ಚಾದಾಗ ಅಥವಾ ಪ್ರಯಾಣ ದರ ದುಬಾರಿಯಾದಾಗ ಅದು ಸಿಪಿಐ ಹಣದುಬ್ಬರದಡಿ ಬರುತ್ತದೆ. ಬಡ್ಡಿದರಗಳನ್ನು ನಿರ್ಧರಿಸುವಾಗ ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯವಾಗಿ ಈ ಸಂಖ್ಯೆಯನ್ನೇ ಪರಿಗಣನೆಗೆ ತೆಗೆದುಕೊಳ್ಳುತ್ತದೆ.
ಬೆಲೆ ಏರಿಕೆ ತಡೆಯಲಾರದ ಪ್ರಧಾನಿ ಮೋದಿ ರಾಜೀನಾಮೆ ನೀಡಲಿ: ಡಿ. ಬಸವರಾಜ್ಸಗಟು ಬೆಲೆ ಸೂಚ್ಯಂಕ ಅಥವಾ ಡಬ್ಲ್ಯೂಪಿಐ ಉತ್ಪನ್ನಗಳು ಗ್ರಾಹಕರನ್ನು ತಲುಪುವ ಮೊದಲು ಸಾಗಣೆ ಹಂತದಲ್ಲಿನ ಬೆಲೆಗಳನ್ನು ಅಳೆಯುತ್ತದೆ. ಇದು ಇಂಧನ, ಕಚ್ಚಾ ವಸ್ತುಗಳು, ಲೋಹಗಳು, ರಾಸಾಯನಿಕಗಳು ಮತ್ತು ಉತ್ಪಾದಿಸಿದ ವಸ್ತುಗಳ ವೆಚ್ಚವನ್ನು ಅಳೆಯುತ್ತದೆ.
ಎರಡೂ ಸೂಚ್ಯಂಕಗಳ ಪೈಕಿ ಡಬ್ಲ್ಯೂಪಿಐ ಮುಖ್ಯವಾದುದು. ಏಕೆಂದರೆ ಇದು ಬೆಲೆ ಏರಿಕೆಯಾಗುತ್ತದೆ ಎನ್ನುವ ಮುನ್ಸೂಚನೆಯನ್ನು ಜನರಿಗೆ ನೀಡುತ್ತದೆ. ಕಾರ್ಖಾನೆಗಳು ಮತ್ತು ಉತ್ಪಾದಕರು ಹೆಚ್ಚು ಪಾವತಿಸಲು ಪ್ರಾರಂಭಿಸಿದಾಗ, ಆ ಹೆಚ್ಚಿನ ವೆಚ್ಚಗಳು ಕೊನೆಯದಾಗಿ ಗ್ರಾಹಕರಿಗೇ ತಲುಪಬೇಕು.
2026ರ ಏಪ್ರಿಲ್‌ನಲ್ಲಿ, ಚಿಲ್ಲರೆ ಹಣದುಬ್ಬರವು ನಿಯಂತ್ರಣದಲ್ಲಿದ್ದಂತೆ ಕಂಡು ಬಂತು. ಮಾರ್ಚ್ ಶೇ 3.40 ರಷ್ಟಿದ್ದ ಗ್ರಾಹಕ ಬೆಲೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 3.48 ಕ್ಕೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿತು. ಆದರೂ ಆರ್‌ಬಿಐನ ಆರಾಮದಾಯಕ ಮಟ್ಟ (ಶೇ 4) ಕ್ಕಿಂತ ಕಡಿಮೆ ಇತ್ತು. ಆಹಾರ ಹಣದುಬ್ಬರವೂ ಶೇ 4.2 ಕ್ಕೆ ಸ್ವಲ್ಪ ಏರಿತು. ಆದರೆ ಒಟ್ಟಾರೆ ಹಣದುಬ್ಬರ ಸ್ಥಿರವಾಗಿಯೇ ಇತ್ತು.
42 ತಿಂಗಳ ಗರಿಷ್ಠಕ್ಕೆ ಹಣದುಬ್ಬರಸಗಟು ಹಣದುಬ್ಬರ ಕಥೆಯೇ ಭಿನ್ನ!
