ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
'ಶ್ರೀಗಂಧ ಬೆಳೆಗೂ ಏಕರೂಪದ ಕಾನೂನು ಜಾರಿ ಮಾಡಿ, ಮಾರಾಟ ಮಾಫಿಯಾ ತಪ್ಪಿಸಿ'
ಒಂದು ಸಾಲಿನಲ್ಲಿದೇಶದಾದ್ಯಂತ ಶ್ರೀಗಂಧ ಬೆಳೆ ಮತ್ತು ಮಾರಾಟಕ್ಕೆ ಏಕರೂಪದ ಕಾನೂನು ಜಾರಿಗೊಳಿಸುವ ಮೂಲಕ ರೈತರನ್ನು ಮಾಫಿಯಾದಿಂದ ರಕ್ಷಿಸಿ, ಆರ್ಥಿಕ ಸ್ಥಿರತೆ ಕಲ್ಪಿಸಲು ಅಖಿಲ ಭಾರತ ಶ್ರೀಗಂಧ ರೈತ ಒಕ್ಕೂಟ ಒತ್ತಾಯಿಸಿದೆ.
ಪ್ರಮುಖ ಪ್ರಶ್ನೋತ್ತರ
ಏಕರೂಪದ ಕಾನೂನಿನ ಅಗತ್ಯವಿದೆಯೇ?
ಹೌದು, ಪ್ರಸ್ತುತ ವಿವಿಧ ರಾಜ್ಯಗಳಲ್ಲಿ ಶ್ರೀಗಂಧಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ನಿಯಮಗಳಿವೆ, ಇದು ರೈತರಿಗೆ ತೊಂದರೆ ತಂದೊಡ್ಡಿ ಮಾರಾಟ ಮಾಫಿಯಾ ಬೆಳೆಯಲು ಕಾರಣವಾಗಿದೆ.
ರೈತರ ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ?
ಕೇಂದ್ರ ಸರ್ಕಾರವು ಶ್ರೀಗಂಧ ಅಭಿವೃದ್ಧಿ ವರದಿಯನ್ನು ಜಾರಿಗೊಳಿಸಬೇಕು ಮತ್ತು ಗಂಧದ ಬೆಳೆಯನ್ನು ಕೃಷಿ ಇಲಾಖೆಯ ವ್ಯಾಪ್ತಿಗೆ ತರುವ ಮೂಲಕ ರೈತರ ಆದಾಯ ಹೆಚ್ಚಿಸಲು ಕ್ರಮಕೈಗೊಳ್ಳಬೇಕು.
ಒಕ್ಕೂಟದ ಮುಖ್ಯ ಉದ್ದೇಶಗಳೇನು?
ಶ್ರೀಗಂಧ ಬೆಳೆಗಾರರು, ಸಂಸ್ಕರಣೆದಾರರು ಮತ್ತು ಮಾರುಕಟ್ಟೆದಾರರನ್ನು ಒಂದೇ ವೇದಿಕೆಗೆ ತಂದು ಅವರ ಸವಾಲುಗಳು, ತಾಂತ್ರಿಕ ನೆರವು ಹಾಗೂ ಮಾರುಕಟ್ಟೆ ಅವಕಾಶಗಳ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ಒತ್ತಡ ಹೇರುವುದು ಇದರ ಗುರಿ.
ಕರ್ನಾಟಕದಲ್ಲಿ ಶ್ರೀಗಂಧದ ಸ್ಥಿತಿಗತಿ ಏನು?
ದೇಶದ ಶ್ರೀಗಂಧ ಉತ್ಪಾದನೆಯಲ್ಲಿ ಶೇ 70ರಷ್ಟು ಪಾಲು ಕರ್ನಾಟಕದ್ದಾಗಿದೆ, ಆದರೂ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಮತ್ತು ಅರಣ್ಯ ಇಲಾಖೆಯ ನಿಯಮಗಳಿಂದಾಗಿ ಅವರು ಸಂಕಷ್ಟದಲ್ಲಿದ್ದಾರೆ.
