80ನೇ ಸ್ವಾತಂತ್ರ್ಯ ದಿನಚಾರಣೆಯಂದು ಕೆಂಪುಕೋಟೆಯಿದ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ದೇಶಾದಾದ್ಯಂತ ಉಚಿತ ಆನ್ಲೈನ್ ಕೋಚಿಂಗ್ ವೇದಿಕೆ ಆರಂಭಿಸುವುದಾಗಿ ಹೇಳಿದ್ದಾರೆ.
'ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಕೋಚಿಂಗ್ಗಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುವುದನ್ನು ತಪ್ಪಿಸಬೇಕು. ಮಕ್ಕಳು ತಮ್ಮ ಕುಟುಂಬದಿಂದ ದೂರ ಹೋಗದೆ ಪೋಷಕರ ಆರೈಕೆಯಲ್ಲೇ ಇರಬೇಕು ಎನ್ನುವ ಉದ್ದೇಶದಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಜನರಿಗೆ ಉಚಿತ ತರಬೇತಿ ನೀಡಲಾಗುವುದು' ಎಂದು ಮೋದಿ ಹೇಳಿದ್ದರು. ಇದಕ್ಕಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಶಿಕ್ಷಕರು ಮತ್ತು ಪ್ರತಿಭೆಯನ್ನು ಒಗ್ಗೂಡಿಸಲಾಗುವುದು ಎಂದಿದ್ದಾರೆ.
ಅನುತ್ತರ ಅಂಕಣ | ಶಿಕ್ಷಣ ವಿಧಿಸುವ 'ವನವಾಸ'ಆದರೆ ಯೋಜನೆಯ ಸ್ವರೂಪ, ಅನುಷ್ಠಾನದ ವೇಳಾಪಟ್ಟಿ ಅಥವಾ ವ್ಯಾಪ್ತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ. ಆದರೆ ಇದರ ಉದ್ದೇಶ ದೊಡ್ಡದು. ದೇಶದಲ್ಲಿ ದುಬಾರಿ ಖಾಸಗಿ ಕ್ಷೇತ್ರಗಳಲ್ಲಿ ಒಂದಾಗಿರುವ ಕೋಚಿಂಗ್ ಉದ್ಯಮಕ್ಕೆ ದೇಶವ್ಯಾಪಿ ಪರ್ಯಾಯ ವ್ಯವಸ್ಥೆ ರೂಪಿಸುವ ಗುರಿ ಹೊಂದಿದೆ.
ಕೋಚಿಂಗ್ ಎನ್ನುವ ಬೃಹತ್ ಉದ್ಯಮ
ಭಾರತದ ಕೋಚಿಂಗ್ ಉದ್ಯಮದ ಮೌಲ್ಯ ಈಗ ಸುಮಾರು ₹58 ಸಾವಿರ ಕೋಟಿ ಎಂದು ಅಂದಾಜಿಸಲಾಗಿದ್ದು, 2028ರ ವೇಳೆಗೆ ಇದು ₹1.3 ಲಕ್ಷ ಕೋಟಿ ಏರಿಕೆಯಾಗಬಹುದು ಎಂದು ಎನ್ನಲಾಗಿದೆ. ಪ್ರತಿವರ್ಷ ಏಳು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ರೀತಿಯ ಟ್ಯೂಷನ್ಗಳಿಗೆ ದಾಖಲಾತಿ ಪಡೆಯುತ್ತಾರೆ. ಕೋಟಾದಂತಹ ನಗರಗಳು ಕೋಚಿಂಗ್ ಉದ್ಯಮದ ಆರ್ಥಿಕ ಹೊರೆ, ಕುಟುಂಬದಿಂದ ದೂರವಿರುವ ಸಂಕಟ, ಸಣ್ಣ ವಯಸ್ಸಿನಲ್ಲೇ ಮನೆ ಬಿಟ್ಟು ಬರುವ ಅನಿವಾರ್ಯತೆ ಮತ್ತು ನಿರಂತರ ಸ್ಪರ್ಧೆಯ ಒತ್ತಡದಿಂದ ವಿದ್ಯಾರ್ಥಿಗಳ ಮೇಲೆ ಬೀರುವ ಪರಿಣಾಮದ ಸಂಕೇತದಂತಿವೆ. ಮಕ್ಕಳಿಗೆ ಕೋಚಿಂಗ್ ಕೊಡಿಸಲು ಸಾಧ್ಯವಾಗದಿದ್ದರೆ ಅವರಿಗೆ ಭವಿಷ್ಯ ಕಟ್ಟಿಕೊಡಲು ನಾವು ವಿಫಲರಾಗಿದ್ದೇವೆ ಎನ್ನುವ ಭಾವನೆ ಪೋಷಕರಲ್ಲಿ ಅಂಕುರಿಸುತ್ತದೆ ಎಂದು ಮೋದಿ ಹೇಳಿದ್ದು, ಕಳೆದ ಹಲವು ವರ್ಷಗಳಿಂದ ಕೋಚಿಂಗ್ ಕೇಂದ್ರಗಳು ಕುಟುಂಬಗಳ ಮೇಲೆ ಸೃಷ್ಟಿಸಿರುವ ಒತ್ತಡವನ್ನು ಪ್ರತಿಬಿಂಬಿಸುತ್ತದೆ.
ಇವೆಲ್ಲದರ ಆಧಾರದ ಮೇಲೆ ಈ ಘೋಷಣೆಯನ್ನು ಕೇವಲ ಖಾಲಿ ಮಾತು ಅಥವಾ ಅರ್ಥವಿಲ್ಲದ ಭರವಸೆ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಕೋಚಿಂಗ್ ಖರ್ಚು ಕುಟುಂಬಗಳ ಮೇಲೆ ದೀರ್ಘ ಕಾಲದ ಹೊರೆ. ಹೀಗಾಗಿ ಉಚಿತ ಮತ್ತು ಗುಣಮಟ್ಟದ ಪರ್ಯಾಯ ಕೋಚಿಂಗ್ ವ್ಯವಸ್ಥೆ ನಿಜವಾಗಿಯೂ ಸಾಧ್ಯವಾದರೆ, ಅದು ಮಹತ್ವದ ನೀತಿ ಸಾಧನೆಯಾಗಬಹುದು. ಆದರೆ ಸರ್ಕಾರ ಇದನ್ನು ಜಾರಿ ಮಾಡಬಹುದೇ ಎನ್ನುವುದೇ ಪ್ರಶ್ನೆ. ಸರ್ಕಾರದ ಹಿಂದಿನ ದಾಖಲೆಗಳು ಇದಕ್ಕೆ ಕನ್ನಡಿ ಹಿಡಿಯುತ್ತವೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಉಚಿತ ಕೋಚಿಂಗ್: ಮೋದಿಯ ಮಹತ್ವಾಕಾಂಕ್ಷೆಯ ಭರವಸೆಗೆ ಬೇಕಿದೆ ಸ್ಪಷ್ಟ ನಕ್ಷೆ
ಒಂದು ಸಾಲಿನಲ್ಲಿಪ್ರಧಾನಿ ಮೋದಿ ಘೋಷಿಸಿರುವ ಉಚಿತ ಆನ್ಲೈನ್ ಕೋಚಿಂಗ್ ಯೋಜನೆಯು ಕೋಚಿಂಗ್ ಉದ್ಯಮದ ಹೊರೆ ಕಡಿಮೆ ಮಾಡುವ ಗುರಿ ಹೊಂದಿದ್ದರೂ, ಅದರ ಯಶಸ್ಸು ಸಮರ್ಪಕ ಅನುಷ್ಠಾನ ಮತ್ತು ನಿಖರ ನಕ್ಷೆಯ ಮೇಲೆ ಅವಲಂಬಿತವಾಗಿದೆ.
ಪ್ರಮುಖ ಪ್ರಶ್ನೋತ್ತರ
ಪ್ರಧಾನಿ ಮೋದಿ ಘೋಷಿಸಿದ ಉಚಿತ ಕೋಚಿಂಗ್ ಯೋಜನೆಯ ಉದ್ದೇಶವೇನು?
ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ದುಬಾರಿ ಕೋಚಿಂಗ್ಗಾಗಿ ಖರ್ಚು ಮಾಡುವುದನ್ನು ತಪ್ಪಿಸಲು ಮತ್ತು ಅವರು ತಮ್ಮ ಮನೆಯಲ್ಲೇ ಇದ್ದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ದೇಶಾದ್ಯಂತ ಉಚಿತ ಆನ್ಲೈನ್ ವೇದಿಕೆಯನ್ನು ಆರಂಭಿಸುವುದಾಗಿ ಪ್ರಧಾನಿ ತಿಳಿಸಿದ್ದಾರೆ.
ಭಾರತದ ಕೋಚಿಂಗ್ ಉದ್ಯಮದ ಮೌಲ್ಯ ಎಷ್ಟು?
ಭಾರತದ ಕೋಚಿಂಗ್ ಉದ್ಯಮದ ಮೌಲ್ಯವು ಪ್ರಸ್ತುತ ಸುಮಾರು ₹58 ಸಾವಿರ ಕೋಟಿ ಎಂದು ಅಂದಾಜಿಸಲಾಗಿದ್ದು, 2028ರ ವೇಳೆಗೆ ಇದು ₹1.3 ಲಕ್ಷ ಕೋಟಿಗೆ ಏರಿಕೆಯಾಗುವ ಸಾಧ್ಯತೆಯಿದೆ.
ಹಿಂದಿನ 'ಸ್ವಯಂ' ವೇದಿಕೆ ಏಕೆ ವಿಫಲವಾಯಿತು?
2017ರಲ್ಲಿ ಆರಂಭವಾದ 'ಸ್ವಯಂ' ವೇದಿಕೆಯಲ್ಲಿ ನೋಂದಾಯಿಸಿಕೊಂಡವರ ಪೈಕಿ ಕೇವಲ ಶೇ 4ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಮಾತ್ರ ಕೋರ್ಸ್ಗಳನ್ನು ಪೂರ್ಣಗೊಳಿಸಿದ್ದಾರೆ; ಹಳೆಯ ವಿಷಯಗಳು ಮತ್ತು ಕಳಪೆ ಮೂಲಸೌಕರ್ಯ ಇದಕ್ಕೆ ಮುಖ್ಯ ಕಾರಣವಾಗಿವೆ.
'ಸಾಥೀ' ವೇದಿಕೆಯ ಯಶಸ್ಸಿಗೆ ಕಾರಣವೇನು?
'ಸಾಥೀ' ವೇದಿಕೆಯು ಕೇವಲ ತಂತ್ರಜ್ಞಾನವನ್ನೇ ನಂಬದೆ, ಶಾಲಾ ಅವಧಿಯಲ್ಲಿ ನೇರ ಬೋಧನೆ, ಐಐಟಿ/ಏಮ್ಸ್ ವಿದ್ಯಾರ್ಥಿಗಳ ಮಾರ್ಗದರ್ಶನ ಮತ್ತು ನಿರ್ದಿಷ್ಟ ಪರೀಕ್ಷೆಗಳ ಮೇಲೆ ಗಮನ ಹರಿಸಿದ್ದರಿಂದ ಹೆಚ್ಚಿನ ಯಶಸ್ಸು ಕಂಡಿದೆ.
ದೇಶಾದ್ಯಂತ ಯೋಜನೆಯನ್ನು ಜಾರಿಗೊಳಿಸುವಲ್ಲಿರುವ ಸವಾಲುಗಳೇನು?
ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸಂಪರ್ಕ, ಭಾಷಾ ವೈವಿಧ್ಯತೆ, ಸಾಕಷ್ಟು ಶಿಕ್ಷಕರ ನೇಮಕ ಮತ್ತು ಇಂತಹ ಬೃಹತ್ ವೇದಿಕೆಯನ್ನು ಏಕರೂಪವಾಗಿ ನಿರ್ವಹಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ.
