ಕೋಲ್ಕತ್ತ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಬುಧವಾರ ರಾತ್ರಿ ಹತ್ಯೆ ಮಾಡಲಾಗಿದೆ. ಇದರಿಂದಾಗಿ ಪಶ್ಚಿಮ ಬಂಗಾಳದಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಗಿದೆ.
294 ಸದಸ್ಯ ಬಲದ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಮೇ 4ರಂದು ಪ್ರಕಟವಾಗಿತ್ತು.
ಬರೋಬ್ಬರಿ 207 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರಲು ಸಜ್ಜಾಗಿದೆ. ಸತತ ಮೂರು ಬಾರಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಹೀನಾಯ ಸೋಲು ಕಂಡಿದೆ. ಫಲಿತಾಂಶದ ಬೆನ್ನಲ್ಲೇ ರಾಜಕೀಯ ಕೆಸರೆರಚಾಟ, ಅಲ್ಲಲ್ಲಿ ಗಲಾಟೆ ಆರಂಭವಾಗಿತ್ತು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಧ್ಯಮ್‌ಗ್ರಾಮ್ ಪ್ರದೇಶದ ಜೆಸ್ಸೋರ್ ರಸ್ತೆಯ ದೊಹರಿಯಾ ಸಮೀಪ ರಾತ್ರಿ 10.30ರ ಸುಮಾರಿಗೆ ರಥ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ರಥ್ ಅವರ ಕಾರನ್ನು ತಡೆದು, ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಪಶ್ಚಿಮ ಬಂಗಾಳ: ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಗುಂಡಿಕ್ಕಿ ಕೊಲೆWest Bengal Politics: TMC ಕಚೇರಿಗಳನ್ನು ಧ್ವಂಸಗೊಳಿಸಿದ ಬಿಜೆಪಿ ಕಾರ್ಯಕರ್ತರು'ರಥ್ ಅವರು ಹೋಗುತ್ತಿದ್ದ ಎಸ್‌ಯುವಿಯನ್ನು ಕಾರಿನಲ್ಲಿ ಬಂದು ಅಡ್ಡಗಟ್ಟಲಾಯಿತು. ನಂತರ, ಬೈಕ್‌ನಲ್ಲಿ ಬಂದ ಸವಾರನೊಬ್ಬ ಹತ್ತಿರದಿಂದ ಗುಂಡು ಹಾರಿಸಿದ' ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು, ವಾಹನವನ್ನು ಅಲ್ಲೇ ಬಿಟ್ಟು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಚುನಾವಣಾ ಫಲಿತಾಂಶ ಪ್ರಕಟವಾದ 48 ಗಂಟೆಗಳಲ್ಲೇ ಈ ಕೃತ್ಯ ನಡೆದಿರುವುದು ಬಂಗಾಳದಾದ್ಯಂತ ಆತಂಕ ಸೃಷ್ಟಿಸಿದೆ.
ರಥ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂಬುದನ್ನು ವೈದ್ಯರು ಘೋಷಿಸಿದ್ದಾರೆ.
'ರಥ್ ಅವರ ಎದೆಗೆ ಎರಡು ಗುಂಡುಗಳು ಹೊಕ್ಕಿದ್ದವು. ಇನ್ನೊಂದು ಹೊಟ್ಟೆಗೆ ತಗುಲಿತ್ತು. ಹೃದಯಕ್ಕೆ ಹಾನಿಯಾಗಿತ್ತು. ಹೀಗಾಗಿ, ಬದುಕುವ ಸಾಧ್ಯತೆಯೇ ಇರಲಿಲ್ಲ' ಎಂದು ಅವರು ಹೇಳಿದ್ದಾರೆ.
ರಥ್ ಅವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅವರಿಗೆ ಕಾರ್ಯನಿರ್ವಾಹಕ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ಬಂಗಾಳ: ಭವಾನಿಪುರದಲ್ಲಿ ಬಿಜೆಪಿ ವಿರುದ್ಧ ದೀದಿ ಸೋಲಿಗೆ ಪ್ರಮುಖ 6 ಕಾರಣಗಳು...ಸೋತ ಮೇಲೂ ರಾಜೀನಾಮೆ ನೀಡಲ್ಲ ಎಂದ ಮಮತಾ ಬ್ಯಾನರ್ಜಿ: ಮುಂದೇನು?ದಾಳಿ ವೇಳೆ, ಚಾಲಕನಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ಕೋಲ್ಕತ್ತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಸ್‌ಯುವಿ ಮುಂಭಾಗದ ವಿಂಡ್‌ಶೀಲ್ಡ್ ಛಿದ್ರಗೊಂಡಿರುವುದು, ಆಸನಗಳ ಮೇಲೆ ರಕ್ತದ ಕಲೆಯಾಗಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಮಧ್ಯರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿರುವ ಸುವೇಂದು ಅಧಿಕಾರಿ, ಹತ್ಯೆಯನ್ನು 'ಹೃದಯ ವಿದ್ರಾವಕ' ಎಂದು ಕರೆದಿದ್ದಾರೆ. ಆಗಂತುಕರು ದಾಳಿಗೂ ಮುನ್ನ, ಸ್ಥಳದಲ್ಲಿ ಯೋಜನೆ ರೂಪಿಸಿದ್ದರು ಎಂದು ಆರೋಪಿಸಿದ್ದಾರೆ.