ಮುಂದಿನ ಕಾರ್ಯಯೋಜನೆಗಳೇನು?
ಪ್ರತಿ ರಾಜ್ಯದಿಂದಲೂ ಮಾಹಿತಿ ಸಂಗ್ರಹಿಸಿ, ರೈತರಿಗೆ ಆರ್ಥಿಕ ಮತ್ತು ತಾಂತ್ರಿಕ ಬೆಂಬಲ ನೀಡುವ ಮೂಲಕ ಮೌಲ್ಯ ಸರಪಳಿಯನ್ನು ಬಲಪಡಿಸಲು ಒಕ್ಕೂಟವು ಹಂತ ಹಂತವಾಗಿ ಚಟುವಟಿಕೆಗಳನ್ನು ರೂಪಿಸುತ್ತಿದೆ.
ಪ್ರಮುಖ ಅಂಕಿಅಂಶಗಳು
ಶೇ 70ದೇಶದ ಒಟ್ಟು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು14ಶ್ರೀಗಂಧ ಬೆಳೆಯುವ ರಾಜ್ಯಗಳ ಸಂಖ್ಯೆ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ 14 ರಾಜ್ಯಗಳಲ್ಲಿ ಶ್ರೀಗಂಧ ಬೆಳೆಯಲಾಗುತ್ತಿದೆ. ಹೀಗಿದ್ದರೂ ಇಡೀ ದೇಶದಲ್ಲಿ ಶ್ರೀಗಂಧ ಬೆಳೆ, ಮಾರಾಟ ವಿಚಾರದಲ್ಲಿ ಏಕ ರೂಪದ ಕಾನೂನು ಇಲ್ಲ. ಕೇಂದ್ರ ಸರ್ಕಾರವು ಶ್ರೀಗಂಧ ಬೆಳೆಗೂ ಒಂದು ದೇಶ ಒಂದು ಕಾನೂನು ಜಾರಿ ಮಾಡಬೇಕು. ಕರ್ನಾಟಕ ಸರ್ಕಾರವೂ ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು.
ಇದು ಅಖಿಲ ಭಾರತ ಶ್ರೀಗಂಧ ರೈತರ, ಸಂಸ್ಕರಣೆದಾರರ ಮತ್ತು ಮಾರುಕಟ್ಟೆದಾರರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ, ಕರ್ನಾಟಕದ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಅವರ ಒತ್ತಾಯ.
ಭಾರತದಲ್ಲಿ ಉತ್ಪಾದನೆಯಾಗುವ ಶ್ರೀಗಂಧದಲ್ಲಿ ಕರ್ನಾಟಕದ ಪಾಲು ಶೇ 70ರಷ್ಟಿದೆ. ಕರ್ನಾಟಕದ ಗುಣಮಟ್ಟದ ಶ್ರೀಗಂಧಕ್ಕೆ ಬೇಡಿಕೆ ಹಾಗೂ ಬೆಲೆಯಿದೆ. ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹಿಮಾಚಲ ಪ್ರದೇಶ, ರಾಜಸ್ತಾನ, ಜಮ್ಮು ಮತ್ತು ಕಾಶ್ಮೀರ, ಕೇರಳ, ಗೋವಾ ಸಹಿತ 14 ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಆದರೆ, ರೈತರಿಗೆ ಸರಿಯಾಗಿ ದರವೇ ಸಿಗುತ್ತಿಲ್ಲ. ಮಾರಾಟ ವ್ಯವಸ್ಥೆಯೂ ಸುಧಾರಿಸಿಲ್ಲ. ಇದರಿಂದ ರೈತರಿಗೆ ಬೆಲೆ ಸಿಗದೇ ಮಾಫಿಯಾ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಇದು ಹೆಚ್ಚೇ ಇದೆ. ಈಗಾಗಲೇ ಅರಣ್ಯ ಇಲಾಖೆ, ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುವುದು ಅವರ ಆಸಮಾಧಾನದ ನುಡಿ.