ಪ್ರಮುಖ ಅಂಕಿಅಂಶಗಳು
₹58 ಸಾವಿರ ಕೋಟಿಪ್ರಸ್ತುತ ಕೋಚಿಂಗ್ ಉದ್ಯಮದ ಮೌಲ್ಯ₹1.3 ಲಕ್ಷ ಕೋಟಿ2028ರ ವೇಳೆಗೆ ಅಂದಾಜು ಕೋಚಿಂಗ್ ಉದ್ಯಮ ಮೌಲ್ಯಶೇ 4ಸ್ವಯಂ ವೇದಿಕೆಯಲ್ಲಿ ಕೋರ್ಸ್ ಪೂರ್ಣಗೊಳಿಸಿದವರ ಪ್ರಮಾಣ497ಸಾಥೀ ವೇದಿಕೆಯಿಂದ 2025ರಲ್ಲಿ ನೀಟ್ ಅರ್ಹತೆ ಪಡೆದವರ ಸಂಖ್ಯೆ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಶುಲ್ಕ ವಿಳಂಬಕ್ಕೆ ದಂಡನಾ ಕ್ರಮ ಕೈಗೊಳ್ಳದಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆನೋಂದಣಿಗೆ ಮಾತ್ರ 'ಸ್ವಯಂ' ಸೀಮಿತ
2017ರಲ್ಲಿ ಆರಂಭಗೊಂಡ ಭಾರತದ ಮೊದಲ ಪ್ರಮುಖ ಆನ್ಲೈನ್ ಕೋರ್ಸ್ ವೇದಿಕೆ 'ಸ್ವಯಂ' ಇದಕ್ಕೆ ಉತ್ತಮ ಉದಾಹರಣೆ. ಆರಂಭಗೊಂಡ ಬಳಿಕ ಈ ವೇದಿಕೆಯಲ್ಲಿ ನೋಂದಾಯಿಸಿಕೊಂಡವರ ಪೈಕಿ ಶೇ 4ಕ್ಕೂ ಕಡಿಮೆ ವಿದ್ಯಾರ್ಥಿಗಳು ಮಾತ್ರ ಕೋರ್ಸ್ ಪೂರ್ಣಗೊಳಿಸಿದ್ದಾರೆ ಎಂದು 2025ರ ಫೆಬ್ರುವರಿಯಲ್ಲಿ ಸಲ್ಲಿಸಲಾದ ರಾಜ್ಯಸಭೆಯ ಸ್ಥಾಯಿ ಸಮಿತಿ ವರದಿ ಹೇಳುತ್ತದೆ. ಹಳೆಯ ವಿಷಯಗಳು, ಹೊಂದಿಕೊಳ್ಳಲು ಕಷ್ಟವಾದ ಬೋಧನಾ ವಿಧಾನಗಳು, ಕಳಪೆ ಮೂಲಸೌಕರ್ಯ ಇದಕ್ಕೆ ಕಾರಣ ಎಂದು ವರದಿ ಹೇಳಿತ್ತು. ಶಿಕ್ಷಕರಿಗೆ ಸಮರ್ಪಕ ತರಬೇತಿ ಸಿಗದಿರುವುದು ಹಾಗೂ ತಾಂತ್ರಿಕ ಸಮಸ್ಯೆಗಳಿಂದಾಗಿ 'ಸ್ವಯಂ' ಪರಿಣಾಮಕಾರಿಯಾಗಿಲ್ಲ ಎಂದು ವರದಿ ತಿಳಿಸಿತ್ತು. ಹತ್ತು ವರ್ಷಗಳಿಂದ ಕೊಟ್ಯಂತರ ಮಂದಿ ನೋಂದಾಯಿಸಿಕೊಳ್ಳುತ್ತಿದ್ದರೂ, ಪೂರ್ಣಗೊಳಿಸುತ್ತಿರುವ ಸಂಖ್ಯೆ ಕಡಿಮೆ ಇದೆ.