ಒಂದು ತಿಂಗಳ ಮೊದಲು ಶೇ 3.88ರಷ್ಟಿದ್ದ ಸಗಟು ಹಣದುಬ್ಬರ ಏಪ್ರಿಲ್‌ನಲ್ಲಿ ಇದ್ದಕ್ಕಿದ್ದಂತೆ ಶೇ 8.3 ಕ್ಕೆ ಏರಿತು. ಇದು 42 ತಿಂಗಳ ಗರಿಷ್ಠ. ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಎದುರಾದ ಕಚ್ಚಾ ತೈಲ ಪೂರೈಕೆ ಅಡಚಣೆಯಿಂದಾಗಿ ಇಂಧನ ಬೆಲೆಗಳು ಗಗನಕ್ಕೇರಿದ್ದೇ ಇದಕ್ಕೆ ಕಾರಣ.
ಮಾರ್ಚ್‌ನಲ್ಲಿ ಶೇ 1.05ರಷ್ಟಿದ್ದ ಇಂಧನ ಮತ್ತು ವಿದ್ಯುತ್ ಹಣದುಬ್ಬರ ಒಂದೇ ತಿಂಗಳಲ್ಲಿ ಶೇ 24.71ಕ್ಕೆ ಜಿಗಿದಿದೆ. ಕಚ್ಚಾ ಪೆಟ್ರೋಲಿಯಂ ಹಣದುಬ್ಬರವೊಂದೇ ಶೇ 88 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು ಇಡೀ ಸಮಸ್ಯೆಗೆ ಕಾರಣವಾಗಿದೆ. ಏಕೆಂದರೆ ಇಡೀ ಆರ್ಥಿಕತೆಯ ಮೇಳೆ ಇದರ ಪರಿಣಾಮ ದೊಡ್ಡದು. ಪೆಟ್ರೋಲ್ ಮತ್ತು ಡೀಸೆಲ್ ಗ್ರಾಹಕ ಬೆಲೆ ಸೂಚ್ಯಂಕದಡಿ ಬರದಿದ್ದರೂ, ಬಹುತೇಕ ಎಲ್ಲಾ ವಲಯಗಳಲ್ಲಿ ಅವುಗಳ ಬಳಕೆ ಇರುವುದರಿಂದ, ಅವುಗಳ ಬೆಲೆ ಏರಿಕೆ ಇಡೀ ಆರ್ಥಿಕತೆ ಮೇಲೆ ಬಾಧಿಸುತ್ತದೆ.
ಸಗಟು ಹಣದುಬ್ಬರದಲ್ಲಿ ಇಂಧ ಬಹುದೊಡ್ಡ ಪಾಲು ಹೊಂದಿದೆ. ಒಟ್ಟು ಸಗಟು ಹಣದುಬ್ಬರದಲ್ಲಿ ಇಂಧನ ಮತ್ತು ವಿದ್ಯುತ್ ಪಾಲು ಶೇ 3.15 ರಷ್ಟಿದೆ.
ಇಂಧನ ಬೆಲೆ ಏರಿಕೆಯ ಪರಿಣಾಮ ತಕ್ಷಣವೇ ಗ್ರಾಹಕರ ಮೇಲೆ ಬೀಳದಿದ್ದರೂ, ಉದ್ಯಮಗಳ ಮೇಲೆ ಪರಿಣಾಮ ಕೂಡಲೇ ಬೀಳುತ್ತದೆ. ಸಾರಿಗೆ ವೆಚ್ಚ, ಸರಕು ಸಾಗಣೆ ದರ ಹೆಚ್ಚಾಗುತ್ತವೆ. ರೈತರು ನೀರಾವರಿ ಮತ್ತು ಟ್ರ್ಯಾಕ್ಟರ್‌ಗಳಿಗಾಗಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಕಂಪನಿಗಳು ಉತ್ಪಾದನೆ ಮತ್ತು ವಿತರಣೆಗೆ ಹೆಚ್ಚು ಪಾವತಿ ಮಾಡಬೇಕಾಗುತ್ತದೆ. ವಿಮಾನಯಾನ ಸಂಸ್ಥೆಗಳು, ಸರಕು ಸಾಗಣೆ ಕಂಪನಿಗಳು ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಗಳೆಲ್ಲವೂ ಹೆಚ್ಚಿನ ವೆಚ್ಚಗಳನ್ನು ಎದುರಿಸುತ್ತವೆ. ಅಂತಿಮವಾಗಿ ಹೆಚ್ಚುವರಿ ವೆಚ್ಚಗಳನ್ನು ಸಾಮಾನ್ಯ ಜನರ ಮೇಲೆ ಹಾಕಲಾಗುತ್ತದೆ.