ಶ್ರೀಗಂಧದ ಬೆಳೆ, ಮಾರಾಟದ ವಿಚಾರದಲ್ಲಿ ಒಂದು ರಾಜ್ಯದಲ್ಲಿ ಒಂದು ರೀತಿ ಇದೆ. ಕೆಲವು ರಾಜ್ಯಗಳಲ್ಲಿ ಕೃಷಿ ಇಲಾಖೆಯಡಿ ಇದ್ದರೆ, ಇನ್ನಷ್ಟು ಕಡೆ ಅರಣ್ಯ ಇಲಾಖೆ ಸುರ್ಪದಿಯಿದೆ. ಕಾನೂನುಗಳಲ್ಲಿಯೂ ನ್ಯೂನತೆಗಳು ಇರುವುದರಿಂದ ಶ್ರೀಗಂಧ ಮಾಫಿಯಾ ಜೋರಾಗಿ ಬೆಳೆದಿದೆ. ಶ್ರೀಗಂಧ ಬೆಳೆಗಾರರು, ಸಂಸ್ಕರಣೆದಾರರು ಹಾಗೂ ಮಾರುಕಟ್ಟೆದಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದಲೇ ಒಕ್ಕೂಟ ರಚಿಸಲಾಗಿದೆ. ಸಭೆಯಲ್ಲಿ ಗಂಧ ಬೆಳೆಗಾರರು ಎದುರಿಸುತ್ತಿರುವ ಸವಾಲುಗಳು, ಮೌಲ್ಯವರ್ಧನೆ, ಸಂಸ್ಕರಣಾ ತಂತ್ರಜ್ಞಾನ, ಮಾರುಕಟ್ಟೆ ಅವಕಾಶಗಳು ಹಾಗೂ ರಫ್ತು ಸಾಮರ್ಥ್ಯದ ಹಾಗೂ ಆಮದಿನಿಂದ ಆಗುವ ಪರಿಣಾಮಗಳ ಕುರಿತು ನಿರಂತರವಾಗಿ ಚರ್ಚೆ ನಡೆಸಲಾಗುತ್ತದೆ. ಎಲ್ಲಾ ರಾಜ್ಯದ ಬೆಳೆಗಾರರನ್ನು ಒಕ್ಕೂಟದಲ್ಲಿ ಸೇರಿಸಿಕೊಂಡು ರಾಜ್ಯ ಸರ್ಕಾರಗಳು ಹಾಗು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ ಎನ್ನುತ್ತಾರೆ ಅವರು.
ದೇಶಾದ್ಯಂತ ಏಕರೂಪದ ನೀತಿ ಜಾರಿಗೆ ತರಲು ಕೇಂದ್ರ ಸರ್ಕಾರವು ಹೊರಡಿಸಿರುವ ಶ್ರೀಗಂಧ ಅಭಿವೃದ್ಧಿ ವರದಿಯನ್ನು ಜಾರಿಗೆ ತರಬೇಕು. ಒಂದು ದೇಶ ಒಂದು ಕಾನೂನು ಅಡಿಯಲ್ಲಿ ಶ್ರೀಗಂಧವನ್ನು ತಂದರೆ ಮಾರಾಟ ವ್ಯವಸ್ಥೆ ಸುಧಾರಿಸಿ ರೈತರಿಗೂ ಆರ್ಥಿಕವಾಗಿ ಸಹಕಾರಿಯಾಗಲಿದೆ. ಶ್ರೀಗಂಧ ಕ್ಷೇತ್ರದ ಸುಸ್ಥಿರ ಬೆಳವಣಿಗೆಗಾಗಿ ರೈತರು, ಕೈಗಾರಿಕೆ ಮತ್ತು ಸರ್ಕಾರದ ನಡುವೆ ಸಮನ್ವಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವೂ ಇದೆ. ಮೊದಲ ಹೆಜ್ಜೆಯಾಗಿ ಒಕ್ಕೂಟ ಆರಂಭಗೊಂಡಿದ್ದು. ಹಂತಹಂತವಾಗಿ ಚಟುವಟಿಕೆ ರೂಪಿಸಲಾಗುತ್ತದೆ ಎನ್ನುತ್ತಾರೆ ಅಮರನಾರಾಯಣ.