ಅನಧಿಕೃತ ಕೋಚಿಂಗ್ ಸೆಂಟರ್ಗಳ ಹಾವಳಿ ತಡೆಗೆ ಆಗ್ರಹ, ಜಿಲ್ಲಾಡಳಿತಕ್ಕೆ ದೂರುಭರವಸೆ ಮೂಡಿಸಿದ 'ಸಾಥೀ'
ಇನ್ನೊಂದೆಡೆ ಐಐಟಿ ಕಾನ್ಪುರ ಸಹಯೋಗದೊಂದಿಗೆ 2023ರ ನವೆಂಬರ್ನಲ್ಲಿ ಜೆಇಇ ಹಾಗೂ ನೀಟ್ ಕೋಚಿಂಗ್ಗೆ ಕೇಂದ್ರ ಶಿಕ್ಷಣ ಸಚಿವಾಲಯ ಆರಂಭಿಸಿರುವ 'ಸಾಥೀ' ಕೋಚಿಂಗ್ ವೇದಿಕೆಯ ಫಲಿತಾಂಶ ಗಮನಾರ್ಹವಾಗಿದೆ. ಪಂಜಾಬ್ನ 569 ಸರ್ಕಾರಿ ಶಾಲೆಗಳಲ್ಲಿ ಇದನ್ನು ಜಾರಿಗೆ ತರಲಾಗಿದ್ದು, ಆ ಶಾಲೆಗಳಿಂದ ಜೆಇಇ ಮೈನ್ಸ್ಗೆ ಅರ್ಹತೆ ಪಡೆದವರ ಸಂಖ್ಯೆ 2024ರಲ್ಲಿ 49 ಇದ್ದದ್ದು 2025ರಲ್ಲಿ 85ಕ್ಕೆ ಏರಿದೆ. ಇದೇ ಅವಧಿಯಲ್ಲಿ ನೀಟ್ಗೆ ಅರ್ಹತೆ ಪಡೆದವರ ಸಂಖ್ಯೆ 335ರಿಂದ 497ಕ್ಕೆ ಏರಿಕೆಯಾಗಿದೆ. ಹೀಗಾಗಿ ಇದೊಂದು ಪರಿಣಾಮಕಾರಿ ವೇದಿಕೆ ಎಂದು ತೋರಿಸಿದೆ.
ತಂತ್ರಜ್ಞಾನ ಮುಖ್ಯವೇ?
'ಸ್ವಯಂ'ಗಿಂತ 'ಸಾಥೀ' ಪರಿಣಾಮಕಾರಿ ಎನಿಸಿಕೊಂಡಿದ್ದು, ತಂತ್ರಜ್ಞಾನದಿಂದಲ್ಲ. ಅನುಷ್ಠಾನ ಮಾದರಿಯಿಂದ. ಸಾಥೀಯಲ್ಲಿ ಶಾಲಾ ಅವಧಿಯಲ್ಲೇ ನೇರ ಮತ್ತು ವ್ಯವಸ್ಥಿತ ತರಗತಿಗಳನ್ನು ನಡೆಸಲಾಗಿದೆ. ವಿದ್ಯಾರ್ಥಿಗಳನ್ನು ಸ್ವಯಂ ಅಧ್ಯಯನಕ್ಕೆ ಹಚ್ಚುವ ಬದಲು ಐಐಟಿ ಮತ್ತು ಏಮ್ಸ್ ವಿದ್ಯಾರ್ಥಿಗಳ ಮಾರ್ಗದರ್ಶನವನ್ನೂ ಒದಗಿಸಲಾಗಿದೆ. ಸಾಥೀ ಆರಂಭದಲ್ಲಿ ಜೆಇಇ ಮತ್ತು ನೀಟ್ನಂತಹ ನಿರ್ದಿಷ್ಟ ಪರೀಕ್ಷೆಗಳ ಮೇಲೆ ಗಮನ ಕೇಂದ್ರೀಕರಿಸಿ, ಬಳಿಕ ಅಗತ್ಯಕ್ಕೆ ಅನುಗುಣವಾಗಿ ಹೊಸ ಕೋರ್ಸ್ಗಳನ್ನು ಸೇರಿಸಿದೆ. ಆದರೆ 'ಸ್ವಯಂ' ನಿರ್ದಿಷ್ಟ ವಿಷಯಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಸಾಮಾನ್ಯ ವಿಷಗಳನ್ನೂ ಒಳಗೊಂಡಿತ್ತು. ಇವುಗಳಲ್ಲಿ ಪ್ರತಿಯೊಂದೂ ಚರ್ಚಿಸಿ ತೆಗೆದುಕೊಂಡ ನಿರ್ಧಾರವಾಗಿತ್ತೇ ವಿನಾ ಆಕಸ್ಮಿಕವಲ್ಲ ಎನ್ನುವುದು ಗಮನಿಸಬೇಕು.