ಅದರಲ್ಲೂ ಡೀಸೆಲ್ ದರ ಏರಿಕೆಯು ಜನಸಾಮಾನ್ಯ ಜೇಬಿನ ಮೇಲೆ ಭಾರಿ ಹೊರೆ ಹಾಕುತ್ತದೆ. ಡೀಸೆಲ್ ಭಾರತದಲ್ಲಿ ಹೆಚ್ಚು ಬಳಕೆಯಾಗುವ ಇಂಧನವಾಗಿದ್ದು, ಒಟ್ಟು ಇಂಧನ ಬಳಕೆಯ ಸುಮಾರು ಶೇ 40 ರಷ್ಟು ಪಾಲು ಹೊಂದಿದೆ. ತರಕಾರಿಗಳನ್ನು ಸಾಗಿಸುವ ಟ್ರಕ್‌ಗಳು, ಪ್ರಯಾಣಿಕರನ್ನು ಸಾಗಿಸುವ ಬಸ್‌ಗಳು, ರೈತರು ಬಳಸುವ ಕೃಷಿ ಪಂಪ್‌ಗಳು ಮತ್ತು ಕೈಗಾರಿಕಾ ಸಾರಿಗೆ ವ್ಯವಸ್ಥೆಗಳೆಲ್ಲವೂ ಡೀಸೆಲ್ ಹೆಚ್ಚಾಗಿ ಅವಲಂಬಿಸಿವೆ. ಇದರ ಬೆಲೆ ಏರಿಕೆ ನೇರವಾಗಿ ಅಡುಗೆ ಮನೆಯನ್ನೇ ತಟ್ಟುತ್ತದೆ.
ಚಿಲ್ಲರೆ ಹಣದುಬ್ಬರ ಸ್ವಲ್ಪ ಏರಿಕೆಸಗಟು ಹಣದುಬ್ಬರ ಮತ್ತು ಚಿಲ್ಲರೆ ಹಣದುಬ್ಬರದ ನಡುವೆ ಅಂತರ
ಸಗಟು ಹಣದುಬ್ಬರದಲ್ಲಿ ಇಂಧನದ ಪಾಲು ದೊಡ್ಡದಿರುವುದರಿಂದ ಜಾಗತಿಕ ತೈಲ ಮತ್ತು ಸರಕು ಬೆಲೆಗಳ ಏರಿಳಿತಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುತ್ತದೆ. ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ತೈಲ ಬೆಲೆ ಏರಿಕೆಯಿಂದಾಗಿ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಆದರೆ ಗ್ರಾಹಕ ಹಣದುಬ್ಬರ ಇದಕ್ಕಿಂತ ಭಿನ್ನ. ಇದರಲ್ಲಿ ಆಹಾರ ಮತ್ತು ವಸತಿ, ಆರೋಗ್ಯ ಹಾಗೂ ಶಿಕ್ಷಣದಂತಹ ಸೇವೆಗಳು ಬರುತ್ತವೆ. ಇದರಲ್ಲಿ ಇಂಧನ ಮತ್ತು ವಿದ್ಯುತ್ ಪಾಲು ಕಡಿಮೆ. ಸಗಟು ಬೆಲೆ ಹೆಚ್ಚಳವು ಗ್ರಾಹಕರನ್ನು ಸಂಪೂರ್ಣವಾಗಿ ತಲುಪಲು ಸಮಯ ತೆಗೆದುಕೊಳ್ಳುತ್ತದೆ. ಈ ವಿಳಂಬವೇ ಡಬ್ಲ್ಯೂಪಿಐ ಮತ್ತು ಸಿಪಿಐ ಹಣದುಬ್ಬರದ ನಡುವೆ ತಾತ್ಕಾಲಿಕ ಅಂತರವನ್ನು ಸೃಷ್ಟಿಸುತ್ತದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ತೈಲ ಬೆಲೆ ಹೀಗೆ ಏರುಗತಿಯಲ್ಲಿ ಸಾಗಿದರೆ ಮುಂಬರುವ ತಿಂಗಳುಗಳಲ್ಲಿ ಸಗಟು ಹಣದುಬ್ಬರ ಹೆಚ್ಚಾಗಿಯೇ ಇರಲಿದೆ. ಮೇ ತಿಂಗಳಲ್ಲಿ ಬಹುಶಃ ಶೇ 9 ಅನ್ನು ಮುಟ್ಟಬಹುದು ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಜಾಗತಿಕ ಸರಕು ಬೆಲೆಗಳ ಏರಿಕೆಯು ದೇಶೀಯ ಉತ್ಪಾದನೆ, ಸಾರಿಗೆ ಮತ್ತು ಇಂಧನ ವೆಚ್ಚಗಳನ್ನು ನಿಧಾನವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.