ಏಕರೂಪದ ನೀತಿ ಜಾರಿಯಿಂದ ಗುಣಮಟ್ಟದ ಉತ್ಪಾದನೆ, ಆಧುನಿಕ ಸಂಸ್ಕರಣಾ ವಿಧಾನಗಳ ಅಳವಡಿಕೆ, ಕಳ್ಳತನಗಳ ತಡೆಗಟ್ಟುವಿಕೆ ಮತ್ತು ಮಾರುಕಟ್ಟೆ ಸಂಪರ್ಕವನ್ನು ವಿಸ್ತರಿಸುವ ಮೂಲಕ ಶ್ರೀಗಂಧ ಬೆಳೆಗಾರರ ಆದಾಯವನ್ನು ಹೆಚ್ಚಿಸಬಹುದು. ಈ ಕುರಿತು ಒಕ್ಕೂಟದ ಮೊದಲ ಸಭೆಯಲ್ಲಿ ಶ್ರೀಗಂಧ ಮೌಲ್ಯ ಸರಪಳಿಯನ್ನು ಬಲಪಡಿಸಲು, ರೈತರಿಗೆ ತಾಂತ್ರಿಕ ಹಾಗೂ ಮಾರುಕಟ್ಟೆ ಬೆಂಬಲವನ್ನು ವೃದ್ಧಿಸಲು ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಒಮ್ಮತ ವ್ಯಕ್ತವಾಯಿತು ಎಂದು ಅವರು ಹೇಳುತ್ತಾರೆ.
ಕರ್ನಾಟಕದಲ್ಲಂತೂ ಶ್ರೀಗಂಧ ಬೆಳೆಯುವ ರೈತರಿಗೆ ಗೌರವವೇ ಇಲ್ಲದಾಗಿದೆ. ಸೂಕ್ತ ಬೆಲೆಯೂ ಇಲ್ಲ. ಅರಣ್ಯ ಇಲಾಖೆ ನೀತಿ ರೂಪಿಸಿದರೂ ಅದನ್ನು ಜಾರಿಗೊಳಿಸಿಲ್ಲ. ರೈತರ ಅಹವಾಲನ್ನು ಕೇಳುವುದಿಲ್ಲ. ಕೃಷಿ ಇಲಾಖೆ ವ್ಯಾಪ್ತಿಗೆ ತಂದರೆ ಬದಲಾವಣೆ ಆಗಬಹುದು. ಶ್ರೀಗಂಧ ಬೆಳೆಗಾರರು, ಸಂಸ್ಕರಣಾಕಾರರು ಮತ್ತು ಮಾರುಕಟ್ಟೆದಾರರನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನ ಹೆಚ್ಚಿಸಲಾಗುವುದು ಎಂದರು.
ಕೆ.ಅಮರನಾರಾಯಣ, ಅಧ್ಯಕ್ಷ, ಅಖಿಲ ಭಾರತ ಶ್ರೀಗಂಧ ರೈತರ, ಸಂಸ್ಕರಣೆದಾರರ ಮತ್ತು ಮಾರುಕಟ್ಟೆದಾರರ ಒಕ್ಕೂಟಶ್ರೀಗಂಧ ಬೆಳೆಯುವವರ ಸಂಖ್ಯೆಯೂ ಹೆಚ್ಚಾದ ನಂತರ ಉತ್ಪಾದನೆ ಪ್ರಮಾಣವೂ ಏರಿಕೆಯಾಗಿದೆ. ಆದರೆ, ಮಾರಾಟದ ಮಾರ್ಗಗಳು ಬದಲಾಗಿಲ್ಲ. ಈ ಕಾರಣದಿಂದಲೇ ಒಕ್ಕೂಟ ರಚಿಸಲಾಗಿದ್ದು, ಪ್ರತಿ ರಾಜ್ಯದ ಮಾಹಿತಿ ಸಂಗ್ರಹಿಸಲಾಗುವುದು.