ಒಣಗಿದ ಡ್ಯಾನ್ಯೂಬ್ ನದಿ: ಹಿಟ್ಲರ್ ಕಾಲದ ಯುದ್ಧನೌಕೆಗಳು ಗೋಚರದೇಶದಾದ್ಯಂತ ಅನುಷ್ಠಾನ ಸಾಧ್ಯವೇ?
ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಉಲ್ಲೇಖಿಸಿದ 'ದೇಶದಾದ್ಯಂತ' ಎನ್ನುವ ಪದವೇ ಈಗ ಸವಾಲು ಸೃಜಿಸಿದೆ. ಇಂದಿಗೂ ದೊಡ್ಡ ಪ್ರಮಾಣದಲ್ಲಿ ಏಕೀಕೃತ ವೇದಿಕೆಯನ್ನು ಪರೀಕ್ಷೆ ಮಾಡಿಲ್ಲ. 'ಸಾಥೀ'ಯ ಯಶೋಗಾಥೆ ಒಂದು ರಾಜ್ಯದ 569 ಶಾಲೆಗಳಿಗೆ ಮಾತ್ರ ಸೀಮಿತವಾಗಿದೆ. ಭಾರತದಲ್ಲಿ ಪ್ರತಿ ವರ್ಷ ವಿವಿಧ ರಾಜ್ಯ, ಭಾಷೆಗಳ 15 ಲಕ್ಷ ವಿದ್ಯಾರ್ಥಿಗಳು ಜೆಇಇ ಹಾಗೂ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗುತ್ತಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾಜರಾಗುವ ವಿದ್ಯಾರ್ಥಿಗಳಿಗೆ ನೇರ ತರಗತಿಗಳು, ಮಾರ್ಗದರ್ಶನ ಮತ್ತು ಶಾಲಾ ಆಧಾರಿತ ಕೋಚಿಂಗ್ ವ್ಯವಸ್ಥೆ ರೂಪಿಸಬೇಕಾದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕ, ಸಾಕಷ್ಟು ಶಿಕ್ಷಕ-ಮಾರ್ಗದರ್ಶಕರ ನೇಮಕ ಮತ್ತು ತರಬೇತಿ ಹಾಗೂ ವಿವಿಧ ಭಾಷೆಗಳಲ್ಲಿ ಬೋಧಿಸುವಂತಹ ಹಲವು ಸವಾಲುಗಳನ್ನು ಎದುರಿಸಬೇಕಿದೆ. 'ಸ್ವಯಂ' ಎದುರಿಸಿದ ಸಮಸ್ಯೆಗಳನ್ನು ಗಮನಿಸಿದರೆ, ದೇಶವ್ಯಾಪಿ ಏಕರೂಪದ ಕೋಚಿಂಗ್ ವೇದಿಕೆಯ ಅನುಷ್ಠಾನ ಪ್ರಕ್ರಿಯೆಯು ಸುಲಭದ ಮಾತಲ್ಲ.