ಹೆಚ್ಚಿನ ಇಂಧನ ಬೆಲೆ ಏರಿಕೆಯ ಪರಿಣಾಮ ಸಾರಿಗೆ, ಆಹಾರ ಮತ್ತು ಸಿದ್ಧಪಡಿಸಿದ ಉತ್ಪನ್ನಗಳ ಮೇಲೆ ಕ್ರಮೇಣ ಪರಿಣಾಮ ಬೀರುವುದರಿಂದ ಚಿಲ್ಲರೆ ಹಣದುಬ್ಬರವೂ ಶೀಘ್ರದಲ್ಲೇ ಏರಿಕೆಯಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಹೆಚ್ಚಿಸಲಾಗಿದ್ದು, ಇದು ಹಣದುಬ್ಬರದ ಮೇಲೆ ಹೊಸ ಒತ್ತಡವನ್ನು ಉಂಟುಮಾಡಿದೆ. ಇಂಧನ ಬೆಲೆಗಳ ಹೆಚ್ಚಳದ ಸಂಪೂರ್ಣ ಪರಿಣಾಮ ಜೂನ್ ತಿಂಗಳ ಹಣದುಬ್ಬರ ದತ್ತಾಂಶದಲ್ಲಿ ಸಂಪೂರ್ಣವಾಗಿ ಗೋಚರಿಸಬಹುದು ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಜುಲೈ ತಿಂಗಳ ಮಧ್ಯದಲ್ಲಿ ಇದು ಬಿಡುಗಡೆಯಾಗಲಿದೆ.
Retail inflation: ಚಿಲ್ಲರೆ ಹಣದುಬ್ಬರ ಏರಿಕೆಮುಂಗಾರು ಎನ್ನುವ ಮತ್ತೊಂದು ಆತಂಕ
ಭಾರತದ ಹಣದುಬ್ಬರ ಮಳೆ ಮತ್ತು ಎಲ್ ನಿನೋ ಪರಿಣಾಮದ ಮೇಲೂ ಹೆಚ್ಚು ಅವಲಂಬಿತವಾಗಿರುತ್ತದೆ. ಮುಂಗಾರು ಸಮಸ್ಯೆಯಾದರೆ ಆಹಾರದ ಬೆಲೆ ಏರಿಕೆಯಾಗಲಿದೆ. ಚಿಲ್ಲರೆ ಹಣದುಬ್ಬರದಲ್ಲಿ ಆಹಾರವು ದೊಡ್ಡ ಪಾಲನ್ನು ಹೊಂದಿರುವುದರಿಂದ ಇದು ಪ್ರಮುಖವಾಗಿದೆ.
ಈ ಎಲ್ಲಾ ಅನಿಶ್ಚಿತತೆಗಳ ಕಾರಣದಿಂದಾಗಿ, ಬಡ್ಡಿದರಗಳ ಬಗ್ಗೆ ಆರ್‌ಬಿಐ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿಲ್ಲ ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಜಾಗತಿಕ ಕಚ್ಚಾ ತೈಲ ಬೆಲೆಗಳು, ಆಹಾರ ಹಣದುಬ್ಬರದ ಮೇಲೆ ಮುಂಗಾರಿನ ಪರಿಣಾಮ ಮತ್ತು ಸಗಟು ಹಣದುಬ್ಬರವು ಅಂತಿಮವಾಗಿ ಸಾಮಾನ್ಯ ಗ್ರಾಹಕರನ್ನು ಎಷ್ಟು ಪ್ರಮಾಣದಲ್ಲಿ ತಲುಪುತ್ತದೆ ಎಂಬುದನ್ನು ಆರ್‌ಬಿಐ ಗಮನಿಸುತ್ತಿದೆ.
ಸದ್ಯಕ್ಕೆ, ಹಣದುಬ್ಬರವನ್ನು ನಿಯಂತ್ರಿಸುವ ಮತ್ತು ಒತ್ತಡದಲ್ಲಿರುವ ರೂಪಾಯಿಯನ್ನು ರಕ್ಷಿಸುವತ್ತ ಆರ್‌ಬಿಐ ಗಮನ ನೆಟ್ಟಿದ್ದು, ರೆಪೊ ದರವನ್ನು ಶೇ 5.25 ರಲ್ಲೇ ಮುಂದುವರಿಸುವ ನಿರೀಕ್ಷೆಯಿದೆ.
ಸಗಟು ಹಣದುಬ್ಬರ ಏರಿಕೆ: ಕೇಂದ್ರ ಕೈಗಾರಿಕಾ ಸಚಿವಾಲಯ