ಒಂದು ವರ್ಷದ ಬಳಿಕ ಈ ಯೋಜನೆಯ ಪರಿಣಾಮದ ಬಗ್ಗೆ ನ್ಯಾಯಯುತವಾಗಿ ಅಳೆಯಬೇಕಿದ್ದರೆ, ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ್ದಕ್ಕಿಂತ ನಿಖರ ಮಾನದಂಡಗಳನ್ನು ರೂಪಿಸಬೇಕು. ಎಷ್ಟು ಮಂದಿ ನೋಂದಾಯಿಸಿದರು ಎನ್ನುವುದಕ್ಕಿಂತ, ಪೂರ್ಣಗೊಳಿಸಿದವರ ಸಂಖ್ಯೆಯನ್ನು ಪ್ರಕಟಿಸಬೇಕು. 'ಸ್ವಯಂ'ನಲ್ಲಿ ಕೋಟ್ಯಂತರ ಮಂದಿ ನೋಂದಾಯಿಸಿಕೊಂಡಿದ್ದರೂ, ಪೂರ್ಣಗೊಳಿಸಿದವರ ಪ್ರಮಾಣ ಶೇ 4ಕ್ಕಿಂತ ಕಡಿಮೆ. ವೇದಿಕೆಗೆ ಎಷ್ಟು ಮಂದಿ ಭೇಟಿ ನೀಡಿದರು ಎನ್ನುವುದಕ್ಕಿಂತ ಶಾಲಾ ಮಟ್ಟದಲ್ಲಿ ಅನುಷ್ಠಾನ ಹೇಗಾಗಿದೆ ಎನ್ನುವುದನ್ನು ತಿಳಿಸಬೇಕು. 'ಸಾಥೀ' ಯಶ ಕಂಡಿದ್ದು ಹೀಗೆ. ಇನ್ನು 'ದೇಶದಾದ್ಯಂತ' ಜಾರಿಗೊಳಿಸಲು ಕಾಯುವ ಬದಲು, ಯಾವ ಹಂತದಲ್ಲಿ, ಎಷ್ಟು ಅವಧಿಯಲ್ಲಿ ಯೋಜನೆಯನ್ನು ಜಾರಿಗೊಳಿಸಬೇಕು ಎನ್ನುವುದನ್ನು ಸರ್ಕಾರ ತಿಳಿಸಬೇಕು. ಮುಂದಿನ ಒಂದು ವರ್ಷದಲ್ಲಿ 'ಸಾಥೀ'ಯನ್ನು ದೊಡ್ಡ ಪ್ರಮಾಣದಲ್ಲಿ ದೇಶಾದ್ಯಂತ ವಿಸ್ತರಿಸಲಾಗುತ್ತದೆಯೇ ಅಥವಾ 'ಸ್ವಯಂ' ಅನ್ನು ಹೊಸ ಹೆಸರಿನಲ್ಲಿ ಅನುಷ್ಠಾನಗೊಳಿಸಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಸರ್ಕಾರ ಉತ್ತರಿಸಿಲ್ಲ.
ಲೇಖಕರು:
ಜೂಲಿಯನ್ ಸೀಲ್ ಪಸಾರಿ:ರಾಂಚಿಯ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನೆಯ ರಾಷ್ಟ್ರೀಯ ವಿಶ್ವವಿದ್ಯಾಲಯದ ಕೃತಕ ಬುದ್ಧಿಮತ್ತೆ, ಆಡಳಿತ ಮತ್ತು ನೈತಿಕತೆ ಕುರಿತ ಶ್ರೇಷ್ಠತಾ ಕೇಂದ್ರದ (ಸಿಎಜಿಇ) ಅಧ್ಯಾಪಕ ಸಂಯೋಜಕರು.
ಅವಿನಾಶ್ ವರ್ಮಾ: ಸಿಎಜಿಇನ ವಿದ್ಯಾರ್ಥಿ ಸಂಚಾಲಕ
ಸೂಚನೆ: ಮೇಲಿನ ಅಭಿಪ್ರಾಯಗಳು ಲೇಖಕರದ್ದಾಗಿದ್ದು, ಅವು ಪ್ರಜಾವಾಣಿಯ ನಿಲುವು ಎಂದು ಪರಿಗಣಿಸಕೂಡದು.
ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೊಸತನದ ಕೊರತೆ: ಹಳೆಯ ವಿಚಾರಗಳಿಗೆ ಹೊಸ ರೂಪ
